ವಿಷಯಕ್ಕೆ ಹೋಗು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hostel Hudugaru Bekagiddare
ನಿರ್ದೇಶನನಿತಿನ್ ಕೃಷ್ಣಮೂರ್ತಿ
ನಿರ್ಮಾಪಕವರುಣ್ ಗೌಡ
ಪ್ರಜ್ವಲ್ ಬಿ.ಪಿ.
ಅರವಿಂದ್ ಎಸ್. ಕಶ್ಯಪ್
ನಿತಿನ್ ಕೃಷ್ಣಮೂರ್ತಿ
ಲೇಖಕನಿತಿನ್ ಕೃಷ್ಣಮೂರ್ತಿ
ಪಾತ್ರವರ್ಗಪ್ರಜ್ವಲ್ ಬಿ.ಪಿ.
ಮಂಜುನಾಥ ನಾಯ್ಕ
ಶ್ರೀವತ್ಸ
ತೇಜಸ್ ಜಯಣ್ಣ ಅರಸ್
ಸಂಗೀತಬಿ.ಅಜನೀಶ್ ಲೋಕನಾಥ್
ಛಾಯಾಗ್ರಹಣಅರವಿಂದ್ ಎಸ್. ಕಶ್ಯಪ್
ಸಂಕಲನಸುರೇಶ್ ಎಂ.
ಸ್ಟುಡಿಯೋಗುಲ್ಮೊಹರ್ ಫಿಲ್ಮ್ಸ್
ವರನ್ ಸ್ಟುಡಿಯೋಸ್
ಪರಮ್ವಾಹ್ ಸ್ಟುಡಿಯೋಸ್ (ನಿರೂಪಕರು)
ವಿತರಕರುಜೀ ಸ್ಟುಡಿಯೋಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 21 ಜುಲೈ 2023 (2023-07-21)
ಅವಧಿ136 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ನಿತಿನ್ ಕೃಷ್ಣಮೂರ್ತಿ ಬರೆದು ನಿರ್ದೇಶಿಸಿದ ಭಾರತೀಯ ಕನ್ನಡ ಭಾಷೆಯ ಹಾಸ್ಯ ಚಿತ್ರ . ಚಿತ್ರದಲ್ಲಿ ಪ್ರಜ್ವಲ್ ಬಿಪಿ, ಮಂಜುನಾಥ್ ನಾಯ್ಕ, ರಾಕೇಶ್ ರಾಜ್‌ಕುಮಾರ್, ಶ್ರೀವತ್ಸ ಮತ್ತು ತೇಜಸ್ ಜಯಣ್ಣ ಅರಸ್ ನಟಿಸಿದ್ದರೆ, ರಿಷಬ್ ಶೆಟ್ಟಿ, ಪವನ್ ಕುಮಾರ್, ದಿವ್ಯಾ ಸ್ಪಂದನ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. [] [] ಪರಂವಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಈ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ 21 ಜುಲೈ 2023 ರಂದು ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. []

ಕಥಾ ಹಂದರ

[ಬದಲಾಯಿಸಿ]

ಒಂದು ಬಾಯ್ಸ್​ ಹಾಸ್ಟೆಲ್​. ಅಲ್ಲಿ ತುಂಬಿಕೊಂಡಿರುವ ಎಲ್ಲ ಹುಡುಗರು ಶುದ್ಧ ತರಲೆಗಳು. ಅವರನ್ನು ನಿಯಂತ್ರಿಸಲು ಓರ್ವ ಕಟ್ಟುನಿಟ್ಟಾದ ವಾರ್ಡನ್​. ಹುಡುಗರು ಮತ್ತು ವಾರ್ಡನ್​ ನಡುವಿನ ಕಿತ್ತಾಟವೇ ಈ ಚಿತ್ರದ ಕಥಾಹಂದರ. ಏನೋ ಮಾಡಲು ಹೋಗಿ ವಾರ್ಡನ್​ ಜೀವಕ್ಕೆ ಕುತ್ತುಬರುವಂತಹ ಘಟನೆ ನಡೆಯುತ್ತದೆ. ಆ ಸಂಕಷ್ಟದಿಂದ ಹೊರಬರಲು ಹಾಸ್ಟೆಲ್​ ಹುಡುಗರು ಹತ್ತಾರು ಕಸರತ್ತು ಮಾಡುತ್ತಾರೆ. ಆ ಸನ್ನಿವೇಶಗಳೇ ಇಲ್ಲಿ ಪ್ರೇಕ್ಷಕರಿಗೆ ನಗು ಉಕ್ಕಿಸುತ್ತವೆ. ಹಾಸ್ಟೆಲ್​ ಹುಡುಗರು ಮಾಡುವ ತರಲೆ-ತಮಾಷೆಯನ್ನು ಒಪ್ಪಿಕೊಂಡರೆ ಮಾತ್ರ ಅದು ಫನ್​ ಎನಿಸುತ್ತದೆ. ಒಪ್ಪಿಕೊಳ್ಳದೇ ಇದ್ದರೆ ಕಿರಿಕಿರಿ ಎನಿಸುವ ಸಾಧ್ಯತೆ ಇದೆ. ನೋಡುಗರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಎಲ್ಲವೂ ನಿಂತಿದೆ. ಹೆಚ್ಚೇನೂ ಜವಾಬ್ದಾರಿ ಇಲ್ಲದ ಹುಡುಗರು ಹೇಗೆ ಬೇಕೋ ಹಾಗೆ ವರ್ತಿಸುತ್ತಾರೆ. ಅದೇ ರೀತಿ ಸಿನಿಮಾ ಕೂಡ ಕೆಲವೊಮ್ಮೆ ಎತ್ತೆತ್ತಲೋ ಸಾಗುತ್ತದೆ. ಅದರ ಹಿಂದೆ ಪ್ರೇಕ್ಷಕನೂ ಸುತ್ತಬೇಕು. ಕ್ಲೈಮ್ಯಾಕ್ಸ್​ನಲ್ಲಿ ಏನಾಗಲಿದೆ ಎಂಬ ಕೌತುಕವಂತೂ ಕೊನೆವರೆಗೂ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಅಲ್ಲಲ್ಲಿ ಬರುವ ಟ್ವಿಸ್ಟ್​ಗಳಿಂದ ಮನರಂಜನೆಯ ಮಟ್ಟ ಹೆಚ್ಚಿಸುತ್ತದೆ.[]

ಪಾತ್ರವರ್ಗ

[ಬದಲಾಯಿಸಿ]
  • ಪ್ರಜ್ವಲ್ ಬಿ.ಪಿ.
  • ರಾಕೇಶ್ ರಾಜ್‌ಕುಮಾರ್
  • ಶ್ರೀವತ್ಸ
  • ತೇಜಸ್ ಜಯಣ್ಣ ಅರಸ್
  • ಶ್ರೇಯಸ್ ಶರ್ಮಾ
  • ಭರತ್ ರಾವ್
  • ಅನಿಲ್ ಹುಳಿಯ
  • ಪವನ್ ಶರ್ಮಾ
  • ನಿತಿನ್ ಕೃಷ್ಣಮೂರ್ತಿ
  • ಶ್ರಾವಣ
  • ವೇಣು ಮಾಧವ್
  • ಗಗನ್ ಗೋಡ್ಗೈ
  • ಚೇತನ್ ದುರ್ಗಾ
  • ಮುಖೇಶ್ ಸಿಂಗ್
  • ಮಂಜುನಾಥ ನಾಯ್ಕ
  • ಅನಿರುದ್ಧ ವೇದಾಂತಿ

ಅತಿಥಿ ಪಾತ್ರದಲ್ಲಿ

[ಬದಲಾಯಿಸಿ]

ಸಂಗೀತ

[ಬದಲಾಯಿಸಿ]

ಚಿತ್ರದ ಆಡಿಯೋ ಹಕ್ಕುಗಳನ್ನು A2 ಮ್ಯೂಸಿಕ್ ಹೊಂದಿದೆ.[]

Track listing
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಹಾಸ್ಟೆಲ್ ಹುಡುಗರು ಪ್ರಾಟೆಸ್ಟ್ ಸಾಂಗ್"ಯೋಗರಾಜ್ ಭಟ್ಅಜನೀಶ್ ಲೋಕನಾಥ್4:22
2."ಬಾಯ್ಸ್ ಸರಿಗಿಲ್ಲ"ತ್ರಿಲೋಕ್ ತ್ರಿವಿಕ್ರಮಅಜನೀಶ್ ಲೋಕನಾಥ್3:10

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Rishab Shetty, Shine Shetty and Pawan Kumar to play cameos in Hostel Hudugaru Bekagiddare". Times of India. 7 January 2023."Rishab Shetty, Shine Shetty and Pawan Kumar to play cameos in Hostel Hudugaru Bekagiddare". Times of India. 7 January 2023.
  2. "In promo video, fans shed blood and their head to get Ramya to return to acting". The News Minute. 4 November 2022."In promo video, fans shed blood and their head to get Ramya to return to acting". The News Minute. 4 November 2022.
  3. Devadiga, Yashaswi (21 July 2023). "Hostel Hudugaru Bekagiddare grand release all over state". Vistara news.Devadiga, Yashaswi (21 July 2023). "Hostel Hudugaru Bekagiddare grand release all over state". Vistara news.
  4. https://tv9kannada.com/entertainment/movie-reviews/hostel-hudugaru-bekagiddare-review-this-newcomers-kannada-film-is-a-laugh-riot-mdn-627435.html
  5. https://www.youtube.com/@A2MusicOfficial