ಹರಿಕಾ ದ್ರೋಣವಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಹರಿಕಾ' ಭಾರತೀಯ ವಿಶ್ವ ನಂ ಎಫ್ ಐ ಡಿ ಈ ಮಹಿಳಾ ಶ್ರೇಯಾಂಕದಲ್ಲಿ ೫ನೇಯವರು. ಚೆಸ್ ಗ್ರಾಂಡ್ ಮಾಸ್ಟರ್ ೨೦೧೨,೨೦೧೫ ಮತ್ತು ೨೦೧೭ರಲ್ಲಿ ಮಹಿಳಾ ವಿಶ್ಶ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಮೂರು ಕಂಚಿನ ಪದಕಗಳನ್ನುಗೆದ್ದಿದ್ದಾರೆ. ಹರಿಕಾರನ್ನು ಭಾರತ ಸರ್ಕಾರವು ೨೦೦೭-೨೦೦೮ ನೇ ಸಾಲಿನ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿತು[೧] ೨೦೧೬ರಲ್ಲಿ ಅವರು ಚೀನಾದ ಚೆಂಗ್ಡುನಲ್ಲಿ ಎಫ್ ಐ ಡಿ ಈ ಮಹಿಳಾ ಗ್ರ್ಯಾಂಡ್ ಪ್ರಿಕ್ಸ್ ಸ್ಪರ್ದೆಯನ್ನು ಗೆದ್ದರು ಮತ್ತು ವಿಶ್ವ ನಂ ೧೧ ರಿಂದ ವಿಶ್ವ ನಂ ಎಫ್ ಐ ಡಿ ಈ ಮಹಿಳಾ ಶ್ರೇಯಾಂಕದಲ್ಲಿ ೫ನೇಯವರು.ಜುಡಿನೌಟ್ ಪೋಲ್ಗರ್ ಮತ್ತುವಿಶ್ವನಾಥನ್ ಆನಂದ್ಅವರು ಇವರ ಚೆಸ್ಗೆ ಸ್ಪೂರ್ತಿಯಾಗಿದ್ದರು.[೨]ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ೨೦೧೯ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.[೩]

ಹರಿಕಾ ದ್ರೋಣವಳ್ಳಿ

ಆರಂಭಿಕ ಜೀವನ[ಬದಲಾಯಿಸಿ]

ಜನನ(ಜನವರಿ ೧೨ ೧೯೯೧)[ಬದಲಾಯಿಸಿ]

ಜನನ ೧೨ ೧೯೯೧ ರಂದು ಗುಂಟೂರುನಲ್ಲಿ ಶ್ರೀ ರಮೇಶ್ ಮತ್ತು ಶ್ರೀಸ್ವರ್ಣ ದಂಪತಿಗೆ ಜನಿಸಿದರು.ಇವರು ಶ್ರೀ ವೆಂಕಟೇಶ್ವರ ಬಾಲಾ ಕುಟೀರ್[ಶಾಶ್ವತವಾಗಿ ಮಡಿದ ಕೊಂಡಿ] ದಲ್ಲಿ ಶಿಕ್ಷಣ ಪಡೆಯಲು ಸೇರಿದರು. ಇವರ ತಂದೆ ಮಂಗಳಗಿರಿಯಲ್ಲಿ ಪಂಚಾಯಾತ್ ರಾಜ್ ಉಪವಿಭಾಗದಲ್ಲಿ ಉಪ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಹರಿಕಾ ತುಂಬಾ ಚಿಕ್ಕ ವಯಸ್ಸಿನಲ್ಲಿ ಚೆಸ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಳು. ಅಂಡರ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಪದಕ ಗೆದ್ದರು. ೧೦ ವರ್ಷದೊಳಗಿನ ಬಾಲಕಿಯರ ವಿಶ್ವಯುವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಪಡೆದುಕೊಂಡರು. ನಂತರ ಗ್ರ್ಯಾಂಡ್ ಮಾಸ್ಟರ್ ಆದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.[೪]

ಹೆಸರು ವಿವರಗಳು
ದೇಶ ಭಾರತ
ಹುಟ್ಟು ೧೨ ಜನವರಿ ೧೯೯೧(ವಯಸ್ಸು ೨೯)ಗೊರಾಂಟ್ಲಾ,ಗುಂಟೂರು,ಆಂಧ್ರಪ್ರದೇಶ, ಭಾರತ
ಶೀರ್ಷಿಕೆ ಗ್ರ್ಯಾಂಡ್ ಮಾಸ್ಟರ್ (2011)
FIDE ರೇಟಿಂಗ್ 2518 (ಜನವರಿ 2020)
ಪೀಕ್ ಎಲೋ ರೇಟಿಂಗ್ 2543 (ನವೆಂಬರ್ 2016)
೨೦೧೯ ಪದ್ಮಶ್ರೀ ಪ್ರಶಸ್ತಿ
ರಾಷ್ಟ್ರೀಯ ಮಟ್ಟದ ಪಂದ್ಯಗಳು ೧೬ ಪದಕಗಳು

[೫]


ಕೊಡುಗೆಗಳು ಮತ್ತು ಸಾದನೆಗಳು[ಬದಲಾಯಿಸಿ]

೨೦೧೯

  • ಜನವರಿ ೨೬ ಗಣರಾಜ್ಯೋತ್ಸವದಂದು ಪದ್ಮಶ್ರೀ ನಿಡಾಲಾಯಿತು.

೨೦೧೭

  • ಫೆಬ್ರವರಿ ೧೦ ಮಹಿಳಾ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಪಡೆದರು.[೬]

೨೦೧೬

  • ಎಫ್ ಐ ಡಿ ಇ ಮಹಿಳಾ ಗ್ರ್ಯಾಂಡ್ ಪ್ರಿಕ್ಸ್ ಖಾಂಟಿ ಮಾನ್ಸಸ್ಕ ೦೫ ಸ್ಥಾನ ಪಡೆದರು.

೨೦೧೫

  • ಏಷ್ಯನ್ ರಾಪಿಡ್ ವುಮೆನ್ ಚೆಸ್ ಚಾಂಪಿಯನ್ ಶಿಪ್ ಯು ಎ ಇ-ಕಂಚಿನ ಪದಕ.

೨೦೧೪

  • ಏಷ್ಯನ್ ಮಹಿಳಾ ತಂಡ ಚೆಸ್ ಚಾಂಪಿಯನ್ ಶಿಪ್ ಇರಾನ್

ಉನ್ನತ ಮಂಡಳಿಯಯಲ್ಲಿ ವೈಯಕ್ತಿಕ ಚಿನ್ನದ ಪದಕ .[೭]

೨೦೧೨

  • ವಿಶ್ವ ಮಹಿಳಾಚೆಸ್ ಚಾಂಪಿಯನ್ ಶಿಪ್ ಖಾಂಟಿ ಮ್ಯಾನ್ಸಿಸ್ಕ್-ಕಂಚಿನ ಪದಕ

೨೦೧೧

  • ಏಷ್ಯನ್ ಮಹಿಳಾ ಚೆಸ್ ಚಾಂಪಿಯನ್ ಶಿಪ್ ಇರಾನ್ -ಚಿನ್ನದ ಪದಕ

೨೦೧೦

  • ಕಾಮನ್ವೆಲ್ತ್ ಮಹಿಳಾ ಚೆಸ್ ಚಾಂಪಿಯನ್ ಶಿಪ್ ನವದೆಹಲಿ -ಚಿನ್ನದ ಪದಕ

೨೦೦೯

  • ಕೋಲ್ಕತ್ತಾದಲ್ಲಿ -ಬೆಳ್ಳಿ ಪದಕ

೨೦೦೮

  • ಟರ್ಕಮ್ ನಲ್ಲಿ -ಚಿನ್ನದ ಪದಕ

೨೦೦೭

  • ಮೆನ್ ಇಂಟರ್ನ್ಯಾಷನಲ್ ಮಾಸ್ಟರ್

೨೦೦೬

  • ಜಾರ್ಜಿಯದಲ್ಲಿ-ಚಿನ್ನದ ಪದಕ
    • ಮುಂಬೈ ಚಿನ್ನದ ಪದಕ

ಸಾಧನೆ[ಬದಲಾಯಿಸಿ]

  • ಈ ೧೬ ವರ್ಷಗಳಲ್ಲಿ ಮಹಿಳಾ ಎ ಚಾಂಪಿಯನ್ ಶಿಪ್ ,ಮಹಿಳಾ ಬಿ ಚಾಂಪಿಯನ್ ಶಿಪ್ ರಾಷ್ಟ್ರೀಯ ಜೂನಿಯರ್ ಬಾಲಕಿಯರ ಪ್ರಶಸ್ತಿಗಳನ್ನು ಒಳಗೊಂಡಂತೆ ರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ೧೬ ಪದಕ ಗಳನ್ನು ಪಡೆದಿದ್ದಾರೆ.[೮]

ಇತರ ಸಾಧನೆಗಳು[ಬದಲಾಯಿಸಿ]

ಟೈಮ್ಸ್ ಆಫ್ ಇಂಡಿಯಾದ (TOISA ವಾರ್ಷಿಕ ಪ್ರಶಸ್ತಿಗಳು) 2016 ಮತ್ತು 2017 ರ ವರ್ಷದ ಚೆಸ್ ಆಟಗಾರ ವರ್ಷದ ಅಗ್ರ 40 ಜನಪ್ರಿಯ ಮಹಿಳಾ ಕ್ರೀಡಾಪಟುಗಳಲ್ಲಿ 2017 ರಲ್ಲಿ ವೆರ್ವ್ ನಿಯತಕಾಲಿಕೆಯು ವೈಶಿಷ್ಟ್ಯಗೊಳಿಸಿದೆ.[೯]

ಉಲ್ಲೇಖಗಳು[ಬದಲಾಯಿಸಿ]

  1. https://www.newindianexpress.com/nation/2019/jan/26/heres-the-complete-list-of-padma-awardees-2019-1930046[ಶಾಶ್ವತವಾಗಿ ಮಡಿದ ಕೊಂಡಿ].
  2. https://www.thehindu.com/todays-paper/tp-national/tp-andhrapradesh/Harikarsquos-parents-on-cloud-nine/article15273259.ece
  3. https://ratings.fide.com/title_applications.phtml?details=1&id=5015197&title=GM&pb=31
  4. https://www.firstpost.com/sports/world-womens-chess-championship-harika-dronavalli-won-bronze-and-shockingly-india-didnt-even-cheer-3307646.html
  5. https://ratings.fide.com/profile/5015197
  6. https://ratings.fide.com/card.phtml?event=5015197
  7. https://www.firstpost.com/sports/world-womens-chess-championship-harika-dronavalli-won-bronze-and-shockingly-india-didnt-even-cheer-3307646.html
  8. https://en.chessbase.com/post/an-interview-with-dronavalli-harika-2-2
  9. https://commons.wikimedia.org/wiki/Category:Harika_Dronavalli