ಸ್ತನ ಚೀಲ
ಸ್ತನದ ಒಳಗೆ ದ್ರವ ತುಂಬಿದ ಚೀಲವೇ ಸ್ತನ ಚೀಲ. ಒಂದು ಸ್ತನದ ಒಳಗೆ ಒಂದು ಅಥವಾ ಹೆಚ್ಚು ಸ್ತನ ಚೀಲಗಳು ಇರಬಹುದು. ಅವು ಸಾಮಾನ್ಯವಾಗಿ ಗೋಲಾಕಾರ ಅಥವಾ ಅಂಡಾಕಾರದ ಉಂಡೆಗಳಾಗಿರುತ್ತವೆ. ಸಾಮಾನ್ಯವಾಗಿ ಸ್ತನಚೀಲಗಳು ಮುಟ್ಟಿದಾಗ ದ್ರಾಕ್ಷಿ ಅಥವಾ ನೀರು ತುಂಬಿದ ಬಲೂನ್ ತರಹ ಭಾವನೆಯಾಗುತ್ತದೆ. ಕೆಲವೊಮ್ಮೆ ಅವು ಗಟ್ಟಿಯಾಗಿಯೂ ಕಂಡುಬರುತ್ತವೆ.[೧]
ಸ್ತನ ಚೀಲಗಳು ಸಾಮಾನ್ಯವಾಗಿ ನೋವನ್ನುಂಟುಮಾಡುತ್ತವಾದರೂ ಅವು ಅಷ್ಟು ಹಾನಿಕಾರಕವಲ್ಲ. ಮುಟ್ಟು ನಿಲ್ಲುತ್ತಿರುವ ಮಹಿಳೆಯರಲ್ಲಿ ತಮ್ಮ ೩೦ ರಿಂದ ೪೦ ವರ್ಷ ಪ್ರಾಯದ ಮುಟ್ಟು ನಿಲ್ಲುವ ಮಹಿಳೆಯರಲ್ಲಿ ಇವು ಸಾಮಾನ್ಯವಾಗಿ ಕಂಡುಬರುತ್ತವೆ. ಇವು ಸಾಮಾನ್ಯವಾಗಿ ಮುಟ್ಟು ನಿಂತಾಗ ಕಣ್ಮರೆಯಾಗುತ್ತವೆ. ಕೆಲವೊಮ್ಮೆ ಹದಿಹರೆಯದವರಲ್ಲೂ ಸ್ತನಚೀಲಗಳು ಕಂಡುರುತ್ತವೆ.[೨] ನೋವು ಮತ್ತು ಊತಗಳು ಸಾಮಾನ್ಯವಾಗಿ ಋತುಚಕ್ರದ ದ್ವಿತೀಯಾರ್ಧದಲ್ಲಿ ಅಥವಾ ಗರ್ಭಧಾರಣೆಯ ಸಮಯದಲ್ಲಿ ಹೆಚ್ಚಾಗಬಹುದು.
ಸ್ತನ ಚೀಲಗಳಿಗೆ ಸಾಮಾನ್ಯವಾಗಿ ಚಿಕಿತ್ಸೆ ಅನಿವಾರ್ಯವಲ್ಲವಾದರೂ ನೋವು ಅಥವಾ ಕಿರಕಿರಿ ಆಗುತ್ತಿದ್ದಲ್ಲಿ ಚಿಕಿತ್ಸೆ ಮಾಡಬಹುದು. ಹಾಲಿನ ಗ್ರಂಥಿಗಳು ದೊಡ್ಡದಾಗುವುದರಿಂದ ಸ್ತನಚೀಲಗಳು ನಿರ್ಮಾಣವಾಗುತ್ತವೆ. ಅವುಗಳ ಗಾತ್ರ ಒಂದು ನೆಲಗಡಲೆಯಷ್ಟರಿಂದ ಒಂದು ಚಿಕ್ಕ ನಿಂಬೆಹಣ್ಣಿನಷ್ಟಿರಬಹುದು.[೩] ಅವುಗಳ ಗಾತ್ರ ಎಷ್ಟಿದ್ದರೂ ಸಾಮಾನ್ಯ ದೈಹಿಕ ಪರೀಕ್ಷೆಯಲ್ಲಿ ಅವುಗಳನ್ನು ಪತ್ತೆಹಚ್ಚುವುದು ಕಷ್ಟ.
ಸ್ತನ ಚೀಲಗಳನ್ನು ಹಾಲಿನ ಗ್ರಂಥಿಗಳ ಜೊತೆ ಗೊಂದಲ ಮಾಡಿಕೊಳ್ಳಬಾರದು. ಅವೆರಡೂ ಬೇರೆ ಬೇರೆ.
ಚಿಹ್ನೆಗಳು ಮತ್ತು ಲಕ್ಷಣಗಳು
[ಬದಲಾಯಿಸಿ]ಸ್ತನ ಚೀಲಗಳ ಚಿಹ್ನೆಗಳು ಮತ್ತು ಲಕ್ಷಣಗಳಲ್ಲಿ ಇವು ಸೇರಿವೆ:
- ಒಂದು ನಯವಾದ, ಸುಲಭವಾಗಿ ಚಲಿಸಬಲ್ಲ ಅಂಡಾಕಾರದ ಸ್ತನ ಗಡ್ಡೆ.
- ಎದೆ ನೋವು ಅಥವಾ ಗಡ್ಡೆಯ ಪ್ರದೇಶದಲ್ಲಿ ಮೃದುತ್ವ.
- ಮುಟ್ಟಿನ ಮುನ್ನ ಗೆಡ್ಡೆಯ ಗಾತ್ರದಲ್ಲಿ ಮತ್ತು ಮೃದುತ್ವದಲ್ಲಿ ಹೆಚ್ಚಳ.
ಒಂದು ಅಥವಾ ಅನೇಕ ಸರಳ ಸ್ತನ ಚೀಲಗಳಿಂದಾಗಿ ಸ್ತನ ಕ್ಯಾನ್ಸರ್ ಆಗುವ ಸಾಧ್ಯತೆ ಕಡಿಮೆ.[೪]
ಸಾಮಾನ್ಯವಾಗಿ ಸ್ವಯಂ ಪರೀಕ್ಷೆ ಅಥವಾ ದೈಹಿಕ ಪರೀಕ್ಷೆಯಲ್ಲಿ ಸ್ತನಗೆಡ್ಡೆ ಅಥವಾ ಸ್ತನಚೀಲಗಳು ಕಂಡುಬರುವುದಿಲ್ಲ. ಆದರೂ, ಕೆಲವು ಸಂದರ್ಭಗಳಲ್ಲಿ, ವಿಶೇಷವಾಗಿ ಅವು ದೊಡ್ಡದಾಗಿದ್ದರೆ ಅವುಗಳನ್ನು ಗಮನಿಸಬಹುದು.
ರೋಗನಿರ್ಣಯ
[ಬದಲಾಯಿಸಿ]ಅಲ್ಟ್ರಾಸೌಂಡ್ ಪರೀಕ್ಷೆ ಅಥವಾ ಮ್ಯಾಮೊಗ್ರಮ್ ಮೂಲಕ ಸ್ತನಚೀಲದ ಗುಣವೈಶಿಷ್ಟ್ಯಗಳನ್ನು ಪರಿಶೀಲಿಸಬಹುದು. ಅಲ್ಟ್ರಾಸೌಂಡ್ ಪರೀಕ್ಷೆಯು ಸ್ತನಚೀಲ ಅಥವಾ ಸ್ತನಗೆಡ್ಡೆಯು ಕ್ಯಾನ್ಸರ್ ಆಗಿರಬಹುದೇ ಎಂಬುದನ್ನೂ ನಿರ್ಣಯಿಸಲು ಸಹಾಯಕಾರಿಯಾಗಿದೆ. ಸ್ತನಚೀಲದಿಂದ ತೆಗೆದ ದ್ರವವನ್ನು ಪ್ರಯೋಗಶಾಲೆಗೆ ಕಳುಹಿಸಿ ಪರಿಶೀಲಿಸಬೇಕು.
ಮೇಲೆ ಹೇಳಿದಂತೆ, ಸಾಮಾನ್ಯವಾಗಿ ಮುಟ್ಟುವುದರಿಂದ ಸ್ತನಚೀಲಗಳು ಪತ್ತೆಯಾಗುವುದಿಲ್ಲ. ಮ್ಯಾಮೊಗ್ರಮ್ ಸ್ಪಷ್ಟ ಚಿತ್ರಣವನ್ನು ನೀಡಬಲ್ಲುದು.
ಸ್ತನಚೀಲಗಳು ಹಲವು ಕಾಲ ಸ್ಥಿರವಾಗಿ ಇರಬಲ್ಲವು ಅಥವಾ ಇದ್ದಕ್ಕಿದ್ದಂತೆ ಗುಣವಾಗಬಲ್ಲವು. [೫] ಬಹುತೇಕ ಸಂದರ್ಭಗಳಲ್ಲಿ ಸ್ತನಚೀಲಗಳಿಗೆ ಯಾವುದೇ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಕೆಲವು ಜಟಿಲ ಅಥವಾ ಸೂಕ್ಷ್ಮ ಸಂದರ್ಭಗಳಲ್ಲಿ ಹೆಚ್ಚಿನ ರೋಗನಿರ್ಣಯಕ್ಕಾಗಿ ಸೂಜಿ ಬಯಾಪ್ಸಿಯನ್ನು ಮಾಡಿ ಕ್ಯಾನ್ಸರ್ ಹೌದೇ ಅಲ್ಲವೇ ಎಂಬುದನ್ನು ನಿರ್ಣಯಿಸಬಹುದು.[೬]
ತಡೆಗಟ್ಟುವಿಕೆ
[ಬದಲಾಯಿಸಿ]ಸ್ತನ ಚೀಲಗಳು ಆಗದಂತೆ ಹಲವು ಸಂದರ್ಭಗಳಲ್ಲಿ ತಡೆಗಟ್ಟಬಹುದು. ಸ್ತನಚೀಲಗಳು ಆಗದಂತೆ ಎಚ್ಚರಿಕೆ ವಹಿಸಲು ತಜ್ಞರು ಮಾಡುವ ಶಿಫಾರಸುಗಳು -ಉತ್ತಮ ಆರೋಗ್ಯ, ಕೆಲವು ಔಷಧಿಗಳನ್ನು ತೆಗೆದುಕೊಳ್ಳದಿರುವುದು, ಸಮತೋಲಿತ ಆಹಾರ ಸೇವಿಸುವುದು, ಅಗತ್ಯ ಜೀವಸತ್ವಗಳನ್ನು ಸೇವಿಸಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಮತ್ತು ಮಾನಸಿಕ ಒತ್ತಡ ಆಗದಂತೆ ನೋಡಿಕೊಳ್ಳುವುದು.[೭]
ಕೆಫೀನ್ ಸೇವನೆಯಿಂದ ಸ್ತನಚೀಲಗಳು ಆಗುತ್ತವೆ ಅಥವಾ ಹೆಚ್ಚಾಗುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲವಾದರೂ, ಕೆಫೀನ್ ಸೇವನೆಯಿಂದ ದೂರವಿದ್ದಾಗ ಸ್ತನಚೀಲದ ಲಕ್ಷಣಗಳು ಕಡಿಮೆಯಾಗಿವೆ ಅನೇಕ ಮಹಿಳೆಯರು ಎಂದು ವರದಿ ಮಾಡಿದ್ದಾರೆ. ಕಡಿಮೆ ಉಪ್ಪು ಸೇವನೆ ಕೂಡ ಸಹಾಯ ಮಾಡಬಹುದು. ಅತಿಯಾದ ಸಕ್ಕರೆ ಸೇವನೆಯು ಸ್ತನಚೀಲಗಳು ಆಗುವ ಸಾದ್ಯತೆಯನ್ನುಹೆಚ್ಚು ಮಾಡಬಹುದು.
ಚಿಕಿತ್ಸೆ
[ಬದಲಾಯಿಸಿ]ಸ್ತನ ಚೀಲಗಳಿಗೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಆದರೂ ಅವು ತುಂಬ ದೊಡ್ಡದಿದ್ದರೆ ಅಥವಾ ನೋವಿದ್ದಲ್ಲಿ, ಸ್ತನಚೀಲದಿಂದ ದ್ರವವನ್ನು ತೆಗೆಯುವ ಮೂಲಕ ನೋವನ್ನು ಕಡಿಮೆ ಮಾಡಬಹುದು. ಸೂಜಿ ಬಯಾಪ್ಸಿ ಮೂಲಕ ಇದನ್ನು ಮಾಡಬಹುದಾಗಿದೆ. ಮತ್ತೆ ಮತ್ತೆ ಕಾಣಿಸಿಕೊಳ್ಳುವ ಸ್ತನಚೀಲಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬಹುದು. ಶಸ್ತ್ರಚಿಕಿತ್ಸೆಯ ಮೂಲಕ ಸ್ತನ ಚೀಲವನ್ನು ತೆಗೆಯುವ ಅಗತ್ಯ ಕೆಲವು ಅಪರೂಪದ ಸಂದರ್ಭಗಳಲ್ಲಿ ಕಂಡುಬರಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ Mayo Clinic Staff (9 November 2012). "Breast cysts". Mayo Clinic. Retrieved 2015-05-16.
- ↑ Victor C. Strasburger (2006). Adolescent Medicine: A Handbook for Primary Care. Lippincott Williams & Wilkins. p. 228. ISBN 978-0-7817-5315-9.
- ↑ "Breast Cysts". Retrieved 2010-06-25.
- ↑ Mayo Clinic Staff (9 November 2012). "Breast cysts Symptoms". Mayo Clinic. Archived from the original on 26 July 2015. Retrieved 2015-05-16.
- ↑ Veena Chowdhury; Arun Kumar Gupta; Niranjan Khandelwal; et al., eds. (2012). Diagnostic Radiology: Musculoskeletal and Breast Imaging. JP Medical Ltd. p. 484. ISBN 978-93-5025-883-5.
- ↑ "Tests and diagnosis". Retrieved 2010-06-25.
- ↑ "Breast Cyst Treatment Alternatives". Archived from the original on 2015-02-20. Retrieved 2010-06-25.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)