ವಿಷಯಕ್ಕೆ ಹೋಗು

ಹುಳಿಯಿಸುವ ಪದಾರ್ಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಡುಗೆಯಲ್ಲಿ, ಹುಳಿಯಿಸುವ ಪದಾರ್ಥ (ಉಬ್ಬಿಸುವ ಪದಾರ್ಥ ಎಂದೂ ಕರೆಯಲ್ಪಡುತ್ತದೆ) ಕಣಕ ಮತ್ತು ಹಿಟ್ಟಿನಲ್ಲಿ ಗುಳ್ಳೆ ಬರಿಸುವ ಕ್ರಿಯೆಯನ್ನು ಉಂಟುಮಾಡಲು ಬಳಸಲಾಗುವ ಅನೇಕ ವಸ್ತುಗಳಲ್ಲಿ ಯಾವುದಾದರೂ ಒಂದು. ಇದು ಮಿಶ್ರಣವನ್ನು ಹಗುರವಾಗಿಸಿ ಮೃದುಗೊಳಿಸುತ್ತದೆ. ಹುಳಿಯಿಸುವ ಪದಾರ್ಥಗಳಿಗೆ ಪರ್ಯಾಯ ಅಥವಾ ಪೂರಕವೆಂದರೆ ಯಾಂತ್ರಿಕ ಕ್ರಿಯೆಯಾಗಿದ್ದು, ಅದರ ಮೂಲಕ ಗಾಳಿಯನ್ನು ಒಳಸೇರಿಸಲಾಗುತ್ತದೆ (ಅಂದರೆ ನಾದುವುದು). ಹುಳಿಯಿಸುವ ಪದಾರ್ಥಗಳು ಜೈವಿಕ ಅಥವಾ ಸಂಶ್ಲೇಷಿತ ರಾಸಾಯನಿಕ ಸಂಯುಕ್ತಗಳಾಗಿರಬಹುದು. ಉತ್ಪತ್ತಿಯಾಗುವ ಅನಿಲವು ಹೆಚ್ಚಾಗಿ ಇಂಗಾಲದ ಡೈಆಕ್ಸೈಡ್ ಅಥವಾ ಸಾಂದರ್ಭಿಕವಾಗಿ ಹೈಡ್ರೋಜನ್ ಆಗಿರುತ್ತದೆ.

ಹಿಟ್ಟು ಅಥವಾ ಕಣಕವನ್ನು ಬೆರೆಸಿದಾಗ, ಹಿಟ್ಟಿನಲ್ಲಿರುವ ಪಿಷ್ಟ ಮತ್ತು ನೀರು ಮಾತೃಕೆಯನ್ನು ರೂಪಿಸುತ್ತವೆ. ನಂತರ ಪಿಷ್ಟವು ಜೆಲಟಿನೀಕರಿಸಿ ಗಟ್ಟಿಯಾಗಿ, ಅನಿಲ ಗುಳ್ಳೆಗಳು ಉಳಿದುಕೊಳ್ಳುತ್ತವೆ.

ಜೈವಿಕ ಹುಳಿಯಿಸುವ ಪದಾರ್ಥಗಳು

[ಬದಲಾಯಿಸಿ]

ಯೀಸ್ಟ್, ಬಿಯರ್, ಶುಂಠಿ ಬಿಯರು, ಕೆಫ಼ರ್, ಹುಳಿಹಿಟ್ಟು

ರಾಸಾಯನಿಕ ಹುಳಿಯಿಸುವ ಪದಾರ್ಥಗಳು

[ಬದಲಾಯಿಸಿ]

ರಾಸಾಯನಿಕ ಹುಳಿಯಿಸುವ ಪದಾರ್ಥಗಳು ಅವುಗಳಲ್ಲಿರುವ ವಸ್ತುಗಳು ತೇವಾಂಶದೊಂದಿಗೆ ಅಥವಾ ಶಾಖದೊಂದಿಗೆ ಪರಸ್ಪರ ಪ್ರತಿಕ್ರಿಯಿಸಿದಾಗ ಅನಿಲಗಳನ್ನು ಬಿಡುಗಡೆ ಮಾಡುವ ಮಿಶ್ರಣಗಳು ಅಥವಾ ಸಂಯುಕ್ತಗಳಾಗಿವೆ. ಹೆಚ್ಚಿನವು ಆಮ್ಲ ಮತ್ತು ಬೈಕಾರ್ಬನೇಟ್‍ನ ಲವಣದ (HCO 3 - ) ಸಂಯೋಜನೆಯನ್ನು ಆಧರಿಸಿವೆ. ಅವು ಕಾರ್ಯನಿರ್ವಹಿಸಿದ ನಂತರ, ಈ ಸಂಯುಕ್ತಗಳು ರಾಸಾಯನಿಕ ಲವಣವನ್ನು ಹಿಂದೆಬಿಡುತ್ತವೆ. ತ್ವರಿತ ಬ್ರೆಡ್‌ಗಳು ಮತ್ತು ಕೇಕ್‌ಗಳಲ್ಲಿ, ಜೊತೆಗೆ ಕುಕೀಗಳು ಮತ್ತು ಹಲವಾರು ಇತರ ಅನ್ವಯಿಕೆಗಳಲ್ಲಿ ದೀರ್ಘ ಜೈವಿಕ ಹುದುಗುವಿಕೆಯು ಅಪ್ರಾಯೋಗಿಕ ಅಥವಾ ಅನಪೇಕ್ಷಿತವಾಗಿರುವಲ್ಲಿ ರಾಸಾಯನಿಕ ಹುಳಿಯಿಸುವ ಪದಾರ್ಥಗಳನ್ನು ಬಳಸಲಾಗುತ್ತದೆ.

ಇತರ ಹುಳಿಯಿಸುವ ಪದಾರ್ಥಗಳು

[ಬದಲಾಯಿಸಿ]

ಬಿಸಿಮಾಡಿದಾಗ ಅವು ವಿಸ್ತರಿಸಿದಾಗ ಉಗಿ ಮತ್ತು ಗಾಳಿಯನ್ನು ಹುಳಿಯಿಸುವ ಪದಾರ್ಥಗಳಾಗಿ ಬಳಸಲಾಗುತ್ತದೆ. ಈ ಶೈಲಿಯ ಹುಳಿಯಿಸುವುದರ ಲಾಭವನ್ನು ಪಡೆಯಲು, ನೀರನ್ನು ಉಗಿಗೆ ಪರಿವರ್ತಿಸಲು ಬೇಕಾದಷ್ಟು ಹೆಚ್ಚಿನ ತಾಪಮಾನದಲ್ಲಿ ಬೇಕಿಂಗ್ ಮಾಡಬೇಕು, ಮತ್ತು ಹಿಟ್ಟು ಗಟ್ಟಿಯಾಗುವವರೆಗೆ ಉಗಿಯನ್ನು ಹಿಡಿದಿಡಲು ಸಾಧ್ಯವಾಗಿರಬೇಕು.

ಯಾಂತ್ರಿಕ ಹುಳಿಯಿಸುವಿಕೆ

[ಬದಲಾಯಿಸಿ]

ಕ್ರೀಮಿಂಗ್ ಎಂದರೆ ಸಕ್ಕರೆ ಹರಳುಗಳು ಮತ್ತು ಘನ ಕೊಬ್ಬನ್ನು (ಸಾಮಾನ್ಯವಾಗಿ ಬೆಣ್ಣೆ ) ಮಿಕ್ಸರ್‌ನಲ್ಲಿ ಒಟ್ಟಾಗಿ ಕಡೆಯುವ ಪ್ರಕ್ರಿಯೆ. ಸಕ್ಕರೆ ಹರಳುಗಳು ಭೌತಿಕವಾಗಿ ಕೊಬ್ಬಿನ ರಚನೆಯ ಮೂಲಕ ಕತ್ತರಿಸುವುದರಿಂದ, ಇದು ಸಣ್ಣ ಗಾಳಿಯ ಗುಳ್ಳೆಗಳನ್ನು ಮಿಶ್ರಣದೊಳಗೆ ಸಂಯೋಜಿಸುತ್ತದೆ. ಇದನ್ನು ಹೆಚ್ಚಾಗಿ ಕುಕೀಗಳಲ್ಲಿ ಬಳಸಲಾಗುತ್ತದೆ.

ಮುಖ್ಯವಾಗಿ ಕೆನೆ ಅಥವಾ ಮೊಟ್ಟೆಯ ಬಿಳಿಭಾಗದಂತಹ ಕೆಲವು ದ್ರವಗಳ ಮೇಲೆ ಒಂದು ಕಲಕುವ ಸಾಧನವನ್ನು ಬಳಸುವುದರಿಂದ, ಯಾಂತ್ರಿಕ ಕ್ರಿಯೆಯ ಮೂಲಕವೂ ಬುರುಗನ್ನು ರಚಿಸಬಹುದು. ಸ್ಪಂಜ್ ಕೇಕ್ ತಯಾರಿಕೆಯಲ್ಲಿ ಬಳಸಲಾಗುವ ವಿಧಾನ ಇದು.

ಉಲ್ಲೇಖಗಳು

[ಬದಲಾಯಿಸಿ]

 

ಹೆಚ್ಚಿನ ಓದಿಗೆ

[ಬದಲಾಯಿಸಿ]
  • Matz, S (1972). "Bakery Technology and Engineering", AVI Publishing Co.

ಹೊರಗಿನ ಕೊಂಡಿಗಳು

[ಬದಲಾಯಿಸಿ]