ಹಡೇಯನ್ ಕಲ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಲ್ಕು ಕಲ್ಪಗಳು

೫೪೧ - ೦* ಫನರೊಜೋಯಿಕ್
೨೫೦೦-೫೪೧* ಪ್ರೊಟೆರೊಜೋಯಿಕ್
೪೦೦೦ -೨೫೦೦ * ಆರ್ಕಿಯನ್
೪೬೦೦- ೪೦೦೦ * ಹಡೇಯನ್

*ದಶಲಕ್ಷ ವರುಷಗಳ ಹಿಂದೆ

ಹಡೇಯನ್ ಕಲ್ಪ[೧]ವು ಭೂಮಿಯ ಕಾಲಮಾನಗಳಲ್ಲಿನ ಮೊದಲ ಕಲ್ಪ. ಇದರ ಕಾಲಮಾನ ೪೬೦೦ ರಿಂದ ೪೦೦೦ ದಶಲಕ್ಷ ವರುಷಗಳ ಹಿಂದೆ (ದವಹಿಂ). ಭೂಮಿಯು ಆಗತಾನೇ ರೂಪಗೊಂಡಿತ್ತು. ದೊಡ್ಡ ಮಟ್ಟದ ಜ್ವಾಲಾಮುಖಿ ಚಟುವಟಿಕೆ ಮತ್ತು ಭಾಗಶ ದ್ರವರೂಪದ ಮೇಲ್ಮೈ ಇತ್ತು ಮತ್ತು ಸೂರ್ಯ ಮಂಡಲದ ಕಾಯಗಳು ಆಗಾಗ ಅಪ್ಪಳಿಸುತ್ತಿದ್ದವು. ಈ ಕಾಲಮಾನವನ್ನು ಅಧಿಕೃತವಾಗಿ (ಐಸಿಎಸ್ ಅಥವಾ ಇಂಟರ್ನಾಶನಲ್ ಕಮಿಶನ್ ಆನ್ ಸ್ಟ್ರಾಟಿಯೊಗ್ರಾಫಿ ಒಪ್ಪಿಕೊಂಡಂತೆ) ವಿಭಜಿಸಲಾಗಿಲ್ಲ. [೨] ಅನಧಿಕೃತವಾಗಿಈ ಕಾಲಮಾನವನ್ನು ಚಂದ್ರನ ಕಾಲಮಾನದ ಆಧಾರದ ಮೇಲೆ ಮತ್ತು ಪತ್ತೆಯಾದ ಅತಿಪುರಾತನ ಕನಿಜದ ಆಧಾರದ ಮೇಲೆ ವಿಭಜಿಸಲಾಗಿದೆ. ಇದರ ಪ್ರಕಾರ ಕ್ರಿಪ್ಟಿಕ್ ಯುಗ (ಕಾಲದ ಆರಂಭ ೪೫೬೭ ದವಹಿಂ), ಬೇಸಿನ್ ಗುಂಪು ಯುಗ (ಕಾಲದ ಆರಂಭ ೪೫೦೦ ದವಹಿಂ), ನೇಕ್ಟೇರಿಯನ್ ಯುಗ (ಕಾಲದ ಆರಂಭ ೪೩೦೦ ದವಹಿಂ) ಮತ್ತು ಆರಂಭಿಕ ಇಂಬ್ರಿಯನ್ ಯುಗಗಳನ್ನಾಗಿ (ಕಾಲದ ಆರಂಭ ೪೧೦೦ ದವಹಿಂ) ವಿಭಜಿಸಲಾಗಿದೆ.[೩]

ವಾತಾವರಣ ಮತ್ತು ಸಾಗರಗಳು[ಬದಲಾಯಿಸಿ]

ಇಪ್ಪತ್ತನೆಯ ಶತಮಾನದ ಕೊನೆಯ ದಶಕಗಳಲ್ಲಿ ಪಶ್ಚಿಮ ಗ್ರೀನ್‌ಲ್ಯಾಂಡ್, ವಾಯುವ್ಯ (ಉತ್ತರ-ಪಶ್ಚಿಮ) ಕೆನಡ ಮತ್ತು ಪಶ್ಚಿಮ ಆಸ್ಟ್ರೇಲಿಯದಲ್ಲಿ ಕೆಲವು ಹಡೇಯನ್ ಕಲ್ಲುಗಳನ್ನು ಪತ್ತೆಹಚ್ಚಲಾಯಿತು. ಪುರಾತನ ಜಿರ್ಕಾನ್ ಖನಿಜವು ಪಶ್ಚಿಮ ಆಸ್ಟ್ರೇಲಿಯದಲ್ಲಿ ಪತ್ತೆಯಾಗಿದ್ದು ಇದರ ಕಾಲಮಾನವನ್ನು ಸರಿಸುಮಾರು ೪೪೦೪ ದವಹಿಂ ಎಂದು ಗುರುತಿಸಲಾಗಿದೆ.[೪] ಈ ಕಾಲಮಾನ ಸಾಮಾನ್ಯ ಕಾಲಮಾನದಿಂದ ತುಸು ಭಿನ್ನವಾದರೂ ಸಾಮಾನ್ಯ ಕಾಲಮಾನವೂ ಸಹ ಸತತವಾಗಿ ೪೩೫೦ ದವಹಿಂಗೆ ಹತ್ತಿರವಾಗಿದೆ[೫] ಮತ್ತು ಇದು ಭೂಮಿ ರೂಪಗೊಂಡ ಕಾಲ ಎಂದು ಊಹಿಸಿದ ಕಾಲಮಾನಕ್ಕಿಂತ ಸುಮಾರು ೨೦೦ ದಶಲಕ್ಷ ವರುಷಗಳ ನಂತರ.

ಭೂಮಿಯು ರೂಪಗೊಂಡ ಪದಾರ್ಥದಲ್ಲಿ ದೊಡ್ಡ ಮಟ್ಟದಲ್ಲಿ ನೀರು ಇದ್ದಿರ ಬೇಕು.[೬] ನೀರಿನ ಅಣುಗಳು ಸುಲಭವಾಗಿ ಭೂಮಿಯ ಗುರುತ್ವದಿಂದ ತಪ್ಪಿಸಿಕೊಂಡಿರ ಬಹುದು ವಿಶೇಷವಾಗಿ ಅದು ಸಾಂದ್ರತೆ ಕಡಿಮೆ ಇದ್ದ ಕಾಲದಲ್ಲಿ. ಜಲಜನಕ ಮತ್ತು ಹೀಲಿಯಂ ಸತತವಾಗಿ ವಾತಾವರಣದಿಂದ ತಪ್ಪಿಸಿಕೊಳ್ಳುತ್ತಿರುತ್ತವೆ (ಇಂದೂ ಸಹ). ಪ್ರಾಚೀನ ಭೂಮಿಯ ಭಾಗವು ದೊಡ್ಡ ಹೊಡೆತವನ್ನು ಎದುರಿಸಿದ ಕಾರಣ ಚಂದ್ರ ರೂಪಗೊಂಡ ಎಂದು ಸಿದ್ಧಾಂತೀಕರಿಸಲಾಗಿದೆ ಮತ್ತು ಇಂತಹ ಹೊಡೆತದ ಪರಿಣಾಮವಾಗಿ ಒಂದು ಅಥವಾ ಎರಡು ದೊಡ್ಡ ಪ್ರದೇಶಗಳಲ್ಲಿ ಕರಗಿರ ಬೇಕು. ಇಂದಿನ ಸ್ವರೂಪವು ಪೂರ್ಣ ಕರಗುವಿಕೆಯನ್ನು ಬೆಂಬಲಿಸುವುದಿಲ್ಲ.[೭] ಆದರೆ ಸಾಕಷ್ಟು ದೊಡ್ಡ ಗಾತ್ರದ ಪದಾರ್ಥವು ಈ ಹೊಡತದ ಕಾರಣಕ್ಕೆ ಅನಿಲವಾಗಿರ ಬಹುದು. ಇಂತಹ ಕಲ್ಲಿನ ಅನಿಲವು ಎಳೆಯ ಭೂಮಿಯನ್ನು ಸುತ್ತುವರೆದಿರ ಬಹುದು. ಈ ಅನಿಲವು ದಟೈಸಿದ ನಂತರ ದೊಡ್ಡ ಮಟ್ಟದ ಇಂಗಾಲ ಡೈಆಕ್ಸ್‌ಡೈನೊಂದಿಗೆ ಜಲಜನಕ ಮತ್ತು ನೀರು ಉಂಟಾಗಿರ ಬೇಕು. ಭೂಮಿಯ ಮೇಲ್ಮೈ ತಾಪಮಾನ ೨೩೦ ಡಿಗ್ರಿ ಸೆಲಿಸಿಯಸ್ ಇದ್ದಾಗ್ಯೂ ದೊಡ್ಡ ಮಟ್ಟದ ಇಂಗಾಲ ಡೈಆಕ್ಸೈಡ್‌ನ ವಾತಾವರಣದ ಒತ್ತಡದ ಕಾರಣಕ್ಕೆ ನೀರು ದ್ರವರೂಪದಲ್ಲಿ ಇದ್ದು ಸಾಗರಗಳಾಗಿರ ಬೇಕು. ಸಾಗರದ ನೀರು ಇಂಗಾಲ ಆಕ್ಸೈಡ್‌ನ್ನು ಕರಗಿಸಿಕೊಳ್ಳುವುದರ ಮೂಲಕ ಕಡಿಮೆಯಾಗಿರ ಬೇಕು ಮತ್ತು ಹೊಸ ಮೇಲ್ಮೈ ಮತ್ತು ನಡುಗೋಳದ ಚಕ್ರಗಳು ರೂಪಗೊಳ್ಳುತ್ತಾ ಹೋದಂತೆ ಇಂಗಾಲದ ಡೈಆಕ್ಸೈಡ್ ಪ್ರಮಾಣ ಏರುಪೇರಾಗುತ್ತಿದ್ದರ ಬಹುದು.[೮] ಜಿರ್ಕಾನ್‌ನ ಅಧ್ಯಯನವು ಭೂಮಿಯು ರೂಪಗೊಂಡ ಹೊಸತರಲ್ಲಿಯೇ ದ್ರವರೂಪದ ನೀರು ಇದ್ದಿರ ಬೇಕು ಎಂದು ಸೂಚಿಸುತ್ತದೆ. ಇದು ೪೪೦೦ ದವಹಿಂನಿಂದಲೇ ಭೂಮಿಯ ಮೇಲೆ ದ್ರವರೂಪದ ನೀರು ಇದ್ದಿರ ಬೇಕು ಎಂದು ಸೂಚಿಸುತ್ತದೆ.[೯][೧೦][೧೧] ೨೦೦೮ರ ಜಿರ್ಕಾನ್ ಅಧ್ಯಯನವು ಆಸ್ಟ್ರೇಲಿಯನ್ ಹಡೇಯನ್ ಕಲ್ಲಿನೊಳಗೆ ಜಿರ್ಕಾನ್ ಅಡಕವಾಗಿರುವುದು ೪೦೦೦ ದವಹಿಂ ಭೂಫಲಕಗಳು ಆಸ್ತಿತ್ವದಲ್ಲಿದ್ದವು ಎಂದು ಸೂಚಿಸುತ್ತದೆ.[೧೨][೧೩] ಇದು ಸರಿ ಇದ್ದಲ್ಲಿ ಭೂಮಿಯು ದ್ರವರೂಪದ ಬಿಸಿ ಮೇಲ್ಮೈ ಮತ್ತು ಪೂರ್ತಿ ಇಂಗಾಲ ಡೈಆಕ್ಸೈಡ್ ಇದ್ದ ಭೂಮಿಯಿಂದ ಇಂದಿನ ರೂಪ ಪಡೆದು ಸುಮಾರು ೪೦೦೦ ದಶಲಕ್ಷ ವರುಷಗಳೇ ಕಳೆಯಿತು. ಭೂಫಲಕಗಳ ಚಟುವಟಿಕೆ ಮತ್ತು ಸಾಗರಗಳ ಹಿಂಗಿಸುವಿಕೆಯ ಕಾರಣಕ್ಕೆ ಹಸಿರು ಮನೆ ಪರಿಣಾಮ ಹೊರಟು ಹೋಗಿ ಹೆಚ್ಚು ತಂಪಾದ, ಮಂದಶಿಲೆಗಳ ರೂಪಗೊಳ್ಳುವಿಕೆ ಮತ್ತು ಬಹುಶ ಜೀವದ ಅಕುಂರಕ್ಕೆ ಇದು ದಾರಿಯಾಗುತ್ತದೆ.[೧೨][೧೩]

ಟಿಪ್ಪಣಿಗಳು ಮತ್ತು ಉಲ್ಲೇಖಗಳು[ಬದಲಾಯಿಸಿ]

 1. ಇಂಗ್ಲೀಶ್ ವಿಕಿಪೀಡಿಯದ “Hadean” ಪುಟದ ಭಾಗಶ ಅನುವಾದ, ಪ್ರಾಪ್ತಿಯ ದಿನಾಂಕ 2016-08-17
 2. "International Commission of Stratigraphy Chart/Time scales" access on 2016-08-17
 3. ವಿಕಿಪೀಡಿಯದ "ಭೂರಚನಾಶಾಸ್ತ್ರದ ಯುಗಗಳು" ಪ್ರಾಪ್ತಿಯ ದಿನಾಂಕ 2016-08-17
 4. Simon A. Wilde, et al.: Evidence from detrital zircons for the existence of continental crust and oceans on the Earth 4.4 Gyr ago, Nature Geoscience, 2001
 5. Wilde, S. A., J. W. Valley, W. H. Peck and C. M. Graham (2001) Evidence from detrital zircons for the existence of continental crust and oceans on the Earth 4.4 Gyr ago. Nature, v. 409, pp. 175-178. http://www.geology.wisc.edu/%7Evalley/zircons/Wilde2001Nature.pdf
 6. Drake, Michael J. (2005), "Origin of water in the terrestrial planets" (PDF), Meteoritics & Planetary Science, 40 (4): 515–656, Bibcode:2005M&PS...40..515J, doi:10.1111/j.1945-5100.2005.tb00958.x.
 7. Solar System Exploration: Science & Technology: Science Features: View Feature
 8. Sleep, N. H.; Zahnle, K.; Neuhoff, P. S. (2001), "Initiation of clement surface conditions on the earliest Earth", PNAS, 98 (7): 3666–3672, Bibcode:2001PNAS...98.3666S, doi:10.1073/pnas.071045698, PMC 31109, PMID 11259665
 9. [ ANU - Research School of Earth Sciences - ANU College of Science - Harrison]
 10. ANU - OVC - MEDIA - MEDIA RELEASES - 2005 - NOVEMBER - 181105HARRISONCONTINENTS
 11. ""A Cool Early Earth"". Archived from the original on 2016-05-28. Retrieved 2016-08-20.
 12. ೧೨.೦ ೧೨.೧ Chang, Kenneth (December 2, 2008). "A New Picture of the Early Earth". The New York Times.
 13. ೧೩.೦ ೧೩.೧ Abramov, Oleg; Mojzsis, Stephen J. (December 2008). "Thermal State of the Lithosphere During Late Heavy Bombardment: Implications for Early Life". AGU Fall Meeting Abstracts. Fall Meeting 2008: American Geophysical Union. 1 (2008 Fall Meeting). Bibcode:2008AGUFM.V11E..08A. Retrieved 24 May 2015.

ಮುಂದಿನ ಓದಿಗೆ[ಬದಲಾಯಿಸಿ]

 • Hopkins, Michelle; Harrison, T. Mark; Manning, Craig E. (2008), "Low heat flow inferred from >4 Gyr zircons suggests Hadean plate boundary interactions", Nature, 456 (7221): 493–496, Bibcode:2008Natur.456..493H, doi:10.1038/nature07465, PMID 19037314.
 • Valley, John W.; Peck, William H.; King, Elizabeth M. (1999), "Zircons Are Forever", The Outcrop for 1999, University of Wisconsin-Madison, retrieved January 10, 2006 – Evidence from detrital zircons for the existence of continental crust and oceans on the Earth 4.4 Gyr ago.
 • Wilde, S. A.; Valley, J. W.; Peck, W. H. & Graham, C. M. (2001), "Evidence from detrital zircons for the existence of continental crust and oceans on the Earth 4.4 Gyr ago", Nature, 409 (6817): 175–178, doi:10.1038/35051550, PMID 11196637.
 • Wyche, S.; Nelson, D. R. & Riganti, A. (2004), "4350–3130 Ma detrital zircons in the Southern Cross Granite–Greenstone Terrane, Western Australia: implications for the early evolution of the Yilgarn Craton", Australian Journal of Earth Sciences, 51 (1): 31–45, doi:10.1046/j.1400-0952.2003.01042.x.
 • Carley, Tamara L.; et al. (2014), "Iceland is not a magmatic analog for the Hadean: Evidence from the zircon record", Earth and Planetary Science Letters, 405 (1): 85–97, Bibcode:2014E&PSL.405...85C, doi:10.1016/j.epsl.2014.08.015.