ಸೆಲೇನಾ ಗಾಡನ್
ಸೆಲೇನಾ ಗಾಡನ್ ಅವರು ಆಂಗ್ಲ ಕವಿಯತ್ರಿ, ಲೇಖಕಿ, ಸಣ್ಣ ಕಥೆಗಾರತಿ ಹಾಗೂ ಅಭಿನೇತ್ರಿ. ಇವರು ಐರೋಪಾದ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ.[೧]
ಕುಟುಂಬ
[ಬದಲಾಯಿಸಿ]ಅವರು ತಮ್ಮನ್ನು ಜಮೈಕಾದ, ಐರ್ಲಂಡಿನ, ಬ್ರಿಟನ್ನಿನ ಮಿಶ್ರಣ ವ್ಯಕ್ತಿ ಎಂದು ಗುರುತಿಸುತ್ತಾರೆ. ಅವರ ತಂದೆಯ ಊರು ಐರ್ಲಂಡ್, ತಾಯಿಯ ಊರು ಜಮೈಕಾ. ಅವರ ಮನೆ ಲಂಡನ್, ಹಾಸ್ಟಿಂಗ್, ಸ್ಪ್ರಿಂಗ ಫ಼ಿಲ್ಡ್ ರೋಡ್ನಲ್ಲಿ ಇತ್ತು. ಸೆಲೇನಾ ಅವರ ತಂದೆ ಜಾಝ್ ಸಂಗೀತಗಾರರು. ಅವರ ಚಿಕ್ಕ ವಯಸ್ಸಿನಲ್ಲೇ ಅವರ ತಂದೆ ಮಯವಾಗಿ ಹೋದರು. ಅವರು ಬೆಳೆಯುತ್ತಿದ್ದ ಕಾಲವಾದ ೧೯೭೦ರಲ್ಲಿ ವರ್ಣ ಭೇಧ ಜಾರಿಯಲ್ಲಿತ್ತು. ಅವರ ಊರಿನಲ್ಲೇ ಇವರು ಮಾತ್ರ ಕಂದು ಬಣ್ಣದಲ್ಲಿದ್ದರು. ಇದರಿಂದ ಇವರನ್ನು ಅಲ್ಲಿನ ಜನರು ಪ್ರತ್ಯೇಕವಾಗಿ ನೋಡುತ್ತಿದ್ದರು. ಅವರಿಗೆ ಸೋದರ ಮತ್ತು ಮಲಸಹೋದರಿ ಇದ್ದರು.
ಬಾಲ್ಯ
[ಬದಲಾಯಿಸಿ]ಅವರು ಚಿಕ್ಕಂದಿನಿಂದಲೇ ಪದ್ಯ ಬರೆಯುತ್ತಿದ್ದರು. ಅವರ ಪದ್ಯ, ಲೇಖನಗಳನ್ನು ಓದಿ ಅವರ ತಾಯಿ 'ನೀನು ನಿನ್ನ ತಂದೆಯ ಹಾಗೇ ಇದ್ದಿಯ.ನಿನ್ನ ತಂದೆಯನ್ನು ನೆನಪಿಗೆ ತರುತ್ತೀಯ' ಎನ್ನಿತ್ತಿದ್ದರು. ಅವರಿಗೆ ತನ್ನ ತಂದೆಯ ಬಗ್ಗೆ ತಿಳಿಯಬೇಕೆಂಬ ಆಸೆ ಇತ್ತು. ಅವರ ತಂದೆ ಸಂಗೀತದಲ್ಲಿ ಪ್ರತಿಭಾವಂತರು. ಅವರು ಮೈಲ್ಸ್ ಡೆವಿಡ್ ಜೋತೆ ಸಂಗೀತ ರಚನೆ ಮಾಡಿದ್ದಾರೆ. ಬೀಟೆಲ್ಸ್ ಆಲ್ಬಮ್ ರಚನೆಯಲ್ಲಿ ಭಾಗವಹಿಸಿದ್ದಾರೆ. ಸೆಲೇನಾ ಜೋನ್ಸ್ ಎಂಬ ಜಾಝ್ ಗಾಯಕಿ ಜೊತೆ ಅವರ ತಂದೆ ಸಂಗೀತದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಸ್ಮರಣೆಯಲ್ಲಿ ಇವರಿಗೆ ಅವರ ಹೆಸರನ್ನು ಇಟ್ಟರು. ಅವರು ಪ್ರಾಯದ ಹುಡುಗಿಯಾಗಿದ್ದಾಗ, ಪ್ರೀತಿ ಸಂಬಂಧ ಪದ್ಯಗಳನ್ನು ಬರೆದು ತಮ್ಮ ಸ್ನೇಹಿತಿಯರಿಗೆ ಅವರವರ ಪ್ರೀಯತಮರಿಗೆ ಕೊಡುವುದಕ್ಕೆ ಸಹಾಯ ಮಾಡಿದರು. ಅವರು ಬೇರೆ ಬೇರೆ ಉದ್ಯೋಗ ಹುಡುಕುತ್ತಿದ್ದಾಗಲೂ ಸಹ, ಪದ್ಯ ಬರೆಯುವುದನ್ನು ಬಡಲಿಲ್ಲ. ಅವರು ಪಬ್ಗಳಲ್ಲೂ ಕೆಲಸ ಮಾಡುತ್ತ ಪದ್ಯ ಬರೆಯುವರು.[೨]
ವೃತ್ತ ಜೀವನ
[ಬದಲಾಯಿಸಿ]ಸೆಲೇನಾ ಅವರು ತಿರಸ್ಕಾರದ ಭಾವನೆಯನ್ನು ತಮ್ಮ ಚಿಕ್ಕ ವಯಸ್ಸಿನಲ್ಲೇ ತಿರಸ್ಕರಿಸಿದರು. ನಾವು ಎಲ್ಲೇ ಹೋದರೂ, ಏನೇ ಮಾಡಿದರೂ , ನಮಗೆ ಸಿಗಬೇಕಾಗಿರುವುದು ಕಂಡಿತ ಸಿಗುತ್ತೆ ಎಂದು ನಂಬಿದವರು. ಇವರು ಒಂದು ಸಲ ಅಮೇರಿಕಾದ ಸಾಂಟ ಕ್ರೂಸ್ ನಗರಕ್ಕೆ ಹಣವಿಲ್ಲದೆ ಬಂದ್ಯ್ ಸೇರಿದರು. ಅಲ್ಲಿ ತಮ್ಮ ಪದ್ಯಗಳನ್ನು ಒಂದು ಡಾಲರ್ಗೆ ಮಾರುತ್ತಿದ್ದರು. ಆ ರಾತ್ರಿ ಬರ್ ಒಂದಕ್ಕೆ ಹೋಗಿ ಕಾಸಿಲ್ಲದೆ ಮದ್ಯ ಕುಡಿದು, ಅವರ ಪದ್ಯಗಳನ್ನು ಹಾಡಿ ತೋರಿಸಿ ಅಭಿನಯಿಸಿದರು. ಇದುವೇ ಅವರ ಮೊತ್ತ ಮೊದಲ ಅಭಿನಯ ಎಂದು ಅವರು ಹೇಳಿದರು. ಆ ರಾತ್ರಿ ಅವರ ಜೀವನದ ಉದ್ದೇಶ ಅವರಿಗೆ ಅರಿವಾಯಿತು ಎಂದಿದ್ದಾರೆ. ಇದೇ ಅವರ ಜೀವನ ಎಂದು ನಿರ್ಧರಿಸಿದರು. ಇವರು ಮತ್ತು ಪೀಟರ್ ಕಾಯ್ಟ್ ಅವರು ೧೯೯೭ರಲ್ಲಿ ಮೊದಲ ಭಾರಿ ಭೇಟಿಯಾದರು. ಆ ವರ್ಷದಿಂದ ಕೂಡಿ ಕೆಲಸ ಮಾಡಲು ಆರಂಭಿಸಿದರು. ಒಂದು ಸಂದರ್ಶನದಲ್ಲಿ ' ಇಷ್ಟು ಬದ್ಧತೆಗಳನ್ನು ಒಂದೇ ಸಮಯದಲ್ಲಿ ಮಾಡುವಿರಿ. ಇದಕ್ಕೆ ಹೇಗೆ ಸಮಯ ನಿರ್ವಹಣೆ ಮಾಡುತ್ತೀರ ?'ಎಂದು ಕೇಳಿದರು. ಅದಕ್ಕೆ ಅವರು ತಾವು ಪ್ರತಿದಿನ ಬೆಳಗ್ಗೆ ೪ ಗಂಟೆಗೆ ಏಳುವರು, ಇದು ಅವರು ತಮ್ಮ ಆತ್ಮಚರಿತ್ರೆ 'ಸ್ಪ್ರಿಂಗ್ ಫೀಲ್ಡ್ ರೋಡ್ ' ಬರೆಯುತ್ತಿರುವಾಗ ಇಂದ ಬೆಳೆಸಿರುವ ಅಭ್ಯಾಸ. ಹಾಗೆಯೇ ರೂಡಿ ಆಯಿತು ಎಂದಿದ್ದಾರೆ. ಇವರಿಗೆ ಮುಂಜಾನೆಯ ನೀರವತೆ ಹಾಗೂ ಶಾಂತತೆ ಮನಸ್ಸಿಗೆ ಶಾಂತಿ ದೊರಕುತ್ತಿತ್ತು. ಇವರು ಆತ್ಮ ವಿಶ್ವಾಸದಿಂದ ಕೂಡಿದವರು. ಇವರು ಬರೆಯುವುದಕ್ಕೆ ಚಳಿಗಾಲ ಸಂಪೂರ್ಣ ಕಾಲ ಎಂದು ಪರಿಗಣಿಸಿದರು. ಅವರು ಬರೆಯುವುದಕ್ಕಾಗಿಯೇ ಒಂದು ಪ್ರಾಚೀನ ದುಬಾರಿ ಮೇಜು ತಯಾರಿ ಮಾಡಿದರು. ಇವರು ತಮ್ಮ ಪ್ರೇಕ್ಶಕರನ್ನು ಮನಸ್ಸಿನಲ್ಲಿ ಇಟ್ಟು ಬರೆಯುವುದನ್ನು ಪ್ರಯತ್ನಿಸುವುದಿಲ್ಲ. ಬರವಣಿಗೆಗಳನ್ನು ಪ್ರಸಂಗಕ್ಕೆ ಅನುಸಾರವಾಗಿ ಬರೆಯಲು ಪ್ರಯತ್ನಿಸಿದರು. ಇವರು ಬರೆಯುವುದನ್ನು ಅಭಿನಯಕ್ಕಿಂತ ಮೇಲಾಗಿ ಹೆಚ್ಚು ಇಷ್ಟ ಪಟ್ಟರು.
ಕೊಡುಗೆಗಳು
[ಬದಲಾಯಿಸಿ]ಸೆಲೇನಾ ಅವರ ಸಣ್ಣ ಕಥೆಗಳು ಹಾಗೂ ಪದ್ಯಗಳನ್ನು ಡೇಸ್ಡ್ ಆಂಡ್ ಕನ್ಪ್ಯೂಸ್ಡ್, ಸಾಲ್ಸ್ಬರ್ಗ್ ರಿವ್ಯೂ, ಲೀ ಗನ್ ಮುಂತಾದವುಗಳಲ್ಲಿ ಪ್ರಕಟವಾಗಿದೆ. ಇವರನ್ನು ಬಿ.ಬಿ.ಸಿ ರೇಡಿಯೋದಲ್ಲಿ ನಿಯಮಿತವಾಗಿ ಪ್ರಸಾರದಲ್ಲಿ ಕಾಣಬಹುದಾಗಿತ್ತು.
ದೂರದರ್ಶನ ಮತ್ತು ರೇಡಿಯೋ
[ಬದಲಾಯಿಸಿ]- ೨೦೧೪: ಬಿ.ಬಿ.ಸಿ ರೇಡಿಯೋ ೪, ಲೂಸ್ ಎನ್ಡ್ಸ್.
- ೨೦೧೪: ಬಿ.ಬಿ.ಸಿ ರೇಡಿಯೋ ೪, ಧ ಎನ್ ವರ್ಡ್ ಡಾಕ್ಯೂಮೆಂಟರಿ.
- ೨೦೧೪: ಬಿ.ಬಿ.ಸಿ ರೇಡಿಯೋ ೩, ಧ ವೇರ್ಬ್.
- ೨೦೧೧: ಬಿ.ಬಿ.ಸಿ ರೇಡಿಯೋ ೪, ವೆರ್ಸ್ ಇಲ್ಲುಸ್ತ್ರತೆಡ್.
- ೨೦೧೦: ಬಿಸ್ಪೊಕೆನ್ ವರ್ಡ್.
- ೨೦೦೦: ಚಾನಲ್ ೪, ಸ್ಲಾಮ್.
- ೧೯೯೮/೯೯: ಜಿ.ಎಲ್.ಅರ್, ಅನ್ಡ್ರಿಯ ಒಲಿವರ್
.
ಸಾಹಿತ್ಯ ಮತ್ತು ಕೃತಿಗಳು
[ಬದಲಾಯಿಸಿ]- ೨೦೧೭ ಲೈವ್ ವಯರ್-ನಿಮ್ಫ್ಸ್ ಅನ್ಡ್ ತಗ್ಸ್.[೩]
- ೨೦೧೪ ಸ್ಪ್ರಿಂಗ್ ಫೀಲ್ಡ್ ರೋಡ್.
- ೨೦೧೪ ಫಿಶಿಂಗ್ ಇನ್ ಧ ಅಫ಼್ಟರ್ಮತ್ ಪೋಮ್ಸ್.
- ೨೦೧೪ ಫ಼ರ್ಸ್ಟ್ ಕಿಸ್.
- ೨೦೧೩ ಸೆಲೆಕ್ಟಡ್ ಪೋಯೆಟ್ರಿ .
- ೨೦೧೨ ಐ ವಾನ್ಟ್ಯು/ ವಿವ ಲಾಸ್ ವೇಗಸ್ .
- ೨೦೧೨ ಮಿಲರ್ಡ್ /ಟೂ ಮಚ್ ಟೂ ಯಂಗ್ .
- ೨೦೧೧ ಜುಸ್ಯ್ ಫ಼್ರುಟ್ .
- ೨೦೧೧ ಅನ್ಡರ್ ಧ ಪಿಎರ್ .
- ೨೦೧೦ ಹಾರ್ಪೆರ್ಸ್ ಡೆಯ್ ಡ್ರೀಮ್ಸ್.
- ೨೦೦೯ ಹಾವ್ ಯು ಎವೆರ್ ಫ಼ಾಲ್ಲೆನ್ ಇನ್ ಲವ್.
- ೨೦೦೮ ಹವ್ ವಿ ಮೆಟ್.
- ೨೦೦೭ ಪ್ಲೆಯ್ ಟ್ ಅಗೈನ್ ಸಾಮ್.
- ೨೦೦೬ ಧ ಲಾಸ್ಟ್ ಬಿಗ್ ಡ್ರಿಂಕಿ.
- ೨೦೦೬ ಧ ಸಾಲ್ಸ್ಬರ್ಗ್ ರಿವ್ಯೂ.
- ೨೦೦೫ ಅ ಪೀಸ್ ಅಫ಼್ ಮೂನ್.
- ೨೦೦೪ ಕಟೊಷ್ಕ.
- ೨೦೦೩ ಫ಼ಿಎರ್ಸ್ರ್ ಪಿನ್ಕ್ ಲಾಮ್ಬ್ ಚಾಪ್ ಅನ್ಡ್ ಯಾರ್ಕ್ ಹಾಲ್ ಬೆತ್ನಲ್ ಗ್ರೀನ್.
- ೨೦೦೧ ಫ಼್ಲೈಸ್ ತಟ್ ವೋರ್ ಇನ್ ಕಿಚೆನ್ಸ್.
- ೨೦೦೦ ಕ್ಲಿಪ್ಡ್ ಅನ್ಡ್ ಕೇಜ್ಡ್.
- ೧೯೯೯ ಟು ಧ ಮಾನ್ ವಿತ್ ಧ ಹೇರ್ ಅನ್ಡ್ ಟಿ.ವಿ ಲೇಡಿಸ್.
- ೧೯೯೯ ಸ್ಟಬ್ಬಲ್.
- ೧೯೯೮ ಡಚ್ ಕರೆಜ್ ಅನ್ಡ್ ಬ್ಲೂ ಚೀಸ್.
- ೧೯೯೬ ರೈಸಿಂಗ್ ಮಾಗಸೀನ್.[೪]
ಅವರ ಆತ್ಮ ಚರಿತ್ರೆಯನ್ನು ಮುಗಿಸಿ ಪ್ರಕಟಿಸಲು ೮ ವರ್ಷ ಆಯಿತು. ಕೆವಿನ್ ಕಾನ್ರಾಯ್ ಸ್ಕಾಟ್ ತಮ್ಮ ಆತ್ಮ ಚರಿತ್ರೆಯನ್ನು ಬರೆಯಲು ಅವರಿಗೆ ಆದೇಶ ನೀಡಿದರು.ಅವರ ಪ್ರಯಾಣ. ಲೈವ್ ವಯರ್ ಅವರ ಮೊದಲ ಆಲ್ಬಮ್. ಅವರ ಪದ್ಯ 'ಕಾಣ್ಟ್ ಬಿ ಬೊವೆರ್ಡ್' ಆಡಂಬರದ ಶೈಲಿಯಲ್ಲಿ ಭಾಷಣ ಮಾಡಿರುವ ಪದ್ಯ. ಈ ತರದ ಪದ್ಯಗಳನ್ನು ಇವರಿಗೆ ಟಿಮ್ ವೆಲ್ಸ್, ಜಾಕ್ ಸ್ಕಾಟ್ ಮತ್ತು ಜಾನ್ ಕೂಪರ್ ಕ್ಲಾರ್ಕ್ ಅವರಿಂದ ಪರಿಚಯವಾಯಿತು.
ಇವರು ಲಂಡನ್ನ ಬುಶ್ ತಿಯೇಟರ್ನಲ್ಲಿ ಪ್ರದರ್ಶನ ಮಾಡದ್ದಾರೆ. 'ಫಸ್ಟ್ ಸ್ಟೋರಿ' ಎಂಬ ಕರುಣೆ ಕೇಂದ್ರಕ್ಕೆ ಅನೇಕ ಕಾರ್ಯಾಗಾರಗಳನ್ನು ಏರ್ಪಡಿಸಿದ್ದಾರೆ. ಈ ಕೇಂದ್ರದ ಮುಖ್ಯ ಉದ್ದೇಶ ಸೃಕನಾತ್ಮಕ ಬರವಣಿಗೆಯನ್ನು ಪ್ರೌಢ ಶಾಲೆಗಳಲ್ಲಿಆದರಿಸಿ ಪಾಲಿಸುವುದು.ಇವರು 'ಧ ಬುಕ್ ಕ್ಲಬ್ ಬೊಟಿಕ್' ನ ನೆರ್ವಾಹಕಿ ಮತ್ತು ನಿರ್ಮಾಪಕರು. ಇವರು 'ಬ್ರೇಕ್ಸ್' (೨೦೧೬) ಎಂಬ ಚಲನಚಿತ್ರದಲ್ಲಿ ನಟಿಸಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ http://poems.poetrysociety.org.uk/poets/salena-godden/
- ↑ http://www.npr.org/2014/12/28/372526513/from-her-dad-to-her-jamish-roots-a-poet-pieces-her-story-together
- ↑ https://nymphsandthugs.bandcamp.com/album/livewire
- ↑ https://poetryschool.com/how-i-did-it/i-ted-hughes-award-salena-godden-livewire/