ಹಿಮ ಸಾರಂಗ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
Cervus cashmeerianus Smit.jpg

ಹಿಮ ಸಾರಂಗವು ಏಷ್ಯಾದ ಹಿಮಾಲಯದ ಭಾಗಗಳಲ್ಲಿ ಪ್ರಧಾನವಾಗಿ ಕಂಡುಬರುವ ತೆಳುಕಂದು ಬಣ್ಣದ ಸಾರಂಗ. ವೈಜ್ಞಾನಿಕ ನಾಮದ್ವಯ ಸೆರ್‍ವಸ್ ಎಲಫಸ್ ಹಂಗ್ಲು. ಸುಮಾರು 50 ಇಂಚು ಎತ್ತರಕ್ಕೆ ಬೆಳೆಯುವ ಇವು ನೂರ ಎಂಭತ್ತು ಕೆ.ಜಿ. ತೂಗುತ್ತವೆ. ಇದೇ ಜಾತಿಯ ಅನೇಕ ಪ್ರಭೇದದ ಸಾರಂಗಗಳು ಯೂರೋಪಿನಿಂದ ತೊಡಗಿ ಉತ್ತರ ಅಮೇರಿಕವರೆಗೆ ವ್ಯಾಪಿಸಿವೆ. ಇದರ ವ್ಯಾಪ್ತಿ ಭಾರತದಲ್ಲಿ ಕಾಶ್ಮೀರದ ಕಣಿವೆಗಳಿಗೆ ಸೀಮಿತವಾಗಿದೆ.

ಈ ಹಿಮ ಸಾರಂಗ ತುಟಿ, ಗಲ್ಲ ಹೊಟ್ಟೆ ಹಾಗೂ ಹಿಂಭಾಗದಲ್ಲಿ ಮಾಸಲು ಬಿಳಿ ಬಣ್ಣಹೊಂದಿರುತ್ತದೆ. ಬೇಸಿಗೆಯಲ್ಲಿ ಬಣ್ಣ ಮಾಸಲಾಗುತ್ತದೆಯಾದರೂ ಚಳಿಗಾಲದಲ್ಲಿ ಹೊಚ್ಚ ಹೊಸ ಬಣ್ಣ ಪಡೆದು ಆಕರ್ಷಕವಾಗಿ ಕಾಣುತ್ತವೆ. ಗಂಡಿನಲ್ಲಿ ಈ ಬಣ್ಣ ಕಡು ಅಥವಾ ಕೆಂಪು ಮಿಶ್ರಿತ ಕಂದು. ಮರಿಗಳಲ್ಲಿ, ಕೆಲವೊಮ್ಮೆ ವಯಸ್ಸಾದ ಹೆಣ್ಣುಗಳಲ್ಲಿ ಸಹ ಬಿಳಿಯ ಚುಕ್ಕೆಗಳಿರುತ್ತವೆ. ಈ ಸಾರಂಗದ ಕೋಡುಗಳಲ್ಲಿ 16 ರಿಂದ 11ರವರೆಗೆ ತುದಿಗಳಿರುವುದುಂಟು.

ಸಾಮಾನ್ಯವಾಗಿ ಒಂಟಿ ಇಲ್ಲವೆ ಸಣ್ಣ ಗುಂಪುಗಳಲ್ಲಿ ವಾಸಿಸುವ ಇವು ಮೇವನ್ನರಸುತ್ತಾ ಕಾಡಿನಿಂದ ಕಾಡಿಗೆ ಅಲೆಯುತ್ತಿರುತ್ತವೆ. ಬೇಸಿಗೆಯಲ್ಲಿ (ಮಾರ್ಚ್ - ಏಪ್ರಿಲ್) ಕೋಡುಗಳನ್ನು ಉದುರಿಸಿಕೊಂಡು ಎತ್ತರದ ಪ್ರದೇಶಗಳಲ್ಲಿ ಸೇರಿಕೊಳ್ಳುತ್ತವೆ (12000ಅಡಿ).

ಸೆಪ್ಟೆಂಬರ್ ವೇಳೆಗೆ ಗಂಡುಗಳಿಗೆ ಹೊಸ ಕೊಡುಗಳು ಮೂಡಿ ಗಟ್ಟಿಯಾಗಿರುತ್ತವೆ. ಈಗ ಕೆಳಗಿಳಿದು ಬರುವ ಇವು ಅಕ್ಟೋಬರ್ ಸುಮಾರಿಗೆ ಹೆಣ್ಣನ್ನು ಸೇರುತ್ತವೆ. ಮೇ ಸುಮಾರಿಗೆ ಮರಿಗಳ ಜನನವಾಗುತ್ತದೆ. ಮರಿಗಳಿರುವ ಸಮಯದಲ್ಲಿ ಬಹಳ ಜಾಗೃತವಾಗಿರುವ ಇವುಗಳ ಮುಖ್ಯ ಬೇಟೆಗಾರ ಪ್ರಾಣಿಗಳೆಂದರೆ ಇಲ್ಲಿ ಕಂಡುಬರುವ ಹಿಮಚಿರತೆಗಳು.

ಹಿಮಾಲಯದಲ್ಲಿ ಇದರ ಇನ್ನೊಂದು ಉಪ ಪ್ರಭೇದಗಳು ಕಂಡುಬರುತ್ತದೆ. ಅವುಗಳಲ್ಲಿ ಸಿ. ಎಲಫಸ್ ವಲಚಿ ಟಿಬೆಟ್ ಹಾಗೂ ಭೂತಾನ್‍ದ ಬೆಟ್ಟ ಪ್ರದೇಶಗಳಲ್ಲಿ ಕಂಡುಬರುತ್ತದೆ. ಜಿಂಕೆಗಳು ಇತರೆ ಬಗೆಯ ಕಾಡುಗಳಲ್ಲಿ, ಕಾಡಂಚಿನಲ್ಲಿ ಹುಲ್ಲು ಹಾಗೂ ಸಣ್ಣ ಸಸ್ಯಗಳ ಬೆಳವಣಿಗೆಯನ್ನು ಅಂಕೆಯಲ್ಲಿಡುವಂತೆ, ಹಿಮಸಾರಂಗಗಳು ಹಿಮಾಲಯ ಪ್ರಾಂತ್ಯದಲ್ಲಿ ಈ ಕಾರ್ಯವನ್ನು ನಿರ್ವಹಿಸುತ್ತವೆ. ಹೀಗೆ ಸಸ್ಯಗಳು, ಸಸ್ಯಾಹಾರಿಗಳು ಹಾಗೂ ಇವನ್ನು ತಿನ್ನುವ ಮಾಂಸಾಹಾರಿ ಪ್ರಾಣಿಗಳು ಒಂದು ಆಹಾರ ಸರಪಳಿಯ ಅವಿಭಾಜ್ಯ ಅಂಗಗಳು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: