ಹೇಮರೆಡ್ಡಿ ಮಲ್ಲಮ್ಮ (ಚಲನಚಿತ್ರ ೧೯೪೫)
ಗೋಚರ
(ಹೇಮರೆಡ್ಡಿ ಮಲ್ಲಮ್ಮ (ಚಲನಚಿತ್ರ ೧೯೭೪) ಇಂದ ಪುನರ್ನಿರ್ದೇಶಿತ)
ಹೇಮರೆಡ್ಡಿ ಮಲ್ಲಮ್ಮ (ಚಲನಚಿತ್ರ ೧೯೪೫) | |
---|---|
ಹೇಮರೆಡ್ಡಿ ಮಲ್ಲಮ್ಮ | |
ನಿರ್ದೇಶನ | ಎಸ್.ಸೌಂದರ್ಯರಾಜನ್ ಮತ್ತು ಜತಿನ್ ಬ್ಯಾನರ್ಜಿ |
ನಿರ್ಮಾಪಕ | ಗುಬ್ಬಿ ವೀರಣ್ಣ |
ಚಿತ್ರಕಥೆ | ಬೆಳ್ಳಾವೆ ನರಹರಿ ಶಾಸ್ತ್ರಿ |
ಕಥೆ | ಜಾನಪದ |
ಸಂಭಾಷಣೆ | ಬೆಳ್ಳಾವೆ ನರಹರಿ ಶಾಸ್ತ್ರಿ |
ಪಾತ್ರವರ್ಗ | ಗುಬ್ಬಿ ವೀರಣ್ಣ ಬಿ.ಜಯಮ್ಮ ಹೊನ್ನಪ್ಪ ಭಾಗವತರ್, ಸಿ.ಬಿ.ಮಲ್ಲಪ್ಪ |
ಸಂಗೀತ | ಚಿತ್ತೂರು ವಿ.ನಾಗಯ್ಯ ಮತ್ತು ಹೊನ್ನಪ್ಪ ಭಾಗವತರ್ |
ಛಾಯಾಗ್ರಹಣ | ಜತಿನ್ ಬ್ಯಾನರ್ಜಿ |
ಬಿಡುಗಡೆಯಾಗಿದ್ದು | ೧೯೪೫ |
ಚಿತ್ರ ನಿರ್ಮಾಣ ಸಂಸ್ಥೆ | ಗುಬ್ಬಿ ಶ್ರೀ ಚನ್ನಬಸವೇಶ್ವರ ಫಿಲಂಸ್ |
ಸಾಹಿತ್ಯ | ಬೆಳ್ಳಾವೆ ನರಹರಿ ಶಾಸ್ತ್ರಿ |
ಹಿನ್ನೆಲೆ ಗಾಯನ | ಹೊನ್ನಪ್ಪ ಭಾಗವತರ್ ಮತ್ತು ಕಲಾವಿದೆಯರು |
ಹೇಮರೆಡ್ಡಿ ಮಲ್ಲಮ್ಮ ಎಸ್.ಸೌಂದರ್ಯರಾಜನ್ ನಿರ್ದೆಶನದಲ್ಲಿ ಗುಬ್ಬಿ ವೀರಣ್ಣ ನಿರ್ಮಿಸಿ ೧೯೪೫ ಯಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ.[೧]
ಕಥಾ ಸಾರಾಂಶ
[ಬದಲಾಯಿಸಿ]ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ದೈವ ಭಕ್ತೆ. ಮೂಢನಾದ ಗಂಡನ ಸೇವೆಯನ್ನು ಮಾಡುತ್ತಾ ಅತ್ತೆ ನೀಡಿದ ಕಷ್ಟ-ಕಾರ್ಪಣ್ಯಗಳನ್ನು ಸಹಿಸುತ್ತಾ, ಶಿವನ ಆರಾಧನೆ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾಳೆ.ಶಿವನ ಕರುಣೆಯಿಂದ ಮಲ್ಲಮ್ಮನಿಗೆ ಒಳಿತಾಗುತ್ತದೆ. ಗಂಡ ಜ್ಞಾನಿಯಾಗುತ್ತಾನೆ. ಅತ್ತೆಗೆ ಸದ್ಬುದ್ದಿ ಬರುತ್ತದೆ ಎಂಬ ಜಾನಪದ ಕತೆಯ ಸಾರವನ್ನೇ ಈ ಚಿತ್ರಕತೆಯು ಹೊಂದಿದೆ.
ವಿಶೇಷತೆ
[ಬದಲಾಯಿಸಿ]ಕು.ರಾ. ಸೀತಾರಾಮ ಶಾಸ್ತ್ರಿ ಈ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಡಿ.ಶಂಕರ್ ಸಿಂಗ್ ಮತ್ತು ವಿಠಲಾಚಾರ್ಯರು ಈ ಚಿತ್ರವನ್ನು ಬಾಡಿಗೆ ಆಧಾರದಲ್ಲಿ ಪಡೆದು ಅಪಾರ ಲಾಭವನ್ನು ಗಳಿಸಿದರು.
ಪಾತ್ರ ವರ್ಗ
[ಬದಲಾಯಿಸಿ]- ಬಿ.ಜಯಮ್ಮ - ಮಲ್ಲಮ್ಮ
- ಹೊನ್ನಪ್ಪ ಭಾಗವತರ್
- ಗುಬ್ಬಿ ವೀರಣ್ಣ - ಹೇಮರೆಡ್ಡಿ
- ಸಿ.ಬಿ.ಮಲ್ಲಪ್ಪ
- ಕೆ.ಆರ್. ಸೀತಾರಾಮ ಶಾಸ್ತ್ರಿ
ಹಾಡುಗಳು
[ಬದಲಾಯಿಸಿ]No. | ಹಾಡು | ಹಿನ್ನೆಲೆ_ಗಾಯಕರು | ಸಾಹಿತಿ | ಸಮಯ (ನಿ:ಸೆಕೆನ್) |
೧ | ಮಲ್ಲಿಕಾರ್ಜುನ ಪಾಲಿಸು | ಜಯಮ್ಮ | ಎಚ್.ಎಸ್.ರಾವ್ | ೦೩.೦೫ |
೨ | ಶಿವನೆ ನಿನ್ನ ನೆನೆಯ ನಮ್ಮ | ಎಸ್.ಜಾನಕಿ | ಡಿ.ಆರ್.ರಾವ್ | ೦೩.೧೯ |
೩ | ಶುಭದಾತೆ ಗೋಮಾತೆ | ಜಯಮ್ಮ | ಎಚ್.ಎಸ್.ರಾವ್ | ೦೨.೨೬ |
ಹೊರಗಿನ ಕೊಂಡಿಗಳು
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "Releasing on 14 January: Gubbi's Hemareddy Mallamma". The Indian Express. 12 January 1946. p. 8. Retrieved 10 April 2017.