ಸೇಲ್ ರೋಟಿ

ವಿಕಿಪೀಡಿಯ ಇಂದ
Jump to navigation Jump to search
Sel Roti.jpg

ಸೇಲ್ ರೋಟಿ ನೇಪಾಳದಿಂದ ಹುಟ್ಟಿಕೊಂಡ ಮನೆಯಲ್ಲಿ ತಯಾರಿಸಲಾದ ಒಂದು ಸಾಂಪ್ರದಾಯಿಕ, ಸಿಹಿ, ಉಂಗುರ ಆಕಾರದ ಅಕ್ಕಿಯ ಬ್ರೆಡ್/ಡೋನಟ್. ಇದನ್ನು ಹೆಚ್ಚಾಗಿ ನೇಪಾಳ ಮತ್ತು ಸಿಕ್ಕಿಂ ಹಾಗೂ ಡಾರ್ಜಿಲಿಂಗ್‌ ಪ್ರದೇಶಗಳಲ್ಲಿ ವ್ಯಾಪಕವಾಗಿ ಆಚರಿಸಲ್ಪಡುವ ಹಿಂದೂ ಹಬ್ಬಗಳಾದ ದಶೇನ್ ಹಾಗೂ ತಿಹಾರ್‌ಗಳ ಸಂದರ್ಭದಲ್ಲಿ ತಯಾರಿಸಲಾಗುತ್ತದೆ.

ಅಕ್ಕಿ ಹಿಟ್ಟಿಗೆ ಗ್ರಾಹಕೀಯಕೃತ ರುಚಿಗಳನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಹಾಲು, ನೀರು, ಅಡುಗೆ ಎಣ್ಣೆ, ಸಕ್ಕರೆ, ತುಪ್ಪ, ಬೆಣ್ಣೆ, ಏಲಕ್ಕಿ, ಲವಂಗ, ಬಾಳೆಹಣ್ಣು ಮತ್ತು ವೈಯಕ್ತಿಕ ಆಯ್ಕೆಯ ಇತರ ರುಚಿಗಳನ್ನು ಸೇರಿಸಿ ಅಕ್ಕಿ ಹಿಟ್ಟಿನ ಅರೆದ್ರವ ಕಣಕವನ್ನು ಸಾಮಾನ್ಯವಾಗಿ ತಯಾರಿಸಿಕೊಳ್ಳಲಾಗುತ್ತದೆ.[೧] ಕಲಕಿ ಎಲ್ಲ ಘಟಕಾಂಶಗಳನ್ನು ಚೆನ್ನಾಗಿ ಮಿಶ್ರಣ ಮಾಡಲಾಗುತ್ತದೆ. ಒಮ್ಮೆ ಅರೆದ್ರವ ಕಣಕವು ಸಿದ್ಧವಾದ ಮೇಲೆ ಅದನ್ನು ಕುದಿಯುವ ಎಣ್ಣೆ ಅಥವಾ ತುಪ್ಪದಲ್ಲಿ ಕರಿಯಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Archived copy". Archived from the original on 2011-07-14. Retrieved 2010-11-06.CS1 maint: archived copy as title (link)