ಕೊಡಗಿನ ಗೌರಮ್ಮ

ವಿಕಿಪೀಡಿಯ ಇಂದ
Jump to navigation Jump to search

ಕೊಡಗಿನ ಗೌರಮ್ಮನವರು ಕನ್ನಡದ ಪ್ರಥಮ ಕತೆಗಾರ್ತಿ ಎಂದು ಹೆಸರಾಗಿದ್ದಾರೆ. ಇವರು ೧೯೧೨ ರಲ್ಲಿ ಮಡಿಕೇರಿಯಲ್ಲಿ ಜನಿಸಿದರು. ಪ್ರಾರಂಭಿಕ ವಿದ್ಯಾಭ್ಯಾಸ ಮಡಿಕೇರಿಯಲ್ಲಿ ಆಯಿತು. ೧೯೨೮ ರಲ್ಲಿ ಬಿ.ಟಿ.ಗೋಪಾಲಕೃಷ್ಣರ ಜೊತೆ ಇವರ ವಿವಾಹವಾಯಿತು. ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ಮಹಾತ್ಮಾ ಗಾ೦ಧೀಜಿಯವರು ಕೊಡಗಿನಲ್ಲಿ ಪ್ರವಾಸ ಕೈಗೊಂಡಾಗ ಅವರನ್ನು ತಮ್ಮ ಮನೆಗೆ ಬರಮಾಡಿಕೊಂಡು ತಮ್ಮ ಆಭರಣಗಳನ್ನೆಲ್ಲ ದಾನ ನೀಡಿದರು. ತಾರುಣ್ಯದಲ್ಲೆ ಇವರ ಪತಿ ನಿಧನ ಹೊಂದಿದರು.


ಗೌರಮ್ಮನವರು ಮಿಸೆಸ್ ಬಿ.ಟಿ.ಜಿ.ಕೃಷ್ಣ ಎನ್ನುವ ಹೆಸರಿನಲ್ಲಿ ಕತೆಗಳನ್ನು ಬರೆದಿದ್ದಾರೆ. ೧೯೩೧ ರಿಂದ ೧೯೩೯ ರವರೆಗೆ ಇವರು ರಚಿಸಿದ ಸಣ್ಣ ಕತೆಗಳು ಪ್ರಸಿದ್ಧ ಕಥೆ "ಮಗುವಿನ ರಾಣಿ".ಕಂಬನಿ, ಚಿಗುರು ಹಾಗು ಗೌರಮ್ಮನ ಕಥೆಗಳು ಎಂಬ ಶೀರ್ಷಿಕೆಗಳಲ್ಲಿ ಪ್ರಕಟವಾಗಿವೆ.


೧೯೪೦ ರಲ್ಲಿ ಗೌರಮ್ಮನವರು ತಮ್ಮ ಮನೆಯ ಸಮೀಪದ ಹೊಳೆಯಲ್ಲಿ ಈಜಲು ಹೋದಾಗ ಆಕಸ್ಮಿಕವಾಗಿ ಮುಳುಗಿ ದುರಂತ ಸಾವಿಗೀಡಾದರು.