ಭೂರಚನಶಾಸ್ತ್ರದ ಯುಗಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೂರಚನಶಾಸ್ತ್ರದ ಯುಗಗಳ ಒಂದು ಚಿತ್ರಣ

ಭೂಮಿಯ ಹುಟ್ಟಿನಿಂದ ಇಲ್ಲಿಯವರೆಗಿನ ಕಾಲವನ್ನು ಭೂರಚನಶಾಸ್ತ್ರದ ಪ್ರಮುಖ ಘಟನೆಗಳ ಆಧಾರದ ಮೇಲೆ ವಿಭಾಗಿಸಲಾಗುತ್ತದೆ. ಈ ವಿಭಾಗಗಳೇ ಭೂರಚನಶಾಸ್ತ್ರದ ಯುಗಗಳು. ಭೂರಚನಶಾಸ್ತ್ರದ[ಟಿಪ್ಪಣಿ ೧] ಯುಗಗಳನ್ನು ಮಹಾಕಲ್ಪ (ಸೂಪರ್‌ಇಯಾನ್), ಕಲ್ಪ (ಇಯಾನ್), ಯುಗ (ಎರಾ), ಅವಧಿ (ಪೀರಿಯಡ್), ಶಕ (ಎಪೋಕ್) ಮತ್ತು ಕಾಲ (ಏಜ್) ಎಂದು ಉಪವಿಭಾಗಗಳನ್ನಾಗಿ ಮಾಡಲಾಗಿದೆ. ಭೂಮಿಯ ಹುಟ್ಟನ್ನು ವಿಕರಣಪಟುತ್ವ ಪದ್ಧತಿಯ (ರೇಡಿಯೋಆಕ್ಟಿವ್ ಮೆಥಡ್) ಪ್ರಕಾರ ೪,೫೪ ಶತಕೋಟಿ ವರುಷಗಳ ಹಿಂದೆ ಎಂದು ಅಂದಾಜಿಸಲಾಗಿದೆ. ಬೇರೆ ಬೇರೆ ಕಾಲಮಾನಗಳನ್ನು ಅವುಗಳ ಸಮಯದಲ್ಲಿನ ಪ್ರಮುಖ ಭೂಗೋಳಿಕ ಅಥವಾ ಅಂದು ಬದುಕಿದ್ದ ಜೀವಿಗಳ ಘಟನೆಗಳ ಆಧಾರದ ಮೇಲೆ ವಿಭಜಿಸಲಾಗಿದೆ. ಹೀಗಾಗಿ ಸಾರ್ವತ್ರಿಕ ಅಳಿಯುವಿಕೆ (ಜೀವಿಗಳ) ಒಂದು ಘಟನೆಯಾಗಿ ಕ್ರೆಟೇಶಿಯಸ್ ಮತ್ತು ಪಾಲಿಯೊಜೀನ್ ನಡುವಿನ ಗಡಿಯಾಗಿ ಕ್ರೆಟೇಶಿಯಸ್-ಪಾಲಿಯೊಜೀನ್ ಸಾರ್ವತ್ರಿಕ ಅಳಿಯುವಿಕೆ ಪ್ರಮುಖವಾಗುತ್ತದೆ.

ಈ ಗಡಿಯಾರವು ಭೂಗೋಳ ಕಾಲಮಾನದ ಪ್ರಮುಖ ಘಟಕಗಳನ್ನು ಮತ್ತು ಭೂಇತಿಹಾಸದ ನಿರ್ದಿಷ್ಟ ಘಟನೆಗಳನ್ನು ಪ್ರತಿನಿಧಿಸುತ್ತದೆ. ಹಡಿಯೇನ್ ಕಲ್ಪವು ಭೂಮಿಯ ಮೇಲೆ ಜೀವಿಗಳ ಪಳಿಯುಳೆಕೆಗಳು ಇಲ್ಲದ ಕಾಲಮಾನವನ್ನು ಸೂಚಿಸುತ್ತದೆ. ಇದರ ಮೇಲಿನ ಗಡಿಯನ್ನು ಈಗ ೪.೦ ಶತಕೋಟಿ ವರುಷಗಳಷ್ಟು ಹಿಂದೆ ಎಂದು ಭಾವಿಸಲಾಗಿದೆ.[೧] ಇತರ ಉಪವಿಭಾಗಗಳು ಜೀವದ ವಿಕಾಸವನ್ನು ಸೂಚಿಸುತ್ತವೆ. ಆರ್ಕಿಯನ್ ಮತ್ತು ಪ್ರೊಟೆರೊಜೋಯಿಕ್ ಎರಡೂ ಕಲ್ಪಗಳೇ. ಪಾಲಿಯೊಜೋಯಿಕ್, ಮೀಸೊಜೋಯಿಕ್ ಮತ್ತು ಸೆನೊಜೋಯಿಕ್‌ಗಳು ಯುಗಗಳು ಪನೆರೊಜೋಯಿಕ್ ಕಲ್ಪದ ಭಾಗ. ಮೂರು ದಶಲಕ್ಷ ವರುಷಗಳ ಕ್ವಾರ್ಟೆನರಿ ಅವಧಿ, ಮಾನವ ಎಂದು ಗುರುತಿಸಲಾದ ಜೀವಿಗಳ ಅವಧಿ ಮತ್ತು ಇದು ಈ ಲೆಕ್ಕದಲ್ಲಿ ಕಾಣಿಸುವಷ್ಟು ದೊಡ್ಡದಲ್ಲ.

ಹೆಸರಿಸುವಿಕೆ[ಬದಲಾಯಿಸಿ]

ಇಲ್ಲಿಯ ಕಲ್ಪದ ಹೆಸರುಗಳನ್ನು ಅದಕ್ಕೆ ಸಂಬಂಧಿಸಿದ ಕಲ್ಲಿನ ಯಾ ಶಿಲೆಯ ಆಧಾರದ ಮೇಲೆ ಹೆಸರಿಸಲಾಗಿದೆ. ಹೀಗಾಗಿ ಇಯೊನೊಥೆಮ್- ಕಲ್ಪದಲ್ಲಿ ದೊರೆಯುವ ಶಿಲಾ ಪದರ ಮತ್ತು ವಿಭಜನೆಯ ಇತರ ಹೆಸರುಗಳಿಗೂ ಇದು ಅನ್ವಯಿಸುತ್ತದೆ. ಹೀಗಾಗಿ ಎರಾಥೆಮ್-ಯುಗದಲ್ಲಿ ದೊರೆಯುವ ಶಿಲಾ ಪದರ. ಸಿಸ್ಟಮ್- ಅವಧಿಯಲ್ಲಿ ದೊರೆಯುವ ಶಿಲಾ ಪದರ. ಸೀರೀಸ್- ಶಕದಲ್ಲಿ ದೊರೆಯುವ ಶಿಲಾ ಪದರ. ಸ್ಟೇಜ್- ಕಾಲದಲ್ಲಿ ದೊರೆಯುವ ಶಿಲಾ ಪದರ. ಭೂಶಾಸ್ತ್ರಜ್ಞರು ಇಲ್ಲಿ ಕಾಲವನ್ನು ಹೇಳುವಾಗ ಬಳಸುವ "ಆರಂಭಿಕ", "ಮಧ್ಯದ" ಮತ್ತು "ನಂತರದ" ಪದಗಳು ಸಂಬಂಧಿತ ಶಿಲಾ ಪದರಗಳು "ಕೆಳ","ನಡುವಿನ" ಮತ್ತು "ಮೇಲಿನ" ಪದರಗಳು ಎಂದು ಅರ್ಥೈಸುತ್ತಾರೆ. ಭೂಗೋಳಿಕ ಕಾಲಮಾನದ ಹೆಸರುಗಳು ಕೆಲವೊಮ್ಮೆ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆಯಾಗಿ ಇರುತ್ತಿದ್ದವು. ಉದಾಹರಣೆಗೆ ಉತ್ತರ ಅಮೆರಿಕದಲ್ಲಿ ಕೆಳ ಕ್ಯಾಂಬ್ರಿಯನ್‌ ಕಾಲಮಾನವನ್ನು ವಾಕೊಬನ್ ಸೀರಿಸ್ ಎಂದು ಕರೆಯುತ್ತಿದ್ದು ಅದನ್ನು ಕಂಡುಬಂದ ಟ್ರೈಲೊಬೈಟ್‌ಗಳ ಆಧಾರದ ಮೇಲೆ ಉಪವಿಭಜನೆ ಮಾಡುತ್ತಿದ್ದರು. ಜಗತ್ತಿನಾದ್ಯಂತ ಏಕರೂಪದಲ್ಲಿ ಬಳಸುವಂತೆ ಇಂಟರ್ನಾಶನಲ್ ಕಮಿಶನ್ ಆನ್ ಸ್ಟ್ರಾಟಿಗ್ರಫಿ ಇದನ್ನು ಹೊಂದಾಣಿಕೆ ಮಾಡಿತು.[೨]

ಹೆಸರಿಸುವಿಕೆ ಇತಿಹಾಸ[ಬದಲಾಯಿಸಿ]

ಆರಂಭಿಕ ಇತಿಹಾಸ[ಬದಲಾಯಿಸಿ]

ಪ್ರಾಚೀನ ಗ್ರೀಸ್‌ನ ಅರಿಸ್ಟಾಟಲ್ ಕಲ್ಲಿನಲ್ಲಿರುವ ಕಪ್ಪೆಚಿಪ್ಪುಗಳು (ಮೃದ್ವಂಗಿಗಳ ಚಿಪ್ಪು) ಸಮುದ್ರ ದಡದಲ್ಲಿ ದೊರೆಯುವ ಕಪ್ಪೆಚಿಪ್ಪುಗಳನ್ನು ಹೋಲುತ್ತಿರುವದನ್ನು ಗಮನಿಸಿ, ಪಳಿಯುಳಿಕೆಗಳು ಒಮ್ಮೆ ಬದುಕಿದ ಜೀವಿಗಳಾಗಿದ್ದವು ಎಂದು ಭಾವಿಸಿದ. ಲಿಯನಾರ್ಡೊ ಡಾ ವಿನ್ಸಿ ಈ ವಿವರಣೆ ಸರಿಯೆಂದು ಗುರುತಿಸಿದ. [೩]

ಹನ್ನೊಂದನೆಯ ಶತಮಾನದ ಪರ್ಶಿಯಾದ ಭೂಗೋಳಶಾಸ್ತ್ರಜ್ಞ ಅವಿಸೆನ್ನ (ಇಬ್ನಾ ಸಿನಾ) ಮತ್ತು ಹದಿಮೂರನೆಯ ಶತಮಾನದ ಡೊಮಿನಿಕಾದ ಬಿಶಪ್ ಆಲ್ಬರ್ಟಸ್ ಮ್ಯಾಗ್ನಸ್ (ಸಕ್ಸೋನಿ ಆಲ್ಬರ್ಟ್) ಅರಿಸ್ಟಾಟಲ್‌ನ ವಿವರಣೆಯನ್ನು ಸಾವಯವ ಪದಾರ್ಥವನ್ನು ಶಿಲೆಯಾಗಿಸುವ ದ್ರವವಾಗಿ ಹಿಗ್ಗಿಸಿದರು.[೪] ಭೂಗೋಳದ ಕಾಲಮಾನ ನಿರ್ಣಯದಲ್ಲಿನ ಮೊದಲ ನಿಯಮ ಮೇಲಿನಪದರದ ನಿಯಮವನ್ನು ಅವಿಸೆನ್ನ ಮೊದಲು ತನ್ನ ೧೦೨೭ರ ಪುಸ್ತಕ ಕಿತಾಬ್ ಅಲ್ ಶಿಫಾದಲ್ಲಿ ಹೇಳಿದ.[೫][೬]

ಪ್ರಾಥಮಿಕ ನಿಯಮಗಳ ರೂಪಗೊಳ್ಳುವಿಕೆ[ಬದಲಾಯಿಸಿ]

ಭೌಗೋಳಿಕ ಕಾಲಮಾನದ ಬಗೆಗಿನ ಪ್ರಾಥಮಿಕ ನಿಯಮಗಳನ್ನು ಹದಿನೇಳನೆಯ ಶತಮಾನದಲ್ಲಿ ನಿಕೊಲಸ್ ಸ್ಟೆನೊ ರೂಪಿಸಿದ. ಕಲ್ಲಿನ ಪದರಗಳು ಒಂದರ ನಂತರ ಒಂದು ಅನುಕ್ರಮವಾಗಿ ರೂಪಗೊಂಡಿರುತ್ತವೆ ಮತ್ತು ಪ್ರತೀ ಪದರವೂ ಕಾಲದ ಒಂದು "ಹೋಳನ್ನು" ಪ್ರತಿನಿಧಿಸುತ್ತದೆ ಎಂದು ಸ್ಟೆನೊ ವಾದಿಸಿದ. ಅವನು ಮೇಲಿನಪದರ ನಿಯಮ ರೂಪಿಸಿದ. ಇದರ ಪ್ರಕಾರ ಯಾವುದೇ ನಿರ್ದಿಷ್ಟ ಪದರದಲ್ಲಿನ ಕೆಳಗಿನ ಪದರವು ಬಹುಶ ಮೇಲಿನ ಪದರಕ್ಕಿಂತ ಕಾಲದಲ್ಲಿ ಮುಂಚಿನದಾಗಿರುತ್ತದೆ. ಸ್ಟೆನೊನ ನಿಯಮಗಳು ಸರಳವಾಗಿದ್ಯಾಗ್ಯೂ ಅವುಗಳನ್ನು ಅನ್ವಯಿಸುವುದು ಅಷ್ಟೇನೂ ಸುಲಭವಾಗಿರಲಿಲ್ಲ ಮತ್ತು ವಾಸ್ತವದ ಕಲ್ಲಿನ ಬಗೆಗೆ ಅವನ್ನು ಅನ್ವಯಿಸುವುದು ಸಂಕೀರ್ಣವಾಗಿತ್ತು. ಕೆಲಕಾಲದ ನಂತರ ಹದಿನೆಂಟನೆಯ ಶತಮಾನದ ಭೂಗೋಳಶಾಸ್ತ್ರಜ್ಞರು ಕೆಳಗಿನ ಸಮಸ್ಯೆಗಳನ್ನು ಗುರುತಿಸಿದರು.

  1. ಕಲ್ಲಿನ ಪದರಗಳು ಸಂಚಯವಾದ ನಂತರ ಕೆಲವೊಮ್ಮೆ ಸವೆಯ ಬಹುದು, ಆಕಾರ ಕೆಡಬಹುದು, ಒರೆಯಾಗ ಬಹುದು ಮತ್ತು ತಿರುವುಮುರುವು ಆಗಬಹುದು ಸಹ.
  2. ಒಂದೇ ಕಾಲಮಾನದಲ್ಲಿ ರೂಪುಗೊಂಡ ಪದರಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿ ಕಾಣಬಹುದು
  3. ಯಾವುದೇ ಪ್ರದೇಶದ ಪದರವು ಭೂಮಿಯ ದೀರ್ಘ ಇತಿಹಾಸದ ಒಂದು ಸಣ್ಣ ಭಾಗ ಮಾತ್ರ.

ಚಿಂತನೆಯ ಪ್ರಮುಖ ಬದಲಾವಣೆಯು ಜೇಮ್ಸ್ ಹಟ್ಟನ್ ಚಿಂತನೆಯಿಂದ ಬಂದಿತು. ಅವನು ತನ್ನ ಪ್ರಬಂಧ ಥಿಯರಿ ಆಫ್ ಅರ್ಥನ್ನು ೧೭೮೫ರ ಮಾರ್ಚ್ ಮತ್ತು ಏಪ್ರಿಲ್‌ಗಳಲ್ಲಿ ಎಡಿನ್‌ಬರ್ಗ್‌ನ ರಾಯಲ್ ಸೊಸೈಟಿ ಮುಂದೆ ಪ್ರಸ್ತುತಪಡಿಸಿದ. “೨೦ನೆಯ ಶತಮಾನದ ದೃಷ್ಟಿಕೋನದಿಂದ ನೋಡಿದಲ್ಲಿ ಜೇಮ್ಸ್ ಹಟ್ಟನ್‌ನ ಪ್ರಸ್ತುತ ಪಡಿಸಿದ ಚಿಂತನೆಯು ಆಧುನಿಕ ಭೂಗೋಳಶಾಸ್ತ್ರದ ಬುನಾದಿಗಳಾದವು”.[೭] ಭೂಮಿಯ ಒಳ ಆವಾರಣವು ಬಿಸಿಯಾಗಿದೆ ಮತ್ತು ಈ ಬಿಸುಪೇ ಹೊಸ ಕಲ್ಲುಗಳಾಗಿಸುವ ಇಂಜಿನ್. ಭೂಮಿಯನ್ನು ಗಾಳಿ ಮತ್ತು ನೀರು ಸವೆಯಿಸುತ್ತವೆ ಮತ್ತು ಇದು ಸಾಗರಗಳಲ್ಲಿ ಪದರಗಳಾಗಿ ಸಂಚಿತವಾಗುತ್ತದೆ. ಈ ಗಸಿಯನ್ನು ಭೂಮಿಯ ಒಳಗಿನ ಬಿಸುಪು ಕಲ್ಲಾಗಿಸುತ್ತದೆ ಮತ್ತು ಇದು ಮೇಲೆದ್ದು ಭೂಮಿಯಾಗುತ್ತದೆ ಎಂಬುಂದು ಅವನ ಚಿಂತನಾ ಸರಣಿಯಾಗಿತ್ತು. ಪ್ರವಾಹ ಆಧಾರಿತ ಚಿಂತನೆಯಾದ “ನೆಪ್ಚೂನಿಸ್ಟ್”ನಿಂದ ಭಿನ್ನವಾಗಿ ಇದನ್ನು “ಪ್ಲುಟೋನಿಸ್ಟ್” ಎಂದು ಕರೆಯಲಾಯಿತು.

ಭೂಗೋಳದ ಕಾಲಮಾನಗಳು ಮೊದಲ ಪ್ರಯತ್ನಗಳು[ಬದಲಾಯಿಸಿ]

ಮೊದಲನೆಯ ಭೂಗೋಳದ ಕಾಲಮಾನಗಳನ್ನು ನಿರ್ಣಯಿಸುವ ಗಂಭೀರ ಪ್ರಯತ್ನ ಹದಿನೆಂಟನೆಯ ಶತಮಾನದಲ್ಲಿ ನಡೆಯಿತು. ಇಂತಹ ಬಹಳ ಪ್ರಭಾವಿ ಪ್ರಯತ್ನವು ಭೂಮಿಯ ಗಡಸು ಹೊರಮೈ ಕಲ್ಲುಗಳನ್ನು ಪ್ರೈಮರಿ, ಸೆಂಕಡರಿ, ಟರ್ಶಿಯರಿ ಮತ್ತು ಕ್ವಾರ್ಟೆನರಿ ಎಂದು ನಾಲ್ಕು ವಿಭಜನೆಯನ್ನು ಮಾಡಿತು (ಇದರ ಪ್ರವರ್ತಕರಲ್ಲಿ ಮುಖ್ಯವಾದವರು ಅಬ್ರಾಹಾಂ ವೆರ್ನರ್). ಈ ಸಿದ್ಧಾಂತದ ಪ್ರಕಾರ ಪ್ರತೀ ನಮೂನೆಯ ಕಲ್ಲೂ ಭೂಮಿಯ ಇತಿಹಾಸದಲ್ಲಿ ನಿರ್ದಿಷ್ಟ ಕಾಲದಲ್ಲಿ ರೂಪಗೊಂಡಿದ್ದು. ಹೀಗಾಗಿ “ಟರ್ಶಿಯರಿ ಅವಧಿ” ಮತ್ತು ಹಾಗೆಯೇ “ಟರ್ಶಿಯರಿ ಕಲ್ಲು” ಎಂದು ಹೇಳಬಹುದಾಗಿತ್ತು. ಭೂಗೋಳಿಕ ಕಾಲಮಾನದ ಹೆಸರಾಗಿ “ಟರ್ಶಿಯರಿ” (ಈಗ ಪಾಲಿಯೊಜೀನ್ ಮತ್ತು ನಿಯೊಜೀನ್) ಇಪ್ಪತನೆಯ ಶತಮಾನದಲ್ಲಿಯೂ ಉಳಿದುಕೊಂಡಿತ್ತು. ಇಂದೂ ಸದ್ಯದ ಅವಧಿಗೆ ಕ್ವಾರ್ಟೆನರಿ ಎಂದು ಬಳಸುತ್ತಿದ್ದೇವೆ.

ಪದರವನ್ನು ಅದರಲ್ಲಿ ದೊರೆಯುವ ಪಳಿಯುಳಿಕೆಗಳ ಆಧಾರದ ಮೇಲೆ ಗುರುತಿಸುವಲ್ಲಿ ಆರಂಭಿಕ ಹತ್ತೊಂಬತ್ತನೆಯ ಶತಮಾನದ ವಿಲಿಯಂ ಸ್ಮಿಥ್, ಜಾರ್ಜಸ್ ಕುವಿಯರ್, ಜೀನ್ ಡಿಒಮಲಿಯಸ್ ಡಿಹಲಾಯ್ ಮತ್ತು ಆಲೆಕ್ಸಾಂಡ್ರೆ ಬ್ರೊಗ್ನಿಯಾರ್ಟ್ ಮುಂಚೂಣಿಯಲ್ಲಿದ್ದರು. ಇದು ಭೂಗೋಳಶಾಸ್ತ್ರಜ್ಞರಿಗೆ ಹೆಚ್ಚು ಖಚಿತವಾಗಿ ಭೂಮಿಯ ಇತಿಹಾಸವನ್ನು ವಿಭಜಿಸಲು ಸಹಾಯ ಮಾಡಿತು. ಇದು ಪದರಗಳನ್ನು ದೇಶಗಳ ಗಡಿಯಾಚೆ (ಖಂಡಗಳಾಚೆಯೂ ಸಹ) ಅವುಗಳಲ್ಲಿರುವ ಒಂದೇ ರೀತಿಯ ಪಳಿಯುಳಿಕೆಗಳ ಮೂಲಕ ಸಂಬಂಧ ಕಲ್ಪಿಸಲು ಸಾಧ್ಯವಾಯಿತು. ಇವು ಒಂದೇ ಕಾಲಮಾನದಲ್ಲಿ ಸಂಚಿತವಾಗುವ ಸಾಧ್ಯತೆಯೇ ಹೆಚ್ಚು. ೧೮೨೦ ಮತ್ತು ೧೮೫೦ರ ನಡುವಿನ ಯುರೋಪಿನ ಪದರ ಮತ್ತು ಪಳಿಯುಳಿಕೆಗಳ ವಿವರವಾದ ಅಧ್ಯಯನವು ಇಂದು ಬಳಸುವ ಭೂಗೋಳಿಕ ಕಾಲಮಾನಗಳ ಅನುಕ್ರಮವನ್ನು ಸ್ಥಾಪಿಸಲು ನೆರವಾಯಿತು.

ಕಾಲಮಾನ ನಿಗಧಿ[ಬದಲಾಯಿಸಿ]

ವಿಲಿಯಂ ಸ್ಮಿತ್ ಮತ್ತು ಸರ್ ಚಾರ್ಲ್ಸ್ ಲೆಲೆ ಕಲ್ಲಿನ ಪದರಗಳು ಅನುಕ್ರಮ ಘಟನೆಗಳೆಂತಲೂ ಮತ್ತು ಅವುಗಳ ಕಾಲಮಾನವನ್ನು ನಿರ್ದಿಸುವುದು ಕೇವಲ ಊಹೆಯಾಗ ಬಲ್ಲದು ಎಂದು ಗುರುತಿಸಿದರು. ಆದಾಗ್ಯೂ ಹಲವು ಭೂಗೋಳಶಾಸ್ತ್ರಜ್ಞರು ಮತ್ತು ಪ್ರಗ್ಜೀವಿಶಾಸ್ತ್ರಜ್ಞರು ಭಿನ್ನ ಪದರಗಳು ಮತ್ತು ಪಳಿಯುಳಿಕೆಗಳ ಸಾಕ್ಷೇಪಿಕ ಸ್ಥಾನದ ಮೇಲೆ ಮತ್ತು ಅಂದಾಜಿಸಿದ ಹಲವು ರೀತಿಯ ಹವೆಗೆ ಒಡ್ಡುವಿಕೆ, ಸವಕಳಿ, ಮೆಕ್ಕಲು ಪೇರುವಿಕೆ ಮತ್ತು ಕಲ್ಲಾಗುವಿಕೆಯಿಂದ ಉಂಟಾದ ಪರಿಣಾಮಗಳ ಆಧಾರದ ಮೇಲೆ ಭೂಗೋಳದ ಕಾಲಮಾನದ ಕೋಷ್ಟಕವನ್ನು ತಯಾರಿಸಿದರು. ಸೃಷ್ಟಿವಾದಿಗಳ ಬೈಬಲ್ ಆಧಾರಿತ ಭೂಮಿಯ ಆಯುಶ್ಯದ ಅಂದಾಜು ೬ ರಿಂದ ೭ ಸಾವಿರಗಳ ವರೆಗೆ ಇದ್ದರೆ ಈ ಶಾಸ್ತ್ರಜ್ಞರು ಅಂದಾಜು ಕೆಲವು ದಶಲಕ್ಷ ವರುಷಗಳ ಮೇರೆಗೆ ಇತ್ತು. ಆದರೆ ೧೮೯೬ರಲ್ಲಿ ವಿಕಿರಣಪಟುತ್ವ (ರೇಡಿಯೊಆಕ್ಟಿವಿಟಿ) ಕಂಡುಹಿಡಿಯುವ ವರೆಗೆ ಮತ್ತು ಇದರ ಆಧಾರದ ಮೇಲೆ ಇಪ್ಪನೆಯ ಶತಮಾನದ ಮೊದಲನೆಯ ಅರ್ಧದಲ್ಲಿ ವಿಕಿರಣಪಟುತ್ವ ಕಾಲಗಣನಾ ಪದ್ಧತಿಯು ಚಾಲ್ತಿ ಬರುವವರೆಗೆ (ಇದನ್ನು ಬಳಸುವಲ್ಲಿ ಆರ್ಥರ್ ಹೋಮ್ಸ್‌ನಂತಹ ಭೂಶಾಸ್ತ್ರಜ್ಞರು ಮುಂಚೂಣಿಯಲ್ಲಿದ್ದರು) ಇವು ಅಷ್ಟೇನೂ ನಿಖರವಾಗಿರಲಿಲ್ಲ. ಮೊದಲ ಖಚಿತ ಕಾಲಮಾನದ ಭೂಗೋಳಿಕ ಕಾಲಮಾನವನ್ನು ಬ್ರಿಟಿಶ್ ಭೂಶಾಸ್ತ್ರಜ್ಞ ಆರ್ಥರ್ ಹೋಮ್ಸ್ ೧೯೧೩ರಲ್ಲಿ ಪ್ರಕಟಿಸಿದರು.[೮] ಅವರ ಏಜೆ ಆಫ್ ಅರ್ಥ್ನಲ್ಲಿ ಭೂಮಿಯ ವಯಸ್ಸನ್ನು ಕನಿಷ್ಟ ೧.೬ ಶತಕೋಟಿ ವರುಷ ಎಂದು ಅಂದಾಜಿಸಿದರು.[೯]

೧೯೭೭ರಲ್ಲಿ ಗ್ಲೋಬಲ್ ಕಮಿಶನ್ ಆನ್ ಸ್ಟ್ರಾಟಿಗ್ರಫಿ (ಈಗ ಇಂಟರ್ನಾಶನಲ್ ಕಮಿಶನ್ ಆನ್ ಸ್ಟ್ರಾಟಿಗ್ರಫಿ ಅಥವಾ ಐಸಿಎಸ್) ಭೂಗೋಳಿಕ ಅವಧಿ ಮತ್ತು ಜೀವಿಗಳ ಹಂತದ ಬಗೆಗಿನ ಜಾಗತಿಕ ಉಲ್ಲೇಖಗಳನ್ನು ವ್ಯಾಖ್ಯಾನಿಸುವುದರಲ್ಲಿ ನಿರತವಾಯಿತು. ಇದು ಜಿಎಸ್ಎಸ್‌ಪಿ (ಗ್ಲೋಬಲ್ ಬೌಂಡರಿ ಸ್ಟ್ರಾಟೊಟೈಪ್ ಸೆಕ್ಶನ್ ಅಂಡ್ ಪಾಯಿಂಟ್) ಯಾವುದೇ ಹಂತದ ಭೂಗೋಳಿಕ ಕಾಲಮಾನದ ಗಡಿಯನ್ನು ಸಾರ್ವತ್ರಿಕವಾಗಿ ಒಪ್ಪುವಂತೆ ಗುರುತಿಸುವ ಕೆಲಸ ಮಾಡುತ್ತದೆ. ಇಂತಹ ಇತ್ತೀಚಿನ ಮಾಹಿತಿಯು ಆ ಸಂಸ್ಥೆಯ ಅಂತರ್ಜಾಲದಲ್ಲಿ ಲಭ್ಯವಿದೆ.[೧೦]

ಯುಗಗಳು[ಬದಲಾಯಿಸಿ]

ಇಡಯಕರನ್

ಪೇಲಿಯೊಪ್ರೊಟೆರೊಜೊಯಿಕ್ಮೀಸೊಪ್ರೊಟೆರೊಜೊಯಿಕ್ನಿಯೊಪ್ರೊಟೆರೊಜೊಯಿಕ್ಪೇಲಿಯೊಜೊಯಿಕ್ಮೀಸೊಜೊಯಿಕ್ಸೆನೆಜೊಯಿಕ್ಹಾಡಿಯನ್ಆರ್ಕಿಯನ್ಪ್ರೊಟೆರೊಜೊಯಿಕ್ಫ್ರಾನೆರೊಜೊಯಿಕ್ಪ್ರೀಕ್ಯಾಂಬ್ರಿಯನ್
CambrianOrdovician

DevonianCarboniferousPermianTriassicJurassicCretaceous

PaleozoicMesozoicCenozoicPhanerozoic
PaleoceneEoceneOligoceneMiocene

PleistocenePaleogeneNeogeneQuaternaryCenozoic
Millions of Years


ಭೂಗೋಳಿಕ ಕಾಲಮಾನದ ಕೋಷ್ಟಕ[ಬದಲಾಯಿಸಿ]

ಈ ಕೋಷ್ಟಕದಲ್ಲಿ ಭೂಗೋಳಿಕ ಕಾಲಮಾನದ ಆಯಾ ಕಾಲಗಳಲ್ಲಿ ನಡೆದ ಪ್ರಮುಖ ಘಟನೆಗಳ ಸಾರಸಂಗ್ರಹವಾಗಿ ಕೊಡಲಾಗಿದೆ. ಇಲ್ಲಿಯ ಕಾಲಮಾನಕ್ಕೆ ಐಸಿಎಸ್ ನಿರ್ದರಿತ ಕಾಲಮಾನ ಆಧಾರವಾಗಿದೆ. ಕೋಷ್ಟಕದ ಮೇಲೆ ತೀರ ಇತ್ತೀಚಿನ ಮತ್ತು ಕೆಳಗೆ ಹೋದಂತೆ ನಂತರದ ಕಾಲಮಾನಗಳನ್ನು ಕೊಡಲಾಗಿದೆ.

ಕಲ್ಪ (ಇಯಾನ್)[ಟಿಪ್ಪಣಿ ೨] ಯುಗ (ಎರಾ) ಅವಧಿ (ಪೀರಿಯಡ್)[೧೧] ಶಕ (ಎಪೋಕ್) ಕಾಲ (ಏಜ್) ಪ್ರಮುಖ ಘಟನಾವಳಿಗಳು ದಶಲಕ್ಷ ವರುಷಗಳ ಹಿಂದೆ ಆರಂಭ (ದವಹಿಂ)[೧೨]
ಫನೆರೊಜೋಯಿಕ್ ಸೆನೊಜೋಯಿಕ್[೧೩] ಕ್ವಾರ್ಟನರಿ ಹೊಲೋಸಿನ್ ಕ್ರೋನ್‌ಗಳು: ಸಬ್‌ಅಟ್ಲಾಂಟಿಕ್ • ಸಬ್ಬೋರಿಯಲ್ • ಅಟ್ಲಾಂಟಿಕ್ • ಬೋರಿಯಲ್ • ಪ್ರಿಬೋರಿಯಲ್ ಕ್ವಾರ್ಟನರಿ ಹಿಮಯುಗದ ಹಿಂಜರಿತ ಮತ್ತು ಸಮಕಾಲೀನ ಹಿಮಯುಗಗಳ ನಡುವಿನ ಕಾಲಮಾನದ ಆರಂಭ; ಮಾನವನ ನಾಗರೀಕತೆಯ ಉಗಮ. ಸವನ್ನಾದಿಂದ ಸಹಾರದ ರೂಪಗೊಳ್ಳವಿಕೆ ಮತ್ತು ಕೃಷಿಯ ಆರಂಭ. ಶಿಲಾಯುಗಗಳಿಂದ ತಾಮ್ರಯುಗ (ಕಿ ಪೂ ೩೩೦೦) ಮತ್ತು ಕಬ್ಬಿಣ ಯುಗಳ (ಕ್ರಿ ಪೂ ೧೨೦೦) ಆರಂಭ ಹಾಗೂ ಜಗತ್ತಿನಾದ್ಯಂತ ಹಲವು ಇತಿಹಾಸ ಪೂರ್ವ ಸಂಸ್ಕೃತಿಗಳ ಉಗಮ. ಸಣ್ಣ ಹಿಮಯುಗ (ಸ್ಟೇಡಿಯಲ್) ಉತ್ತರ ಗೋಳದಲ್ಲಿ ೧೪೦೦ ರಿಂದ ೧೮೫೦ರ ವರೆಗೆ ಉಂಟಾಗುತ್ತದೆ. ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಮಟ್ಟ ಘನ ಅಳತೆಯ ೨೮೦ ದಶಲಕ್ಷ ಭಾಗ ಹೆಚ್ಚಾಗುತ್ತದೆ (ಪಿಪಿಎಂವಿ ಅಥವಾ ಪಾರ್ಟ್ಸ್ ಪರ್ ಮಿಲಿಯನ್ ವಾಲ್ಯೂಂ). ಅದರ ಇಂದಿನ ಮಟ್ಟ ಘನ ಅಳತೆಯ ೪೦೦[೧೪] ದಶಲಕ್ಷ ಭಾಗಗಳು (ಪಿಪಿಎಂವಿ).[೧೫][೧೬] ೦.೦೧೧೭[೧೭]
ಪ್ಲಿಸ್ಟೋಸಿನ್ ತಡವಾದ (ಸ್ಥಳೀಯವಾಗಿ ಟರ್ನಟಿಯನ್ • ಟೈರ್ರೆಹೆನಿಯನ್ • ಈಮಿಯನ್ • ಸಂಗೋಮಿಯನ್) ಭಾರಿ ಗ್ರಾತದ ಸಸ್ತನಿಗಳ ಹೆಚ್ಚಳ ಮತ್ತು ಅಳಿವು. ದೈಹಿಕವಾಗಿ ಆಧುನಿಕ ಮಾನವನ ವಿಕಾಸ. ಹಿಮಕಾಲ ಮತ್ತು ಹೆಚ್ಚು ಬಿಸುಪಿನ ಇಂಟರ್‌ಸ್ಟೇಡಿಯಲ್ ಕಾಲಗಳೊಂದಿಗೆ ಕ್ವಾರ್ಟನರಿ ಹಿಮಯುಗದ ಮುಂದುವರೆಯುವಿಕೆ (ಮತ್ತು ಇದರೊಂದಿಗೆ ವಾತಾವರಣದ ಕಾರ್ಬನ್‌ ಡೈಆಕ್ಸೈಡ್‌ನ ಮಟ್ಟ ೧೦೦ರಿಂದ ೩೦೦ ಪಿಪಿಎಮ್‌ವಿ[೧೫][೧೬]ರವರೆಗಿನ ಏರುಪೇರುಸಹ ಮುಂದುವರೆಯುತ್ತದೆ). ೧.೬ ದವಹಿಂ (ದಶಲಕ್ಷ ವರುಷಗಳ ಹಿಂದೆ) ಹಿಮಮನೆ ಭೂಮಿ[ಟಿಪ್ಪಣಿ ೩] ಪರಿಣಾಮ ತೀವ್ರವಾಗುತ್ತದೆ. ಕೊನೆಯ ಹಿಮೀಕರಣದ ಗರಿಷ್ಠ (೩೦೦೦೦ ವರುಷ ಹಿಂದೆ) ಮತ್ತು ಕೊನೆಯ ಹಿಮಯುಗ ಕಾಲಮಾನ (೧೮೦೦೦-೧೫೦೦೦ ವರುಷಗಳ ಹಿಂದೆ). ಮಾನವನ ಶಿಲಾಯುಗದ ಆರಂಭ ಮತ್ತು ಹಿಂದಿನ ಹಿಮಯುಗದ ಕಾಲಮಾನಕ್ಕೆ ಹೋಲಿಸಿದರೆ, ವಿಶೇಷವಾಗಿ ಮೆಡಿಟರೇನಿಯನ್ ಮತ್ತು ಯುರೋಪುಗಳಲ್ಲಿ ಮಾನವನು, ಕೆತ್ತನೆಗಳು ಮತ್ತು ಮಣ್ಣಿನ ವಿಗ್ರಹಗಳಂತಹ ತಾಂತ್ರಿಕವಾಗಿ ಹೆಚ್ಚು ಸಂಕೀರ್ಣವಾದವನ್ನು ಸೃಷ್ಟಿಸ ತೊಡಗಿದ. ಇಂಡೋನೇಶಿಯಾದ ಸುಮಾತ್ರದಲ್ಲಿರುವ ತೋಬ ಸರೋವರ ಅಗ್ನಿಪರ್ವತದ ೭೫೦೦೦ ವರುಷಗಳ ಹಿಂದಿನ ಉಗುಳುವಿಕೆಯ ಪರಿಣಾಮವಾಗಿ ಚಳಿಗಾಲದ ವಾತವಾರಣ ಉಂಟಾಗಿ ಬಹುಶ ಮಾನವ ಜನಾಂಗವನ್ನು ಅಳಿವಿನ ಅಂಚಿಗೆ ತಳ್ಳಿತು. ಅಲ್ಲದೆ ತಾಪಮಾನ ಏರಿಳಿತದ ಹಲವು ಬದಲಾವಣೆಗಳು ಆದವು. ೦.೧೨೬
ಮಧ್ಯ ಪ್ಲಿಸ್ಟೋಸಿನ್ (ಹಿಂದಿನ ಇಯೋನಿಯನ್) ೦.೭೮೧
ಕಾಲಬ್ರಿಯನ್ ೧.೮*
ಗೆಲಸಿಯನ್ ೨.೫೮*
ನಿಯೋಜೀನ್ ಪ್ಲಿಯೊಸಿನ್ ಪಿಯಸೆನಿಜಿಯನ್/ಬ್ಲಾನ್‌ಕಾನ್ ಇಂದಿನ ಹಿಮಯುಗದ (ಕ್ವಾರ್ಟನರಿ) ತೀವ್ರವಾಗುವಿಕೆ ಸುಮಾರು ೨.೫೮ ದವಹಿಂ ಆಯಿತು ಮತ್ತು ತಂಪಾದ ಹಾಗೂ ಒಣ ಹವಮಾನ ಉಂಟಾಯಿತು. ಅಸ್ಟ್ರಲೊಪಿಥೆಸಿನ್‌ಗಳು ಮತ್ತು ಹಲವು ಇಂದು ಇರುವ ಸಸ್ತನಿ ಕುಲಗಳ ಹಾಗೂ ಇತ್ತೀಚಿನ ಮೃದ್ವಂಗಿಗಳು ಕಾಣಿಸಿಕೊಂಡವು. ಹೊಮೋ ಹೆಬಿಲಿಸ್ ಕಾಣಿಸಿಕೊಂಡಿತು, ೩.೬*
ಜನ್‌ಕ್ಲೀನ್ ೫.೩೩೩*
ಮಯೋಸಿನ್ ಮೆಸ್ಸಿನಿಯನ್ ಮಿತವಾದ ಹಿಮಮನೆ ವಾತಾವರಣ ಮತ್ತು ನಡುನಡುವೆ ಹಿಮಯುಗಗಳು, ಉತ್ತರ ಗೋಳದಲ್ಲಿ ಬೆಟ್ಟಗಳ ಉಗಮ; ಆಧುನಿಕ ಸಸ್ತನಿಗಳು ಮತ್ತು ಹಕ್ಕಿಗಳ ಕುಟುಂಬಗಳು ಗುರುತಿಸುವಂತಾದವು. ಕುದುರೆಗಳು ಮತ್ತು ಆನೆಗಳನ್ನು ಹೋಲುವ ಸಸ್ತನಿಗಳಲ್ಲಿ ವೈವಿಧ್ಯತೆ ಹೆಚ್ಚಾಯಿತು. ಹುಲ್ಲುಗಳು ಎಲ್ಲೆಡೆ ಕಾಣಿಸಿಕೊಂಡವು. ಮೊದಲ ವಾನರಗಳು ಕಾಣಿಸಿಕೊಂಡವು. ನ್ಯೂಜಿಲ್ಯಾಂಡಿನ ಕೈಕೌರ ಬೆಟ್ಟಗಳು ರೂಪಗೊಂಡವು ಮತ್ತು ಇದು ಇಂದೂ ಮುಂದುವರೆದಿದೆ. ಕೇಂದ್ರ ಮತ್ತು ಪೂರ್ವ ಯುರೋಪಿನ ಕಾರ್ಪಥಿಯನ್ ಬೆಟ್ಟಗಳ ಉಗಮವಾಯಿತು. ಗ್ರೀಸ್ ಮತ್ತು ಏಜಿಯೆನ್ ಸಮುದ್ರದ ಹೆಲೆನಿಕ್ ಬೆಟ್ಟಗಳ ರೂಪಗೊಳ್ಳುವಿಕೆ ನಿಧಾನವಾಯಿತು ಆದರೆ ಇಂದೂ ಮುಂದುವರೆದಿದೆ. ವಿಸ್ತಾರವಾಗಿ ಹರಡಿದ ಅರಣ್ಯಗಳು ದೊಡ್ಡ ಮಟ್ಟದಲ್ಲಿದ್ದ ಕಾರ್ಬನ್‌ ಡೈಆಕ್ಸೈಡನ್ನು ನಿಧಾನವಾಗಿ ೬೫೦ ರಿಂದ ೧೦೦ ಪಿಪಿಎಂವಿಗೆ ಇಳಿಸಿದವು.[೧೫][೧೬]

ಹಳೆಯ ಪ್ರಪಂಚದಲ್ಲಿ (ಏಶಿಯಾ, ಯುರೋಪ್ ಮತ್ತು ಆಫ್ರಿಕಾ) ವಾನರಗಳು ಸಾಮಾನ್ಯವಾದವು. ಈ ಅವಧಿಯ ಕೊನೆಯಲ್ಲಿ ಮಾನವ ಪೂರ್ವಜರು ಚಿಂಪಾಜಿಯಿಂದ ಕವಲೊಡೆದು ಪ್ರತ್ಯೇಕವಾದರು. ಖಂಡಗಳು ಇಂದಿನ ಸ್ಥಳಕ್ಕೆ ಚಲಿಸಿದವು. ಆಧುನಿಕ ಭೂಗೋಳದಲ್ಲಿ ದಕ್ಷಿಣ ಅಮೆರಿಕಾ ಮತ್ತು ಉತ್ತರ ಅಮೆರಿಕದ ನಡುವಿನ ಭೂಸೇತುವ ಇರಲಿಲ್ಲ.[ಟಿಪ್ಪಣಿ ೪]

೭.೨೪೬*
ಟೋರ್ಟೊನಿಯನ್ ೧೧.೬೩*
ಸೆರ್ರವಲ್ಲಿಯನ್ ೧೩.೮೨*
ಲಾಂಗಿಯನ್ ೧೫.೯೭
ಬರ್ಡಿಗಾಲಿಯನ್ ೨೦.೪೪
ಅಕ್ವಿಟೇನಿಯನ್ ೨೩.೦೩*
ಪಾಲಿಯೊಜೀನ್ ಒಲಿಗೊಸಿನ್ ಚಟ್ಟಿಯನ್ ಬಿಸುಪಿನ ಆದರೆ ತಣ್ಣಗಾಗಿಸುವ ವಾತವಾರಣ ಮತ್ತು ಹಿಮಮನೆಯ ಕಡೆ ಚಲನ. ಜೀವಿಗಳ ವಿಶೇಷವಾಗಿ ಸಸ್ತನಿಗಳ ದೊಡ್ಡ ಮಟ್ಟದ ವೈವಿಧ್ಯತೆ. ಆಧುನಿಕ ಹೂಬಿಡುವ ಸಸ್ಯಗಳ ನಮೂನೆಗಳ ವಿಕಾಸ ಮತ್ತು ಹರಡುವಿಕೆ. ೨೮.೧
ರುಪೆಲಿಯನ್ ೩೩.೯*
ಇಯೋಸಿನ್ ಪ್ರಿಯಬೋನಿಯನ್ ಮಿತವಾದ, ತಣ್ಣನೆಯ ವಾತಾವರಣ, ಪ್ರಾಚೀನ ಸಸ್ತನಿಗಳು ಹೆಚ್ಚಳ ಮತ್ತು ಅಭಿವೃದ್ಧಿ ಹೊಂದುವುದು. "ಆಧುನಿಕ" ಸಸ್ತನಿ ಕುಟುಂಬಗಳ ಕಾಣಿಸಿಕೊಳ್ಳುವಿಕೆ. ಆಧಿಮ ತಿಮಿಂಗಲ ವೈವಿಧ್ಯವಾಗುವುದು. ಮೊದಲ ಹುಲ್ಲುಗಳು. ಅಂಟಾರ್ಕಿಟಿಕದ ಮರುಹಿಮೀಕರಣ ಮತ್ತು ಹಿಮ ಹೊದಿಕೆ ರೂಪಗೊಳ್ಳುವುದು. ಅಜೊಲ್ಲ ಸಸ್ಯ ಘಟನೆ, ಈ ಘಟನೆಯಲ್ಲಿ ದೊಡ್ಡ ಮಟ್ಟದಲ್ಲಿ ಇಂಗಾಲದ ಡೈಆಕ್ಸೈಡನ್ನು ತನ್ನೊಂದಿಗೆ ಸಾಗರ ತಳಕ್ಕೆ ಕೊಂಡೊಯ್ದು ಪರಿಣಾಮವಾಗಿ ಹಿಮಮನೆ ವಾತಾವರಣ ಉಂಟಾಗಿ ಹಿಮಯುಗವು ಆರಂಭವಾಗುತ್ತದೆ. ಈ ಘಟನೆಯಿಂದ ವಾತವಾರಣದಲ್ಲಿದ್ದ ಇಂಗಾಲದ ಡೈಆಕ್ಸೈಡ್[೧೫][೧೬] ೩೮೦೦ ಪಿಪಿಎಂವಿಯಿಂದ ೬೫೦ ಪಿಪಿಎಂವಿಗೆ ಕಡಿಮೆಯಾಯಿತು. ಉತ್ತರ ಅಮೆರಿಕಾದ ಲಾರಮಿಡೆ ಮತ್ತು ಸೆವಿಯರ್ ಬೆಟ್ಟಗಳ ಉಗಮ. ಯುರೋಪೀನ ಆಲ್ಪ್ ಬೆಟ್ಟಗಳ ಉಗಮದ ಆರಂಭ. ಗ್ರೀಸ್ ಮತ್ತು ಏಜಿಯೆನ್ ಸಮುದ್ರದ ಹೆಲೆನಿಕ್ ಬೆಟ್ಟಗಳ ಉಗಮ. ೩೭.೮
ಬಾರ್ಟೊನಿಯನ್ ೪೧.೨
ಲುಟೆಶಿಯನ್ ೪.೮*
ಯಪ್ರೇಶಿಯನ್ ೫೬.೦*
ಪಾಲಿಯೋಸಿನ್ ಥಾನೇಶಿಯನ್ ವಾತಾವರಣ ಉಷ್ಣವಲಯದ್ದು, ಆಧುನಿಕ ಸಸ್ಯಗಳು ಹುಟ್ಟತ್ತವೆ; ದೈತ್ಯ ಸರೀಸೃಪಗಳ ಅಥವಾ ಡೈನಾಸರಸ್‌ಗಳ ಅಳಿವಿನ ನಂತರ ಸಸ್ತನಿಗಳು ಹಲವು ಆಧಿಮ ರೂಪದ ಕವಲುಗಳಾಗುತ್ತವೆ. ಮೊದಲ ದೊಡ್ಡ ಸಸ್ತನಿಗಳು (ಕರಡಿ ಅಥವಾ ಸಣ್ಣ ಖಡ್ಗಮೃಗ ಗಾತ್ರ); ಯುರೋಪ್ ಮತ್ತು ಏಶಿಯಾದಲ್ಲಿ ಆಲ್ಬೈನ್ ಬೆಟ್ಟಗಳ ಉಗಮದ ಆರಂಭ. ಭಾರತೀಯ ಉಪಖಂಡದ ಏಶಿಯದೊಂದಿಗಿನ ಡಿಕ್ಕಿಯೊಂದಿಗೆ (೫೫ ದವಹಿಂ) ಹಿಮಾಲಯ ಬೆಟ್ಟಗಳ ಉಗಮದ ಆರಂಭ (೫೨-೪೮ ದವಹಿಂ). ೫೯.೨*
ಸೆಲಾನ್ಡಿಯನ್ ೬೧.೬*
ದಾನಿಯನ್ ೬೬.೦*
ಮೆಸೊಜೊಯಿಕ್ ಕ್ರೆಟಸಿಯಸ್ ನಂತರದ ಮಾಸ್ಟ್ರಿಚಿಟಿಯನ್ ಹೂಬಿಡುವ ಸಸ್ಯಗಳ ಹೆಚ್ಚಳ, ಜೊತೆಗೆ ಹೊಸ ರೀತಿಯ ಕೀಟಗಳು. ಹೆಚ್ಚು ಆಧುನಿಕವಾಗ ಟೆಲಿಯೊಸ್ಟ್ ಮೀನು ಕಾಣಬರ ತೊಡಗುತ್ತದೆ. ಅಮೊನೊಯಿಡ ಉಪವರ್ಗದ ಮೃದ್ವಂಗಿಗಳು, ಬೆಲ್ಮನೈಟ್‌ಗಳು (ಆಧುನಿಕ ಕಟ್‌ಲ್‌ಮೀನಿನ ಸಂಬಂಧಿಗಳು), ರುಡಿಸ್ಟ್ ಬೈವಾಲ್ವ್ (ಇಂದು ಅಳಿದ ಸಾಗರ ಜೀವಿಗಳು), ಕಡಲಚಿಳ್ಳೆಗಳು, ಪೋರಿಫರ ವರ್ಗದ ಸ್ಪಂಜುಗಳು ಸಾಮಾನ್ಯವಾಗುತ್ತವೆ. ಹಲವು ಹೊಸರೀತಿಯ ಡೈನೊಸಾರಸ್‌ಗಳು (ಟೈರಾನೊಸಾರ್, ಟಿಟಾನೊಸಾರ್‌, ಡಕ್‌ ಬಿಲ್ ಮತ್ತು ಕೊಂಬಿನ ಡೈನೊಸಾರಸ್‌ಗಳು) ಭೂಮಿಯ ಮೇಲೆ ವಿಕಾಸವಾಗುತ್ತವೆ. ಹಾಗೆಯೇ ಸಮುದ್ರದಲ್ಲಿ ಮೊಸಳೆ ವರ್ಗದ ಜೀವಿಗಳು, ಮೊಸಸಾರ್ (ಅಳಿದ ದೊಡ್ಡ ಸಮುದ್ರ ಜೀವಿಗಳು) ಮತ್ತು ಆಧುನಿಕ ಶಾರ್ಕ್‌ಗಳು ಕಾಣಿಸಿಕೊಳ್ಳುತ್ತವೆ. ಹಕ್ಕಿಗಳು ಹಾರುವ ಸರೀಸೃಪಗಳ ಬದಲಿಗೆ ನಿಧಾನವಾಗಿ ಬರುತ್ತವೆ. ಮೊನೊಟ್ರೀಮ್ (ಮೊಟ್ಟೆಯಿಡುವ ಸಸ್ತನಿಗಳು), ಹೊಟ್ಟೆಚೀಲದ ಸಸ್ತನಿಗಳು (ಕಾಂಗರೋಗಳನ್ನು ಹೋಲುವ ಪ್ರಾಣಿಗಳು) ಮತ್ತು ಮಾಸುಯುಕ್ತ ಸಸ್ತನಿಗಳು ಕಾಣಿಸಿಕೊಳ್ಳುತ್ತವೆ. ಗೊಂಡ್ವಾನದ ವಿಘಟನೆಯಾಗುತ್ತದೆ. ಉತ್ತರ ಅಮೆರಿಕದ ಲಾರಮಿಡೆ ಮತ್ತು ಸೆವಿಯರ್ ಬೆಟ್ಟಗಳ ಉಗಮ. ವಾತಾವರಣದ ಇಂಗಾಲದ ಡೈಆಕ್ಸೈಡ್ ಇಂದಿನ ಮಟ್ಟಕ್ಕೆ ಹತ್ತಿರ ಬರುತ್ತದೆ.

ಈ ಅವಧಿಯ ಆರಂಭದಲ್ಲಿ ಗೊಂಡ್ವಾನ ಇನ್ನೂ ಬಿಡಿಬಿಡಿಯಾಗಿರಲಿಲ್ಲ. ನಂತರದಲ್ಲಿ ದಕ್ಷಿಣ ಅಮೆರಿಕಾ, ಅಂಟಾರ್ಕಿಟಿಕಾ ಮತ್ತು ಆಸ್ಟ್ರೇಲಿಯ ಆಫ್ರಿಕಾದಿಂದ ದೂರ ಸರಿದವು (ಮಡಗಾಸ್ಕರ್ ಮತ್ತು ಭಾರತಗಳು ಇನ್ನೂ ಅಂಟಿಕೊಂಡೇ ಇದ್ದವು). ದಕ್ಷಿಣ ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳು ರೂಪಗೊಂಡವು. ಆಫ್ರಿಕಾದ ಉತ್ತರದಲ್ಲಿದ್ದ ಟೆಥಿಸ್ ಸಮುದ್ರ ಕಿರಿದಾಯಿತು. ವಾತಾವರಣದಲ್ಲಿದ್ದ ಕಣಗಳು ಸೂರ್ಯನ ಕಿರಣ ಕಡಿಮೆ ಮಾಡಿದ ಕಾರಣಕ್ಕೆ ದ್ಯುತಿಸಂಶ್ಲೇಷಣೆಯ ಮೇಲೆ ಆಧಾರ ಪಟ್ಟ ಜೀವಿಗಳು ಅಳಿದವು. ಇಂದು ಇದ್ದಂತೆ ಫೈಟೊಪ್ಲಾಂಕಟನ್‌ನಂತಹವು (ಸಾಗರಗಳಲ್ಲಿ, ಸಿಹಿನೀರಿನಲ್ಲಿ ಬದುಕುವ ದ್ಯುತಿಸಂಶ್ಲೇಷಣೆ ನಡೆಸುವ ಸೂಕ್ಷ್ಮಜೀವಿಗಳು) ಮತ್ತು ಭೂಸಸ್ಯಗಳು ಆಹಾರ ಸರಪಳಿಯ ಪ್ರಮುಖ ಅಂಗವಾಗಿದ್ದವು. ಹೀಗಾಗಿ ಸಸ್ಯಹಾರಿ ಪ್ರಾಣಿಗಳು ಅಳಿದವು ಎಂದು ಪುರಾವೆಗಳು ಸೂಚಿಸುತ್ತವೆ. ಪರಿಣಾಮವಾಗಿ ಟೈರನ್ನೊಸಾರಸ್ ರೆಕ್ಸ್‌ಗಳಂತಹ (ಡೈನೊಸಾರಸ್‌ನ ಒಂದು ಪ್ರಭೇದ) ಪರಭಕ್ಷಗಳು ಸಹ ಅಳಿದವು.[ಟಿಪ್ಪಣಿ ೫]

೭೨.೧ ± ೦.೨*
ಕ್ಯಾಂಪನಿಯನ್ ೮೩.೬ ± ೦.೨
ಸಂಟೊನಿಯನ್ ೮೬.೩± ೦.೫*
ಕೊನಿಯಸಿನ್ ೮೯.೮ ± ೦.೩
ಟುರೋನಿಯನ್ ೯೩.೯*
ಸೆನೊಮನಿಯನ್ ೧೦೦.೫*
ಆರಂಭಿಕ ಅಲ್ಬಿಯನ್ ~೧೧೩
ಅಪ್ಟಿಯನ್ ~೧೨೫
ಬರ್ರೆಮಿಯನ್ ~೧೨೯.೪
ಹಾಟೆರಿವಿಯನ್ ~೧೩೨.೯
ವಲಂಜಿನಿಯನ್ ~೧೩೯.೮
ಬೆರ್ರಿಯೇಸಿಯನ್ ~೧೪೫
ಜುರಾಸಿಕ್ ತಡವಾದ ಟಿತೊನಿಯನ್ ನಗ್ನಬೀಜಿ (ಜಿಮ್ನೊಸ್ಪರ್ಮ್‌ಗಳು- ವಿಶೇಷವಾಗಿ ಶಂಕುಧಾರಿ, ಈಗ ಅಳಿದ ಗಣಕ್ಕೆ ಸೇರಿದ ಬೆನ್ನೆಟ್ಟಿಟೇಲ್ ಮತ್ತು ಇಂದಿನ ಈಚಲು ಮರವನ್ನು ಹೋಲುವ ಸೈಕಾಡ್‌ಗಳು) ಸಾಮಾನ್ಯವಾಗುತ್ತವೆ. ಸುರೋಪಾಡ್, ಕಾರ್ನೊಸಾರ್ ಮತ್ತು ಸ್ಟೆಗೊಸಾರ್‌ಗಳಂತಹ ಹಲವು ರೀತಿಯ ಡೈನೋಸಾರಸ್‌ಗಳು ಹುಟ್ಟುತ್ತವೆ. ಬೈವಾಲ್ವ್, ಅಮೊನೈಟ್ ಮತ್ತು ಬೆಲೆಮ್ನಟೈಗಳು ಹೇರಳವಾಗುತ್ತವೆ. ಕಡಲಚಿಳ್ಳೆ, ಕಡಲ ಲಿಲಿ, ನಕ್ಷತ್ರಮೀನು, ಸ್ಪಂಜ್ ಮತ್ತು ಟೆರೆಬ್ರಟುಲಿಡ್ (ಶಂಕು ಜೀವಿಗಳು) ಜೀವಿಗಳ ಉಗಮ. ಗೊಂಡ್ವಾನವು ಪಾಂಜಿಯ ಮತ್ತು ಲಾರೇಶಿಯವಾಗಿ ವಿಘಟನೆ. ಉತ್ತರ ಅಮೆರಿಕಾದಲ್ಲಿ ನೆವಡನ್ ಬೆಟ್ಟಗಳ ಉಗಮ. ನ್ಯೂಜಿಲ್ಯಾಂಡನ ರಂಟಿಗಟ ಮತ್ತು ಕೇಂದ್ರ ಏಶಿಯಾದ ಕಿಮ್ಮೆರಿಯನ್ ಪರ್ವತಗಳ ಬೆಳವಣಿಗೆ ನಿಲ್ಲುತ್ತದೆ. ವಾತಾವಾರಣದ ಇಂಗಾಲದ ಡೈಆಕ್ಸೈಡ್ ಇಂದಿನ ಮಟ್ಟಕ್ಕಿಂತ ೪-೫ರಷ್ಟು ಹೆಚ್ಚು (ಇಂದಿನ ೩೩೮೫ ಪಿಪಿಎಂವಿಗೆ ಹೋಲಿಸಿದಲ್ಲಿ ೧೨೦೦-೧೫೦೦ ಪಿಪಿಎಂವಿ[೧೫][೧೬]).

ಈ ಅವಧಿಯಲ್ಲಿ ಸೂಪರ್ ಖಂಡವಾದ ಪಾಂಜಿಯ ವಿಘಟಿಸಿ ಉತ್ತರದ ಸೂಪರ್ ಖಂಡ ಲಾರೇಸಿಯಾ ಮತ್ತು ದಕ್ಷಿಣದ ಸೂಪರ್ ಖಂಡ ಗೊಂಡ್ವಾನ ರೂಪಗೊಂಡವು. ಉತ್ತರ ಅಟ್ಲಾಂಟಿಕ್ ಸಾಗರವು ಇನ್ನೂ ಕಿರಿದಾಗಿತ್ತು. ಟ್ರಾಯಾಸಿಕ್‌ನಲ್ಲಿನಂತೆ ಜುರಾಸಿಕ್‌ನಲ್ಲಿಯೂ ಎರಡೂ ದ್ರುವಗಳ ಪ್ರದೇಶದಲ್ಲಿ ಭೂಮಿಯು ಕಾಣಿಸಿಕೊಳ್ಳುವುದಿಲ್ಲ. ಈ ಅವಧಿಯಲ್ಲಿನ ಸಮುದ್ರದಲ್ಲಿದ್ದ ಪ್ರಮುಖ ಕಶೇರುಕಗಳು ಮೀನುಗಳು ಮತ್ತು ಸಮುದ್ರ ಸರೀಸೃಪಗಳು. ಈ ಸರೀಸೃಗಳು ಮೀನು ಹಲ್ಲಿ ಎಂದು ಕರೆಯಲಾದ ಇಂದು ಅಳಿದ ಇಕ್ತಯೋಸಾರ್‌ಗಳನ್ನು ಮತ್ತು ಹಲವು ಸಮುದ್ರ ಮೊಸಳೆಗಳ ಕುಟುಂಬಗಳನ್ನೂ ಒಳಗೊಂಡಿವೆ. ಇಂದಿನ ಹಕ್ಕಿಗಳು ಮತ್ತು ಸರೀಸೃಪಗಳು ಮತ್ತು ಅಳಿದ ಎಲ್ಲಾ ಡೈನಸಾರ್‌ಗಳು, ಅಳಿದ ಮೊಸಳೆಯ ಸಂಬಂಧಿಗಳು ಮತ್ತು ಅಳಿದ ಹಾರುವ ಹಲ್ಲಿಗಳೆಂದು ಕರೆಯಲಾದ ಪೆಟರೊಸಾರ್‌ಗಳನ್ನು ಒಳಗೊಂಡ ಆರ್ಕೊಸಾರ್‌ಗಳು ಪ್ರಭಲವಾದವು. ಜುರಾಸಿಕ್ ಅವಧಿಯು ದೊಡ್ಡ ಡೈನೊಸಾರಸ್‌ಗಳಾದ ಸುರೋಪಾಡ್‌ಗಳ ಸುವರ್ಣ ಯುಗ. [ಟಿಪ್ಪಣಿ ೬]

೧೫೨.೧ ± ೦.೯
ಕಿಮ್ಮೆರಿಡ್ಗಿಯನ್ ೧೫೭.೩ ± ೧.೦
ಆಕ್ಸ್‌ಫೋರ್ಡಿಯನ್ ೧೬೩.೫ ± ೧.೦
ಮಧ್ಯ ಕಾಲ್‌ವೊನಿಯನ್ ೧೬೬.೧ ± ೧.೨
ಬತೊನಿಯನ್ ೧೬೮.೩ ± ೧.೩*
ಬಜೊಸಿಯನ್ ೧೭೦.೩ ± ೧.೪*
ಆಲೆನಿಯನ್ ೧೭೪.೧ ± ೧.೦*
ಆರಂಭಿಕ ಟೋರ್ಸಿಯನ್ ೧೮೨.೭ ± ೦.೭*
ಪ್ಲಿಯನ್ಸ್‌ಬಚಿಯನ್ ೧೯೦.೮ ± ೧.೦*
ಸಿನೆಮುರಿಯನ್ ೧೯೯.೩ ± ೦.೩*
ಹೆಟ್ಟನ್‌ಜಿಯನ್ ೨೦೧.೩ ± ೦.೨*
ಟ್ರಯಾಸಿಕ್ ನಂತರದ ರಾಯೆಟಿಯನ್ ಆರ್ಕೊಸಾರಸ್‌ಗಳು ಭೂಮಿಯ ಮೇಲೆ ಪ್ರಭಲವಾದವು, ಹಾಗೆಯೇ ಸಾಗರಗಳಲ್ಲಿ ಇಕ್ಥೈಸಾರಸ್ ಮತ್ತು ನೊಥೊಸಾರಸ್‌ಗಳು ಹಾಗೂ ಗಾಳಿಯಲ್ಲಿ ಪೆಟರೊಸಾರ್‌ಗಳು ಪ್ರಭಲವಾದವು. ಕೊಕಡಿಲಿಯ (ಮೊಸಳೆ ಇರುವ) ಗಣ ಸೈನೊಡಾಂಟ್‌ಗಳು (ಸಸ್ತನಿಗಳ ಮೂಲವಾದ ಸರೀಸೃಪಗಳು) ಹೆಚ್ಚು ಸಣ್ಣವು ಮತ್ತು ಸಸ್ತನಿಗಳನ್ನು ಹೆಚ್ಚು ಹೋಲತೊಡಗಿದವು. ಡಿಕ್ರೊಯಿಡಿಯಮ್ (ಫರ್ನ ವರ್ಗದ ಆದರೆ ವಿಭಜಿತ ಎಲೆಗಳಿರುವ ಸಸ್ಯ) ಸಸ್ಯಗಳು ಭೂಮಿಯ ಮೇಲೆ ಸಾಮಾನ್ಯವಾದವು. ಹಲವು ನೀರಿನಲ್ಲಿನ ದೊಡ್ಡ ಉಭಯ ಜೀವಿಗಳು ಬಹಳ ಸಾಮಾನ್ಯವಾಗುತ್ತವೆ. ಆಧುನಿಕ ಕೋರಲ್‌ಗಳು ಮತ್ತು ಟೆಲೆಯೋಸ್ಟ್ ಮೀನು ಹಾಗೆಯೇ ಅದುನಿಕ ಕೀಣಗಳ ಪೂರ್ವಜರು ಕಾಣಿಸಿಕೊಳ್ಳುತ್ತವೆ. ದಕ್ಷಿಣ ಅಮೆರಿಕದ ಆಂಡಿಯನ್ ಮತ್ತು ಏಶಿಯಾದ ಕಿಮ್ಮೆರಿಯನ್ ಬೆಟ್ಟಗಳ ಉಗಮ. ನ್ಯೂಜಿಲ್ಯಾಂಡ್‌ನಲ್ಲಿ ರಂಗಿತಟ ಬೆಟ್ಟಗಳ ಉಗಮ. ಆಸ್ಟ್ರೇಲಿಯದ ಹಂಟರ್-ಬೊವೆನ್ ಬೆಟ್ಟಗಳ ಉಗಮ.

ಪರ್ಮಿಯನ್ ಮತ್ತು ಟ್ರಯಾಸಿಕ್ ಅಳಿವು ಈ ಎರಡೂ ಅವಧಿಗಳನ್ನು ಬೇರ್ಪಡಿಸುತ್ತದೆ. ಇದೊಂದು ಎಲ್ಲಾ ಅಳಿವಿನ ಘಟನೆಗಳಲ್ಲಿಯೂ ತೀರ ತೀವ್ರವಾದದು. ಇದರಲ್ಲಿ ಸುಮಾರು ಶೇ ೯೬ರಷ್ಟು ಎಲ್ಲಾ ಸಾಗರ ಪ್ರಭೇದಗಳು ಮತ್ತು ಶೇ ೭೦ರಷ್ಟು ಭೂವಾಸಿ ಕಶೇರು ಪ್ರಭೇದಗಳು ಅಳಿದವು.[ಟಿಪ್ಪಣಿ ೭] ಈ ಅವಧಿಯಲ್ಲಿ ಎಲ್ಲಾ ಭೂಭಾಗಗಳು ಒಂದಾಗಿ ಬಹುತೇಕ ಸಮಭಾಜಕ ವೃತ್ತದಲ್ಲಿ ಕೇಂದ್ರೀಕೃತವಾಗಿತ್ತು. ಈ ಬೃಹತ್ ಸೂಪರ್ ಖಂಡವನ್ನು ಪಾಂಜಿಯ ಎಂದು ಕರೆಯಲಾಗಿದೆ. [ಟಿಪ್ಪಣಿ ೮]

~೨೦೮.೫
ನೋರಿಯನ್ ~೨೨೭
ಕಾರ್ನಿಯನ್ ~೨೩೭*
ಮಧ್ಯ ಲಡಿನಿಯನ್ ~೨೪೨*
ಅನಿಸಿಯನ್ ೨೪೭.೨
ಆರಂಭಿಕ ಒಲೆನೆಕಿಯನ್ ೨೫೧.೨
ಇಂದುವಾನ್ ೨೫೨.೧೭ ± ೦.೦೬*
ಪಾಲಿಯೊಜೋಯಿಕ್ ಪರ್ಮಿಯನ್ ಲೊಪಿಂಜಿಯನ್ ಚಾಂಗ್‌ಸಿಂಗೀಯನ್ ಭೂಭಾಗಗಳು ಒಂದಾಗಿ ಸೂಪರ್‌ಖಂಡ ಪ್ಯಾಂಜಿಯ ಆಗುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಉತ್ತರ ಅಮೆರಿಕದ ಪೂರ್ವದಲ್ಲಿನ ಅಪ್ಪಲಚಿಯನ್ಸ್ ಬೆಟ್ಟಗಳು ಉಗಮವಾಗುತ್ತವೆ. ಪೆರ್ಮೊ ಕಾರ್ಬೊನಿಫೆರಸ್ ಹಿಮಯುಗದ ಅಂತ್ಯ. ಸೈನಪ್ಸಿಡ್ ಸರೀಸೃಪಗಳ ಹೆಚ್ಚಳ ಮತ್ತು ಪ್ಯಾರರೆಪ್ಟೈಲ್ ಮತ್ತು ಟೆಮ್ನೊಸ್ಪಾಂಡಿಲ್ ಉಭಯವಾಸಿಗಳು ಸಾಮಾನ್ಯವಾಗಿದ್ದವು.ಕಲ್ಲಿದ್ದಲು ಯುಗದ ಸಸ್ಯಗಳಿಗೆ ಬದಲಾಗಿ ಶಂಕುಧಾರಿಗಳು (ಮೊದಲ ನಿಜವಾದ ಬೀಜಗಳ ಸಸ್ಯಗಳು) ಮತ್ತು ಮೊದಲ ನಿಜವಾದ ಪಾಚಿ. ಜೀರುಂಡೆಗಳು ಮತ್ತು ರೆಕ್ಕೆಗಳಿರುವ ಕೀಟಗಳು ವಿಕಾಸವಾದವು. ಸಮುದ್ರ ಜೀವಿಗಳು ಬಿಸುಪಿನ ಹೆಚ್ಚಿಗೆ ಆಳವಿರದ ನೀರನ ಮಟ್ಟದಲ್ಲಿರುವ ಬಂಡೆಗಳು, ಉಸುಕಿನ ಪ್ರದೇಶಗಳಲ್ಲಿ ವಿಫುಲವಾದವು. ಪ್ರಾಡಕ್ಟಿಡ್, ಬೈವಾಲ್ವ್, ಫೋರಾಮ್‌ ಮತ್ತು ಅಮ್ಮೊನಾಯ್ಡ್‌ಗಳ ಹೆಚ್ಚಳವಾಯಿತು. ಪರ್ಮಿಯನ್-ಟ್ರಯಾಸಿಕ್ ನಾಶವು ೨೫೧ ದವಹಿಂ ಆಯಿತು. ಈ ಘಟನೆಯಲ್ಲಿ ಭೂಮಿಯ ಮೇಲಿರುವ ಶೇ ೯೫ರಷ್ಟು ಜೀವಿಗಳು ನಾಶವಾದವು. ಈ ನಾಶದಲ್ಲಿ ಟ್ರೈಲೊಬೈಟ್‌, ಗ್ರಾಪ್ಟೊಲೈಟ್ ಮತ್ತು ಬ್ಯಾಸ್ಟಾಯ್ಡ್‌ಗಳು ಸೇರಿದ್ದವು. ಉತ್ತರ ಅಮೆರಿಕದ ಕ್ವಾಚಿಟ ಮತ್ತು ಇನ್ನುಶಿಯನ್ ಬೆಟ್ಟಗಳ ಉಗಮವಾಯಿತು. ಯುರೋಪ್/ಏಶಿಯಾದಲ್ಲಿನ ಯುರಾಲಿಯನ್ ಬೆಟ್ಟಗಳ ಉಗಮವು ಕೊನೆಗೊಂಡಿತು. ಏಶಿಯಾದ ಆಲ್ಟಯಿಡ್ ಬೆಟ್ಟಗಳ ಉಗಮವಾಯಿತು. ಆಸ್ಟ್ರೇಲಿಯಾದ ಹಂಟರ್ ಬೊವೆನ್ ಬೆಟ್ಟಗಳ ಉಗಮ ಆರಂಭವಾಗಿ (೨೬೦-೨೨೫ ದವಹಿಂ) ಮ್ಯಾಕಡೊನೆಲ್ ಶ್ರೇಣಿ ರೂಪತಳೆಯಿತು.

ಈ ಅವಧಿಯಲ್ಲಿ ಪಾಂಜಿಯದ ಒಳಗೆ ದೊಡ್ಡದೊಂದು ಮರುಭೂಮಿ ರೂಪಗೊಂಡಿತು. ಜಿರಲೆಯಂತಹ ಕೀಟಗಳು ಸಾರ್ವತ್ರಿಕವಾದವು. ಕೊಡತಿ ಹುಳುಗಳ (ಡ್ರಾಗನ್‌ಪ್ಲೈ) ಆರಂಭಿಕ ರೂಪಗಳು ಕಾಣಿಸಿಕೊಂಡವು. ಕೊಡತಿ ಹುಳು ಗಣವಾದ ಓಡನಾಟದ ವಂಶದ ಕೀಟಗಳು ಪ್ರಮುಖ ಪರಭಕ್ಷಕ ಕೀಟಗಳಾಗಿದ್ದವು.[ಟಿಪ್ಪಣಿ ೯]

೨೫೪.೧೪ ± ೦.೦೭*
ವುಚಿಯಪಿಂಜಿಯನ್ ೨೫೯.೮ ± ೦.೪*
ಗೌದಲಿಪಿಯನ್ ಕ್ಯಾಪಿಟಾನಿಯನ್ ೨೬೫.೧ ± ೦.೦೪*
ವರ್ಡಿಯನ್/ಕಜನಿಯನ್ ೨೬೮.೮ ± ೦.೫*
ರೊಅಡಿಯನ್/ಉಪಿಮಿಯನ್ ೨೭೨.೩ ± ೦.೫*
ಸಿಸ್ಯುರಾಲಿಯನ್ ಕುಂಗುರಿಯನ್ ೨೮೩.೫ ± ೦.೬
ಅರ್ಟಿನ್‌ಸ್ಕಿಯನ್ ೨೯೦.೧ ± ೦.೨೬
ಸಕ್ಮಾರಿಯನ್ ೨೯೫ ± ೦.೧೮
ಅಸ್ಸೆಲಿಯನ್ ೨೯೮.೯ ± ೦.೧೫*
ಕಾರ್ಬೊನಿಫೆರಸ್[೧೮] ಪೆನ್ಸಿಲ್ವಾನಿಯನ್ ಗಝೆಲಿಯನ್ ರೆಕ್ಕೆಗಳಿರುವ ಕೀಟಗಳ ಒಮ್ಮಿದೊಮ್ಮೆಲೆ ಹರಡಿದವು. ಕೆಲವು (ವಿಶೇಷವಾಗಿ ಪ್ರೋಟೋಡೊನಟ ಮತ್ತು ಪಾಲಿಯೊಡಿಕ್ಟಿಯೊಪ್ಟೆರ) ತೀರ ದೊಡ್ಡದಾಗಿದ್ದವು. ಉಭಯವಾಸಿಗಳು ಸಾಮಾನ್ಯವಾದವು ಮತ್ತು ವೈವಿಧ್ಯತೆ ಮೈಗೂಡಿಸಿಕೊಂಡವು. ಮೊದಲ ಸರೀಸೃಪಗಳು ಮತ್ತು ಕಲ್ಲಿದ್ದಲು ಅರಣ್ಯ (ಸ್ಕೇಲ್ ಮರಗಳು, ಪರ್ನ್, ಕ್ಲಬ್ ಮರಗಳು ಮುಂತಾದವು) ರೂಪಗೊಂಡವು, ವಾತಾವರಣದಲ್ಲಿ ಅತಿಹೆಚ್ಚಿನ ಮಟ್ಟದ ಆಮ್ಲಜನಕದ ಇರುವಿಕೆ. ಗೊನಿಯಾಟೈಟ್, ಬ್ರಾಚಿಯೊಪಾಡ್, ಬ್ರೈಜೊಯ, ಬೈವಾಲ್ವ್ ಮತ್ತು ಕೊರಲ್‌ಗಳು ಸಮುದ್ರ ಮತ್ತು ಸಾಗರಗಳಲ್ಲಿ ವಿಫುಲವಾದವು. ಟೆಸ್ಟೇಟ್ ಫೊರಾಮ್‌ಗಳ ಹೆಚ್ಚಳವಾಯಿತು. ಯುರೋಪ್ ಮತ್ತು ಏಶಿಯಾದಲ್ಲಿ ಉರಾಲಿಯನ್ ಬೆಟ್ಟಗಳ ಉಗಮ. ಮಧ್ಯ ಮತ್ತು ತಡವಾದ ಮಿಸ್ಸಿಸಿಪ್ಪಿಯನ್ ಕಾಲಮಾನದಲ್ಲಿ ವರಿಸ್ಕಾನ್ ಬೆಟ್ಟಗಳ ಉಗಮ. ೩೦೩.೭ ± ೦.೧
ಕಾಸಿಮೊವಿಯನ್ ೩೦೭ ± ೦.೧
ಮಾಸ್ಕೊವಿಯನ್ ೩೧೫.೨ ± ೦.೨
ಬಾಶ್ಕಿರಿಯನ್ ೩೨೩.೨ ± ೦.೪*
ಮಿಸ್ಸಿಸ್ಸಿಪಿಯನ್ ಸೆರ್ಪುಖೋವಿಯನ್ ದೊಡ್ಡ ಆದಿಮ ಮರಗಳು, ಮೊದಲ ಭೂವಾಸಿ ಕಶೇರುಕಗಳು ಮತ್ತು ಉಭಯವಾಸಿ ಸಮುದ್ರ-ಚೇಳುಗಳು ಕಲ್ಲಿದಲಾಗುವ ಕರಾವಳಿಯ ಚೌಗಿನಲ್ಲಿ ಬದುಕುತ್ತವೆ. ರಿಝೊಡಾಂಟ್‌ಗಳು ಸಿಹಿನೀರಿನ ದೊಡ್ಡ ಪರಭಕ್ಷಕಗಳಾಗಿ, ವಿಫುಲವಾಗುತ್ತವೆ. ಸಾಗರಗಳಲ್ಲಿ ಆರಂಭಿಕ ಶಾರ್ಕ್‌ಗಳು ಸಾಮಾನ್ಯವಾಗುತ್ತವೆ ಮತ್ತು ವೈವಿಧ್ಯ ಮಯವಾಗುತ್ತವೆ. ಎಕಿನೊಡರ್ಮ್‌ಗಳು ವಿಫುಲವಾಗುತ್ತೆ. ಕೋರಲ್, ಬ್ರಯೊಜೊಅ, ಗೊನಿಯಟೈಟ್ ಮತ್ತು ಬ್ರಾಚಿಯೊಪಾಡ್‌ಗಳು ಬಹಳ ಸಾಮಾನ್ಯವಾಗುತ್ತವೆ ಆದರೆ ಟ್ರೈಲೊಬೈಟ್ ಮತ್ತು ನಾಟಿಲಾಯ್ಡ್‌ಗಳು ಕಡಿಮೆಯಾಗುತ್ತವೆ. ಪೂರ್ವ ಗೊಂಡ್ವಾನದಲ್ಲಿ ಹಿಮಯುಗ. ನ್ಯೂಜಿಲ್ಯಾಂಡ್‌ನ ಟುಹುವ ಬೆಟ್ಟಗಳ ಉಗಮ ನಿಲ್ಲುತ್ತದೆ. ೩೩೦.೯ ± ೦.೨
ವಿಸೀಯನ್ ೩೪೬.೭ ± ೦.೪*
ಟೂರ್ನಯಿಶಿಯನ್ ೩೫೮.೯ ± ೦.೪*
ದೆವೋನಿಯನ್ ತಡವಾದ ಫಮೆನ್ನಿಯನ್ ಮೊದಲ ಕ್ಲಬ್‌ಪಾಚಿ, ಕುದುರೆಬಾಲ ಮತ್ತು ಪರ್ನ್‌ಗಳು ಕಾಣಿಸಿಕೊಳ್ಳುತ್ತವೆ. ಹಾಗೆಯೇ ಮೊದಲ ಬೀಜ ಇರುವ ಸಸ್ಯಗಳು, ಮೊದಲ ಮರಗಳು ಮತ್ತು ಮೊದಲ ಕೀಟಗಳು (ರೆಕ್ಕೆಯಿರದ) ಕಾಣಿಸಿಕೊಳ್ಳುತ್ತವೆ. ಸ್ಟ್ರೊಫೊಮೆನಿಡ್, ಅಟ್ರೈಪಿಡ್ ಬ್ರಾಚಿಪೋಡ್, ರುಗೋಸ್, ಟ್ಯಾಬುಲೇಟ್ ಕೋರಲ್‌ಗಳು ಮತ್ತು ಕ್ರಿನೋಯ್ಡ್‌ಗಳು ಸಾಗರದಲ್ಲಿ ವಿಫುಲವಾಗುತ್ತವೆ. ಗೊನಿಯಟೈಟ್ ಅಮ್ಮೊನಾಯ್ಡ್‌ಗಳು ವಿಪುಲವಾಗುತ್ತವೆ ಮತ್ತು ಕೊಲಿಯೊಡ್‌ಗಳ ಉಗಮವಾಗುತ್ತದೆ. ಟ್ರೈಲೊಬೈಟ್‌ಗಳು ಮತ್ತು ಆರಮೌರ್ಡ್ ಅಗ್ನಾಥ್‌ಗಳು ಕಡಿಮೆಯುಗುತ್ತವೆ. ದವಡೆಗಳಿರುವ ಮೀನುಗಳು (ಪ್ಲಾಕೊಡರ್ಮ್, ಲೋಬ್-ಫಿನ್, ರೇ-ಫಿನ್ ಮೀನುಗಳು ಮತ್ತು ಆರಂಭಿಕ ಶಾರ್ಕಗಳು) ಸಮುದ್ರಗಳನ್ನು ಆಳುತ್ತವೆ.ಮೊದಲ ಉಭಯವಾಸಿಗಳು ಇನ್ನೂ ನೀರಿನ ಜೀವಿಗಳಾಗಿಯೇ ಇರುತ್ತವೆ. ಯುರಮೆರಿಕ ಸೂಪರ್‌ಖಂಡ ರೂಪಗೊಳ್ಳುತ್ತದೆ. ಉತ್ತರ ಆಫ್ರಿಕದಲ್ಲಿನ ಯಾಂಟಿ ಅಟ್ಲಾಸ್ ಪರ್ವತಶ್ರೇಣಿಯ ಅಕೆಡಿಯನ್ ಬೆಟ್ಟಗಳ ಉಗಮ ಆರಂಭವಾಗುತ್ತದೆ. ಉತ್ತರ ಅಮೆರಿಕದ ಅಪ್ಪಲಚಿಯನ್ ಬೆಟ್ಟಗಳು ಹಾಗೆಯೇ ಆಂಟಲರ್ (ಉತ್ತರ ಅಮೆರಿಕದ ನೇವಡದಲ್ಲಿನ ಬೆಟ್ಟಗಳು), ವಾರ್ಸಿಕನ್ (ಉತ್ತರ ಅಮೆರಿಕ ಮತ್ತು ಯುರೋಪುಗಳಲ್ಲಿ ಈ ಬೆಟ್ಟದ ಶ್ರೇಣಿ ಹರಡಿದೆ) ಮತ್ತು ನ್ಯೂಜಿಲ್ಯಾಂಡಿನ ಟಾಹುವ ಬೆಟ್ಟಗಳ ಉಗಮ. ೩೭೨.೨ ± ೧.೬*
ಫ್ರಾಸ್ನಿಯನ್ ೩೮೨.೭ ± ೧.೬*
ಮಧ್ಯ ಗಿವೆಟಿಯನ್ ೩೮೭.೭ ± ೦.೮*
ಇಫೆಲಿಯನ್ ೩೯೩.೩ ± ೧.೨*
ಆರಂಭಿಕ ಇಮ್ಸಿಯನ್ ೪೦೭.೬ ± ೨.೬*
ಪ್ರಾಗಿಯನ್ ೪೧೦.೮ ± ೨.೮*
ಲೊಚ್ಕೊವಿಯನ್ ೪೧೯.೨ ± ೩.೨*
ಸಿಲುರಿಯನ್ ಪ್ರಿಡೊಲಿ ಮೊದಲ ನಾಳಸಸ್ಯಗಳು (ರೈನಿಯೊಫೈಟ್‌ ಮತ್ತು ಅದರ ಸಂಬಂಧಿಗಳು), ಭೂಮಿಯ ಮೇಲೆ ಮೊದಲ ಜರಿ ಮತ್ತು ಆರ್ಥ್ರೊಪ್ಲಾರಿಡ್‌ಗಳು. ಮೊದಲ ದವಡೆಯುಳ್ಳ ಮೀನುಗಳು ಮತ್ತು ರಕ್ಷಾಕವಚದ ದವಡೆರಹಿತ ಮೀನುಗಳು ಸಮುದ್ರಗಳಲ್ಲಿ ಹೆಚ್ಚಾಗುತ್ತವೆ. ಸಮುದ್ರ-ಚೇಳುಗಳು ದೊಡ್ಡ ಗಾತ್ರ ಪಡೆಯುತ್ತವೆ. ಟ್ಯಾಬುಲೇಟ್ ಮತ್ತು ರುಗೋಸ್ ಕೋರಲ್‌ಗಳು, ಬ್ರಾಚಿಪಾಡ್‌ಗಳು ಮತ್ತು ಕ್ರೋನಾಡ್‌ಗಳು ವಿಫುಲವಾಗುತ್ತವೆ. ಟ್ರೈಬೊಲೈಟ್‌ಗಳು ಮತ್ತು ಮೃದ್ವಂಗಿಗಳು ವೈವಿಧ್ಯತೆ ಪಡೆಯುತ್ತವೆ. ಗ್ರಾಪ್ಟೊಲೈಟ್‌ಗಳು ವಿವಧತೆ ಮೈಗೂಡಿಸಿಕೊಳ್ಳುವುದಿಲ್ಲ. ಇಂಗ್ಲೆಂಡ್, ಐರ್ಲ್ಯಾಂಡ್, ವೇಲ್ಸ್, ಸ್ಕಾಟ್‌ಲ್ಯಾಂಡ್ ಮತ್ತು ಸ್ಯಾಂಡಿನ್‌ವಿಯನ್ ಪರ್ವತಗಳಲ್ಲಿನ ಕಾಲೆಡೊನಿಯನ್ ಬೆಟ್ಟಗಳ ಉಗಮ. ಅಕಾಡಿನ್ ಬೆಟ್ಟಗಳ ಉಗಮ ದೆವೊನಿಯನ್ ಕಾಲಮಾನದಿಂದ ಮುಂದುವರಿಕೆ. ಟಾಕೊನಿಕ್ ಬೆಟ್ಟಗಳ ಉಗಮ ನಿಲ್ಲುವಿಕೆ. ಆಸ್ಟ್ರೇಲಿಯ ಖಂಡದ ಮೇಲಿನ ಲಚ್ಲನ್ ಬೆಟ್ಟಗಳ ಉಗಮ ನಿಲ್ಲುತ್ತದೆ.

ಸೂಪರ್ ಖಂಡ ಗೊಂಡ್ವಾನ್ ಸಮಭಾಜಕ ವೃತ್ತ ಮತ್ತು ಹೆಚ್ಚಿನ ದಕ್ಷಿಣ ಗೋಲವನ್ನು ಆಕ್ರಮಿಸಿದ್ದರೆ ಗೋಲದ ಉತ್ತರ ಭಾಗದ ಬಹುಭಾಗವು ಸಾಗರಗಳಿಂದ ಆವೃತ್ತವಾಗಿತ್ತು. ಈ ಅವಧಿಯಲ್ಲಿ ಗೊಂಡ್ವಾನ ನಿಧಾನವಾಗಿ ದಕ್ಷಿಣ ಗೋಲದ ಮೇಲ್‌ ಚಲನೆ ಜಾರಿಯಲ್ಲಿತ್ತು. ಹಿಮ ಕ್ಯಾಪ್‌ಗಳ ಕರಗಿದ ಮತ್ತು ಹಿಮನದಿಗಳ ಕಾರಣಕ್ಕೆ ಸಮುದ್ರ ಮಟ್ಟದ ಹೆಚ್ಚಳವಾಯಿತು. ಈ ಅವಧಿಯ ಕೊನೆಗೆ ಮತ್ತೆ ಸಮುದ್ರ ಮಟ್ಟ ಇಳಿಯಿತು. ಓರ್ಡೊವಿಸಿಯನ್‌ನಂತೆ ಅಲ್ಲದೆ ಸಿಲುರಿಯನ್ ಸಾಕ್ಷೇಪಿಕವಾಗಿ ಸ್ಥಿರ ಮತ್ತು ಬಿಸುಪು ತಾಪಮಾನವಿತ್ತು. ಅವಧಿಯ ಕೊನೆಗೆ ಸಮುದ್ರ ಮಟ್ಟದ ಇಳಿಕೆಯೊಂದಿಗೆ ದೊಡ್ಡ ಮಟ್ಟದ ಜೀವಿಗಳ ಅಳಿವು ಸಹ ನಡೆಯಿತು. ಈ ಅವಧಿಯಲ್ಲಿ ಮೊದಲ ಸಲ ದೊಡ್ಡ ಮಟ್ಟದಲ್ಲಿ ಭೂವಾಸಿ ಜೀವಿಗಳು ಕಾಣಿಸಿಕೊಳ್ಳುತ್ತವೆ ಎಂದು ಪಳಿಯುಳಿಕೆಗಳ ಪುರಾವೆಗಳು ಹೇಳುತ್ತವೆ.[ಟಿಪ್ಪಣಿ ೧೦]

೪೨೩ ± ೨.೩*
ಲುಡ್ಲೊ/ಕೇಯುಗನ್ ಲುಡ್ಫೋರ್ಡಿಯನ್ ೪೨೫.೬ ± ೦.೯*
ಗೋರ್‌ಸ್ಟಿಯನ್ ೪೨೭.೪ ± ೦.೫*
ವೆನ್ಲಾಕ್ ಹೊಮೆರಿಯನ್/
ಲಾಕ್ಪೊರ್ಟಿಯನ್
೪೩೦.೫ ± ೦.೭*
ಶೇನ್‌ವುಡಿಯನ್/
ಟೊನವಾನ್ಡನ್
೪೩೩.೪ ± ೦.೮*
ಲ್ಯಾಂಡೊವೆರಿ/
ಅಲೆಕ್ಸಾಂಡ್ರಿಯನ್
ಟೆಲಿಚಿಯನ್/
ಒನ್ಟಾರಿಯನ್
೪೩೮.೫ ± ೧.೧*
ಏರೊನಿಯನ್ ೪೪೦.೮ ± ೧.೨*
ರುಡ್ಢನಿಯನ್ ೪೪೩.೮ ± ೧.೫*
ಒರ್ಡೊವಿಸಿಯನ್ ತಡವಾದ ಹಿರ್ನಾನ್ಟಿಯನ್ ಅಕಶೇರುಕಗಳು ಹಲವು ರೀತಿಯ ಹೊಸ ರೂಪ ಪಡೆವ ಮೂಲಕ ವೈವಿದ್ಯವಾಗುತ್ತವೆ. ಆರಂಭಿಕ ಕೋರಲ್‌ಗಳು, ಬ್ರಾಚಿಪಾಡ್, ಬೈವಾಲ್ವ್, ನಾಟಿಲಾಯ್ಡ್, ಟ್ರೈಬೊಲೈಟ್, ಆಸ್ಟ್ರಕಾಡ್‌, ಬ್ರೈಜೋಅ, ಹಲವು ರೀತಿ ಎಕಿನೊಡರ್ಮ, ಕವಲೊಡೆದ ಗ್ರಾಪ್ಟೊಲೈಟ್ ಸಾಮಾನ್ಯವಾಗುತ್ತವೆ. ಕೊನೊಡೊನ್ಟ್‌ಗಳು (ಆರಂಭಿಕ ಪ್ಲಾಂಕಟೊನಿಕ್ ಕಶೇರುಕಗಳು) ಕಾಣಿಸಿಕೊಳ್ಳುತ್ತವೆ. ಮೊದಲ ಹಸಿರು ಸಸ್ಯಗಳು ಮತ್ತು ಶಿಲೀಂಧ್ರ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತವೆ. ಕಾಲಮಾನದ ಕೊನೆಗೆ ಹಿಮಯುಗ ಕೊನೆಗೊಳ್ಳುತ್ತದೆ.

ಈ ಅವಧಿಯಲ್ಲಿ ಗೊಂಡ್ವಾನ ಸೂಪರ್ ಖಂಡವು ಆರಂಭದಲ್ಲಿ ಸಮಭಾಜಕ ವೃತ್ತದಲ್ಲಿದುದು ದಕ್ಷಿಣ ದ್ರವದತ್ತ ಚಲಿಸಿತು. ಒರ್ಡೊವಿಸಿಯನ್‌ನ ಉಲ್ಕಾಪಾತ ಘಟನೆ ಪ್ರಮುಖ ಘಟನೆಯಾಗಿದ್ದು ದೊಡ್ಜ ಮಟ್ಟದ ಜೀವಿಗಳ ಅಳಿವಿಗೆ ಕಾರಣಾವಾಗುತ್ತದೆ. ಇದು ೪೭೦ ದವಹಿಂ ಘಟಿಸಿತು. ಪಾಲಿಯೊಜೋಯಿಕ್ ಯುಗದಲ್ಲಿ ಈ ಅವಧಿಯು ಅತಿಹೆಚ್ಚು ಸಮುದ್ರ ಮಟ್ಟವನ್ನು ಹೊಂದಿತ್ತು. ಆರಂಭಿಕ ಓರ್ಡೊವಿಸಿಯನ್‌ನಲ್ಲಿ ಸಮುದ್ರ ಮಟ್ಟ ಸತತವಾಗಿ ಹೆಚ್ಚಾಯಿತು. ಈ ಅವಧಿಯ ಆರಂಭದಲ್ಲಿ ಇಂಗಾಲದ ಡೈಆಕ್ಸೈಡ್ ಹೆಚ್ಚಿದ್ದ ಕಾರಣಕ್ಕೆ ತಾಪಮಾನ ಹೆಚ್ಚು ಇತ್ತು ಇದು ತೀವ್ರ ಹಸಿರುಮನೆ ಪರಿಣಾಮಕ್ಕೆ ದಾರಿಮಾಡಿತು. ಸಾಗರದ ತಾಪಮಾನ ೪೫ۜ° ಸೆಂಟಿಗ್ರೇಡ್ ತಲುಪಿ ಬಹುಕೋಶ ಜೀವಿಗಳ ವೈವಿದ್ಯವಾಗುವುದಕ್ಕೆ ಅಡ್ಡಿಯಾಯಿತು. ನಂತರದಲ್ಲಿ ವಾತಾವರಣ ತಂಪಾಗಿ ಇಂದಿನ ಸಮಬಾಜಕ ವೃತ್ತದ ಹತ್ತಿರದ ನೀರಿನ ತಾಪಮಾನ ಪಡೆಯಿತು. ಕ್ಯಾಂಬ್ರಿಯನ್ ಸ್ಪೋಟದಷ್ಟು ಪ್ರಖ್ಯಾತವಲ್ಲದಿದ್ದರೂ ಓರ್ಡಿವಿಸಿಯನ್ ಜೀವಿಗಳ ವೈವಿದ್ಯವಾಗುವಿಕೆ ಮತ್ತು ಹರಡುವಿಕೆ ದೊಡ್ಡ ಮಟ್ಟದಲ್ಲಿ ಆಯಿತು. ಸಾಗರದ ಪ್ರಾಣಿಗಳು ನಾಲ್ಕು ಪಟ್ಟು ಹೆಚ್ಚಾದವು ಮತ್ತು ಈ ಅವಧಿಯಲ್ಲಿನ ವಿಕಾಸವಾದ ಸಾಗರ ಪ್ರಾಣಿಗಳು ಫನರೊಜೋಯಿಕ್ ಕಲ್ಪದ ಸಾಗರ ಪ್ರಾಣಿಗಳ ಶೇ ೧೨ರಷ್ಟು.[ಟಿಪ್ಪಣಿ ೧೧]

೪೪೫.೨ ± ೧.೪*
ಕಟಿಯನ್ ೪೫೩ ± ೦.೭*
ಸ್ಯಾಂಡ್ಬಿಯನ್ ೪೫೮.೪ ± ೦.೯*
ಮಧ್ಯ ಡಾರ್ರಿವಿಲಿಯನ್ ೪೬೭.೩ ± ೧.೧*
ಡಾಪಿನ್ಗಿಯನ್ ೪೭೦ ± ೧.೪*
ಆರಂಭಿಕ ಫ್ಲೊಯನ್
(ಮುಂಚಿನ ಅರೆನಿಗ್)
೪೭೭.೭ ± ೧.೪*
ಟ್ರೆಮಡೊಸಿಯನ್ ೪೮೫.೪ ± ೧.೯*
ಕ್ಯಾಂಬ್ರಿಯನ್ ಫುರೊನ್ಗಿಯನ್ ಹಂತ ೧೦ ಕ್ಯಾಂಬ್ರಿಯನ್ ಸ್ಫೋಟದ ಕಾಲಮಾನದಲ್ಲಿ ದೊಡ್ಡ ಮಟ್ಟದಲ್ಲಿ ಜೀವಿಗಳ ವೈವಿಧ್ಯತೆಯ ಹೆಚ್ಚಳ. ಈ ಬಗೆಗೆ ಹಲವು ಪಳಿಯುಳಿಕೆಗಳು ಸೂಚಿಸುತ್ತವೆ. ತೀರ ಆಧುನಿಕ ‌ವಂಶದ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಮೊದಲ ಕಾರ್ಡೇಟ್‌ಗಳು ಕಾಣಸಿಗುತ್ತವೆ. ಜೊತೆಗೆ ಹಲವು ಅಳಿದ ಜೀವಿಗಳು ಸಹ. ರೀಫ್ ರಚಿಸುವ ಆರ್ಕಿಯೊಸೈಥ ವಿಪುಲವಾಗುತ್ತವೆ ಮತ್ತು ನಂತರದಲ್ಲಿ ಕಾಣೆಯಾಗುತ್ತವೆ. ಟೈಬೊಲೈಟ್‌, ಪ್ರಿಯಪುಲಿಡ್ ಹುಳುಗಳು, ಮೃದ್ವಂಗಿಗಳು, ಬ್ರಾಚಿಪೊಡ್ ಮತ್ತು ಇತರ ಹಲವು ಪ್ರಾಣಿಗಳು ಕಾಣಬರುತ್ತವೆ. ಅನಮಲೊಕಾರಿಡ್‌ಗಳು ಬೃಹತ್ ಪರಭಕ್ಷಕಗಳು. ಹಲವು ಈಡಿಯಕರನ ಪ್ರಾಣಿಗಳು ಅಳಿಯುತ್ತವೆ. ಪ್ರೋಕ್ಯಾರಿಯೋಟ್‌, ಪ್ರೊಟಿಸ್ಟ್, ಶಿಲೀಂಧ್ರ ಮತ್ತು ಶೈವಲ ಇಂದಿಗೂ ಉಳಿದುಕೊಂಡಿವೆ. ಗೊಂಡ್ವಾನ ಹುಟ್ಚುತ್ತದೆ. ಆಸ್ಟ್ರೇಲಿಯಾ ಖಂಡದ ಪೀಟರ್‌ಮನ್ ಬೆಟ್ಟಗಳ ಹುಟ್ಟು ಕೊನೆಗೊಳ್ಳುತ್ತದೆ (೫೫೦-೪೪೦ ದವಹಿಂ), ಅಂಟಾರ್ಕಿಟಿಕದಲ್ಲಿ ರೋಸ್ ಬೆಟ್ಟಗಳ ಉಗಮ. ಅಡೆಲ್ಡೆ ಜಿಯೊಸಿನ್‌ಕ್ಲಿನ್‌ನ (ಡೆಲಮೆರಿಯನ್ ಬೆಟ್ಟಗಳ ಉಗಮ). ಬಹುತೇಕ ಬೆಟ್ಟಗಳ ಉಗಮ ೫೧೪-೫೦೦ ದವಹಿಂ. ಆಸ್ಟ್ರೇಲಿಯದ ಲಚ್ಲಾನ್ ಬೆಟ್ಟಗಳ ಉಗಮ ೫೪೦-೪೪೦ ದವಹಿಂ. ವಾತಾವರಣದ ಇಂಗಾಲದ ಡೈಆಕ್ಸೈಡ್ ಇಂದಿಗಿಂತ (ಹೊಲೋಸಿನ್) ಮಟ್ಟಕ್ಕಿಂತ ೨೦-೩೫ ಪಟ್ಟು ಹೆಚ್ಚು (ಇಂದಿನ ೩೮೫ ಪಿಪಿಎಂವಿಗೆ ಹೋಲಿಸಿದಲ್ಲಿ ೬೦೦೦ ಪಿಪಿಎಂವಿ)[೧೫][೧೬]

ಆರಂಭಿಕ ಅವಧಿಯು ಅದೆಷ್ಟು ಜೀವವೈವಿಧ್ಯತೆಯನ್ನು ತೋರುತ್ತದೆಯೆಂದರೆ ಅದನ್ನು ಕ್ಯಾಂಬ್ರಿಯನ್ ಸ್ಫೋಟ ಎಂದು ಕರೆಯಲಾಗಿದೆ. ಇದು ನಂತರದಲ್ಲಿ ಬದಲಾಗಿ ವೈವಿಧ್ಯತೆಯು ದೊಡ್ಡ ಮಟ್ಟದಲ್ಲಿ ಕಡಿಮೆಯಾಯಿತು. ಸುಮಾರು ೫೧೫ ದವಹಿಂ ಅಳಿಯುವ ಜೀವ ಪ್ರಭೇದಗಳ ಸಂಖ್ಯೆ ಹೊಸ ಪ್ರಭೇದಗಳು ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚಾಯಿತು, ಸುಮಾರು ೫ ದಶಲಕ್ಷ ವರುಷಗಳ ನಂತರ ಬಹಳಷ್ಟು ಗುಂಪುಗಳಲ್ಲಿ ಪ್ರಬೇಧೀಕರಣದ ದರ ಕುಗ್ಗಿತು.[ಟಿಪ್ಪಣಿ ೧೨]

~೪೮೯.೫
ಜಿಯಾಂಗ್‌ಶಾನಿಯನ್ ~೪೯೪*
ಪೈಬಿಯನ್ ~೪೯೭*
ಶ್ರೇಣಿ ೩ ಗುಝನ್ಗಿಯನ್ ~೫೦೦.೫*
ಡ್ರುಮಿಯನ್ ~೫೦೪.೫*
ಹಂತ ೫ ~೫೦೯
ಶ್ರೇಣಿ ೨ ಹಂತ ೪ ~೫೧೪
ಹಂತ ೩ ~೫೨೧
ಟೆರ್ರೆನ್ಯೂವಿಯನ್ ಹಂತ ೨ ~೫೨೯
ಫಾರ್ಚುನಿಯನ್ ೫೪೧ ± ೧.೦*
ಪ್ರೊಟೆರೊಜೋಯಿಕ್[೧೯] ನಿಯೊಪ್ರೊಟೆರೊಜೋಯಿಕ್[೧೯] ಇಡಿಯಕರನ್ ಬಹುಕೋಶೀಯ ಪ್ರಾಣಿಗಳ ಮೊದಲ ಒಳ್ಳೆಯ ಪಳಿಯುಳಿಕೆಗಳು. ಈಡಿಯಕರನ್ ಜೀವಿಗಳು (ಇಂದು ತಿಳಿದಂತೆ ಮೊದಲ ಬಹುಕೋಶಿ ಸಂಕೀರ್ಣ ಜೀವಿಗಳು) ಜತ್ತಿನಾದ್ಯಂತ ಸಮುದ್ರದಲ್ಲಿ ಬದುಕುತ್ತವೆ. ಹುಳುವಿನಂತಹ ಟ್ರಿಕೊಫೈಕಸ್‌ನ ಮೊದಲ ಟ್ರೇಸ್ ಪಳುಯುಳಿಕೆಗಳಾಗಿರ (ಜೀವಿಯು ಮಾಡಿರ ಬಹುದಾದ ಗುರುತಿನ ಪಳಿಯುಳಿಕೆ) ಬಹುದಾದವುಗಳು ದೊರೆಯುತ್ತವೆ. ಮೊದಲ ಸ್ಪಂಜು ಜೀವಿಗಳ ಮತ್ತು ಟ್ರಿಲೊಬಿಟೊಮಾರ್ಪ್‌ಗಳು ಕಾಣಬರುತ್ತವೆ. ಒಗಟಿನಂತೆ ಕಾಣುವ ರೂಪಗಳು ಮೆದುವಾದ ಲೋಳೆಯಂತಹ ಚೀಲ, ತಟ್ಟೆ ಮುಂತಾದ ಆಕಾರದ ಜೀವಿಗಳನ್ನು ಒಳಗೊಂಡಿವೆ. ಉತ್ತರ ಅಮೆರಿಕಾದಲ್ಲಿ ಟಕೊನಿಕ್ ಬೆಟ್ಟಗಳ ಉಗಮ, ಭಾರತೀಯ ಉಪಖಂಡದಲ್ಲಿನ ಅರವಳ್ಳಿ ಬೆಟ್ಟಗಳ ಉಗಮ ಮತ್ತು ಆಸ್ಟ್ರೇಲಿಯಾದ ಪೀಟರ್‌ಮನ್ ಬೆಟ್ಟಗಳ ಉಗಮದ ಆರಂಭ ಈ ಕಾಲದಲ್ಲಿ ಆಯಿತು. ಅಂಟಾಂರ್ಕಿಟಿಕದಲ್ಲಿನ ಬಿಯರ್ಡ್‌ಮೋರ್ ಬೆಟ್ಟಗಳ ಉಗಮ ೬೩೩-೬೨೦ ದವಹಿಂ ನಡೆಯಿತು. ~ ೬೩೫*
ಕ್ರಯೋಜೆನಿಯನ್ ಭೂಮಿಯ ಹೊರಮೈ ಪೂರ್ಣವಾಗಿ ಅಥವಾ ಬಹುತೇಕ ಪೂರ್ಣವಾಗಿ ಹಿಮಗಡ್ಡೆಯಾಗಿರ ಬಹುದಾದ ಕಾಲ. ಪಳಿಯುಳಿಕೆಗಳು ಇನ್ನೂ ವಿರಳವಾಗಿಯೇ ಇದ್ದವು. ರೊಡಿನಿಯ (ಖಂಡಗಳ ಒಟ್ಟಾಗಿ ಇದ್ದು ನಂತರ ವಿಘಟನೆಗೊಂಡಾಗಿನ ಒಂದು ಘಟ್ಟದಲ್ಲಿನ ಭೂಮಿಯ ಭಾಗ) ಬೇರೆ ಬೇರೆಯಾಗ ತೊಡಗಿತು. ತಡವಾದ ರುಕರ್/ನಿಮ್‌ರಾಡ್ ಬೆಟ್ಟಗಳ ಉಗಮ ಕೊನೆಗೊಂಡಿತು. ೭೨೦[೨೦]
ಟೋನಿಯನ್ ರೊಡಿನಿಯ ಆಧಿಖಂಡವು ಹಾಗೆಯೇ ಉಳಿಯುತ್ತದೆ. ಸರಳ ಯುಕ್ಯಾರಿಯೋಟ್ ಬಹುಕೋಶ ಜೀವಿಗಳ ಪಳಿಯುಳಿಕೆ ಗುರುತುಗಳು ಸಿಗತೊಡಗುತ್ತವೆ. ಡಿನೊಪ್ಲಾಗಲೇಟ್ ವಂಶದ ಸಾವಯವ ಪಳಿಯುಳಿಕೆಗಳ ಮೊದಲ ಹರಡುವಿಕೆ. ಉತ್ತರ ಅಮೆರಿಕದಲ್ಲಿ ಗ್ರೆನಿವಿಲ್ಲೆ, ಆಫ್ರಿಕಾದಲ್ಲಿ ಪ್ಯಾನ್-ಆಫ್ರಿಕಾ ಪರ್ವತೋತ್ತಿಗಳಾಗುತ್ತವೆ. ಅಟಾಂರ್ಕಿಟಿಕದಲ್ಲಿನ ರುಕರ್/ನಿಮ್‌ರಾಡ್ ಬೆಟ್ಟಗಳ ಉಗಮ (೧೦೦೦ ± ೧೦೦ ದವಹಿಂ). ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಎಡ್‌ಮಂಡಿಯನ್ ಬೆಟ್ಟಗಳ ಉಗಮ (೯೨೦-೮೫೦ ದವಹಿಂ), ಗ್ಯಾಸ್ಕೊಯನೆ ಸಂಕೀರ್ಣ (ಒಂದು ರೀತಿಯ ಕಲ್ಲು) ರೂಪಗೊಳ್ಳುತ್ತದೆ. ಅಡೆಲ್ಡೆ ಜಿಯೊಸಿನ್‌ಕ್ಲಿನ್‌ಯ (ಬೆಟ್ಟದ ಶ್ರೇಣಿ ಡೆಲ್ಮೆರಿಯನ್ ಬೆಟ್ಟಗಳ ಉಗಮ) ಆರಂಭ. ೧೦೦೦[೨೦]
ಮೀಸೊಪ್ರೊಟೆರೊಜೋಯಿಕ್ [೧೯] ಸ್ಟೇನಿಯನ್ ರೂಡಿನಿಯ ರೂಪಗೊಳ್ಳ ತೊಡಗಿದಂತೆ ಬೆಟ್ಟಗಳ ಉಗಮದ ಕಾರಣಕ್ಕೆ ಶಿಲೆಗಳು ರೂಪಾಂತರಗೊಂಡ ಪಟ್ಟಿಗಳು ರೂಪಗೊಳ್ಳುತ್ತವೆ. ಅಂಟಾರ್ಕಿಟಿಕದಲ್ಲಿ ತಡವಾದ ರುಕರ್/ನಿಮ್‌ರಾಡ್ ಬೆಟ್ಟಗಳ ಉಗಮ ಆರಂಭ. ಮುಸಗ್ರೇವ್ ಬೆಟ್ಟಗಳ ಉಗಮ (೧೬೦೦ ದವಹಿಂ), ಮುಸಗ್ರವೇ ಪ್ರದೇಶ ಮತ್ತು ಕೇಂದ್ರ ಆಸ್ಟ್ರೇಲಿಯ ರೂಪಗೊಳ್ಳುವಿಕೆ. ೧೨೦೦[೨೦]
ಎಕ್ಟೇಸಿಯನ್ ಸಾಕ್ಷೇಪಿಕವಾಗಿ ಮಟ್ಟಸವಾದ ಪ್ರದೇಶವು (ಪ್ಲಾಟ್‌ಫಾರಂ) ಹಿಗ್ಗುತ್ತದೆ. ಸಮುದ್ರದಲ್ಲಿ ಹಸಿರು ಪಾಚಿಯ ಕಾಲನಿಗಳು. ಉತ್ತರ ಅಮೆರಿಕದ ಗ್ರೆನವಿಲ್ಲೆ ಬೆಟ್ಟಗಳ ಉಗಮ. ೧೪೦೦[೨೦]
ಕ್ಯಾಲಿಮಿಯನ್ ಮಟ್ಟಸದ ಪ್ರದೇಶದ ಮತ್ತಷ್ಟು ಹಿಗ್ಗುವಿಕೆ. ಬರ್ರಮುಂಡಿ ಬೆಟ್ಟಗಳ ಉಗಮ, ಆಸ್ಟ್ರೇಲಿಯಾದ ಮ್ಯಾಕಾರ್ಥರ್ ತಗ್ಗು ಪ್ರದೇಶ, ಉತ್ತರ ಆಸ್ಟ್ರೇಲಿಯ ಮತ್ತು ಅಸ್ಟ್ರೇಲಿಯದ ಕ್ವೀನ್ಸ್‌ಲ್ಯಾಂಡಿನ ಇಸಾನ್ ಬೆಟ್ಚಗಳ ಉಗಮ (೧೬೦೦ ದವಹಿಂ) ೧೬೦೦[೨೦]
ಪಾಲಿಯೊಪ್ರೊಟೆರೊಜೋಯಿಕ್[೧೯] ಸ್ಟಾಥೇರಿಯನ್ ಮೊದಲ ಸಂಕೀರ್ಣ ಜೀವಕೋಶದಲ್ಲಿ ಕೇಂದ್ರದಲ್ಲಿ ಬೀಜಕಣ (ನ್ಯೂಕ್ಲಿಯೆಸ್) ಇರುವ ಏಕಜೀವಕೋಶಿ ಪ್ರೋಟಿಸ್ಟ್‌ಗಳ ಹುಟ್ಟು. ಕೊಲಂಬಿಯ ಆಧಿಸ್ವರೂಪದ ಖಂಡವಾಗಿ ಹುಟ್ಟು, ಆಸ್ಟ್ರೇಲಿಯಾದ ಕಿಂಬನ್ ಬೆಟ್ಟದ ಉಗಮ ಕೊನೆಗೊಂಡಿತು. ಪಶ್ಚಿಮ ಆಸ್ಟ್ರೇಲಿಯಾದ ಇಲ್‌ಗರ್ನ್ ಕ್ರೆಟಾನ್ ಮೇಲೆ ಯಪುನ್‌ಗಕು ಬೆಟ್ಟದ ಉಗಮ. ಪಶ್ಚಿಮ ಆಸ್ಟ್ರೇಲಿಯಾದ ಗ್ಯಾಸ್ಕೊಯನೆ ಸಂಕೀರ್ಣದ ಮೇಲೆ ಮನಗರೂನ್ ಬೆಟ್ಟಗಳ ಉಗಮ, ೧೬೮೦-೧೬೨೦ ದವಹಿಂ.ಕರರನ್ ಬೆಟ್ಟಗಳ ಉಗಮ (೧೬೫೦ ದವಹಿಂ). ೧೮೦೦[೨೦]
ಒರೊಸಿರಿಯನ್ ವಾತಾವರಣದಲ್ಲಿ ಆಮ್ಲಜನಕದ ಹೆಚ್ಚಳ. ಉಲ್ಕೆಗಳ ಬೀಳುವಿಕೆಯ ಪರಿಣಾಮಾಗಿ ವ್ರೆಡ್‌ಫೋರ್ಟ್ ಮತ್ತು ಸಡ್ಬರಿ ತಗ್ಗುಪ್ರದೇಶಗಳು. ಉತ್ತರ ಅಮೆರಿಕದ ಪೆನೊಕೀಯನ್ ಮತ್ತು ಟ್ರಾನ್ಸ್-ಹಡ್ಸೋನಿಯನ್ ಬೆಟ್ಟಗಳ ಉಗಮ. ಅಂಟಾರ್ಕಿಟಿಕದ ಆರಂಭಿಕ ರುಕರ್ ಬೆಟ್ಟಗಳ ಉಗಮ (೨೦೦೦-೧೭೦೦ ದವಹಿಂ). ಗ್ಲೆನ್‌ಬರ್ಗ್ ಬೆಟ್ಟಗಳ ಉಗಮ. ಆಸ್ಟ್ರೇಲಿಯದ ಗಾವಲರ್ ಕ್ರೇಟನ್‌ನಲ್ಲಿ ಕಿಂಬನ್ ಬೆಟ್ಟಗಳ ಉಗಮದ ಆರಂಭ. ೨೦೫೦[೨೦]
ರಯೇಶಿಯನ್ ಆಫ್ರಿಕಾದಲ್ಲಿನ ಬುಶ್‌ವೆಲ್ಡ್ ಇಗ್ನೀಸಿಯಸ್ ಸಂಕೀರ್ಣ ರೂಪಗೊಂಡಿತು. ಇಂದು ತಿಳಿದಂತೆ ಮೊದಲ ಹಿಮೀಕರಣ ಹುರೊನಿಯನ್ ಹಿಮಯುಗ. ೨೩೦೦[೨೦]
ಸೈಡೇರಿಯನ್ ಆಕ್ಸಿಜನ್ ಕೆಟಾಸ್ಟ್ರೋಫ್ ಅಥವಾ ಬೃಹತ್ ಆಮ್ಲಜನೀಕರಣ ಘಟನೆಯ (ಈ ಘಟನೆಯಲ್ಲಿ ಹಲವು ದಶಲಕ್ಷ ವರುಷಗಳ ಸೈನೋಬ್ಯಾಕ್ಟೀರಿಯಗಳ ದ್ಯುತಿಸಂಶ್ಲೇಷಣೆಯ ಪರಿಣಾಮವಾಗಿ ರೂಪಗೊಂಡ ಆಮ್ಲಜನಕವು ಮೊದಲ ಸಲ ಸ್ವತಂತ್ರ ಅನಿಲವಾಗಿ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ) ಪರಿಣಾಮವಾಗಿ ವಾತಾವರಣದಲ್ಲಿ ಆಮ್ಲಜನಕ ಬಿಡುಗಡೆಗೊಳ್ಳುತ್ತದೆ. ಆಸ್ಟ್ರೇಲಿಯಾದಲ್ಲಿನ ಸ್ಲೀಪೋರ್ಡ್ ಬೆಟ್ಟಗಳ ಉಗಮ, ಗ್ವಾಲರ್ ಕ್ರೇಟಾನ್ ರೂಪಗೊಳ್ಳವಿಕೆ (೨೪೪೦-೨೪೪೨೦ ದವಹಿಂ). ೨೫೦೦[೨೦]
ಆರ್ಕಿಯನ್[೧೯] ನಿಯೊಆರ್ಕಿಯನ್[೧೯] ಬಹಳಷ್ಟು ಆಧುನಿಕ ಕ್ರೇಟಾನುಗಳು ಸ್ಥಿರವಾಗುವುದು ಮತ್ತು ಮ್ಯಾಟಲ್ (ಭೂಮಿಯ ಕೇಂದ್ರದ ತಿರುಳು ಮತ್ತು ಹೊರಗಿನ ಚಿಪ್ಪಿಗೂ ನಡುವಿರು ಪ್ರದೇಶ) ತಿರುಗು ಮರುಗಾಗುವುದು ಬಹುಶ ನಡೆಯಿತು. ಇನ್ಸೆಲ್ ಬೆಟ್ಟಗಳ ಉಗಮ, ೨೬೫೦ ± ೧೫೦ ದವಹಿಂ. ಇಂದಿನ ಒಂಟಾರಿಯ ಮತ್ತು ಕ್ವೆಬೆಕ್ ಪ್ರದೇಶದ ಅಬಿಟಿಬಿ ಹಸಿರು ಕಲ್ಲಿನ ಪ್ರದೇಶ ರೂಪಗೊಳ್ಳಲು ಆರಂಭಿಸಿ ೨೬೦೦ ದವಹಿಂ ಸ್ಥಿರಗೊಂಡಿತು. ೨೮೦೦[೨೦]
ಮೀಸೊಆರ್ಕಿಯನ್[೧೯] ಮೊದಲ ಸ್ಟ್ರೋಮಾಟೊಲೈಟ್‌ {ಸೂಕ್ಷ್ಮಜೀವಿಗಳ ಪದರದಿಂದಾದ ರಚನೆಗಳು} (ಬಹುಶ ಸೈನೊಬ್ಯಾಕ್ಟೀರಿಯ). ತೀರ ಪುರಾತನ ದೊಡ್ಡ ಪಳಿಯುಳಿಕೆಗಳು. ಅಂಟಾರ್ಟಿಕದ ಹಂಬೋಲ್ಡ್‌ ಬೆಟ್ಟಗಳ ಉಗಮ. ಬ್ಲೇಕ್ ನದಿಯ ಮೆಗಾಕಾಲ್ಡೆರ ಸಂಕೀರ್ಣ ಇಂದಿನ ಕೆನಡಾದಲ್ಲಿನ ಒಂಟಾರಿಯೊ ಮತ್ತು ಕ್ವೆಬೆಕ್ ಪ್ರದೇಶಗಳಲ್ಲಿ ರೂಪಗೊಳ್ಳಲು ಆರಂಭವಾಗಿ ಸುಮಾರು ೨೬೯೬ ದವಹಿಂ ಮುಗಿಯುತ್ತದೆ. ೩೨೦೦[೨೦]
ಪಾಲಿಯೊಆರ್ಕಿಯನ್[೧೯] ಇಂದು ತಿಳಿದ ಮೊದಲ ಆಮ್ಲಜನಕ ಉತ್ಪಾದಿಸುವ ಬ್ಯಾಕ್ಟೀರಿಯ. ಹಳೆಯ ಖಚಿತ ಸೂಕ್ಷ್ಮಪಳಿಯುಳಿಕೆ. ಭೂಮಿಯ ಮೇಲಿನ ಅತಿ ಪುರಾತನ ಸ್ಥಿರ ಪ್ರದೇಶಗಳು ಅಥವಾ ಕ್ರಾಟನ್‌ಗಳು (ಭಾರತೀಯ ಶೀಲ್ಡ್ ಹಾಗೂ ಅದರ ಭಾಗವಾದ ಧಾರವಾಡ ಕ್ರೇಟನ್‌ ಒಂದು ಉದಾಹರಣೆ[ಟಿಪ್ಪಣಿ ೧೩]) ಈ ಕಾಲಮಾನದಲ್ಲಿ ರೂಪಗೊಂಡಿರ ಬಹುದು. ಅಂಟಾರ್ಕಿಟಿಕಾದ ರಾಯನರ್ ಬೆಟ್ಟಗಳ ಉಗಮ. ೩೬೦೦[೨೦]
ಇಯೊಆರ್ಕಿಯನ್[೧೯] ಸರಳ ಏಕಜೀವಕೋಶ ಜೀವಿಗಳು (ಬಹುಶ ಬ್ಯಾಕ್ಟೀರಿಯ ಮತ್ತು ಆರ್ಕಿಯ). ಬಹುಶ ತೀರ ಪುರಾತನ ಸೂಕ್ಷ್ಮಪಳಿಯುಳಿಕೆ. ಮೊದಲ ಜೀವದ ರೂಪ ಮತ್ತು ಸ್ವಪ್ರತಿಯಾಗಬಲ್ಲ ಆರ್‌ಎನ್ಎ ಅಣುಗಳ ವಿಕಾಸ, ಸುಮಾರು ೪೦೦೦ ದವಹಿಂ ಭೂಮಿಯ ಮೇಲಿನ ದೊಡ್ಡ ಮಟ್ಟದ ಉಲ್ಕಾಪಾತ ಕೊನೆಗೊಂಡ ನಂತರ. ಅಂಟಾರ್ಕಿಟಿಕಾದ ನೇಪಿಯರ್ ಬೆಟ್ಟಗಳ ಉಗಮ ೪೦೦೦ ± ೨೦೦ ದವಹಿಂ. ೪೦೦೦
ಹಡಿಯೇನ್[೧೯][೨೧] ಆರಂಭಿಕ ಇಂಬ್ರಿಯನ್[೧೯][೨೨] ಆರಂಭಿಕ ಜೀವದ ದ್ಯುತಿಸಂಶ್ಲೇಷಣೆಯ ಪರೋಕ್ಷ ಸಾಕ್ಷಿ. ಈ ಯುಗವು ಸೂರ್ಯ ಮಂಡಲದ ಒಳಗಿನ ವಸ್ತುಗಳ (ಧೂಮಕೇತುಗಳು ಮತ್ತು ಅಥವಾ ಉಲ್ಕೆಗಳು) ದೊಡ್ಡ ಮಟ್ಟದ ದಾಳಿಯಾಯಿತು ಎಂದು ಭಾವಿಸಲಾಗಿದೆ. ಇಂದು ತಿಳಿದ ತೀರ ಹಳೆಯ ಕಲ್ಲಿನ ಆಯುಶ್ಯ ೪೦೩೦ ದವಹಿಂ[೨೩] ~೪೧೦೦
ನೆಕ್ಟೇರಿಯನ್[೧೯][೨೨] ಈ ಘಟಕವು ತನ್ನ ಹೆಸರನ್ನು ಚಂದ್ರ ಭೂಗೋಳದ ಕಾಲಮಾನದಿಂದ ಪಡೆದಿದೆ. ~೪೩೦೦
ಬೇಸಿನ್ ಗುಂಪು[೧೯][೨೨] ಪತ್ತೆಯಾದ ಅತಿ ಪುರಾತನ ಖನಿಜ (ಜಿರ್ಕಾನ್, ೪೪೦೪ ‌± ೮ ದವಹಿಂ).[೨೪] ~೪೫೦೦
ಕ್ರಿಪ್ಟಿಕ್[೧೯][೨೨] ಚಂದ್ರನ ರೂಪಗೊಳ್ಳುವಿಕೆ (೪೫೩೩ ದವಹಿಂ ಅಥವಾ ದಶಲಕ್ಷ ವರುಷಗಳ ಹಿಂದೆ) ಬಹುಶ ದೊಡ್ಡ ಹೊಡೆತದ ಕಾರಣಕ್ಕೆ. ಭೂಮಿ ರೂಪಗೊಳ್ಳುವಿಕೆ (೪೫೬೭.೧೭ ರಿಂದ ೪೫೭೦ ದವಹಿಂ) ~೪೫೬೭

ಪ್ರಿಕ್ಯಾಂಬಿಯನ್ ಕಾಲಮಾನದ ಪ್ರಸ್ತಾವನೆ[ಬದಲಾಯಿಸಿ]

ಐಸಿಎಸ್‌ನ ಜಿಯೋಲಾಜಿಕಲ್ ಟೈಮ್‌ಸ್ಕೇಲ್ 2012 ಪುಸ್ತಕವು ಪ್ರಿಕ್ಯಾಂಬ್ರಿಯನ್ ಕಾಲಮಾನಗಳನ್ನು ಗಣನೀಯವಾಗಿ ಬದಲಾಯಿಸಿ ಭೂಮಿಯ ರೂಪಗೊಳ್ಳುವಿಕೆ ಅಥವಾ ಬೃಹತ್ ಆಮ್ಲಜನಕ ಘಟನೆಗಳಂತಹವನ್ನು ಸೇರಿಸುವಂತೆ ಜೊತೆಗೆ ಸಂಬಂಧಿತ ಕಾಲಮಾನಕ್ಕೆ ಬಹಳಷ್ಟು ಹಿಂದಿನ ಹೆಸರುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ.

  • ಹಡಿಯೇನ್ ಕಲ್ಪ- ೪೬೦೦ ರಿಂದ ೪೦೩೦ ದವಹಿಂ
    • ಕೆವೊಟಿಯನ್ ಯುಗ- ೪೬೦೦ ರಿಂದ ೩೦೦೩ ದವಹಿಂ- ಗ್ರೀಕ್ ಪುರಾಣದ ಕೆವೋಸ್ ಮತ್ತು ಈ ಹಂತದ ಅವ್ಯವಸ್ಥೆ ಎರಡನ್ನೂ ಪ್ರತಿನಿಧಿಸುವ ಹೆಸರು.[೨೫][೨೬][೨೭]
    • ಜಾಕ್ ಹಿಲಿಸಿಯನ್ ಅಥವಾ ಜಿರ್‌ಕೋನಿಯನ್ ಯುಗ- ೪೦೦೪ ರಿಂದ ೪೦೩೦ ದವಹಿಂ- ಎರಡೂ ಹೆಸರುಗಳೂ ಪಶ್ಚಿಮ ಆಸ್ಟ್ರೇಲಿಯಾದ ಅತಿ ಪುರಾತನ ಕನಿಜ ಜಿರ್ಕಾನ್ ದೊರೆತ ಜಾಕ್‌ ಹಿಲ್ಸ್‌ಗಳ ಬಗೆಗೆ ಇದೆ.
  • ಆರ್ಕಿಯನ್ ಕಲ್ಪ- ೪೦೩೦ ರಿಂದ ೨೪೨೦ ದವಹಿಂ
    • ಪಾಲಿಯೊಆರ್ಕಿಯನ್ ಯುಗ- ೪೦೩೦ ರಿಂದ ೩೪೯೦ ದವಹಿಂ
      • ಅಕಸ್ಟಾನ್ ಅವಧಿ- ೪೦೩೦ ರಿಂದ ೩೮೧೦ ದವಹಿಂ- ಕೆನಡದಲ್ಲಿರು ಅಕಸ್ಟಾನ್ ಗ್ನೆಯಿಸ್ ಶಿಲೆಯ ಹೆಸರು ಕೊಡಲಾಗಿದೆ.[೨೫][೨೬]
      • ಇಸುವನ್ ಅವಧಿ- ೩೮೧೦ ರಿಂದ ೩೪೯೦ ದವಹಿಂ- ಗ್ರೀನ್‌ಲ್ಯಾಂಡಿನ ಇಸುವ ಹಸಿರುಕಲ್ಲಿನ ಪಟ್ಟಿಯ ಹೆಸರು ಕೊಡಲಾಗಿದೆ.[೨೫]
    • ಮೀಸೊಆರ್ಕಿಯನ್ ಯುಗ- ೩೪೯೦ ರಿಂದ ೨೭೮೦ ದವಹಿಂ
      • ವಾಲಬರನ್ ಅವಧಿ- ೩೪೯೦ ರಿಂದ 3020 ದವಹಿಂ- ದಕ್ಷಿಣ ಆಫ್ರಿಕಾದ ಕಾಪ್‌ವಾಲ್ ಮತ್ತು ಪಶ್ಚಿಮ ಆಸ್ಟ್ರೇಲಿಯಾದ ಪಿಲ್‌ಬರ ಕ್ರೇಟಾನ್ (ಪ್ರಾಚೀನ ಕಲ್ಲು) ಹೆಸರುಗಳ ಮಿಶ್ರಣ.[೨೬]
      • ಪೊಂಗೊಲನ್ ಅವಧಿ- ೩೦೨೦ ರಿಂದ ೨೭೮೦ ದವಹಿಂ- ದಕ್ಷಿಣ ಆಫ್ರಿಕಾ ಮತ್ತು ಸ್ವಾಜಿಲ್ಯಾಂಡ್‌ನಲ್ಲಿರುವ ಒಂದು ಪ್ರದೇಶದಿಂದ (ಅಗ್ನಿಪರ್ವತದ ಮತ್ತು ಗಷ್ಟಿನ ಕಲ್ಲುಗಳಿರುವ) ಈ ಹೆಸರು ಪಡೆದಿದೆ.[೨೬]
    • ನಿಯೊಆರ್ಕಿಯನ್ ಯುಗ- ೨೭೮೦ ರಿಂದ ೨೪೨೦ ದವಹಿಂ
      • ಮಿಥೊನಿಯನ್ ಅವಧಿ- ೨೭೮೦ ರಿಂದ ೨೬೩೦ ದವಹಿಂ- ಮಿಥೇನನ್ನು ಶಕ್ತಿಗೆ ಮತ್ತು ಇಂಗಾಲದ ಆಕಾರವಾಗಿ ಬಳಸುವ ಪ್ರೋಕ್ಯಾರಿಯಟ್‌ಗಳು ಈ ಅವಧಿಯಲ್ಲಿ ಹೆಚ್ಚಾಗಿರುವ ಕಾರಣಕ್ಕೆ ಈ ಹೆಸರು ಪಡೆದಿದೆ.[೨೬]
      • ಸೈಡೆರಿಯನ್ ಅವಧಿ- ೨೬೩೦ ರಿಂದ ೨೪೨೦ ದವಹಿಂ- ಈ ಅವಧಿಯ ದೊಡ್ಡ ಮಟ್ಟದ ಕಬ್ಬಿಣದ ರೂಪಗಳ ಕಾರಣಕ್ಕೆ ಈ ಹೆಸರು ಪಡೆದಿದೆ.[೨೬]
  • ಪ್ರೊಟೆರೊಜೋಯಿಕ್ ಕಲ್ಪ- ೨೪೨೦ ರಿಂದ ೫೪೧ ದವಹಿಂ
    • ಪಾಲಿಯೊಪ್ರೊಟೆರೊಜೋಯಿಕ್ ಯುಗ- ೨೪೨೦ ರಿಂದ ೧೭೮೦ ದವಹಿಂ
      • ಆಕ್ಸಿಜೀನಿಯನ್ ಅವಧಿ- ೨೪೨೦ ರಿಂದ ೨೨೫೦ ದವಹಿಂ- ಈ ಅವಧಿಯಲ್ಲಿನ ಜಾಗತಿಕ ಆಮ್ಲಜನೀಕರಣ ವಾತಾವರಣದ ಕಾರಣಕ್ಕೆ ಈ ಹೆಸರು ಪಡೆದಿದೆ.[೨೬]
      • ಜಟುಲಿಯನ್ ಅಥವಾ ಯುಕ್ಯಾರಿಯನ್ ಅವಧಿ- ೨೨೫೦ ರಿಂದ ೨೦೬೦ ದವಹಿಂ- ಕಾರ್ಬನ್ ಸೈಕಲ್ ಏರುಪೇರಾಗುವದನ್ನು ಸೂಚಿಸುವ ಲೊಮಗುಂಡಿ-ಜಟುಲಿ ಐಸೊಟೋಪ್ ಘಟನೆಯನ್ನು[೨೮][೨೯] ಮತ್ತು ಯುಕ್ಯಾರಿಯೋಟ್ ಜೀವಿಗಳ ಮೊದಲ ಪಳಿಯುಳಿಕೆ ಗುರುತಿಸುದುದನ್ನು ಈ ಹೆಸರುಗಳು ಸೂಚಿಸುತ್ತವೆ.[೨೬]
      • ಕೊಲಂಬಿಯನ್ ಅವಧಿ- ೨೦೬೦ ರಿಂದ ೧೭೮೦ ದವಹಿಂ – ಕೊಲಬಿಯನ್ ಸೂಪರ್ ಖಂಡದಿಂದ ಈ ಹೆಸರು ಪಡೆದಿದೆ.
    • ಮೀಸೊಪ್ರೊಟೆರೊಜೋಯಿಕ್ ಯುಗ- ೧೭೬೦ ರಿಂದ ೮೫೦ ದವಹಿಂ
      • ರೊಡಿನಿಯನ್ ಅವಧಿ- ೧೭೬೦ ರಿಂದ ೮೫೦ ದವಹಿಂ – ರೊಡಿನಿಯ ಸೂಪರ್ ಖಂಡ ಮತ್ತು ಸ್ಥಿರ ವಾತಾವರಣದ ಮೇಲೆ ಈ ಹೆಸರು ಬಂದಿದೆ.[೨೬]
    • ನಿಯೊಪ್ರೊಟೆರೊಜೋಯಿಕ್ ಯುಗ- ೮೫೦ ರಿಂದ ೫೪೧ ದವಹಿಂ
      • ಕ್ರಯೋಜಿನಿಯನ್ ಅವಧಿ- ೮೫೦ ರಿಂದ ೬೩೫ ದವಹಿಂ- ಹಲವು ಹಿಮಯುಗಗಳ ಕಾರಣಕ್ಕೆ ಈ ಹೆಸರು.[೨೬]
      • ಇಡಿಯಕರನ್ ಅವಧಿ- ೬೩೫ ರಿಂದ ೫೪೧ ದವಹಿಂ.

ಟಿಪ್ಪಣಿಗಳು[ಬದಲಾಯಿಸಿ]

  1. English Wikipedia “Geologic time scale”ನ ಸಂಗ್ರಹಾನುವಾದ access date 2016-08-08. ಉಲ್ಲೇಖಗಳು ಅಲ್ಲಿಯವೇ.
  2. ಕೋಷ್ಟಕದಲ್ಲಿ ಮಹಾಕಲ್ಪ (ಸೂಪರ್‌ಇಯಾನನ್ನು ಕೈಬಿಡಲಾಗಿದೆ)
  3. ಭೂಮಿಯು ಹಿಮಮನೆ ಭೂಮಿ ಅಥವಾ ಐಸ್‌ಹೌಸ್ ಅರ್ಥ ಮತ್ತು ಹಸಿರುಮನೆ ಭೂಮಿ ಅಥವಾ ಗ್ರೀನ್‌ಹೌಸ್ ಅರ್ಥ ಎರಡು ಹಂತಗಳಲ್ಲಿರುತ್ತದೆ. ಹಸಿರುಮನೆ ಭೂಮಿ ಕಾಲಮಾನದಲ್ಲಿ ಭೂಮಿಯಲ್ಲಿ ಹಸಿರುಮನೆ ಅನಿಲಗಳು (ಇಂಗಾಲದ ಡೈಆಕ್ಸೈಡ್ ಮತ್ತು ಇತರ ಅನಿಲಗಳು) ಹೆಚ್ಚಾಗುತ್ತವೆ.
  4. Wikipedia English “Miocene” access date 2016-08-08
  5. Wikipedia English “Cretaceous” access date 2016-08-08
  6. Wikipedia English “Jurassic” access date 2016-08-08
  7. Wikipedia English “Permain-Triassic extinction event”, access date 2016-08-08
  8. Wikipedia English “Triassic” access date 2016-08-08
  9. Wikipedia English “Permian” access date 2016-08-08
  10. Wikipedia English “Silurian” access date 2016-08-08
  11. Wikipedia English “Ordovician” access date 2016-08-08
  12. Wikipedia English "Cambrian" access date 2016-0808
  13. Wikipedia English “Indian shield” access date 2016-08-08

ಉಲ್ಲೇಖಗಳು[ಬದಲಾಯಿಸಿ]

  1. "International Stratigraphic Chart". International Commission on Stratigraphy. Archived from the original on 30 May 2014.
  2. “Statutes of the International Commission on Stratigraphy”, retrieved 26 November 2009
  3. “Correlating Earth's History”, Paul R. Janke access date 2016-08-08
  4. Rudwick, M. J. S. (1985). The Meaning of Fossils: Episodes in the History of Palaeontology. University of Chicago Press. p. 24. ISBN 0-226-73103-0.
  5. Fischer, Alfred G.; Garrison, Robert E. (2009). "The role of the Mediterranean region in the development of sedimentary geology: A historical overview". Sedimentology. 56: 3. Bibcode:2009Sedim..56....3F. doi:10.1111/j.1365-3091.2008.01009.x.
  6. Quoted in "The contribution of Ibn Sina (Avicenna) to the development of the Earth Sciences", among other sources
  7. John McPhee, Basin and Range, New York:Farrar, Straus and Giroux, 1981, pp. 95–100.
  8. “Geologic Time Scale” access date 2016-08-08
  9. “How the discovery of geologic time changed our view of the world”, Bristol University
  10. ”Official website Archived” 20 September 2005 at the Wayback Machine
  11. Paleontologists often refer to faunal stages rather than geologic (geological) periods. The stage nomenclature is quite complex. For a time-ordered list of faunal stages, see "The Paleobiology Database". Retrieved 2006-03-19.
  12. Dates are slightly uncertain with differences of a few percent between various sources being common. This is largely due to uncertainties in radiometric dating and the problem that deposits suitable for radiometric dating seldom occur exactly at the places in the geologic column where they would be most useful. The dates and errors quoted above are according to the International Commission on Stratigraphy 2015 time scale except the Hadean eon. Where errors are not quoted, errors are less than the precision of the age given.

    * indicates boundaries where a Global Boundary Stratotype Section and Point has been internationally agreed upon.
  13. Historically, the Cenozoic has been divided up into the Quaternary and Tertiary sub-eras, as well as the Neogene and Paleogene periods. The 2009 version of the ICS time chart recognizes a slightly extended Quaternary as well as the Paleogene and a truncated Neogene, the Tertiary having been demoted to informal status.
  14. "NASA Scientists React to 400 ppm Carbon Milestone". Retrieved 2014-01-15 [೧]
  15. ೧೫.೦ ೧೫.೧ ೧೫.೨ ೧೫.೩ ೧೫.೪ ೧೫.೫ Royer, Dana L. (2006). "CO2-forced climate thresholds during the Phanerozoic" (PDF). Geochimica et Cosmochimica Acta. 70 (23): 5665–75. Bibcode:2006GeCoA..70.5665R. doi:10.1016/j.gca.2005.11.031
  16. ೧೬.೦ ೧೬.೧ ೧೬.೨ ೧೬.೩ ೧೬.೪ ೧೬.೫ For more information on this, see Atmosphere of Earth#Evolution of Earth's atmosphere, Carbon dioxide in the Earth's atmosphere, and Climate change. Specific graphs of reconstructed CO2 levels over the past ~550, 65, and 5 million years can be seen at File:Phanerozoic Carbon Dioxide.png, File:65 Myr Climate Change.png, File:Five Myr Climate Change.png, respectively.
  17. The start time for the Holocene epoch is here given as Upper Paleolithic|11,700 before present|years ago. For further discussion of the dating of this epoch, see Holocene.
  18. In North America, the Carboniferous is subdivided into Mississippian age|Mississippian and Pennsylvanian Periods.
  19. ೧೯.೦೦ ೧೯.೦೧ ೧೯.೦೨ ೧೯.೦೩ ೧೯.೦೪ ೧೯.೦೫ ೧೯.೦೬ ೧೯.೦೭ ೧೯.೦೮ ೧೯.೦೯ ೧೯.೧೦ ೧೯.೧೧ ೧೯.೧೨ ೧೯.೧೩ The Proterozoic, Archean and Hadean are often collectively referred to as the Precambrian Time or sometimes, also the Cryptozoic.
  20. ೨೦.೦೦ ೨೦.೦೧ ೨೦.೦೨ ೨೦.೦೩ ೨೦.೦೪ ೨೦.೦೫ ೨೦.೦೬ ೨೦.೦೭ ೨೦.೦೮ ೨೦.೦೯ ೨೦.೧೦ ೨೦.೧೧ Defined by absolute age (Global Standard Stratigraphic Age).
  21. Though commonly used, the Hadean is not a formal eon and no lower bound for the Archean and Eoarchean have been agreed upon. The Hadean has also sometimes been called the Priscoan or the Azoic. Sometimes, the Hadean can be found to be subdivided according to the lunar geologic timescale. These eras include the Cryptic and Basin Groups (which are subdivisions of the Pre-Nectarian era), Nectarian, and Early Imbrian units.
  22. ೨೨.೦ ೨೨.೧ ೨೨.೨ ೨೨.೩ These unit names were taken from the lunar geologic timescale and refer to geologic events that did not occur on Earth. Their use for Earth geology is unofficial. Note that their start times do not dovetail perfectly with the later, terrestrially defined boundaries.
  23. Bowring, Samuel A.; Williams, Ian S. (1999). "Priscoan (4.00–4.03 Ga) orthogneisses from northwestern Canada". Contributions to Mineralogy and Petrology. 134 (1): 3. Bibcode:1999CoMP..134....3B. doi:10.1007/s004100050465. The oldest rock on Earth is the Acasta Gneiss, and it dates to 4.03 Ga, located in the Northwest Territories of Canada
  24. Geology.wisc.edu
  25. ೨೫.೦ ೨೫.೧ ೨೫.೨ Van Kranendonk, Martin J. (2012). "16: A Chronostratigraphic Division of the Precambrian: Possibilities and Challenges". In Felix M. Gradstein; James G. Ogg; Mark D. Schmitz; abi M. Ogg. The geologic time scale 2012 (1st ed.). Amsterdam: Elsevier. pp. 359–365. ISBN 978-0-44-459425-9.
  26. ೨೬.೦೦ ೨೬.೦೧ ೨೬.೦೨ ೨೬.೦೩ ೨೬.೦೪ ೨೬.೦೫ ೨೬.೦೬ ೨೬.೦೭ ೨೬.೦೮ ೨೬.೦೯ Goldblatt, C.; K. J. Zahnle; N. H. Sleep; E. G. Nisbet (2010). "The Eons of Chaos and Hades" (PDF). Solid Earth. Copernicus Publications on behalf of the European Geosciences Union. 1: 1–3. Bibcode:2010SolE....1....1G.
  27. Chambers, John E. (July 2004). "Planetary accretion in the inner Solar System" (PDF). Earth and Planetary Science Letters. 223 (3–4): 241–252. Bibcode:2004E&PSL.223..241C. doi:10.1016/j.epsl.2004.04.031
  28. El Albani, Abderrazak; Bengtson, Stefan; Canfield, Donald E.; Riboulleau, Armelle; Rollion Bard, Claire; Macchiarelli, Roberto; et al. (2014). "The 2.1 Ga Old Francevillian Biota: Biogenicity, Taphonomy and Biodiversity". PLoS ONE. 9 (6): e99438. Bibcode:2014PLoSO...999438E. doi:10.1371/journal.pone.0099438.
  29. El Albani, Abderrazak; Bengtson, Stefan; Canfield, Donald E.; Bekker, Andrey; Macchiarelli, Roberto; Mazurier, Arnaud; Hammarlund, Emma U.; et al. (2010). "Large colonial organisms with coordinated growth in oxygenated environments 2.1 Gyr ago" (PDF). Nature. 466 (7302): 100–104. Bibcode:2010Natur.466..100A. doi:10.1038/nature09166. PMID 20596019.