ಸ್ಪಂಜ್ ಕೇಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Cake competition (14287027130).jpg

ಸ್ಪಂಜ್ ಕೇಕ್ ಮೊಟ್ಟೆಗಳು, ಹಿಟ್ಟು ಮತ್ತು ಸಕ್ಕರೆಯಿಂದ ತಯಾರಿಸಲ್ಪಡುವ ಹಗುರವಾದ ಕೇಕ್ ಆಗಿದೆ. ಕೆಲವೊಮ್ಮೆ ಇದನ್ನು ಉಬ್ಬುಪುಡಿಯನ್ನು ಬಳಸಿ ಹುದುಗು ಬರಿಸಲಾಗುತ್ತದೆ.[೧] ಒಡೆದು ಬಿರುಸಾಗಿ ಕಲಕಿದ ಮೊಟ್ಟೆಗಳನ್ನು ಬಳಸಿ ಹುದುಗು ಬರಿಸಿದ ಸ್ಪಂಜ್ ಕೇಕ್‍ಗಳು ನವೋದಯದ ಕಾಲದಲ್ಲಿ ಹುಟ್ಟಿಕೊಂಡವು, ಪ್ರಾಯಶಃ ಸ್ಪೇನ್‍ನಲ್ಲಿ.[೨] ಸ್ಪಂಜ್ ಕೇಕ್ ಯೀಸ್ಟ್ ಬಳಸದ ಮೊದಲ ಕೇಕ್‍ಗಳಲ್ಲಿ ಒಂದೆಂದು ಭಾವಿಸಲಾಗಿದೆ.

ಮೂಲಭೂತ ಗೊಟಾಯಿಸಿದ ಸ್ಪಂಜ್ ಕೇಕ್ ಯಾವುದೇ ಕೊಬ್ಬನ್ನು ಹೊಂದಿರುವುದಿಲ್ಲ. ಇದನ್ನು ಮೊಟ್ಟೆಗಳು ಹಾಗೂ ಸಕ್ಕರೆಯನ್ನು ಗೊಟಾಯಿಸಿ ಮತ್ತು ಹಿಟ್ಟನ್ನು ನಿಧಾನವಾಗಿ ಕಲಸಿ ತಯಾರಿಸಲಾಗುತ್ತದೆ.[೩] ಈ ಬಗೆಯ ಕೇಕ್‍ನ್ನು ಫ಼ೋಮ್ ಕೇಕ್ ಎಂದೂ ಕರೆಯಲಾಗುತ್ತದೆ. ಇದು ಏರಲು ಮೊಟ್ಟೆಗಳ ಅನಿಲಗೂಡಿಕೆ ಮತ್ತು ಶಾಖದ ಮೇಲೆ ಅವಲಂಬಿಸಿರುತ್ತದೆ.[೪]

ಉಲ್ಲೇಖಗಳು[ಬದಲಾಯಿಸಿ]

  1. "Sponge cake". BBC. Retrieved 2019-11-19.
  2. Castella, Krystina (2010). A World of Cake: 150 Recipes for Sweet Traditions From Cultures Around the World, pp. 6–7. ISBN 978-1-60342-576-6.
  3. Mary Berry's Ultimate Cake Book 1995 printing.
  4. Braker, Flo (2003). The Simple Art of Perfect Baking. ISBN 9780811841092.