ಡೋನಟ್
Jump to navigation
Jump to search
ಡೋನಟ್ ಒಂದು ಪ್ರಕಾರದ ಕರಿದ ಕಣಕದ ಮಿಠಾಯಿ ಅಥವಾ ಡಿಜ಼ರ್ಟ್ ಆಹಾರ. ಡೋನಟ್ ಅನೇಕ ದೇಶಗಳಲ್ಲಿ ಜನಪ್ರಿಯವಾಗಿದೆ ಮತ್ತು ಒಂದು ಸಿಹಿ ತಿಂಡಿಯಾಗಿ ವಿವಿಧ ಪ್ರಕಾರಗಳಲ್ಲಿ ತಯಾರಿಸಲ್ಪಡುತ್ತದೆ ಮತ್ತು ಇದನ್ನು ಮನೆಯಲ್ಲಿ ತಯಾರಿಸಬಹುದು ಅಥವಾ ಬೇಕರಿಗಳು, ಸೂಪರ್‍ಮಾರ್ಕೆಟ್‍ಗಳು, ಆಹಾರ ಅಂಗಡಿಗಳು, ಹಾಗೂ ಫ಼್ರಾಂಚೈಸ್ಡ್ ವಿಶೇಷ ಮಳಿಗೆಗಳಲ್ಲಿ ಕೊಳ್ಳಬಹುದು. ಅವನ್ನು ಸಾಮಾನ್ಯವಾಗಿ ಹಿಟ್ಟಿನ ಕಣಕದಿಂದ ಕರಿಯಲಾಗುತ್ತದೆ, ಮತ್ತು ವಿಶಿಷ್ಟವಾಗಿ ಚಕ್ರಾಕಾರ ಅಥವಾ ರಂಧ್ರರಹಿತವಾಗಿರುತ್ತವೆ ಮತ್ತು ಹಲವುವೇಳೆ ತುಂಬಲ್ಪಟ್ಟಿರುತ್ತವೆ.