ಹೆಬ್ಬುಲಿ (ಚಲನಚಿತ್ರ)
ಹೆಬ್ಬುಲಿ | |
---|---|
ನಿರ್ದೇಶನ | ಎಸ್. ಕೃಷ್ಣ |
ನಿರ್ಮಾಪಕ |
|
ಲೇಖಕ | ಸಿರಿ (ಸಂಭಾಷಣೆ) |
ಕಥೆ | ಎಸ್. ಕೃಷ್ಣ |
ಪಾತ್ರವರ್ಗ | ಅಮಲಾ ಪೌಲ್ ಕಬೀರ್ ದುಹನ್ ಸಿಂಗ್ ರವಿ ಕಿಶನ್ |
ಸಂಗೀತ | ಅರ್ಜುನ್ ಜನ್ಯ |
ಛಾಯಾಗ್ರಹಣ | ಎ. ಕರುಣಾಕರ್ |
ಸಂಕಲನ | ದೀಪು ಎಸ್ ಕುಮಾರ್ |
ಸ್ಟುಡಿಯೋ |
|
ವಿತರಕರು | ಜ್ಯಾಕ್ ಮಂಜುನಾಥ್ (ಮೈಸೂರು ಟಾಕೀಸ್) |
ಬಿಡುಗಡೆಯಾಗಿದ್ದು | ೨೩ ಫೆಬ್ರವರಿ ೨೦೧೭ |
ದೇಶ | ಭಾರತ |
ಭಾಷೆ | ಕನ್ನಡ |
ಬಾಕ್ಸ್ ಆಫೀಸ್ | ₹೨೭ - ೩೦ ಕೋಟಿ[೧] |
ಹೆಬ್ಬುಲಿ, ಎಸ್.ಕೃಷ್ಣ ನಿರ್ದೇಶನದ ೨೦೧೭ರ ಕನ್ನಡ ಭಾಷೆಯ ಚಿತ್ರ. ಮಾಣಿಕ್ಯ ಚಿತ್ರದ ನಂತರ ಮತ್ತೆ ಸುದೀಪ್ ಮತ್ತು ವಿ.ರವಿಚಂದ್ರನ್ ಒಟ್ಟಿಗೆ ನಟಿಸಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಅಮಲಾ ಪೌಲ್ ಪಾದಾರ್ಪಣೆ ಮಾಡಿದರು. ಪಿ.ರವಿ ಶಂಕರ್, ಕಬೀರ್ ದುಹಾನ್ ಸಿಂಗ್ ಮತ್ತು ರವಿ ಕಿಶನ್(ಕನ್ನಡದಲ್ಲಿ ಪಾದಾರ್ಪಣೆ ಮಾಡುತ್ತ) ಖಳನಾಯಕರಾಗಿ ನಟಿಸಿದ್ದಾರೆ.[೨][೩][೪]
ತಾರಾಗಣ
[ಬದಲಾಯಿಸಿ]- ಸುದೀಪ್
- ರವಿಚಂದ್ರನ್
- ಅಮಲಾ ಪೌಲ್
- ಪಿ.ರವಿ ಶಂಕರ್
- ಕಬೀರ್ ದುಹಾನ್ ಸಿಂಗ್
- ರವಿ ಕಿಶನ್
- ರವಿ ಕಾಳೆ
- ಕಲ್ಯಾಣಿ
- ಅವಿನಾಶ್
- ಚಿಕ್ಕಣ್ಣ
- ಪ್ರಾಚಿ ಆರ್. ನಾಯಕ್
- ಅನೀಲ್ ಕುಮಾರ್
- ಸಂಜೀವ್ ಸರೋವರ್
ನಿರ್ಮಾಣ
[ಬದಲಾಯಿಸಿ]ನಟ-ನಟಿಯರ ಆಯ್ಕೆ
[ಬದಲಾಯಿಸಿ]ಸುದೀಪ ಅವರನ್ನು ನಾಯಕನ ಪಾತ್ರಕ್ಕೆ ಆಯ್ಕೆ ಮಾಡಿದ ನಂತರ, ನಿರ್ದೇಶಕರು ಸುದೀಪ ಅವರ ಎದುರು ಖಳನಾಯಕರಾಗಿ ಪಿ.ರವಿ ಶಂಕರ್ ಅವರನ್ನು ಆಯ್ಕೆ ಮಾಡಿದರು. ಕಥಾವಸ್ತುವಿಗೆ ಸುದೀಪ ಅವರ ಸಹೋದರನ ಪಾತ್ರಕ್ಕೆ ಸಮಾನಾಂತರ ನಾಯಕನ ಅಗತ್ಯವಿದ್ದ ಕಾರಣ, ನಿರ್ದೇಶಕರು ಆ ಪಾತ್ರವನ್ನು ನಿರ್ವಹಿಸಲು ವಿ.ರವಿಚಂದ್ರನ್ ಅವರನ್ನು ಸಂಪರ್ಕಿಸಿದರು. ಕನ್ನಡದಲ್ಲಿ ಹೊಸ ಸ್ಕ್ರಿಪ್ಟ್‌ಗಾಗಿ ಹುಡುಕಾಟ ನಡೆಸುತ್ತಿದ್ದ ನಟಿ ಅಮಲಾ ಪಾಲ್ ಅವರು ನಾಯಕಿಯಾಗಿ ನಟಿಸಲು ಸಹಿ ಹಾಕಿದರು. ಇತರ ಖಳನಾಯಕರ ಪಾತ್ರಗಳಿಗೆ, ಕಬೀರ್ ದುಹಾನ್ ಸಿಂಗ್ ಮತ್ತು ರವಿ ಕಿಶನ್ ಅವರನ್ನು ಆಯ್ಕೆ ಮಾಡಲಾಯಿತು.[೫]
ವೇಷಭೂಷಣ
[ಬದಲಾಯಿಸಿ]ಈ ಚಿತ್ರದಲ್ಲಿ ಸುದೀಪ ವಿಶಿಷ್ಟವಾದ ಕೇಶವಿನ್ಯಾಸವನ್ನು ಮಾಡಿಕೊಂಡರು. ಅದರಲ್ಲಿ ಅವರ ಅರ್ಧದಷ್ಟು ಕೂದಲನ್ನು ಚಿಕ್ಕದಾಗಿ ಇಟ್ಟುಕೊಂಡು ಇನ್ನರ್ಧವನ್ನು ಉದ್ದವಾಗಿ ಬೆಳೆಸಿ ಹಿಂದಕ್ಕೆ ಕಟ್ಟಲಾಗಿತ್ತು.[೬]
ಧ್ವನಿಮುದ್ರಿಕೆ
[ಬದಲಾಯಿಸಿ]ಅರ್ಜುನ್ ಜನ್ಯ ಅವರು ಸುದೀಪ ಅವರಿಗೆ ಐದನೇ ಬಾರಿಗೆ ಸಂಗೀತವನ್ನು ಸಂಯೋಜಿಸಿದರು. ಅವರು ಒಂದು ಥೀಮ್ ಸಾಂಗ್ ಸೇರಿದಂತೆ ಆರು ಹಾಡುಗಳನ್ನು ಸಂಯೋಜಿಸಿದ್ದಾರೆ. ಆಡಿಯೋವನ್ನು ಡಿಸೆಂಬರ್ ೨೫, ೨೦೧೬ ರಂದು ದಾವಣಗೆರೆಯಲ್ಲಿ ಬಿಡುಗಡೆ ಮಾಡಲಾಯಿತು. ಆಡಿಯೋ ಬಿಡುಗಡೆಗೂ ಮುನ್ನ ಹಾಡುಗಳು ಸೋರಿಕೆಯಾದವು. ಮ್ಯೂಸಿಕ್ ಲೇಬಲ್, ಜೀ ಮ್ಯೂಸಿಕ್ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿತು.[೭][೮]
Track listing | ||||
---|---|---|---|---|
ಸಂ. | ಹಾಡು | ಸಾಹಿತ್ಯ | Singer(s) | ಸಮಯ |
1. | "ಹುಲಿ ಹುಲಿ" | ಚೇತನ್ | ಸಿದ್ಧಾರ್ಥ್ ಬಸ್ರೂರ್ | 3:36 |
2. | "ಸುಂದರಿ" | ಸಂತೋಷ್ ನಾಯಕ್ | ವಿಜಯ್ ಪ್ರಕಾಶ್, ಅನುರಾಧಾ ಭಟ್ | 3:23 |
3. | "ಉಸಿರೆ ಉಸಿರೆ" | ಕವಿರಾಜ್ | ಶಾನ್, ಶ್ರೇಯಾ ಘೋಷಾಲ್ | 4:06 |
4. | "ದೇವರೇ" | ಹರ್ಷ ಪ್ರಿಯಾ | ಅರ್ಮಾನ್ ಮಲಿಕ್ | 3:55 |
5. | "ಎಣ್ಣೆನೂ ಸೋಡಾನೂ" | ಸಂತೋಷ್ ನಾಯಕ್ | ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ | 3:27 |
6. | "ಹೆಬ್ಬುಲಿ ಥೀಮ್" | ಜಾಕ್ ಸ್ಟೈಲ್, ಅರುಣರಾಜ ಕಾಮರಾಜ್ | 1:58 | |
ಒಟ್ಟು ಸಮಯ: | 20:25 |
ವಿಮರ್ಶಾತ್ಮಕ ಪ್ರತಿಕ್ರಿಯೆ
[ಬದಲಾಯಿಸಿ]ಟೈಮ್ಸ್ ಆಫ್ ಇಂಡಿಯದ ಸುನಯನ ಸುರೇಶ್ ೪/೫ ರೇಟಿಂಗ್ ನೀಡಿ, "ನೀವು ಸಾಮಾನ್ಯ ಮಸಾಲಾ ಮನರಂಜನೆಯನ್ನು ಬಯಸದಿದ್ದರೆ ಮತ್ತು ದೊಡ್ಡ ನಾಯಕನ ಪಾಟ್‌ಬಾಯ್ಲರ್‌ಗಳನ್ನು ಮೀರಿ ಚಲಿಸುವದನ್ನು ಹುಡುಕುತ್ತಿದ್ದರೆ ಇದು ನಿಮಗಾಗಿ. ಹೆಬ್ಬುಲಿ ಒಂದು ಪ್ರಮುಖ ವಿಷಯವನ್ನು ಜಾಣತನದಿಂದ ಸಂಯೋಜಿಸುತ್ತದೆ, ಮಾಸ್ ಅಂಶಗಳನ್ನೂ ಉಳಿಸಿಕೊಂಡಿದೆ. ಇದನ್ನು ನೋಡಿ, ಇದು ನಿಮ್ಮನ್ನು ರಂಜಿಸುವಲ್ಲಿ ವಿಫಲವಾಗುವುದಿಲ್ಲ" ಎಂದು ಬರೆದಿದ್ದಾರೆ.[೯]
"ಹೆಬ್ಬುಲಿ ಉತ್ತಮ ಕಥಾಹಂದರವನ್ನು ಹೊಂದಿದೆ. ನಿರ್ದೇಶಕ ಎಸ್. ಕೃಷ್ಣ ಚಿತ್ರವನ್ನು ಅಚ್ಚುಕಟ್ಟಾಗಿ ಸಂದೇಶಗಳೊಂದಿಗೆ ವಾಣಿಜ್ಯಿಕ ಅಂತ್ಯಕ್ಕೆ ಕೊಂಡೊಯ್ದಿದ್ದಕ್ಕಾಗಿ ಪೂರ್ಣ ಅಂಕಗಳನ್ನು ಪಡೆಯುತ್ತಾರೆ. ಆದರೆ ಹಾಡುಗಳ ನಿಯೋಜನೆ ಮತ್ತು ಸುದೀಪ್-ಅಮಲಾ ಪೌಲ್ ನಡುವಿನ ಪ್ರಣಯ ಭಾಗವು ವೇಗವನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ಕಿಚ್ಚ ಅವರ ಅದ್ಭುತ ಉಪಸ್ಥಿತಿಯು ಎಲ್ಲಾ ನ್ಯೂನತೆಗಳನ್ನು ಮರೆಮಾಡುತ್ತದೆ. ಒಟ್ಟಾರೆಯಾಗಿ, ತಾರ್ಕಿಕ ಲೋಪದೋಷಗಳು ಅಥವಾ ಕೆಟ್ಟ ಸಂಕಲನ ಮುಂತಾದ ದೋಷಗಳನ್ನು ಕಂಡುಹಿಡಿಯದೆ ವೀಕ್ಷಿಸಿದರೆ ಚಿತ್ರವು ಉತ್ತಮ ಮನರಂಜನೆಯಾಗಿದೆ" ಎಂದು ಐಬಿ ಟೈಮ್ಸ್ ಇಂಡಿಯಾದ ಪ್ರಕಾಶ್ ಉಪಾಧ್ಯಾಯ ಬರೆದಿದ್ದಾರೆ.[೧೦]
ಉಲ್ಲೇಖಗಳು
[ಬದಲಾಯಿಸಿ]- ↑ Upadhyaya, Prakash (2017-12-27). "Sandalwood 2017 Report Card: Raajakumara, Hebbuli, Bharjari emerge as big hits in a rather dull year for Kannada cinema". www.ibtimes.co.in (in ಇಂಗ್ಲಿಷ್). Retrieved 2022-10-12.
- ↑ Sharadhaa, A. "After Gajakesari, S Krishna to Make Hebbuli". The New Indian Express. Archived from the original on 7 June 2015. Retrieved 4 May 2016.
- ↑ "Guess Who Is Sudeep's Brother In 'Hebbuli'?". Filmibeat. 24 February 2016.
- ↑ Karthik, Janani (21 April 2016). "Amala Paul to make her Kannada debut with Sudeep's film". Times Of India. Retrieved 4 May 2016.
- ↑ "Bhojpuri Actor Ravi Kishan in Kannada with Hebbuli – Exclusive". Chitraloka. 24 April 2016. Archived from the original on 4 June 2016. Retrieved 4 May 2016.
- ↑ "9 Lesser Known Facts About S Krishna's Hebbuli That Will Leave You Surprised". Zee Kannada. Retrieved 19 January 2020.
- ↑ "Hebbuli Unplugged". The New Indian Express. 23 December 2016.
- ↑ "Hebbuli Music Rights Sold for a Whopping Amount". Filmibeat.com. 23 February 2017.
- ↑ "Hebbuli Review {4/5}: The film cleverly integrates an important issue, while still retaining massy elements". Times of India.
- ↑ "Hebbuli review: The tiger's roar that hid others' shortcomings". IBTimes India. 23 February 2017.