ವಿಷಯಕ್ಕೆ ಹೋಗು

ಸೋಮವಾರದ ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೋಮವಾರದ ಮರ

[ಬದಲಾಯಿಸಿ]
ಸೋಮವಾರದ ಮರ

ಈ ಮರವು ವಿಭಿನ್ನ ಮತ್ತು ಸಂಕೀರ್ಣ ಜೀವಿವರ್ಗೀಕರಣ ಸಮೂಹವಾಗಿದೆ.ಇದು ಆಗ್ನೇಯ ಏಷ್ಯಾದ ಸ್ಥಳೀಯ ಪೊದೆ ಸಸ್ಯ. ೧೫೭೮ರಲ್ಲಿ ಕ್ರಿಸ್ಟೋಬಲ್ ಅಕೋಸ್ಟಾ ಅವರು ಲಿಗ್ನಮ್ಪ ವನ ಎಂದು ಐರೋಪ್ಯ ಸಾಹಿತ್ಯದಲ್ಲಿ ಮೊದಲ ಬಾರಿಗೆ ಉಲ್ಲೇಖಿಸಿದ್ದಾರೆ. ಇದರ ವೈಜ್ಞಾನಿಕ ಹೆಸರು ಕ್ರೊಟೋನ್‍ ಒಬ್ಲಾಂಗ್ಫೋಲಿಯಸ್‍ರಾಕ್ಸ್ಬ್

ಇತರೆ ಹೆಸರುಗಳು

[ಬದಲಾಯಿಸಿ]
  • ಬಂಗಾಳಿ: ಚುಕಾ, ಬರಾಗಾಚಿ, ಪುತ್ರಿ
  • ಹಿಂದಿ: ಚುಕ್ಕಾ
  • ಮಲೆಯಾಳಂ: ಕಟ್ಟುಪಟೋಲಮ್, ಕೊಟಪುಟೊಲ್
  • ಮರಾಠಿ: ಗಾನಸುರ, ಘನ್-ಸುರಾಂಗ್, ಗನ್ಸುರ್
  • ಸಂಸ್ಕೃತ: ಬುತಮ್ಕುಸಮ್, ಬುಟಂಕುಸಾ, ಬುಧಲಭೈರಿ
  • ತಮಿಳು: ಬುತಂಕುಸಮ್, ಮಿಲಗುನರಿ, ಮಿಲ್ಗುನಾರಿ, ಮಿಲಕುಮಾರಿ
  • ಟಿಬೆಟಿಯನ್: ನಾಗಡಾಟಾನಟಿ
  • ತೆಲುಗು: ಬುತನ್ಕುಸಮ್, ಬುತಲ-ಭೈರಿ, ಬುಟಂಕುಸಮ್
  • ಬುಡಕಟ್ಟು ಹೆಸರು: ಬೊಲ್-ಮಾಂಗ್ಖೋಲ್ಚಾಮ್[]

ಸಸ್ಯದ ವಿವರಣೆ

[ಬದಲಾಯಿಸಿ]

ಇದರ ಎಲೆಗಳುÀ ೧೨.೫-೨೫ಸೆಂ.ಮೀ ಉದ್ದವಿದ್ದು, ಹೂವುಗಳು ಹಳದಿ ಮಿಶ್ರಿತ ಹಸಿರು ಬಣ್ಣ ಹೊಂದಿರುತ್ತದೆ. ಈ ಮರವು ೨೫ ಮೀ ಎತ್ತರದಲ್ಲಿ ಬೆಳೆಯುತ್ತದೆ. ಎಲೆಗಳು ಸರಳವಾಗಿದ್ದು, ಪಯಾರ್ಯವಾಗಿ ಜೋಡಿಸಲಾಗಿದೆ. ಇವುಗಳು ತೇವವಾದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುತ್ತದೆ. ಎಲೆಯ ಎಳೆಗಳೂ ಕೆಂಪು ಬಣ್ಣ ಮತ್ತು ಕಂದು ಬಣ್ಣದಲ್ಲಿರುತ್ತವೆ.

ವಿತರಣೆ

[ಬದಲಾಯಿಸಿ]

ಈ ಪ್ರಭೇದವುಉಷ್ಣವಲಯವಾಗಿದೆ. ಕೆಲವು ಪ್ರಭೇದಗಳು ಸಮಶೀತೋಷ್ಣ ಪ್ರದೇಶಗಳಲ್ಲಿ ವಿಸ್ತರಿಸುತ್ತದೆ. ಇವುಗಳನ್ನು ಹೆಚ್ಚಾಗಿ ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ, ಯುನ್ನಾನ್ಮತ್ತು ವಿಯೆಟ್ನಾಮ್ನಲ್ಲಿ ವಿತರಿಸಲಾಗಿದೆ.[][]

ಉಪಯೋಗಗಳು

[ಬದಲಾಯಿಸಿ]
  • ತೀವ್ರ ಮಲಬದ್ಧತೆಯನ್ನುಗುಣಪಡಿಸುತ್ತದೆ.
  • ಸಾಂಪ್ರಾದಾಯಿಕವಾಗಿ ಗಾಯಗಳನ್ನು ಗುಣಪಡಿಸಲು ಕ್ರೋಟಾನ್‍ ಎಣ್ಣೆಯನ್ನು ಬಳಸುತ್ತಾರೆ.
  • ಶ್ವಾಸಕೋಶದ ಅಂಗವಾಗಿ ಇದನ್ನು ಬಳಸಲಾಗುತ್ತದೆ.
  • ಸ್ಥಳೀಯ ಜನರ ಮೂಲಕ ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
  • ಚೀನೀ ಔಷಧದಲ್ಲಿ ಕ್ರೋಟನ್ತೈಲವನ್ನು ಬಳಸಲಾಗುತ್ತದೆ.
  • ಜ್ವರವನ್ನು ಕಡಿಮೆ ಮಾಡಲು ಇದನ್ನುಉಪಯೋಗಿಸಲಾಗುತ್ತದೆ.
  • ಕರಿಮೆಣಸಿನೊಂದಿಗೆ ಮೂಲ ತೊಗಟೆಯ ಕಷಾಯವನ್ನುಅತಿಸಾರ ಮತ್ತು ಭೇದಿಗೆ ನೀಡಲಾಗುತ್ತದೆ.
  • ಮಾಂಸಗಳಲ್ಲಿಯೂ ಅಥವಾ ವೈನ್ ತಯಾರಿಸಲು ಬಳಸಲಾಗುತ್ತದೆ.
  • ಚರ್ಮದ ಕಾಯಿಲೆಗಳಿಗೆ ಔಷಧೀಯವಾಗಿ ಬಳಕೆ ಮಾಡಲಾಗುತ್ತದೆ.[][]

ಉಲ್ಲೇಖಗಳು

[ಬದಲಾಯಿಸಿ]
  1. http://envis.frlht.org/plantdetails/7a37668167883259bfef3cf604c6c48f/00cf8158bf20f440c4e111cb4cce1551[ಶಾಶ್ವತವಾಗಿ ಮಡಿದ ಕೊಂಡಿ]
  2. https://wikivisually.com/wiki/Chrozophora_tinctoria
  3. https://www.tuninst.net/MP-KS/Euphorbiaceae/Euphorbiaceae.htm
  4. https://uses.plantnet-project.org/en/Croton_(PROSEA_Medicinal_plants)
  5. http://tropical.theferns.info/viewtropical.php?id=Croton+persimilis[ಶಾಶ್ವತವಾಗಿ ಮಡಿದ ಕೊಂಡಿ]