ಸ್ಯಾಲಿ ರೈಡ್

ವಿಕಿಪೀಡಿಯ ಇಂದ
Jump to navigation Jump to search
ಸ್ಯಾಲಿ ಕ್ರಿಸ್ಟನ್ ರೈಡ್
Sally Ride in 1984.jpg
ಜುಲೈ ೧೦, ೧೯೮೪
ಜನನ ಸ್ಯಾಲಿ ಕ್ರಿಸ್ಟನ್ ರೈಡ್
೨೬-೦೫-೧೯೫೧
ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ, ಅಮೆರಿಕಾ
ನಿಧನ ೨೩-೦೭-೨೦೧೨
ಲಾ ಜೊಲ್ಲ, ಕ್ಯಾಲಿಫೋರ್ನಿಯಾ, ಅಮೆರಿಕಾ
Cause of death ಕ್ಯಾನ್ಸರ್
ವೃತ್ತಿ ಭೌತಶಾಸ್ತ್ರಜ್ಞ

ಸ್ಯಾಲಿ ಕ್ರಿಸ್ಟನ್ ರೈಡ್(ಮೇ ೨೬,೧೯೫೧-ಜುಲೈ ೨೩,೨೦೧೨)ಅಮೆರಿಕಾದ ಒಬ್ಬ ಭೌತಶಾಸ್ತ್ರಜ್ಞ ಮತ್ತು ಗಗನಯಾತ್ರಿ.ಅವರು ೧೫೯೧ರಲ್ಲಿ ಲಾಸ್ ಏಂಜಲೀಸ್ ನಲ್ಲಿ ಜನಿಸಿದರು[೧].೧೯೭೮ರಲ್ಲಿ ನಾಸಾಗೆ ಸೇರಿಕೊಂಡರು ಮತ್ತು ೧೯೮೩ರಲ್ಲಿ ಅಂತರಿಕ್ಷಕೆ ಹೊದ ಮೊದಲ ಸ್ತ್ರೀ ಎಂದು ಪ್ರಸಿದ್ಧರು[೨].ಅವರು ಕಿರಿಯ ವಯಸ್ಸಿನಲ್ಲಿ ಗಗನಯಾತ್ರೆ ಮಾಡಿದ ಪ್ರಸಿದ್ದಿ ಹೊಂದಿದಾರೆ ಈ ಸಾಹಸ ಮಾಡಿದ ಅಮೆರಿಕದ ಮೊದಲ ಮಹಿಳೆ ಹಾಗೂ ಅತ್ಯಂತ ಕಿರಿಯ ಬಾಹ್ಯಾಕಾಶ ಯಾನಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.ಅವರು ೩೨ ವರ್ಷದವರಾಗಿದ್ದಾಗ ಎರಡು ಬಾರಿ ಗಗನಕ್ಕೆ ಹಾರಿದ ನಂತರ ನಾಸಾವನ್ನು ೧೯೮೭ರಲ್ಲಿ ಬಿತ್ತರು.ಅವರು ೩ ವರ್ಷಗಳ ಕಾಲ ಸ್ಟಾನ್ ಪೋರ್ಡ ವಿಶ್ವವಿದ್ಯಾಲಯದಲ್ಲಿ ಮತ್ತು ಕ್ಯಾಲಿಪೋನಿಯಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರೋಫೆಸರ್ ಅಗಿ ಕೆಲಸ ನಿರ್ವಹಿಸುತ್ತಿದ್ದರು. ೧೯೮೩ರಲ್ಲಿ 'ಚಾಲೆಂಜರ್' ನೌಕೆಯಲ್ಲಿ ಬಾಹ್ಯಾಕಾಶ ಯಾತ್ರೆ ಕೈಗೊಂಡರು.[೩] ತದನಂತರ ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲೂ ಪ್ರಯಾಣಿಸಿದ್ದರು. ನಾಸಾ ತೊರೆದ ನಂತರ ಸ್ಟ್ಯಾನ್​ಫೋರ್ಡ್ ವಿವಿ ಹಾಗೂ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಅಮೆರಿಕದ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಸ್ಯಾಲಿ. ಅವರು ೨೩ ಜುಲೈ ೨೦೧೨ ರಲ್ಲಿ ಕ್ಯಾನ್ಸರ್ ನಿಂದ ನಿಧನ ಮೊಂದಿದರು.

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಡಾಲ್ ಬುರ್ಡೆಲ್ ರೈಡ್ ಮತ್ತು ಕರೊಲ್ ಜೂಯ್ಸ ರವರರ ದೊಡ್ಡಮಗಳು ಸ್ಯಾಲಿ ರೈಡ್ ರವರು, ಲಾಸ್ ಏಂಜಲೀಸ್ ನ ಕ್ಯಾಲಿಫೋರ್ನಿಯಾದಲ್ಲಿ ಜನಿಸಿದರು.ಅವರ ತಮ್ಮ ಕರನ್ ಬಿರ್ ರೈಡ್ ಇವರು ಮಿನಿಷ್ಟರ್ ಆಗಿದ್ದರು. ರೈಡ್ ರವರ ತಾಯಿ ಸ್ವಯಂ ಸೇವಕ ಸಲಹೆಗಾರರಾಗಿ ವ್ರವೆನ್ಪ್ ಕರೆಕ್ಷನಲ್ ಸಹಾಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಂದೆ ರಾಜಕಾರಣಿಯಾಗಿ ಹಾಗೂ ವಿಜ್ಙಾನದ ಪ್ರೊಫೆಸರ್ ಆಗಿ ಸಂತ ಮೋನಿಕ ಕಾಲೇಜಿನಲ್ಲಿ ಕೆಲಸ ನಿರ್ವಹಿಸಿದ್ದರು. ರೈಡ್ ರವರ ತಮ್ಮ ಪ್ರಾಥಮಿಕ ಶಾಲೆಯನ್ನು ಪೊರ್ ಟೆಲ್ ಮಿಡಲ್ ಸ್ಕುಲ್ ನಲ್ಲಿ ಮುಗಿಸಿ ಮತ್ತು ನಂತರ ಬಿರಾಮಿನ್ ಗಮಾ ಹೈ ಸ್ಕೂಲ್, ನಂತರ ಡಿಗ್ರಿಯನ್ನು ವೆಸ್ಕ್ ಲೆಕ್ ಹುಡುಗರ ಸ್ಕೂಲ್ , ಲಾಸ್ ಏಂಜಲೀಸ್ ನಲ್ಲಿ ಸ್ಕಾಲರ್ಶೀಪ್ ಸಹಾಯದಿಂದ ಮಾಡಿದರು. ಶೈಕ್ಷಣಿಕನ್ನು ಬಿಟ್ಟು ರೈಡ್ ರವರು ನ್ಯಾಷನಲ್ ಟೆನಿಸ್ ಪ್ಲೇಯರ್ ಆಗಿದ್ದರು.

ವೈಯಕ್ತಿಕ ಜೀವನ[ಬದಲಾಯಿಸಿ]

ರೈಡ್ ತನ್ನ ವೈಯಕ್ತಿಕ ಜೀವನದ ಬಗ್ಗೆ ಅತ್ಯಂತ ಆಸಕ್ತಿತೊರಿಸುತ್ತಿದರು.೧೯೮೨ರಲ್ಲಿ, ಅವರು ಸಹ ನಾಸಾದಲ್ಲಿ ಗಗನಯಾತ್ರೆ ಮಾಡಿದ್ದ ಸ್ಟೀವ್ ಹಾಲೆಯವರನು ಮದುವೆಯಾದರು.[೪]. ರೈಡ್ ರನ್ನು ಒಬ್ಬ ಉತ್ತಮ ಆಜ್ಞೇಯತಾವಾದಿಯೆಂದು ವರ್ಣಿಸಲಾಗುತ್ತದೆ.ಇವರ ಧಾರ್ಮಿಕ ನಂಬಿಕೆಯ ಕೊರತೆಯು ಯಾರ ಪ್ರಭಾವದಿಂದಲೂ ಹುಟ್ಟಿಕೊಳ್ಳಲಿಲ್ಲ,ಬದಲಿಗೆ ತನ್ನ ಜಿಜ್ಞಾಸೆಯ ಮನಸ್ಸಿನಿಂದ ಹುಟ್ಟಿಕೊಂಡಿತು.ಇವರು ದೇವರ ಅಸ್ತಿತ್ವದ ನಂಬಿಕೆಯನ್ನು ನಿರಾಕರಿಸುತ್ತಿದ್ದರು ಎಂದು ಅವರ ತಾಯಿ ನೆನಪಿಸಿಕೊಳ್ಳುತ್ತಾರೆ.ರೈಡ್ ವಿಶೇಷವಾಗಿ ವಿದೇಶ ಪ್ರಯಾಣ ಮತ್ತು ಟ್ರೆಕಿಂಗ್ ಇಷ್ಟಪಡುತ್ತಿದ್ದರು.ಇವರು ಅನೇಕ ವೃತ್ತಿಪರ ಪ್ರವಾಸವನ್ನು ಕೈಗೊಂಡರು.ಕುಟುಂಬದಲ್ಲಿ ಇವರು 'ರೈಡ್ ' ಎಂದು ಕರೆಯಲ್ಪಡುತ್ತಿದ್ದರು.ಇವರು ಸಾಮಾನ್ಯವಾಗಿ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು.ಇವರು ಯಾರೊಂದಿಗೂ ಆಳವಾದ ಸಂಬಂಧವನ್ನು ಹೊಂದಿರಲಿಲ್ಲವೆಂದು ತೋರುತ್ತದೆ

ನಾಸಾದ ಜೀವನ[ಬದಲಾಯಿಸಿ]

೧೯೭೮ರಲ್ಲಿ ರೈಡ್ ನಾಸ ಸೇರಲು ಆಯ್ಕೆಯಾದರು.ನಾಸಾದಲ್ಲಿ ರೈಡ್ ರವವರು ಗ್ರೌಂನ್ಡ್ ಕ್ಯಾಪ್ಲುಲ್ ಕಮ್ಯುನಿಕೆಟರ್(capcom) ಫರ್ ಮತ್ತು ಇತರೆ ರೊಬೋಟ್ ಡೆವೆಲಪ್ ಮಾಡಲು ಸಹಾಯ ಮಾಡಿದ್ದರು.ಮೊದಲ ರೈಡ್ ರವರು ಮಿಡಿಯಾ ಅಡಿಷನ್ ಆಗಿ ಕೆಲಸ ಮಾಡುತ್ತಿದರು, ಕಾರಣ ಅವರು ಸ್ರ್ತೀಯಾದರಿಂದ. ೧೮ನೇ ಜೂನ್ ೧೯೮೩ರಲ್ಲಿ ರೈಡ್ ರವರು ಅಮೇರಿಕಾದ ಮೊದಲ ಮಹಿಳ ಸ್ಪೆಸ್ ಕ್ರೂ ಆಗಿದ್ದರು ಸ್ಪೆಸ್ ಶಟರ್ ಚಾಲೆಂಜರ್ STS-7.ಅವರು ೩೪೩ ಗಂಟೆಗಳ ಕಾಲ ಸ್ಪೆಸ್ ನಲ್ಲಿ ಸಮಯ ಕಳೆದರು.ಅವರು ಮೂರನೇ ಬಾರಿ ಹೂರಡುವ ಮುನ್ನ ೮ ತಿಂಗಳ ಕಾಲ ಟ್ರೈನಿಂಗ್ ಪಡೆದಿದ್ದರು.

ನಾಸಾದ ನಂತರ[ಬದಲಾಯಿಸಿ]

೧೯೮೭ ರಲ್ಲಿ, ರೈಡ್ ವಾಷಿಂಗ್ಟನ್, ಡಿಸಿಯ ಇಂಟರ್ನ್ಯಾಷನಲ್ ಸೆಕ್ಯೂರಿಟಿ ಹಾಗೂ ಶಸ್ತ್ರಾಸ್ತ್ರ ನಿಯಂತ್ರಣದಲ್ಲಿ ಕೆಲಸಮಾಡಿದರು.೧೯೮೯ರಲ್ಲಿ ಅವರು ಕ್ಯಾಲಿಫೋರ್ನಿಯಾ ಸ್ಪೇಸ್ ಇನ್ಸ್ಟಿಟ್ಯೂಟ್ ಆಫ್ ಕ್ಯಾಲಿಫೋರ್ನಿಯಾ , ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರೊಫೆಸರ್ ಮತ್ತು ನಿರ್ದೇಶಕರಾಗಿ ಸೇವೆಸಲ್ಲಿಸಿದರು.೧೯೯೦ರ ಮಧ್ಯಾವಧಿಯಿಂದ ನಿಧನರಾಗುವ ತನಕ , ರೈಡ್ ನಾಸಾಗೆ ಎರಡು ಸಾರ್ವಜನಿಕರ-ಮನವರಿಕೆ ಕಾರ್ಯಕ್ರಮಗಳು ನಡೆಸಿಕೂಟರು.೨೦೦೩ರಲ್ಲಿ ಅವರು ಕೊಲಂಬಿಯಾ ಅಪಘಾತ ತನಿಖಾ ಮಂಡಳಿಯಲ್ಲಿ ಸೇವೆಸಲ್ಲಿಸಿದರು. ಅವರು ಸ್ಯಾಲಿ ರೈಡ್ ಸೈನ್ಸ್ ನ ಅಧ್ಯಕ್ಷರು ಮತ್ತು ಸಿಇಒಆಗಿದ್ದರು, ಪ್ರಾಥಮಿಕ ಮತ್ತು ಮಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಕಾರ್ಯಕ್ರಮಗಳ ಹಂಬಿಕೂಂಡರು.[೫]


ಇತರೆ ಸಂಬಂಧಪಟ್ಟ ಪುಟಗಳು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]