ಹಿಂದುಸ್ತಾನ್ ಅಂಬಾಸಿಡರ್
ಈ ಲೇಖನವು ಓದುಗರಿಗೆ ಗೊಂದಲ ಅಥವಾ ಅಸ್ಪಷ್ಟವಾಗಿರಬಹುದು. ಲೇಖನವನ್ನು ಸ್ಪಷ್ಟಪಡಿಸಲು ನಮಗೆ ಸಹಾಯ ಮಾಡಿ; ಸಲಹೆಗಳನ್ನು ಕಾಣಬಹುದು(October 2009) |
Manufacturer | Hindustan Motors |
---|---|
Also called | Hindustan Avigo |
Production | 1958–present |
Predecessor | Hindustan Landmaster |
Body style | 4-door sedan |
Layout | FR layout |
Related | Morris Oxford |
ಹಿಂದುಸ್ತಾನ್ ಅಂಬಾಸಿಡರ್ ಎಂಬುದು ಭಾರತದ ಹಿಂದುಸ್ತಾನ್ ಮೋಟರ್ಸ್ ತಯಾರಿಸಿರುವ ಕಾರಾಗಿದೆ. ಈ ಕಾರನ್ನು ಕೆಲವೊಂದು ಮಾರ್ಪಾಡುಗಳೊಂದಿಗೆ ಅಥವಾ ಬದಲಾವಣೆಗಳೊಂದಿಗೆ 1958 ರಿಂದ ತಯಾರಿಸಲಾಗುತ್ತಿದ್ದು, ಇದನ್ನು ಮೋರಿಸ್ ಆಕ್ಸ್ ಫರ್ಡ್ ನ III ನೇಯ ಮಾದರಿಯಲ್ಲಿ ನಿರ್ಮಿಸಲಾಗಿದೆ. ಈ ಮಾದರಿಯನ್ನು ಮೊದಲು ಇಂಗ್ಲೆಂಡ್ ನಲ್ಲಿರುವ ಆಕ್ಸ್ ಫರ್ಡ್ ನ ಕೌಲೆಯಲ್ಲಿರುವ ಮೋರಿಸ್ ಮೋಟಾರ್ ಕಂಪನಿ 1956 ರಿಂದ 1959 ರವರೆಗೆ ತಯಾರಿಸುತ್ತಿತ್ತು.
ಬ್ರಿಟಿಷ್ ಮೂಲದ ಹೊರತಾಗಿ, ಅಂಬಾಸಿಡರ್ ಅನ್ನು ಭಾರತೀಯರ ವಿಶ್ವಾಸಾರ್ಹ ಕಾರೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಇದನ್ನು ಪ್ರೀತಿಯಿಂದ "ಭಾರತೀಯ ರಸ್ತೆಗಳ ರಾಜ"ನೆಂದು ಕೂಡ ಕರೆಯಲಾಗುತ್ತದೆ. ಈ ಕಾರನ್ನು ಹಿಂದುಸ್ತಾನ್ ಮೋಟರ್ಸ್, ಪಶ್ಚಿಮ ಬಂಗಾಳ ದ ಕೋಲ್ಕತ್ತಾ ದ ಸಮೀಪವಿರುವ ಇದರ ಉತ್ತರ್ಪಾರ ಕಾರ್ಖಾನೆ[೧] ಯಲ್ಲಿ ತಯಾರಿಸುತ್ತದೆ. ಇದು ಭಾರತದಲ್ಲೆ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಕಾರಾಗಿದೆ. ಅಲ್ಲದೇ ಇದರ ಅತ್ಯುತ್ತಮ ಸಹಿಷ್ಣುತೆಯಿಂದಾಗಿ, ಒರಟಾದ ಭಾರತೀಯ ಭೂಪ್ರದೇಶದ ರಸ್ತೆಗಳಿಗೆ ಉತ್ತಮವಾಗಿ ಸರಿಹೊಂದುತ್ತದೆ ಎಂದು ಕೂಡ ತಿಳಿಯಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ಭಾರತದ ರಾಜಕೀಯ ನಾಯಕತ್ವಕ್ಕೆ ಇದು ಅತ್ಯುತ್ತಮ ಕಾರೆಂದು ಮನ್ನಣೆ ನೀಡುವ ಮೂಲಕ ಇದರ ಸಾಂಪ್ರದಾಯಿಕ ಸ್ಥಾನಮಾನ ಉಳಿದಿದೆ. ಭಾರತದ ಪ್ರಧಾನ ಮಂತ್ರಿಯನ್ನು ಒಳಗೊಂಡಂತೆ ಭಾರತದ ರಾಜಕೀಯ ನಾಯಕತ್ವದಲ್ಲಿರುವವರೆಲ್ಲಾ ಇತರ ದುಬಾರಿ ಕಾರುಗಳನ್ನು ಮತ್ತು SUVಗಳನ್ನು ಬಯಸುವ ಮೊದಲು ಇದಕ್ಕೆ ಮೊದಲ ಆದ್ಯತೆ ನೀಡುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಅನಂತರ 2002ರಲ್ಲಿ ಭಾರತದ PM (ಪ್ರಧಾನ ಮಂತ್ರಿ) ಅಟಲ್ ಬಿಹಾರಿ ವಾಜಪೇಯಿ, ಸುರಕ್ಷತೆಯ ದೃಷ್ಟಿಯಿಂದ ಕವಚಿತ ವಾಹನವಾದ BMW 7 ಸೀರೀಸ್ ನಲ್ಲಿ ಪ್ರಯಾಣ ಮಾಡಿದರು. ಅದೇನೇ ಆದರೂ, ಸೋನಿಯಾ ಗಾಂಧಿಯಂತಹ ಭಾರತದ ಕೆಲವು ಪ್ರಮುಖ ರಾಜಕೀಯ ವ್ಯಕ್ತಿಗಳು ಹಿಂದುಸ್ತಾನ್ ಅಂಬಾಸಿಡರ್ ನ ಬಳಕೆಯನ್ನು ಮುಂದುವರೆಸಿದ್ದಾರೆ.[೨]
ಮೂಲಗಳು
[ಬದಲಾಯಿಸಿ]ಬಿರ್ಲಾ, ಮೋರಿಸ್ ಆಕ್ಸ್ ಫರ್ಡ್ ಸೀರಿಸ್ II ರ (ಹಿಂದುಸ್ತಾನ್ ಲ್ಯಾಂಡ್ ಮಾಸ್ಟರ್ ) ಮಾದರಿಯಲ್ಲಿ ತಯಾರಿಸಲಾಗಿದ್ದ ಅವರ ಹಳೆಯ ಹಿಂದುಸ್ತಾನ್ ಮಾದರಿಯನ್ನು ಬದಲಾಯಿಸಬೇಕೆಂದಾಗ, ಅವರು ಅನಂತರದ ಹೊಸ ಮೋರಿಸ್ ಆಕ್ಸ್ ಫರ್ಡ್ ಸೀರಿಸ್ III ಅನ್ನು ಅನ್ವೇಷಿಸಿದರು. ಆರಂಭದಲ್ಲಿ ಈ ಕಾರಿನ ಪಕ್ಕದಲ್ಲಿ ವ್ಯಾಲ್ವ್(ಕವಾಟ) ಎಂಜಿನ್ ಇರುವಂತೆ ತಯಾರಿಸಲಾಯಿತು. ಆದರೆ ಅನಂತರ ಇದನ್ನು ಒವರ್ ಹೆಡ್ ವ್ಯಾಲ್ವ್ ಎಂಜಿನ್ ಆಗಿ ಅಭಿವೃದ್ಧಿ ಪಡಿಸಲಾಯಿತು. ಆ ಹಂತದಲ್ಲಿ ಕಾರು ಸಂಪೂರ್ಣವಾಗಿ ಸುತ್ತುವರೆದಿರುವ ಮನಕಾಕ್(ಏಕಕಾಯಕ ರಚನೆ) ಚಾಸಿ(ತಳಕಟ್ಟು) ಯೊಂದಿಗೆ ತಯಾರಿಸಲಾದ ಹೊಸ ವಿನ್ಯಾಸದಂತಿತ್ತು. ಇದರಿಂದಾಗಿ ಒಳಭಾಗದಲ್ಲಿ ವಿಸ್ತಾರವಾದ ಸ್ಥಳಾವಕಾಶ ದೊರೆಯಿತು.
ಹಿಂದುಸ್ತಾನ್ ಮೋಟರ್ಸ್ ಲಿಮಿಟೆಡ್(HM), ಎಂಬ ಕಾರನ್ನು ತಯಾರಿಸಿದ ಭಾರತದ ಮೊದಲ ಕಂಪನಿಯಾಗಿದೆ. ಅಲ್ಲದೇ ಸಿ.ಕೆ. ಬಿರ್ಲಾ ಗ್ರೂಪ್ ನ ಫ್ಲ್ಯಾಗ್ ಶಿಪ್ ಕಂಪನಿಯಾಗಿದೆ. ಇದನ್ನು ಸ್ವಾತಂತ್ರ್ಯ ದೊರೆಯುವ ಸ್ವಲ್ಪಕಾಲದ ಮೊದಲು 1942ರಲ್ಲಿ ಗುಜರಾತ್ ಹತ್ತಿರವಿರುವ ಪೋರ್ಟ್ ಓಕಾದಲ್ಲಿ ಒಂದು ಸಣ್ಣ ಕಾರ್ಖಾನೆಯ ರೂಪದಲ್ಲಿ ಬಿ.ಎಮ್. ಬಿರ್ಲಾ ಸ್ಥಾಪಿಸಿದರು.
ವಿಕಸನ
[ಬದಲಾಯಿಸಿ]ಪ್ರೀತಿಯಿಂದ ಆಂಬಿ ಎಂದು ನೆಚ್ಚಿನ ಹೆಸರಿನಿಂದ ಕರೆಯಲಾಗುವ ಈ ಕಾರು, ಅದರ ರಚನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಕಾಣುವುದರೊಂದಿಗೆ ಆರಂಭದಿಂದಲೂ ಇದರ ಉತ್ಪಾದನೆ ಮುಂದುವರೆದಿದೆ.
ಹಿಂದುಸ್ತಾನ್ ಮೋಟರ್ಸ್ ಅದರ ಜೋಡಣಾ ಕಾರ್ಖಾನೆಯನ್ನು ಗುಜರಾತ್ ನಲ್ಲಿರುವ ಪೋರ್ಟ್ ಓಕಾ ದಿಂದ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ಉತ್ತರ್ಪಾರಕ್ಕೆ 1948 ರಲ್ಲಿ ಬದಲಾಯಿಸಿತು. ಅಲ್ಲದೇ ಮೋಟಾರು ಕಾರಿನ ವಿಭಾಗದಲ್ಲಿ ಇದರ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಾಯಿತು.
ಮೋರಿಸ್ ಆಕ್ಸ್ ಫರ್ಡ್ ಸರಣಿ II ರ ಮಾದರಿಯನ್ನು ಭಾರತದಲ್ಲಿ ತಯಾರಿಸಲು 1954 ರಲ್ಲಿ ಅನುಮತಿ ದೊರೆಯಿತು. ಅಲ್ಲದೇ ಇಂಗ್ಲೆಂಡ್ ನಲ್ಲಿ ಈ ಕಾರನ್ನು ಪ್ರಥಮ ಬಾರಿಗೆ ನಿರ್ಮಿಸಿದ ಮೂರು ವರ್ಷಗಳ ನಂತರ, ಇದನ್ನು ಪಶ್ಚಿಮ ಬಂಗಾಳದ ಉತ್ತರ್ಪಾರ(ಹೂಗ್ಲಿ ಜಿಲ್ಲೆಯ.)ದಲ್ಲಿ ನಿರ್ಮಿಸಲಾಯಿತು. ಅಲ್ಲದೇ 1957 ರ ಹಿಂದುಸ್ತಾನ್ ಲ್ಯಾಂಡ್ ಮಾಸ್ಟರ್ ಎಂದು ಕರೆಯಲಾಯಿತು. ಇದು ಚಕ್ರಾಕಾರದ ಹಿಂಬದಿಯ ಸ್ವ್ಯಾಬ್(ಗಿಡ್ಡನೆಯ ಮತ್ತು ದಪ್ಪವಾಗಿರುವ) ಅನ್ನು ಮತ್ತು ಬಾಗಿಕೊಂಡು ಇಳಿಜಾರಿನಂತಿರುವ ಬಾನೆಟ್ ಹೊಂದಿದೆ.
ಅಂಬಾಸಿಡರ್ ಅನ್ನು ತಯಾರಿಸುವುದರೊಂದಿಗೆ ಕಾರ್ಖಾನೆಯು ಕಂಟೆಸ್ಸಾ ಮತ್ತು ಟ್ರೆಕ್ಕರ್, ಪೋರ್ಟರ್ ಮತ್ತು ಪುಷ್ಪಕ್ ನಂತಹ ಗ್ರಾಹಕ ಬಳಕೆಯ ವಾಹನಗಳನ್ನು ತಯಾರಿಸಿತು. ಇದರೊಂದಿಗೆ ಭಾರತದಲ್ಲಿನ ಮೋಟಾರು ಕಾರು ಉತ್ಪಾದನಾ ಉದ್ಯಮದಲ್ಲಿ ಅನೇಕ ಅವಿಷ್ಕಾರ ಮತ್ತು ಸುಧಾರಣೆಗಳಾದವು. ಹಿಂದುಸ್ತಾನ್ ಮೋಟರ್ಸ್ ಪ್ರಸ್ತುತದಲ್ಲಿ ಬೆಡ್ ಫೋರ್ಡ್ ಗಾಡಿಗಳಿಗೆ ಉತ್ಪಾದಿತ ಭಾಗಗಳನ್ನು ತಯಾರಿಸುವ ವಿಶ್ವದ ಏಕೈಕ ಉತ್ಪಾದನಾ ಸೌಲಭ್ಯವಾಗಿದೆ.
ಅಂಬಾಸಿಡರ್ ಮಾರ್ಕ್ I ರಿಂದ ಮಾರ್ಕ್ IV ರ ವರೆಗೆ
[ಬದಲಾಯಿಸಿ]ಬ್ರಿಟಿಷ್ ಮೋರಿಸ್ ಆಕ್ಸ್ ಫರ್ಡ್ ಸರಣಿ III ರ ಎಲ್ಲಾ ಸಾಧನ ಸಲಕರಣೆಗಳನ್ನು 1957ರಲ್ಲಿ ಭಾರತಕ್ಕೆ ವರ್ಗಾಯಿಸಲಾಯಿತು. ಅಲ್ಲದೇ ಈ ಕಾರಿಗೆ ಅಂಬಾಸಿಡರ್ ಎಂಬ ಮರುನಾಮಕರಣ ಮಾಡಲಾಯಿತು, ಇದರ ಉತ್ಪಾದನೆಯನ್ನು 1957 ರಿಂದ ಆರಂಭಿಸಲಾಯಿತು.
ಮೋರಿಸ್ ಆಕ್ಸ್ ಫರ್ಡ್ ಸರಣಿ II (ಲ್ಯಾಂಡ್ ಮಾಸ್ಟರ್ಸ್)ರಿಂದ ಮೋರಿಸ್ ಆಕ್ಸ್ ಫರ್ಡ್ ಸರಣಿ III (ಅಂಬಾಸಿಡರ್)ರ ವರೆಗೆ ಕಾರಿನ ವಿನ್ಯಾಸದಲ್ಲಿ ಮಾಡಲಾದ ಬದಲಾವಣೆಗಳು, ಆಳವಾದ ಮುಂದೀಪ ಕೌಲ್ (ಮೋಟಾರು ವಾಹನದ ಇಂಜಿನಿನ ತೆಗೆಯಬಹುದಾದ ಮುಚ್ಚಳ) ಗಳನ್ನು ಮತ್ತು "ಹಿಂಚಾಚು"(ಟ್ಯೇಲ್ ಫಿನ್) ಎಂದು ಕರೆಯಲಾಗುವ ಸಣ್ಣದಾದ ಹಿಂಬದಿಯ ರೆಕ್ಕೆಗಳಂತಹ ಭಾಗಗಳನ್ನು ಒಳಗೊಂಡಿದೆ—ಈ ಬದಲಾವಣೆಗಳು 1956 ರಲ್ಲಿ ನಡೆದವು. ತಡೆಹಲಗೆ (ಡ್ಯಾಶ್ ಬೋರ್ಡ್) ಮತ್ತು ಚಾಲಕ ಚಕ್ರವನ್ನು(ಸ್ಟೀರಿಂಗ್ ವೀಲ್) ಸಂಪೂರ್ಣವಾಗಿ ಮರು ವಿನ್ಯಾಸಗೊಳಿಸಲಾಯಿತು. ಲ್ಯಾಂಡ್ ಮಾಸ್ಟರ್ಸ್ ನ ಚಪ್ಪಟ್ಟೆಯಾಗಿರುವ ಸಮನಾದ ಎರಡು ಸ್ಪೋಕ್ (ಆರೆ) ಗಳು ಅಂಬಾಸಿಡರ್ ಗೆ, ಪ್ರತಿ ಸ್ಪೋಕ್ ನ ನಾಲ್ಕು ವೈರ್ ಗಳಿಗೆ ಮೂರು ಸ್ಪೋಕ್ ಗಳಂತೆ, ಉತ್ತಮ ಗುಣಮಟ್ಟದ ತಟ್ಟೆಯಾಕಾರದ ಚಾಲಕ ಚಕ್ರವನ್ನು ನಿರ್ಮಿಸಲು ಕಾರಣವಾದವು. ಇದರ ಜೊತೆಯಲ್ಲಿ ಕುಳಿಬೀಳುವ ಹೊಸ ಬಾನೆಟ್ ಅನ್ನು ಕೂಡ ಪ್ರಥಮ ಬಾರಿ ನಿರ್ಮಿಸಲಾಯಿತು. ಈ ಮಾದರಿಗಳು 1489 cc ಸೈಡ್ ವ್ಯಾಲ್ವ್ (ಪಕ್ಕದ ಕವಾಟ) BMC B ಸರಣಿ ಪೆಟ್ರೋಲ್ ಎಂಜಿನ್ ಹೊಂದಿವೆ. ಸೈಡ್ ವ್ಯಾಲ್ವ್ ಎಂಜಿನ್ ಅನ್ನು 1959ರಲ್ಲಿ, 1489 ccಯಿಂದ ಬದಲಾಯಿಸಲಾಯಿತು, 55 bhp ಓವರ್ ಹೆಡ್ ವ್ಯಾಲ್ವ್ BMC B ಸರಣಿ ಪೆಟ್ರೋಲ್ ಎಂಜಿನ್ ಎಂದೂ ಕರೆಯಲಾಯಿತು.
ಚೌಕಳಿ(ಚೆಕರ್ಡ್) ಇರುವ ಸರಳಿನ ಜಾಲರಿಯೊಂದಿಗೆ ಸಣ್ಣದಾದ ಮುಂಭಾಗದ ಮುಂದೀಪಗಳನ್ನು 1963 ರಲ್ಲಿ ಬಳಸಲಾಯಿತು, ಅಲ್ಲದೇ ಇದನ್ನು ಅಂಬಾಸಿಡರ್ ಮಾರ್ಕ್ II ಎಂದು ಕರೆಯಲಾಯಿತು. ಬ್ರಿಟಿಷ್ ವಿನ್ಯಾಸದ ಇತರ ಮಾರ್ಕ್ ಕಾರುಗಳಂತೆ ಯಾವುದೇ ಅಂಬಾಸಿಡರ್ ಮಾರ್ಕ್ I ಇರಲಿಲ್ಲ, ಮಾರ್ಕ್ II ರ ಆಗಮನದಿಂದ ಜನರು ಮಾರ್ಕ್ I ಅನ್ನು ಹಳೆಯ ಮಾದರಿ ಎಂದು ಕರೆಯಲಾರಂಭಿಸಿದರು.
ಅದೇ ಸರಳು ಜಾಲರಿಗೆ ಮತ್ತೊಂದು ಚಿಕ್ಕದಾದ ಮುಂದೀಪ ಮತ್ತು ಹೋಲಿಕೆಯಲ್ಲಿ ಸ್ವಲ್ಪ ದೊಡ್ಡದಾದ ಮುಂದೀಪವನ್ನು 1975 ರಲ್ಲಿ ಬಳಸಲಾಯಿತು. ಇದನ್ನು ಮಾರ್ಕ್ 3 ಎಂದು ಕರೆಯಲಾಯಿತಲ್ಲದೇ, ಇದು ಅಂಬಾಸಿಡರ್ ನ ಅತ್ಯಂತ ಜನಪ್ರಿಯವೆನಿಸಿದ ಮುಂಭಾಗವಾಗಿದೆ.
ಅಂಬಾಸಿಡರ್ ಗೆ ಚೌಕಳಿ ಇರುವ ಸರಳಿನ ಜಾಲರಿಯೊಂದಿಗೆ ಮತ್ತೊಂದು ಮುಂದೀಪವನ್ನು ಹಾಗು ಚೌಕಾಕಾರದ ಪಾರ್ಕ್ ದೀಪಗಳನ್ನು ಮತ್ತು ಪ್ರತ್ಯೇಕ ಮಿನುಗು ದೀಪಗಳನ್ನು 1979 ರಲ್ಲಿ, ಅಳವಡಿಸಲಾಯಿತು. ಈ ಮಾದರಿಯನ್ನು ಮಾರ್ಕ್ 4 ಎಂದು ಕರೆಯಲಾಯಿತು. ಅಸ್ಥಿತ್ವದಲ್ಲಿದ್ದ ಪೆಟ್ರೋಲ್ ಆವೃತ್ತಿಯೊಂದಿಗೆ ಭಿನ್ನವಾದ ಡೀಸಲ್ ಅನ್ನು ಪ್ರಾರಂಭಿಸಲಾಯಿತು. ಇದಕ್ಕೆ 1500 cc, 37 bhp BMC B ಸರಣಿ ಡೀಸೆಲ್ ಎಂಜಿನ್ ಶಕ್ತಿ ಒದಗಿಸುತ್ತದೆ. ಇದು ಭಾರತದ ಮೊಟ್ಟ ಮೊದಲ ಡೀಸಲ್ ಕಾರಾಗಿದ್ದು, ಭಾರತೀಯರಲ್ಲಿ ಇದು ಹೆಚ್ಚು ಮಾನ್ಯವಾಯಿತು. ಮಾರ್ಕ್ 4,ಮಾರ್ಕ್ ಕಾರುಗಳ ast(ಆಸ್ಟ್) ಆಯಿತು. ಅನಂತರ ಮುಂದೆ ಇದಕ್ಕೆ ಅಂಬಾಸಿಡರ್ ನೋವಾ ಎಂಬ ಹೊಸ ಹೆಸರಿಡಲಾಯಿತು. ಆಗ 1990 ರ ಅಂಬಾಸಿಡರ್ ವಾಸ್ತವಿಕವಾಗಿ ಅನೇಕ ಬದಲಾವಣೆಗಳೊಂದಿಗೆ ಮೂಲಕ್ಕೆ ಅನನ್ಯವೆನಿಸಿತ್ತು. ಆ ಸಮಯದಲ್ಲಿ ಭಾರತ ಸರ್ಕಾರ ಅನುಸರಿಸಿದ ರಕ್ಷಣಾ ನೀತಿ-ಸೂತ್ರಗಳಿಂದಾಗಿ ಮತ್ತು ಭಾರತದ ಕಂಪನಿಗಳು ನಾವೀನ್ಯದ ಕಡೆಗೆ ಹೆಚ್ಚು ಆಸಕ್ತಿ ತೋರದೆ ಇದ್ದ ಕಾರಣ ಈ ತಂತ್ರಜ್ಞಾನದ ನಿಶ್ಚಲತೆ ಉಂಟಾಯಿತು.
ಅಂಬಾಸಿಡರ್ ನೋವಾ
[ಬದಲಾಯಿಸಿ]ಅಂಬಾಸಿಡರ್ ನೋವಾ ವನ್ನು 90 ರ ಪೂರ್ವಾರ್ಧದಲ್ಲಿ ಎರಡು ರೂಪಗಳೊಂದಿಗೆ ಬಿಡುಗಡೆ ಮಾಡಲಾಯಿತು- 55 bhp ಪೆಟ್ರೋಲ್ ನಿಂದ ಓಡುವಂತಹ ಡೀಲಕ್ಸ್ ಆವೃತ್ತಿ ಮತ್ತು 37 bhp ಡೀಸೆಲ್ ನಿಂದ ಓಡುವ ಡೀಸೆಲ್ DX ಆವೃತ್ತಿ. ಅಂಬಾಸಿಡರ್ ನೋವಾ ಹೊಸದಾಗಿ ವಿನ್ಯಾಸಗೊಳಿಸಲಾದ ಚಾಲಕ ಚಕ್ರವನ್ನು, ಹೊಸ ಚಾಲಕ ದಂಡವನ್ನು(ಸ್ಟಿಅರಿಂಗ್ ಕಾಲಮ್), ಉತ್ತಮ ಬ್ರೇಕ್ ಮತ್ತು ಎಲೆಕ್ಟ್ರಿಕಲ್ ಗಳನ್ನು (ವಿದ್ಯುತ್ತಿನ ಕಾರಕಗಳನ್ನು)ಹೊಂದಿದೆ. ಇದು ಕಾಂತಿವರ್ಧಕ ಬದಲಾವಣೆಗಳನ್ನು ಕೂಡ ಹೊಂದಿದ್ದು, ಹೊಸ ರೇಡಿಯೇಟರ್ ಸರಳಿನ ಜಾಲರಿಗಳನ್ನು ಒಳಗೊಂಡಿದೆ.
ಅಂಬಾಸಿಡರ್ 1800 ISZ
[ಬದಲಾಯಿಸಿ]ಬೇಡಿಕೆ ಹೆಚ್ಚಿಸುವ ಮತ್ತು ಮತ್ತಷ್ಟು ಸುಧಾರಿಸುವ ಪ್ರಯತ್ನದ ಫಲವಾಗಿ 1992 ರಲ್ಲಿ ಮತ್ತೊಂದು ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಅಂಬಾಸಿಡರ್ 1800 ISZ ಎಂದು ಕರೆಯಲಾದ ಈ ಮಾದರಿ, ಪ್ರಬಲವಾದ 75 bhp 1800 cc ಐಸುಜು ಎಂಜಿನ್ ಅನ್ನು ಮತ್ತು 5ಸ್ಪೀಡ್ (ವೇಗದ) ಗೇರ್ ಬಾಕ್ಸ್ (ಗೇರು ಪೆಟ್ಟಿಗೆ)ಯನ್ನು ಒಳಗೊಂಡಿದೆ. ಅಲ್ಲದೇ ಹಿಂದಿನ ಬೆಂಚು,ಬಾಗುವ ಆಸನಕ್ಕೆ ವಿರುದ್ಧವಾಗಿ ಬಕೆಟ್ ತರಹದ ಆಸನವನ್ನು ಕೂಡ ಒಳಗೊಂಡಿದೆ. ಅಲ್ಲದೇ ಸಂಪೂರ್ಣ ತಡೆಹಲಗೆಯನ್ನು ಮರುವಿನ್ಯಾಸಗೊಳಿಸಲಾಯಿತು. ಸಲಕರಣೆಗಳ ಪ್ಯಾನಲ್ ಅನ್ನು ತಡೆಹಲಗೆಯ ಮಧ್ಯಭಾಗದಿಂದ ಚಾಲಕ ಚಕ್ರದ ಹಿಂದೆ ಬಲಭಾಗಕ್ಕೆ ಬದಲಾಯಿಸಲಾಯಿತು. ಆಸನದ ಬೆಲ್ಟ್ ಗಳು ಕಡ್ಡಾಯವಾದವು. ಆ ಸಮಯದಲ್ಲಿ ಭಾರತದ ಯಾವ ಕಾರೂ ಇಂತಹ ಪ್ರಬಲವಾದ ಎಂಜಿನ್ ಹೊಂದಿರಲಿಲ್ಲ. ಅಲ್ಲದೇ ಇದು ಆ ಕಾಲದ ಅತ್ಯಂತ ವೇಗದ ಕಾರಾಗಿತ್ತು.
ಅಂಬಾಸಿಡರ್ ಕ್ಲ್ಯಾಸಿಕ್
[ಬದಲಾಯಿಸಿ]ಉತ್ತರ್ಪಾರ (ಉತ್ಪಾದನಾ ಸ್ಥಾವರ)ಕಾರ್ಖಾನೆಯ ಸಹಸ್ರಮಾನವರ್ಷದ ನವೀಕರಣ ಯೋಜನೆಯ ನಂತರ ಅಂಬಾಸಿಡರ್ ಅನ್ನು ಪುನಃ ನಿರ್ಮಿಸಿ, ಅಂಬಾಸಿಡರ್ ಕ್ಲ್ಯಾಸಿಕ್ ಎಂಬ ಹೊಸ ಹೆಸರಿಡಲಾಯಿತು. ಈ ಹೊಸ ಮಾದರಿಯು, ಹೊಸದಾಗಿ ವಿನ್ಯಾಸಗೊಳಿಸಲಾದ ತಡೆಹಲಗೆಯನ್ನು, ಪಾಲಿಯುರೆಥೇನ್ ಆಸನಗಳನ್ನು ಒಳಗೊಂಡಿದೆ. ಅಲ್ಲಿಯೇ ಸುಲಭವಾಗಿ ಎಳೆಯುವಂತಹ ಕಾರಿನ ಬಾಗಿಲ ಕೈಗಳನ್ನು ಮತ್ತು ಚಾಲಕದಂಡ ಗೇರುಸನ್ನೆ (ಗೇರ್ ಲಿವರ್)ಯ ಬದಲಿಗೆ ಕೆಳಭಾಗಕ್ಕೆ ಬದಲಾಯಿಸಲಾದ ಗೇರ್ ಗಳು ಹಾಗು ಸೂಕ್ಷ್ಮವಾಗಿ ಸರಿಹೊಂದಿಸುವ ಸಾಧನವನ್ನು ಒಳಗೊಂಡಿದೆ. ಕೊನೆಯ ಮಾದರಿಗಳು, ಸ್ವಯಂಚಾಲಿತ ನಿಯಂತ್ರಣ ಸಾಧನ ನಿರ್ದೇಶಿತ ಡಿಸ್ಕ್ ಬ್ರೇಕ್ ಮತ್ತು ವಿದ್ಯುತ್ ನಿರ್ದೇಶಿತ(ಸುರಕ್ಷತಾ ವಿಧಾನದ) TRW ಚಾಲಕವನ್ನು ಒಳಗೊಂಡಿದೆ.
ಅವಿಗೊ
[ಬದಲಾಯಿಸಿ]ಇದರ ಬಹುಪಾಲು ಮೂಲಭೂತ ಪುನರಾವಲೋಕನವಾದ,ಮತ್ತು ಪುನರುತ್ಥಾನದ ಭಾಗವನ್ನು 2003 ರ ಮಧ್ಯಾವಧಿಯಲ್ಲಿ ಆರಂಭಿಸಲಾಯಿತು. ಇದನ್ನು ಅವಿಗೊ (ಅಂಬಾಸಿಡರ್ ಮಾರ್ಕ್ ನಿಂದ ಪ್ರತ್ಯೇಕವಾಗಿದ್ದು, ವಿಭಿನ್ನ ಮಾರುಕಟ್ಟೆ ಕಾರ್ಯನೀತಿಯನ್ನು ಸೂಚಿಸುತ್ತದೆ) ಎಂದು ಕರೆಯಲಾಯಿತಲ್ಲದೇ, 2004 ರ ಬೇಸಿಗೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಪುನಶ್ಚೇತನವು, 2003 ರ ಮಧ್ಯಾವಧಿಯ ಅಂಬಾಸಿಡರ್ ಕ್ಲ್ಯಾಸಿಕ್ ಅನ್ನು, 2003 ರ ಉತ್ತರಾರ್ಧದ ಅಂಬಾಸಿಡರ್ ಗ್ರ್ಯಾಂಡ್ ಅನ್ನು ಹಾಗು ಮನ್ವೀಂದ್ರ ಸಿಂಗ್ ವಿನ್ಯಾಸಗೊಳಿಸಿದ ಮೊದಲ ನಿರ್ಮಾಣದ ಆವಿಗೊವನ್ನು ಒಳಗೊಂಡಿದೆ. ಕಾರಿನ ಉತ್ಸಾಹಿಗಳು, ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಮಾರುಕಟ್ಟೆಯ ಬೇಡಿಕೆಯನ್ನು ಮತ್ತೆ ಹೆಚ್ಚಿಸಲು ಮಾಡುತ್ತಿರುವ ಪ್ರಯತ್ನವೆಂಬಂತೆ ಇದನ್ನು ನೋಡಿದರು. ಹೊಸ ವಿನ್ಯಾಸದ ಮೇಲೆ ಆದ ಗಮನಾರ್ಹ ಪರಿಣಾಮಗಳು, ಮಿನಿ ಮತ್ತು ಪೊರ್ಸ್ಚೆ 356 ಮಾದರಿಗಳನ್ನು ಒಳಗೊಂಡಿವೆ. ಅದೇನೇ ಆದರೂ ಮೂಲ ಲ್ಯಾಂಡ್ ಮಾಸ್ಟರ್ ಸರಣಿ(ಮೋರಿಸ್ ಆಕ್ಸ್ ಫರ್ಡ್ ಅನ್ನು ಕೂಡ ಆಧರಿಸಿ) ಮುಂಭಾಗ ಮತ್ತು ಬಾನೆಟ್ ನ ಮೇಲೆ ಮಾಡಲಾದ ಆಕರ್ಷಕ ಬದಲಾವಣೆಯಾಗಿದೆ. ಕಾರಿನ ಹಿಂಭಾಗವನ್ನು ಮಾತ್ರ ಬದಲಾಯಿಸದೇ ಹಾಗೇಯೇ ಬಿಡಲಾಯಿತು. ಇದರಿಂದಾಗಿ ಕೆಲವರು ಇದು ಅಂಬಾಸಿಡರ್ ಗಿಂತ ಭಿನ್ನವಾಗಿಲ್ಲ ಎಂದು ಭಾವಿಸಿದರು. ಪ್ರಸ್ತುತದ ಸಹಜವಾದ ಆಕಾರದಲ್ಲಿರುವ ಅಂಬಾಸಿಡರ್ ಉತ್ತಮವಾಗಿದ್ದರೂ ಕೂಡ, ರೆಟ್ರೊ-ಕಾರ್ ನ ಉತ್ಸಾಹಿಗಳು ಚಕ್ರಾಕಾರದ ಹಿಂಭಾಗಕ್ಕೆ(ಕಿರು ರೆಕ್ಕೆಗಳಿಲ್ಲದೆ) ಹೆಚ್ಚು ಆದ್ಯತೆ ನೀಡಿದರು. ಆದರೂ, ಅವಿಗೊ ಮಧ್ಯಭಾಗದಲ್ಲಿ ಜೋಡಿಸಲಾದ ಸ್ವಿಚ್ ಗಳ ಫಲಕ (ಮಾರ್ಕ್ IV ಮಾದರಿಯಂತೆ) ವಿವಿಧ ಬಣ್ಣದ ಆಸನಗಳನ್ನು ಮತ್ತು ಮರದಿಂದ ಮಾಡಲಾದ ಒಳಭಾಗದಂತಹ ಒಳಾಂಗಣ ಬದಲಾವಣೆಗಳನ್ನು ಹೊಂದಿದೆ.
ಎಂಜಿನ್ ಗಳು
[ಬದಲಾಯಿಸಿ]ಹಳೆಯ BMC 1.5L ಪೆಟ್ರೋಲ್ ಎಂಜಿನ್ ಅನ್ನು ಬದಲಾಯಿಸಿ, ಅದರ ಬದಲಿಗೆ ಐಸುಜು 1.8 ಲೀಟರ್ ಎಂಜಿನ್ ಅನ್ನು, 1990 ರ ಪೂರ್ವಾರ್ಧದಲ್ಲಿ ಬಳಸಲಾಯಿತು. ಈ ಮೂಲಕ ಇದು ಅದರ ಕಾಲದ ಫಿಯಟ್, ಮತ್ತು ಮಾರುತಿ ಸುಜುಕಿ ಕಾರುಗಳನ್ನು ಹಿಂದಿಕ್ಕಿ ಭಾರತದಲ್ಲಿ ಅತ್ಯಂತ ಕ್ಷಿಪ್ರವಾಗಿ ಉತ್ಪಾದನೆಯಾಗುತ್ತಿದ್ದ ಕಾರಾಗಿತ್ತು. 1.8L 75 bhp MPFI ಪೆಟ್ರೋಲ್ ಎಂಜಿನ್ ಮತ್ತು 2.0L 50 bhp ಐಸುಜು ಡೀಸೆಲ್ ಎಂಜಿನ್ ಗಳು ಪ್ರಸ್ತುತದಲ್ಲಿ ಇರುವ ಎಂಜಿನ್ ಗಳಾಗಿವೆ.
ವಿಸ್ತೃತ ಆವೃತ್ತಿ
[ಬದಲಾಯಿಸಿ]ಗ್ರಾಹಕರ ಇಷ್ಟಾನುಸಾರ ತಯಾರಿಸುವ ಅನೇಕ ಸ್ಥಳಿಯ ತಯಾರಕರು, ವಿಸ್ತಾರವಾದ ಆವೃತ್ತಿಗಳು ಹೆಚ್ಚು ಪ್ರಸಿದ್ಧವಲ್ಲದಿದ್ದರೂ ಕೂಡ ಅವುಗಳಿಗೆ ಅವಕಾಶ ನೀಡಿದರು. ಪ್ಯಾರಿಖ್, ಅಂತಹ ಒಬ್ಬ ತಯಾರಕರಾಗಿದ್ದು, ಇವರ ಉತ್ಪಾದನೆಯನ್ನು "ಅಂಬಿಲಿಮೊ" ಎಂದು ಕರೆಯಲಾಯಿತು.[೩][೪]
ಗ್ರಾಹಕರ ಇಷ್ಟಾನುಸಾರ ತಯಾರಿಸಲಾದ ಆವೃತ್ತಿ
[ಬದಲಾಯಿಸಿ]ಕಾರು ವಿನ್ಯಾಸಕ ದಿಲೀಪ್ ಛಬ್ರಿಯಾ ಅಂಬಾಸಿಡರ್ ಆವೃತ್ತಿ,[೫] ನಿಂದ ಸ್ಫೂರ್ತಿಗೊಂಡು ಅಂಬಿಯರ್ಡ್ ಎಂಬ ಒಂದು ಹೊಸ ಪರಿಕಲ್ಪನೆಯನ್ನು ಸೃಷ್ಟಿಸಿದರು. ಈ ಕಾರನ್ನು ಹಿಂದುಸ್ತಾನ್ ಮೋಟರ್ಸ್ ನವರು ತಯಾರಿಸಿಲ್ಲ. ಅಲ್ಲದೇ ಇದನ್ನು ಅಂಬಾಸಿಡರ್ ಕಾರು ಮಾದರಿ ಆಧರಿಸಿಯೊ ನಿರ್ಮಿಸಲಾಗಿಲ್ಲ. ಅನೇಕ ಅತ್ಯುತ್ತಮ ಕುರುಹುಗಳನ್ನು ಅಂಬಾಸಿಡರ್ ನಿಂದ ಎರವಲು ಪಡೆಯಲಾಗಿದೆ.
UK ಆಮದುಗಳು
[ಬದಲಾಯಿಸಿ]ಈ ಕಾರನ್ನು ಇಂಗ್ಲೆಂಡ್ ಗೆ 1993(ಫುಲ್ ಬೋರ್ ಮಾರ್ಕ್ 10) ರಲ್ಲಿ ಅಂಬಾಸಿಡರ್ ಅನ್ನು "ಮನೆಗೆ"(ಅದರ ತಾಯ್ನಾಡಿಗೆ) ಹಿಂದಿರುಗುವಂತೆ ಮಾಡಲು ಆಮದು ಮಾಡಲಾಗುತ್ತಿತ್ತು. ಯುರೋಪಿನ ರಕ್ಷಣಾ ನೀತಿಗಳನ್ನು ಅನುಸರಿಸಲು ಕಾರುಗಳನ್ನು ತಾಪಕ ಮತ್ತು ಆಸನ ಬೆಲ್ಟ್ ಗಳೊಂದಿಗೆ ಮತ್ತೆ ಮಾರ್ಪಡಿಸಲಾಗಿತ್ತು. ಆದರೆ ಇದು ಕೆಲವೇ ಸಂಖ್ಯೆಯಲ್ಲಿ ಮಾರಾಟವಾಯಿತಲ್ಲದೇ, ಆಮದುದಾರರು ದಿವಾಳಿ ಸ್ಥಿತಿಯನ್ನು ತಲುಪಿದರು.[೬] ಈ ವಿಫಲತೆಯ ಹೊರತಾಗಿ, 2002 ರಿಂದ ಅಂಬಾಸಿಡರ್ ಮತ್ತೆ UK ಯಲ್ಲಿ ಹೊಸದಾಗಿ ಕಾಣಿಸಿಕೊಂಡಿತು. ಇದನ್ನು ವೇಲ್ಸ್ ನಲ್ಲಿದ್ದ ಆಮದುದಾರ ಮರ್ಲಿನ್ ಗ್ಯಾರೇಜ್ ನಿಂದ ಆಮದು ಮಾಡುತ್ತಿದ್ದರು.
ಉಲ್ಲೇಖಗಳು
[ಬದಲಾಯಿಸಿ]- ↑ "HM Plant - Uttarpara". Hmutp.com. Archived from the original on 2017-06-10. Retrieved 2009-05-01.
- ↑ "No takers for Vajpayee's BMWs". Rediff.com. 2004-06-10. Retrieved 2009-05-01.
- ↑ "Parikh Coach Builders". Indianlimo.com. Archived from the original on 2010-06-14. Retrieved 2010-07-29.
- ↑ "Parikh. Parikh In India". Car-cat.com. Archived from the original on 2010-12-24. Retrieved 2010-07-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Sanjay Dutt Unveils Dilip Chhabria's Ambierod". Bollywoodhungama.com. 2008-01-12. Retrieved 2009-10-04.
- ↑ "''Aronline Hindustan Ambassador''". Aronline.co.uk. Retrieved 2010-10-15.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಅಫೀಷಿಯಲ್ ಹಿಂದುಸ್ತಾನ್ ಮೋಟರ್ಸ್ ವೆಬ್ ಸೈಟ್ ಆನ್ ದಿ ಅಂಬಾಸಿಡರ್ ಮಾಡಲ್ಸ್
- ವೇಲ್ಸ್ ಟ್ರೇಡ್
- ಆಸ್ಟಿನ್ ಫ್ಯಾಕ್ಟ್ಸ್ - ಹಿಂದುಸ್ತಾನ್ ಅಂಬಾಸಿಡರ್ Archived 2010-03-29 ವೇಬ್ಯಾಕ್ ಮೆಷಿನ್ ನಲ್ಲಿ.
- ರೇಸಿಂಗ್ ಇನ್ ಅಂಬಾಸಿಡರ್ಸ್ Archived 2011-07-08 ವೇಬ್ಯಾಕ್ ಮೆಷಿನ್ ನಲ್ಲಿ.
- ಮರ್ಲಿನ್ ಗ್ಯಾರೇಜಸ್ Archived 2010-07-03 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- CS1 errors: redundant parameter
- Wikipedia articles needing clarification from October 2009
- All Wikipedia articles needing clarification
- Articles with unsourced statements from May 2010
- Articles with unsourced statements from October 2009
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಭಾರತೀಯ ಮೋಟಾರು ವಾಹನಗಳು
- ಕೊಲ್ಕತ್ತದ ಆರ್ಥಿಕ ಸ್ಥಿತಿ
- 2000ದ ದಶಕದ ಮೋಟಾರು ವಾಹನಗಳು
- 1970ರ ದಶಕದ ಮೋಟಾರು ವಾಹನಗಳು
- 1980ರ ದಶಕದ ಮೋಟಾರು ವಾಹನಗಳು
- 1990ರ ದಶಕದ ಮೋಟಾರು ವಾಹನಗಳು
- 2005ರಲ್ಲಿ ಪರಿಚಯಿಸಿದ ವಾಹನಗಳು
- ಭಾರತದ ಕಾರುಗಳು
- ವಾಹನ ಕಂಪನಿಗಳು
- ಉದ್ಯಮ