ಸ್ಮಶಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಳ್ಳಿಯ ಹೊರಗಿನ ಸ್ಮಶಾನ

ಸ್ಮಶಾನ ಒಂದು ಹಿಂದೂ ಶವದಹನ ಭೂಮಿ. ಇಲ್ಲಿ ಹೆಣಗಳನ್ನು ತಂದು ಚಿತೆಯ ಮೇಲೆ ಸುಡಲಾಗುತ್ತದೆ. ಇದು ಸಾಮಾನ್ಯವಾಗಿ ನದಿ ಅಥವಾ ಜಲರಾಶಿಯ ಹತ್ತಿರ ಹಳ್ಳಿ ಅಥವಾ ಪಟ್ಟಣದ ಹೊರವಲಯದಲ್ಲಿ ಸ್ಥಿತವಾಗಿರುತ್ತದೆ. ಇವು ಸಾಮಾನ್ಯವಾಗಿ ನದಿ ಘಾಟ್‍ಗಳ ಹತ್ತಿರ ಇರುವುದರಿಂದ ಇವಕ್ಕೆ ಸ್ಮಶಾನ ಘಾಟ್ ಎಂದೂ ಕರೆಯಲಾಗುತ್ತದೆ.

ಈ ಶಬ್ದ ತನ್ನ ಮೂಲವನ್ನು ಸಂಸ್ಕೃತ ಭಾಷೆಯಿಂದ ಪಡೆದಿದೆ: ಸ್ಮ ಅಂದರೆ ಶವ , ಶಾನ ಅಂದರೆ ಶನ್ಯ ("ಹಾಸಿಗೆ").[೧] ಸಿಖ್ ಧರ್ಮ, ಜೈನ ಧರ್ಮ ಮತ್ತು ಬೌದ್ಧ ಧರ್ಮದಂತಹ ಇತರ ಭಾರತೀಯ ಧರ್ಮಗಳೂ ಸತ್ತವರ ಅಂತಿಮ ಸಂಸ್ಕಾರಕ್ಕೆ ಸ್ಮಶಾನವನ್ನು ಬಳಸುತ್ತವೆ.

ಹಿಂದು ವಿಧಿಗಳ ಪ್ರಕಾರ, ಶವವನ್ನು ಸ್ಮಶಾನಕ್ಕೆ ಅಂತಿಮ ಸಂಸ್ಕಾರಕ್ಕಾಗಿ ತರಲಾಗುತ್ತದೆ. ಸ್ಮಶಾನದಲ್ಲಿ, ಮುಖ್ಯ ಶೋಕಾಚರಕನು ಪವಿತ್ರ ಅಗ್ನಿಯನ್ನು ಸ್ಮಶಾನದ ಹತ್ತಿರವಿರುವ ಡೋಮ ಜಾತಿಯವರಿಂದ ಪಡೆದು ಚಿತೆಯನ್ನು ಹತ್ತಿಸಬೇಕು. ಇದಕ್ಕೆ ಅವರು ಶುಲ್ಕವನ್ನು ಪಡೆಯಬೇಕು.

ವಿವಿಧ ಹಿಂದೂ ಧರ್ಮಗ್ರಂಥಗಳು ಸ್ಮಶಾನದ ಸ್ಥಳವನ್ನು ಹೇಗೆ ಆಯ್ಕೆಮಾಡಬೇಕು ಎಂಬ ವಿವರಗಳನ್ನೂ ಕೊಡುತ್ತವೆ: ಅದು ಹಳ್ಳಿಯ ಉತ್ತರ ದಿಕ್ಕಿಗೆ ಇರಬೇಕು ಮತ್ತು ಅದರ ನೆಲ ದಕ್ಷಿಣದ ಕಡೆ ಇಳಿಜಾರಾಗಿರಬೇಕು, ಮತ್ತು ಅದು ನದಿ ಅಥವಾ ಜಲಮೂಲದ ಹತ್ತಿರ ಇದ್ದು ದೂರದಿಂದ ಕಾಣಿಸಬಾರದು.

ಶವಗಳನ್ನು ಸಾಂಪ್ರದಾಯಿಕವಾಗಿ ಸಾಮಾನ್ಯವಾಗಿ ಕಟ್ಟಿಗೆಯಿಂದ ಮಾಡಿದ ಚಿತೆಯ ಮೇಲೆ ಸುಡಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ, ಭಾರತದ ಅನೇಕ ನಗರಗಳಲ್ಲಿ, ಒಳಾಂಗಣ ಚಿತಾಗಾರದಲ್ಲಿ ಬಳಸಲಾದ ವಿದ್ಯುತ್ ಅಥವಾ ಅನಿಲ ಆಧಾರಿತ ಕುಲುಮೆಗಳಿರುತ್ತವೆ.

ಜನರು ಸಾಮಾನ್ಯವಾಗಿ ರಾತ್ರಿಯ ಸಮಯ ಸ್ಮಶಾನದ ಹತ್ತಿರ ಹೋಗುವುದಿಲ್ಲ. ಹಿಂದೂ ಆಚರಣೆಗಳ ಪ್ರಕಾರ ಮಹಿಳೆಯರು ಸ್ಮಶಾನಕ್ಕೆ ಹೋಗುವುದಿಲ್ಲ, ಕೇವಲ ಪುರುಷರು ಅಂತಿಮ ಸಂಸ್ಕಾರ ನೆರವೇರಿಸಲು ಸ್ಮಶಾನಕ್ಕೆ ಹೋಗುತ್ತಾರೆ. ಕೇವಲ ಡೋಮರು ಅಥವಾ ಚಂಡಾಲರು ಸ್ಮಶಾನದಲ್ಲಿ ಅಥವಾ ಅದರ ಹತ್ತಿರ ವಾಸಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. Diana L. Eck (1982). Banaras: City of Light. Routledge & Kegan Paul. pp. 33–. ISBN 978-0-7102-0236-9. Retrieved 9 September 2012.
"https://kn.wikipedia.org/w/index.php?title=ಸ್ಮಶಾನ&oldid=778146" ಇಂದ ಪಡೆಯಲ್ಪಟ್ಟಿದೆ