ಸೌಂದರ್ಯಾ ರಾಜೇಶ
ಇವರು ಭಾರತದ ಪಾಂಡಿಚೆರಿಯಲ್ಲಿ ವಾಣಿಜೋದ್ಯಮಿ ಆಗಿದ್ದರು. ಇವರು ಎವಿಟಿಎಆರ್ ಕ್ಯಾರೀರ್ ಕ್ರೀಯೆಟರ್ ,ಎಫ್ಎಲ್ಇಎಕ್ಸ್ಐ ಕ್ಯಾರೀರ್ ಮತ್ತು ಎವಿಟಿಎಆರ್ ಮಾನವ ಮಹಾ ಸಂಸ್ಥೆಯ ಸ್ಥಾಪನಾಧ್ಯಕ್ಫರು.ಇವರು ಮಹಿಳೆಯರನ್ನು ಉದ್ಯೋಗ ಕ್ಷೇತ್ರದಲ್ಲಿ ಭಾಗವಹಿಸಲು ಪ್ರೇರಣೆ ನೀಡಿದರು .ಇವರು ಚೆನ್ನೈ ,ತಮಿಳು ನಾಡು ,ಭಾರತದಲ್ಲಿ ಪಿಎಚ್ ಡಿ ಯನ್ನು ಮುಗಿಸಿದ್ದಾರೆ .
ಬಾಲ್ಯ ಮತ್ತು ಶಿಕ್ಷಣ
[ಬದಲಾಯಿಸಿ]ಸೌಂದರ್ಯ ಅವರು ಉದ್ಯಮಿಯಾಗಿರುವ ಎಂ.ಎಸ್.ಚಂದ್ರಶೇಖರ್ ಮತ್ತು ಶಾಂತ ಚಂದ್ರಶೇಖರ್ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು .ಮುಂದೆ ಅವರ ಕುಟುಂಬವು ಪಾಂಡಿಚೆರಿಗೆ ವಲಸೆ ಹೋಯಿತು .ಸೌಂದರ್ಯ ಇವರು ತಮ್ಮ ವಿದ್ಯಾಭ್ಯಾಸವನ್ನು St.ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಮುಗಿಸಿದರು .ಇವರ ಇಂಗ್ಲೀಷ್ ಸಾಹಿತ್ಯಕ್ಕೆ ಮದ್ರಾಸ್ ವಿಶ್ವ ವಿದ್ಯಾಲಯವು ಚಿನ್ನದ ಪದಕವನ್ನು ನೀಡದ್ದಾರೆ .ಇವರ ಬಿ.ಎ ಪದವಿಯನ್ನು ಭಾರತಿದಾಸನ್ ಮಹಿಳಾ ಸರ್ಕಾರಿ ಕಾಲೀಜಿನಲ್ಲಿ ೧೯೮೮ ರಲ್ಲಿ ಮುಗಿಸಿದರು .ನಂತರ ಎಂ.ಬಿ.ಎ ಯನ್ನು ಪಾಂಡಿಚೇರಿ ವಿಶ್ವ ವಿದ್ಯಾಲಯದಲ್ಲಿ ೧೯೯೦ ರಲ್ಲಿ ಮುಗಿಸಿದ್ದಾರೆ .ಮದ್ರಾಸ್ ವಿಶ್ವ ವಿದ್ಯಾಲಯದಲ್ಲಿ ೧೯೯೪ ರಂದು ಇಂಗ್ಲಿಷ್ ಸಾಹಿತ್ಯದಲ್ಲಿ ಮಾಸ್ಟರ್ ಆಗಿ ಹೊರಹೊಮ್ಮಿದರು .ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಪಿಎಚ್ ಡಿ ಯನ್ನು ಎಸ್ಆರ್ಎಂ ವಿಶ್ವ ವಿದ್ಯಾಲಯದಲ್ಲಿ ೨೦೧೪ ರಂದು ಮುಗಿಸಿದ್ದಾರೆ .
ವೃತ್ತಿ ಬದುಕು
[ಬದಲಾಯಿಸಿ]ಸೌಂದರ್ಯ ಅವರು ೧೯೯೦ ರಲ್ಲಿ ಸಿಟಿ ಬ್ಯಾಂಕ್ ನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು.[೧] ಮೊದಲ ಮಗಳ ಜನನದ ನಂತರ ಈ ಉದ್ಯೋಗದಿಂದ ಹೊರ ಬಂದು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದಲ್ಲಿ ೧೯೯೨ ರಿಂದ ೯೫ ರವರೆಗೆ ಕಾರ್ಯ ನಿರ್ವಹಿಸಿದ್ದಾರೆ .ಇವರು ಎಂಓಪಿ ಮಹಿಳಾ ಕಾಲೇಜಿನಲ್ಲಿ ಅರೆ ಗಳಿಗೆ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ .ಇವರು ಎವಿಟಿಎಆರ್ ಕ್ಯಾರೀರ್ ಕ್ರಿಯೆಟರ್ ಯನ್ನು ೨೦೦೦ದಲ್ಲಿ, ಎವಿಟಿಎಆರ್ ಮಾನವ ಮಹಾ ಸಂಸ್ಥೆಯನ್ನು ೨೦೦೮ ರಲ್ಲಿ ,ಎಫ್ಎಲ್ಇಎಕ್ಸ್ಐ ಕ್ಯಾರೀರ್ ಇಂಡಿಯಾವನ್ನು ೨೦೧೧ ರಲ್ಲಿ ಆರಂಭಿಸಿದರು .
ಪ್ರಶಸ್ತಿಗಳು
[ಬದಲಾಯಿಸಿ]ಸೌಂದರ್ಯ ರಾಜೇಶ್ ಅವರು ತುಂಬಾ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ .ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರನ್ನು ಹೆಚ್ಚಿಸುದಲ್ಲದೆ ಕೃಷಿಯಲ್ಲಿಯು ಭಾಗವಹಿಸುವಂತೆ ಪ್ರೇರೆಪಿಸಿದ್ದಾರೆ . ಇವರ ಪ್ರಶಸ್ತಿಗಳು:
- ಎಸ್ ಸಿಒಪಿಇ ಮಹಿಳಾ ಎಕ್ಸಾಪ್ಲೆರ್ ಪ್ರಶಸ್ತಿ ೨೦೦೬
- ಯುವಶಕ್ತಿ ಉದ್ಯಮಿ ಪ್ರಶಸ್ತಿ ೨೦೦೭
- ಸ್ವದೇಶಿ ಜಾಗರಣ ಮಂಚ್ ಮಹಿಳಾ ಉದ್ಯೋಗ ನಾಯಕಿ ಪ್ರಶಸ್ತಿ ೨೦೦೮
- ಜೆಪ್ಪಿಯರ್ ಐಕಾನ್ ಪ್ರಶಸ್ತಿ ೨೦೧೬
- ಸ್ತೀ ಶಕ್ತಿ ಮಹಿಳಾ ಉದ್ಯಮಿ ಪ್ರಶಸ್ತಿ ೨೦೧೧
- ನ್ಯಾಚುರಲ್ಸ್ ವಿಶೇಷ ಮಹಿಳಾ ಪ್ರಶಸ್ತಿ[೨]