ಸ್ಮಿತಾ ಅಮೃತರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನಡದ ಸೃಜನಶೀಲ ಬರಹಗಾರ್ತಿ ಸ್ಮಿತಾ ಅಮೃತರಾಜ್

ಸ್ಮಿತಾ ಅಮೃತರಾಜ್ ಕನ್ನಡದ ಸೃಜನಶೀಲ ಬರಹಗಾರ್ತಿ..[೧] ಸುಳ್ಯ ತಾಲೂಕಿನ ಸಂಪಾಜೆಯ ಚೆಂಬುವಿನ ಕುಯಿಂತೋಡಿನಲ್ಲಿ ವಾಸವಾಗಿದ್ದಾರೆ. ಗೃಹಿಣಿ ಮತ್ತು ಕೃಷಿಕ ಮಹಿಳೆ. ಕನ್ನಡ ಎಂ.ಎ. ಪದವೀಧರೆ, ಲಲಿತ ಪ್ರಬಂಧ, ಕವನ ಸಂಕಲನ, ಪುಸ್ತಕ ಪರಿಚಯ ಸೇರಿದಂತೆ ಒಟ್ಟು ಏಳು ಪುಸ್ತಕಗಳು ಪ್ರಕಟಗೊಂಡಿವೆ. ಕಾಲ ಕಾಯುವುದಿಲ್ಲ ತುಟಿಯಂಚಿನಲ್ಲಿ ಉಳಿದ ಕವಿತೆಗಳು, ಮಾತು ಮೀಟಿ ಹೋಗುವ ಹೊತ್ತು ಹೀಗೆ ಮೂರು ಕವನ ಸಂಕಲನಗಳು ಪ್ರಕಟವಾಗಿವೆ.[೨]

೨೦೨೧ರಲ್ಲಿ ದೆಹಲಿಯ ಸಾಹಿತ್ಯ ಅಕಾಡೆಮಿ ಆಯೋಜಿಸಿದ ಕವಿಗೋಷ್ಠಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಹೈದರಾಬಾದಿನಲ್ಲಿ ನಡೆದ ಹೊರನಾಡ ಕನ್ನಡಿಗರ ಕವಿಗೋಷ್ಠಿ, ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಮೈಸೂರು ಕವಿಗೋಷ್ಠಿ, ಮಡಿಕೇರಿ, ಬೆಂಗಳೂರು ಆಕಾಶವಾಣಿ ಸೇರಿದಂತೆ ಅನೇಕ ಕವಿಗೋಷ್ಠಿಗಳಲ್ಲಿ ಕವಿತೆ ವಾಚನ ಮಾಡಿದ್ದಾರೆ. ಇವರ ಕೆಲವು ಕವಿತ ಮತ್ತು ಪ್ರಬಂಧಗಳಿಗೆ ಬಹುಮಾನಗಳು ಸಂದಿವೆ. ಇವರ ಕೆಲ ಕವಿತೆಗಳು ಇಂಗ್ಲಿಷ್ ಮತ್ತು ಮಲಯಾಳಂಗೆ ಅನುವಾದಗೊಂಡಿದೆ.

ಇವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಾಹಿತ್ಯ ಕೃತಿಗಳಿಗೆ ಸಂದಿವೆ. ಪ್ರಸ್ತುತ ಇವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದಾರೆ.

ಹುಟ್ಟು[ಬದಲಾಯಿಸಿ]

ಸ್ಮಿತಾ ರವರು 1978 ಜನವರಿ 08 ಜನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪಂಜ ಗ್ರಾಮದ ಪಳಂಗಾಯ ಮನೆಯಲ್ಲಿ ಜನಿಸಿದ ಇವರು ಕೊಡಗಿನ ಸಂಪಾಜೆ ಬಳಿಯ ಚೆಂಬುವಿನಲ್ಲಿ ವಾಸವಾಗಿದ್ದಾರೆ.

ಶಿಕ್ಷಣ[ಬದಲಾಯಿಸಿ]

ಪ್ರಾಥಮಿಕ ಶಿಕ್ಷಣವನ್ನು ಮಡಿಕೇರಿಯ ಮೇಕೇರಿ ಶಾಲೆ, ಪ್ರೌಡ ಶಿಕ್ಷಣ ಜೂನಿಯರ್ ಕಾಲೇಜು,ಮಡಿಕೇರಿ, ಪಿ.ಯು.ಸಿ.ಸಂತ ಪಿಲೋಮಿನ ಕಾಲೇಜು.ಪುತ್ತೂರು, ಪದವಿ - ನೆಹರು ಮೆಮೋರಿಯಲ್ ಕಾಲೇಜು.ಸುಳ್ಯ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ - ಮಂಗಳೂರು ಮುಕ್ತ ವಿಶ್ವವಿದ್ಯಾನಿಲಯ.

ಕೃತಿಗಳು[ಬದಲಾಯಿಸಿ]

ಕವನ ಸಂಕಲನ[ಬದಲಾಯಿಸಿ]

  1. ಕಾಲ ಕಾಯುವುದಿಲ್ಲ

ಲಲಿತ ಪ್ರಬಂಧಗಳು[ಬದಲಾಯಿಸಿ]

  1. ಅಂಗಳದಂಚಿನ ಕನವರಿಕೆಗಳು
  2. ಒಂದು ವಿಳಾಸದ ಹಿಂದೆ[೩]
  3. ನೆಲದಾಯ ಪರಿಮಳ

ಪುಸ್ತಕ ಪರಿಚಯ[ಬದಲಾಯಿಸಿ]

  1. ಹೊತ್ತಗೆ ಹೊತ್ತು

ಪ್ರಶಸ್ತಿ[ಬದಲಾಯಿಸಿ]

  1. ಮುಂಬೈಯ ಸುಶೀಲಾ ಸೀತಾರಾಮ ಶೆಟ್ಟಿ ಪ್ರಶಸ್ತಿ,
  2. ಕೊಡಗಿನ ಗೌರಮ್ಮ ಪ್ರಶಸ್ತಿ[೪]
  3. ಸಾಹಿತ್ಯ ರತ್ನ ಪ್ರಶಸ್ತಿ
  4. ಕಾಯಕ ರತ್ನ ಪ್ರಶಸ್ತಿ
  5. ಸುಳ್ಯದ ಚಂದನ ಪ್ರಶಸ್ತಿ
  6. ಬಿ.ಎಂ.ಶ್ರೀ ಸಾಹಿತ್ಯ ಪ್ರಶಸ್ತಿ
  7. ದಾರಿ ದೀಪ ಪ್ರಶಸ್ತಿ.
  8. ಗುರುಕುಲ ಕಲಾ ಪ್ರಶಸ್ತಿ ೨೦೨೧
  9. ಅಡ್ವೈಸರ್ ಕಾವ್ಯ ಪ್ರಶಸ್ತಿ ೨೦೨೧
  10. ಸಾಭಿಮಾನಿ ಪುಸ್ತಕ ಪ್ರಶಸ್ತಿ ೨೦೨೧

ಗೌರವ[ಬದಲಾಯಿಸಿ]

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರು.

ಹೆಚ್ಚಿನ ಮಾಹಿತಿಗಾಗಿ ನೋಡಿ[ಬದಲಾಯಿಸಿ]

  1. ಸಂಪಿಗೆ ಕವಯಿತ್ರಿ ಸ್ಮಿತಾ ಅಮೃತರಾಜ್ | https://www.youtube.com/watch?v=jY1qpR6QOwU
  2. ಶ್ರೀಮತಿ ಸ್ಮಿತಾ ಅಮೃತರಾಜ್ ಸಂಪಾಜೆ ಕೃತಿ - ಒಂದು ವಿಳಾಸದ ಹಿಂದೆ |https://www.youtube.com/watch?v=zNGv0DtSRco
  3. https://www.kendasampige.com/ಸ್ಮಿತಾ-ಅಮೃತರಾಜ್-ಬರೆದ-ದಿನ
  4. https://sangaati.in/?p=12910 | ಸ್ಮಿತಾರವರ ಎರಡು ಕವಿತೆಗಳು

ಉಲ್ಲೇಖ[ಬದಲಾಯಿಸಿ]

  1. "ಸ್ಮಿತಾ ಅಮೃತರಾಜ್". www.bookbrahma.com (in ಇಂಗ್ಲಿಷ್).
  2. "ಸ್ಮಿತಾ ಅಮೃತರಾಜ್ ಕವಿತೆ- ರೂಪಾಂತರ | ಅವಧಿ । AVADHI". avadhimag.in. 10 August 2020.
  3. "ಸ್ಮಿತಾ ಅಮೃತರಾಜ್ ಅವರ ಪ್ರಬಂಧ ಸಂಕಲನ ಬಹುಮಾನಕ್ಕೆ ಆಯ್ಕೆ - Shakthi Daily". www.shakthidaily.info (in ಇಂಗ್ಲಿಷ್).
  4. https://vijaykarnataka.indiatimes.com/district/kodagu/smita-was-selected-gowramma-award/articleshow/48332789.cms