ವಿಷಯಕ್ಕೆ ಹೋಗು

ಹುಡ್ ಹುಡ್ ಚಂಡಮಾರುತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೨೦೧೨ರ ಹುಡ್ ಹುಡ್ ಚಂಡಮಾರುತ

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ 'ಹುಡ್‌ಹುಡ್‌' (ಓಮಾನ್‌ ದೇಶದ ಒಂದು ಪಕ್ಷಿಯ ಹೆಸರು) ಚಂಡಮಾರುತ ಗಂಟೆಗೆ ೧೮೫ ಕಿ.ಮೀ. ವೇಗದಲ್ಲಿ ದೇಶದ ಪೂರ್ವ ಕರಾವಳಿಯತ್ತ ನುಗ್ಗಿ ಬಂದು . ೧೨/೧೦/೨೦೧೪ ರಂದು ಮಧ್ಯಾಹ್ನ ಆಂಧ್ರದ ವಿಶಾಖಪಟ್ಟಣಂ ಸಮೀಪ ಗಂಟೆಗೆ ೧೯೫ ಕಿ.ಮೀ.ಕ್ಕಿಂತ ಹೆಚ್ಚು ವೇಗದಲ್ಲಿ ಈ ಮಾರುತ ಭೂಮಿಗೆ ಅಪ್ಪಳಿಸಿತು. ವಿಶಾಖಪಟ್ಟಣಂನಲ್ಲಿ ಮನೆಯೊಂದು ಕುಸಿದು ಮಹಿಳೆಯೊಬ್ಬರು ಬಲಿಯಾದರೆ, ಶ್ರೀಕಾಕುಳಂನಲ್ಲಿ ಮರ ಬಿದ್ದು ಇಬ್ಬರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಒಡಿಶಾದಲ್ಲಿ ಮೀನುಗಾರ ಮತ್ತು ಬಾಲಕನೊಬ್ಬ ಕಡಲು ಪಾಲಾಗಿದ್ದಾರೆ ಎಂದು ವರದಿಯಾಗಿದೆ.

ಚಂಡಮಾರುತದಿಂದಾಗಿ ದಕ್ಷಿಣ ಒಡಿಶಾದಲ್ಲಿ ಬಿರುಗಾಳಿ ಸಹಿತ ಮಳೆ ಯಾಗುತ್ತಿದೆ. 'ಹುಡ್‌ಹುಡ್‌' ಅಪ್ಪಳಿಸಿದ ವೇಳೆ ನೂರಾರು ಮನೆಗಳಿಗೆ ಹಾನಿಯಾಗಿದೆ.

ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ದೊಡ್ಡ ಮರಗಳು ಉರುಳಿ ಬೀಳುತ್ತಿವೆ, ವಿದ್ಯುತ್‌ ಹಾಗೂ ಸಂಪರ್ಕ ವ್ಯವಸ್ಥೆಗೆ ತೊಂದರೆ ಸೇರಿದಂತೆ ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ.

ವಿಶಾಖ ಪಟ್ಟಣಂನ ಕೆಲವೆಡೆ ಗಾಳಿ ಮಳೆಯಿಂದಾಗಿ ಮರಗಳು ಧರೆಗುರುಳಿದ್ದು, ಕೆಲವೆಡೆ ಭೂಕುಸಿತ ಉಂಟಾಗಿದೆ.

ಹುಡ್‌ ಹುಡ್‌ ಪರಿಣಾಮಾವಾಗಿ ಬಿಹಾರ , ಜಾರ್ಖಂಡ್‌, ಛತ್ತೀಸ್ ಘಡ್ ಮತ್ತು ಮಧ್ಯ ಪ್ರದೇಶದಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಶಾಖಪಟ್ಟಣಂ ಕರಾವಳಿಯಲ್ಲಿ ಗಂಡೆಗೆ ೧೭೦ ಕೀಮಿ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ವರದಿಯಾಗಿದೆ.

ಆಂಧ್ರ ಮತ್ತು ಒಡಿಶಾದ ಕರಾವಳಿ ತೀರದಲ್ಲಿ ವಿದ್ಯುತ್‌ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು .

ವಿಶಾಖಪಟ್ಟಣಂ ಸೇರಿದಂತೆ ಒಡಿಶಾದ ಕರಾವಳಿಯಲ್ಲೂ ಜನಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿತ್ತು.

ಮಾಹಿತಿ ಮೂಲ

[ಬದಲಾಯಿಸಿ]