ಸೂರ್ಯ ಶಿವಕುಮಾರ್‌‌

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Suriya Sivakumar
Soorya sivakumar.jpg
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Saravanan Sivakumar
(1975-07-23) ಜುಲೈ ೨೩, ೧೯೭೫(ವಯಸ್ಸು ೪೧)

[೧]
Chennai, Tamil Nadu, India

ವೃತ್ತಿ Film actor
ಪತಿ/ಪತ್ನಿ Jyothika Sadanah (2006–present)

ಸೂರ್ಯ (ತಮಿಳು:சூர்யா; ಜನ್ಮನಾಮ: ಶರವಣನ್‌‌ ಶಿವಕುಮಾರ್‌‌ , ಜನನ 1975ರ ಜುಲೈ 23) ಓರ್ವ ಭಾರತೀಯ ಚಲನಚಿತ್ರ ನಟನಾಗಿದ್ದಾನೆ. ಆತ ಹಲವಾರು ತಮಿಳು ಚಲನಚಿತ್ರಗಳಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ: ನಂದಾ (2001), ಕಾಕ ಕಾಕ (2003), ಪಿತಾಮಗನ್‌ (2003), ಪೇರಳಗನ್‌ (2004), ಘಜಿನಿ (2005), ವೇಲ್‌ (2007), ವಾರಣಮ್‌ ಆಯಿರಂ (2008), ಅಯ್ಯನ್‌ (2009) ಮತ್ತು ಸಿಂಗಮ್‌ (2010). ರಾಮ್‌ ಗೋಪಾಲ್‌ ವರ್ಮಾನ ರಕ್ತ ಚರಿತ್ರ (2010) ಎಂಬ ಚಲನಚಿತ್ರದ ಮೂಲಕ ಆತ ಬಾಲಿವುಡ್‌‌‌ನಲ್ಲಿ ತನ್ನ ಪ್ರಥಮ ಪ್ರವೇಶವನ್ನು ದಾಖಲಿಸಿದ. 2010ರ ವೇಳೆಗೆ ಇದ್ದಂತೆ, ಅವನು ಮೂರು ತಮಿಳುನಾಡು ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿಗಳು ಮತ್ತು ಮೂರು ಫಿಲ್ಮ್‌ಫೇರ್‌‌ ಪ್ರಶಸ್ತಿಗಳನ್ನು ಗೆದ್ದಿದ್ದಾನೆ. ತಮಿಳು ಚಲನಚಿತ್ರೋದ್ಯಮದಲ್ಲಿನ ಅಗ್ರಗಣ್ಯ ಸಮಕಾಲೀನ ನಟರ ಪೈಕಿ ಒಬ್ಬನಾಗಿ ಆತ ಸ್ವತಃ ತನ್ನನ್ನು ನೆಲೆಗೊಳಿಸಿಕೊಂಡ.

ಸ್ಟುಡಿಯೋ ಗ್ರೀನ್‌ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ ನಂತರ ಅವನು ಓರ್ವ ಚಲನಚಿತ್ರ ವಿತರಕನೂ ಆದ; ಈ ಸಂಸ್ಥೆಯು ಚಿತ್ರನಿರ್ಮಾಣದ ಹೊಣೆಹೊತ್ತುಕೊಂಡಿರುವುದರ ಜೊತೆಗೆ, ಆತನ ಮತ್ತು ಆತನ ಸೋದರ ಕಾರ್ತಿಯ ಒಂದಷ್ಟು ಚಲನಚಿತ್ರಗಳನ್ನು ವಿತರಿಸಿದೆ. ಆತ ನಟ ಶಿವಕುಮಾರ್‌‌ನ ಜ್ಯೇಷ್ಠ ಪುತ್ರ. ನಟಿ ಜ್ಯೋತಿಕಾ ಸಾಧನಾಳ ಜೊತೆಗೆ ಸಾಕಷ್ಟು ವರ್ಷಗಳ ಹಿಂದೆಯೇ ಅವನ ನಿಶ್ಚಿತಾರ್ಥವಾಗಿದ್ದು, 2006ರಲ್ಲಿ ಆಕೆಯನ್ನು ಸೂರ್ಯ ಮದುವೆಯಾದ. ದೈಹಿಕ ವ್ಯಾಯಾಮದಲ್ಲಿ ತೊಡಗಿಕೊಂಡು ಮೈಯನ್ನು ಹುರಿಗಟ್ಟಿಸಿಕೊಳ್ಳಲು ಆತ ವ್ಯಾಯಾಮಶಾಲೆಗೆ ದಾಖಲಾದ ಮತ್ತು 'ಸಿಕ್ಸ್‌ ಪ್ಯಾಕ್‌' ಎಂದು ಕರೆಯಲಾಗುವ ದಾರ್ಢ್ಯತೆಯನ್ನು ಗಳಿಸಿಕೊಂಡ; ಇದು ಅಯ್ಯನ್‌ ಎಂಬ ಚಲನಚಿತ್ರದಲ್ಲಿ ಮೊದಲು ಕಾಣಿಸಿಕೊಂಡಿತು. 2008ರಲ್ಲಿ ಅವನು ಅಗರಮ್‌ ಫೌಂಡೇಷನ್‌ ಎಂಬ ಪ್ರತಿಷ್ಠಾನವನ್ನು ಪ್ರಾರಂಭಿಸಿದ. ಬಾಲ್ಯದ ಆರಂಭದಲ್ಲಿಯೇ ಶಾಲಾಶಿಕ್ಷಣವನ್ನು-ತೊರೆಯಬೇಕಾಗಿ ಬರುವಂಥ ನಿದರ್ಶನಗಳನ್ನು ತಡೆಗಟ್ಟುವುದಕ್ಕಾಗಿ ಈ ಪ್ರತಿಷ್ಠಾನವು ಧನಸಹಾಯ ಮಾಡುತ್ತದೆ.[೨]

ಆರಂಭಿಕ ಜೀವನ[ಬದಲಾಯಿಸಿ]

ನಟ ಶಿವಕುಮಾರ್‌‌ ಮತ್ತು ಲಕ್ಷ್ಮಿ ದಂಪತಿಗಳ ಮಗನಾಗಿ ಸೂರ್ಯ ಚೆನ್ನೈನಲ್ಲಿ ಜನಿಸಿದ. ಈ ದಂಪತಿಗಳ ಮೂವರು ಮಕ್ಕಳ ಪೈಕಿ ಇವನೇ ಹಿರಿಯನಾಗಿದ್ದು, ನಟ ಕಾರ್ತಿಕ್‌ ಶಿವಕುಮಾರ್‌‌ ಇವನ ಕಿರಿಯ ಸೋದರನಾಗಿದ್ದಾನೆ ಮತ್ತು ಇವನಿಗೆ ಬೃಂದಾ ಶಿವಕುಮಾರ್‌‌ ಎಂಬ ಹೆಸರಿನ ಓರ್ವ ಕಿರಿಯ ಸೋದರಿಯಿದ್ದಾಳೆ. ಅವರು ಗೌಂಡರ್‌‌ ಸಮುದಾಯಕ್ಕೆ ಸೇರಿದ್ದಾರಾದರೂ, ಒಂದು ಮಧ್ಯಮವರ್ಗದ ಕುಟುಂಬದ ಪರಿಸರದಲ್ಲಿಯೇ ಅವರನ್ನು ಸಾಕಿ ಬೆಳೆಸಲಾಯಿತು.

ಚೆನ್ನೈಯಲ್ಲಿನ[೩] ಪದ್ಮಾ ಶೇಷಾದ್ರಿ ಬಾಲಭವನ ಶಾಲೆ [೪] ಮತ್ತು ಸೇಂಟ್‌ ಬೀಡ್‌'ಸ್‌ ಶಾಲೆಯಲ್ಲಿ ಆತ ತನ್ನ ಶಾಲಾಶಿಕ್ಷಣವನ್ನು ಮುಗಿಸಿದ; ಹಾಗೂ ಚೆನ್ನೈಯಲ್ಲಿರುವ ಲಯೋಲಾ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದ.

ಚಲನಚಿತ್ರ ವೃತ್ತಿಜೀವನ[ಬದಲಾಯಿಸಿ]

ಆರಂಭಿಕ ವೃತ್ತಿಜೀವನ (1997–2002)[ಬದಲಾಯಿಸಿ]

1997ರಲ್ಲಿ ನೇರುಕ್ಕು ನೇರ್‌ ಎಂಬ ಚಲನಚಿತ್ರದ ಮೂಲಕ ಸೂರ್ಯ ಚಿತ್ರರಂಗಕ್ಕೆ ಪಾದಾರ್ಪಣ ಮಾಡಿದ. ವಸಂತ್‌ ನಿರ್ದೇಶಿಸಿದ ಈ ಚಲನಚಿತ್ರವನ್ನು ನಿರ್ಮಿಸಿದ್ದು ಮಣಿ ರತ್ನಂ. 2001ರಲ್ಲಿ, ಸಿದ್ದಿಕಿಯ ಫ್ರೆಂಡ್ಸ್‌ ಎಂಬ ಹಾಸ್ಯಮಯ ಚಲನಚಿತ್ರದಲ್ಲಿ ಅವನು ಮುಖ್ಯಪಾತ್ರ ವಹಿಸಿದ.

ಬಾಲಾ ನಿರ್ದೇಶಿಸಿದ ನಂದಾ ಎಂಬ ಚಲನಚಿತ್ರದ ರೂಪದಲ್ಲಿ ಅವನಿಗೆ ಚಿತ್ರಜೀವನದ ಪ್ರಮುಖ ತಿರುವು ಸಿಕ್ಕಿತು. ತನ್ನ ತಾಯಿಯೊಂದಿಗೆ ತುಂಬಾ ಹಚ್ಚಿಕೊಂಡಿರುವ ಓರ್ವ ಮಾಜಿ-ಕೈದಿಯ ಪಾತ್ರವನ್ನು ಈ ಚಿತ್ರದಲ್ಲಿ ನಿರ್ವಹಿಸಿದ ಆತ, ಅತ್ಯುತ್ತಮ ನಟನಿಗೆ ಮೀಸಲಾದ ತಮಿಳುನಾಡು ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿಯೊಂದನ್ನು ಸ್ವೀಕರಿಸಿದ. ವಿಕ್ರಮನ್‌ನ ಉನ್ನೈ ನಿನೈತು ಎಂಬ ಚಲನಚಿತ್ರ ಅವನ ಮುಂದಿನ ಸಾಹಸವಾಗಿತ್ತು; ಇದಾದ ನಂತರ, ಅಮೀರ್‌ ಸುಲ್ತಾನ್‌ ನಿರ್ದೇಶಿಸಿದ ಮೌನಂ ಪೇಸಿಯಾದೆ ಚಿತ್ರವು ಬಂದಿತು.

ಪ್ರಮುಖ ಪ್ರಗತಿ (2003–2007)[ಬದಲಾಯಿಸಿ]

2003ರಲ್ಲಿ, ಕಾಕ ಕಾಕ ಎಂಬ ಚಲನಚಿತ್ರದಲ್ಲಿ ಅವನು ಮುಖ್ಯಪಾತ್ರ ವಹಿಸಿದ; ಗೌತಮ್‌ ಮೆನನ್‌ ನಿರ್ದೇಶಿಸಿದ ಈ ಚಲನಚಿತ್ರವು ಓರ್ವ ಆರಕ್ಷಕ ಅಧಿಕಾರಿಯ ಜೀವನವನ್ನು ಕುರಿತದ್ದಾಗಿತ್ತು. ಆಮೇಲೆ ಆತ ವಿಕ್ರಮ್‌‌ ಜೊತೆಗೂಡಿ ಪಿತಾಮಗನ್‌ ಎಂಬ ಚಿತ್ರದಲ್ಲಿ ಮುಖ್ಯಪಾತ್ರವನ್ನು ವಹಿಸಿದ. ಇದು ಬಾಲಾ ನಿರ್ದೇಶನದಲ್ಲಿ ಅವನು ನಟಿಸಿದ ಎರಡನೇ ಚಿತ್ರವಾಗಿತ್ತು. ಸ್ವಲ್ಪವೂ ಚಿಂತಿಸದೆ ಸುಖವಾಗಿರುವ ಅಥವಾ ಆದದ್ದಾಗಲೆಂಬ ಮನೋವೃತ್ತಿಯ ಓರ್ವ ಹಳ್ಳಿಯ ಮೋಸಗಾರನ ಪಾತ್ರವನ್ನು ನಿರೂಪಿಸಿದ ಸೂರ್ಯ, ಅದಕ್ಕಾಗಿ ಫಿಲ್ಮ್‌ಫೇರ್‌‌ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯೊಂದನ್ನು ಸ್ವೀಕರಿಸಿದ. 2003ರಲ್ಲಿ ಆತ ಈ ಎರಡು ಚಲನಚಿತ್ರಗಳಿಗೆ ಸಂಬಂಧಿಸಿದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರಿಂದಾಗಿ, ಆಟೋಗ್ರಾಫ್‌ ಎಂಬ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದನ್ನು ಅವನು ನಿರಾಕರಿಸಬೇಕಾಗಿ ಬಂತು; ಅಂತಿಮವಾಗಿ ಆ ಪಾತ್ರವನ್ನು ಆ ಚಿತ್ರದ ನಿರ್ದೇಶಕ ಚೇರನ್‌ ಸ್ವತಃ ತಾನೇ ನಿರ್ವಹಿಸಿದ.[೫]

ಪೇರಳಗನ್‌ ಎಂಬ ಚಲನಚಿತ್ರದಲ್ಲಿ ಎರಡು ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದಕ್ಕಾಗಿ 2004ರಲ್ಲಿ ಆತ ಅತ್ಯುತ್ತಮ ನಟನಿಗೆ ಮೀಸಲಾದ ಫಿಲ್ಮ್‌ಫೇರ್‌‌ ಪ್ರಶಸ್ತಿಯೊಂದನ್ನು ಸ್ವೀಕರಿಸಿದ; ಓರ್ವ ಆಕ್ರಮಣಕಾರಿ ಮುಷ್ಟಿಯುದ್ಧ ಪಟು ಮತ್ತು ದೂರವಾಣಿ ಬೂತ್‌‌ನ ಓರ್ವ ಅಂಗವಿಕಲ ನಿರ್ವಾಹಕನ ಪಾತ್ರಗಳಲ್ಲಿ ಅವನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದ. ನಂತರ ಅದೇ ವರ್ಷದಲ್ಲಿ, ಮಣಿ ರತ್ನಂರ ಆಯುಥಾ ಎಳುಥು ಎಂಬ ರಾಜಕೀಯದ ಎಳೆಯುಳ್ಳ ನಾಟಕೀಯ ಚಿತ್ರದಲ್ಲಿ ಆತ ಮುಖ್ಯಪಾತ್ರವನ್ನು ವಹಿಸಿದ; 60ರ ದಶಕದ ದ್ವಿತೀಯಾರ್ಧ ಮತ್ತು 70ರ ದಶಕದ ಆರಂಭದ ಅವಧಿಯಲ್ಲಿ ಹೈದರಾಬಾದ್‌ನಲ್ಲಿನ ಓರ್ವ ವಿದ್ಯಾರ್ಥಿ ನಾಯಕನಾಗಿದ್ದ ಜಾರ್ಜ್‌ ರೆಡ್ಡಿ ಎಂಬಾತನ ಜೀವನವನ್ನು ಇದು ಆಧರಿಸಿತ್ತು.

2005ರಲ್ಲಿ ಆತ ಘಜಿನಿ ಮತ್ತು ಆಮೇಲೆ ಆರು ಎಂಬ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ. ಘಜಿನಿ ಚಿತ್ರದಲ್ಲಿ ಅಲ್ಪಾವಧಿಯ ಸ್ಮೃತಿ ನಷ್ಟದಿಂದ ನರಳುತ್ತಿರುವ ಓರ್ವ ರೋಗಿಯ ಪಾತ್ರವನ್ನು ಅವನು ನಿರ್ವಹಿಸಿದ. ಘಜಿನಿ ಚಿತ್ರದೆಡೆಗಿನ ಅವನ ಬದ್ಧತೆಯಿಂದಾಗಿ ರಂಗ್‌ ದೇ ಬಸಂತಿ ಎಂಬ ಬಾಲಿವುಡ್‌ ಚಲನಚಿತ್ರದಲ್ಲಿನ ಪಾತ್ರವೊಂದು ಅವನಿಗೆ ತಪ್ಪಿಹೋಯಿತು ಎಂದು ಹೇಳಲಾಗುತ್ತದೆ.[೬] 2006ರಲ್ಲಿ, N. ಕೃಷ್ಣ ನಿರ್ದೇಶನದ ಸಿಲ್ಲುನು ಒರು ಕಾದಲ್‌ ಎಂಬ ಚಲನಚಿತ್ರದಲ್ಲಿ ಅವನು ಜ್ಯೋತಿಕಾ ಮತ್ತು ನಟಿ ಭೂಮಿಕಾರ ಎದುರಿಗೆ ಕಾಣಿಸಿಕೊಂಡ. 2007ರಲ್ಲಿ ಅವನ ವೇಲ್‌ ಎಂಬ ಚಲನಚಿತ್ರವಷ್ಟೇ ಬಿಡುಗಡೆಯಾಯಿತು; ದೀಪಾವಳಿಯ ಸಂದರ್ಭಕ್ಕಾಗಿ ಬಿಡುಗಡೆಯಾದ ಈ ಚಿತ್ರವು ಒಂದು ಪ್ರಚಂಡ-ಯಶಸ್ಸಿನ ಚಲನಚಿತ್ರ ಎಂಬ ಕೀರ್ತಿಗೆ ಪಾತ್ರವಾಯಿತು. [೭]

ವಾರಣಮ್‌ ಆಯಿರಂ ನಂತರದಲ್ಲಿ[ಬದಲಾಯಿಸಿ]

ಕಾಕ ಕಾಕ ಚಿತ್ರದ ಯಶಸ್ಸಿನ ನಂತರ ಗೌತಮ್‌ ಮೆನನ್‌ ಜೊತೆಗೂಡಿ ಕೆಲಸಮಾಡಲೆಂದು ಕೈಗೊಂಡ ಹಲವಾರು ಪ್ರಯತ್ನಗಳು ವಿಫಲವಾದ ನಂತರ 2006ರ ನವೆಂಬರ್‌‌ನಲ್ಲಿ, ಜೀವನಚರಿತ್ರೆಯ ಕಥೆಯನ್ನೊಳಗೊಂಡಿದ್ದ ಮೆನನ್ ನಿರ್ದೇಶನದ ವಾರಣಮ್‌ ಆಯಿರಂ ಎಂಬ ಚಿತ್ರದಲ್ಲಿ ಸೂರ್ಯ ತೊಡಗಿಸಿಕೊಂಡ.[೮] ಈ ಚಿತ್ರದಲ್ಲಿ ಅಪ್ಪ ಮತ್ತು ಮಗನ ಪಾತ್ರಗಳಲ್ಲಿ ಕಾಣಿಸಿಕೊಂಡ ಸೂರ್ಯ ತನ್ನ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ದ್ವಿಪಾತ್ರಗಳನ್ನು ನಿರ್ವಹಿಸುವಂತಾಯಿತು; 16 ವರ್ಷ ವಯಸ್ಸಿನ ಓರ್ವ ಯುವಕನ ದೃಶ್ಯಗಳಿಂದ ಮೊದಲ್ಗೊಂಡು 65 ವರ್ಷ ವಯಸ್ಸಿನ ವೃದ್ಧನ ದೃಶ್ಯಗಳವರೆಗಿನ, ಅವರಿಬ್ಬರ ಜೀವನದ ವ್ಯಾಪಕ ಚಿತ್ರಣವನ್ನು ಚಿತ್ರೀಕರಿಸಬೇಕಾಗಿದ್ದುದನ್ನು ಈ ಎರಡೂ ಪಾತ್ರಗಳು ಬಯಸುತ್ತಿದ್ದವು. ಈ ಚಲನಚಿತ್ರದ ನಿರ್ಮಾಣದ ಸಂದರ್ಭದಲ್ಲಿ, ಸದರಿ ಯೋಜನೆಯನ್ನು "ಅನನ್ಯ" ಮತ್ತು "ಹೃದಯದಿಂದ ನೇರವಾಗಿ ಬಂದ" ಪ್ರಯತ್ನ ಎಂಬುದಾಗಿ ವಿವರಿಸಿದ ಸೂರ್ಯ, ಚಿತ್ರನಿರ್ಮಾಣದ ಸಂದರ್ಭದಲ್ಲಿ ತಾನು ಸಹಿಸಿದ ಶಾರೀರಿಕ ಯಾತನೆಗಳನ್ನು ಹೇಳಿಕೊಂಡ.[೯] ಪಾತ್ರಕ್ಕೆ ತಕ್ಕಂತೆ ದೇಹದಾರ್ಢ್ಯತೆಯನ್ನು ರೂಪಿಸುವ ಎಂಟು ತಿಂಗಳ ಅವಧಿಯ ಒಂದು ದೇಹದಂಡನೆಯ ವಿಧಾನದಲ್ಲಿ ಆತ ಚಲನಚಿತ್ರಕ್ಕಾಗಿ ತನ್ನ ತೂಕವನ್ನು ಇಳಿಸಿಕೊಂಡ ಮತ್ತು ಒಂದು ಸಿಕ್ಸ್‌ ಪ್ಯಾಕ್‌ ದಾರ್ಢ್ಯತೆಯನ್ನು ಸಜ್ಜುಗೊಳಿಸಿಕೊಂಡ; ಈ ಕ್ರಮವೇ ದಕ್ಷಿಣ ಭಾರತದ ಇತರ ಅಗ್ರಗಣ್ಯ ನಟರಿಗೆ ಒಂದು ಮಾರ್ಗ-ಪ್ರವರ್ತಕವಾಗಿ ಪರಿಣಮಿಸಿತು.[೧೦][೧೧] ಗಮನ ಸೆಳೆಯುವ ಪಾತ್ರಗಳಲ್ಲಿ ಸಿಮ್ರನ್‌, ಸಮೀರಾ ರೆಡ್ಡಿ ಮತ್ತು ದಿವ್ಯ ಸ್ಪಂದನರಂಥ ನಟಿಯರನ್ನೂ ಒಳಗೊಂಡಿದ್ದ ಈ ಚಲನಚಿತ್ರವು ಬಿಡುಗಡೆಯಾದ ನಂತರ ಗಲ್ಲಾಪೆಟ್ಟಿಗೆಯಲ್ಲಿ ವ್ಯಾಪಾರಿ ನೆಲೆಗಟ್ಟಿನ ಯಶಸ್ಸನ್ನು ದಾಖಲಿಸಿದ್ದು ಮಾತ್ರವೇ ಅಲ್ಲದೇ ಚಲನಚಿತ್ರ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಸ್ವೀಕರಿಸಿತು, ಹಾಗೂ ಸೂರ್ಯನ ಪಾತ್ರ ನಿರ್ವಹಣೆಯು ಎಲ್ಲರಿಂದಲೂ ಶ್ಲಾಘಿಸಲ್ಪಟ್ಟಿತು. ರಿಡಿಫ್‌ ಮಾಧ್ಯಮಕ್ಕೆ ಸೇರಿದ ಓರ್ವ ವಿಮರ್ಶಕನು, ಈ ಚಲನಚಿತ್ರವು ಸೂರ್ಯನ ಒಂದು "ಮೇರುಕೃತಿ"ಯಾಗಿದೆ ಎಂಬ ಹಣೆಪಟ್ಟಿ ಅಂಟಿಸಿದ; ಸೂರ್ಯ ತನ್ನ ಪಾತ್ರನಿರ್ವಹಣೆಯಲ್ಲಿ "ಕರಾರುವಾಕ್ಕಾಗಿದ್ದಾನೆ" ಮತ್ತು ಅವನಿಗೆ ಸಂಬಂಧಿಸಿದಂತೆ ಈ ಚಲನಚಿತ್ರವು "ವಿಜಯೋತ್ಸವವನ್ನು ಸಾಧಿಸಿ ತೋರಿಸಿದೆ" ಎಂದು ಉಲ್ಲೇಖಿಸಿದ.[೧೨] ಇದೇ ರೀತಿಯಲ್ಲಿ, ಸೂರ್ಯನ ಪಾತ್ರ ನಿರ್ವಹಣೆಯು "ಮಹೋನ್ನತವಾಗಿದೆ" ಎಂದು ಉಲ್ಲೇಖಿಸಿದ ವಿಮರ್ಶಕರು, "ಅವನ ಪಾತ್ರ ನಿರ್ವಹಣೆಯಿಂದಾಗಿಯೇ ಈ ಚಲನಚಿತ್ರವು ಪರಿಣಾಮಕಾರಿಯಾಗಿದೆ" ಎಂದು ಸಮರ್ಥಿಸಿದರು; ಇತರ ಕೆಲವು ವಿಮರ್ಶಕರು, ಸದರಿ ಚಲನಚಿತ್ರವು ಒಂದು "ಸಂಪೂರ್ಣವಾಗಿ ಸೂರ್ಯನ ಪ್ರದರ್ಶನ"ವಾಗಿದೆ ಎಂದು ಸಮರ್ಥಿಸಿದರು.[೧೩][೧೪] ಅವನು ನಿರ್ವಹಿಸಿದ ಪಾತ್ರಗಳು ಅವನಿಗೆ ಹಲವಾರು ಗಮನಾರ್ಹ ಪ್ರಶಸ್ತಿಗಳನ್ನೂ ತಂದುಕೊಟ್ಟಿದ್ದು, ಅತ್ಯುತ್ತಮ ನಟನಿಗೆ ಮೀಸಲಾದ ಫಿಲ್ಮ್‌ಫೇರ್‌‌ ಪ್ರಶಸ್ತಿ, ಜ್ಯೂರಿಯಿಂದ ನೀಡಲ್ಪಟ್ಟ ಅತ್ಯುತ್ತಮ ನಟನಿಗೆ ಮೀಸಲಾದ ತಮಿಳುನಾಡು ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿ, ಹಾಗೂ 2008ರಲ್ಲಿ ದೊರೆತ ಅತ್ಯುತ್ತಮ ನಟನಿಗೆ ಮೀಸಲಾದ ವಿಜಯ್‌ ಪ್ರಶಸ್ತಿ ಇವೇ ಮೊದಲಾದವು ಅವುಗಳಲ್ಲಿ ಸೇರಿವೆ.[೧೫] ಈ ಚಲನಚಿತ್ರವು 2008ರ ಅವಧಿಗೆ ಸಂಬಂಧಿಸಿದ, ತಮಿಳಿನಲ್ಲಿನ ಅತ್ಯುತ್ತಮ ರೂಪಕ ಚಲನಚಿತ್ರಕ್ಕೆ ಮೀಸಲಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯೊಂದನ್ನೂ ಸ್ವೀಕರಿಸಿತು.[೧೬]

K. V. ಆನಂದ್‌‌‌ರ ಅಯ್ಯನ್‌ ಎಂಬ ಸಾಹಸ-ರೋಮಾಂಚನದ ಚಿತ್ರವು 2009ರಲ್ಲಿ ಬಿಡುಗಡೆಯಾದ ಸೂರ್ಯನ ಮೊದಲ ಚಿತ್ರವೆನಿಸಿಕೊಂಡಿತು; ಇದು ಆ ವರ್ಷದಲ್ಲಿ ಅತಿಹೆಚ್ಚಿನ ಗಳಿಕೆ ಮಾಡಿದ ತಮಿಳು ಚಲನಚಿತ್ರ ಎಂಬ ಕೀರ್ತಿಗೆ ಪಾತ್ರವಾಯಿತು. ಸೂರ್ಯನು ಓರ್ವ ಕಳ್ಳ ಸಾಗಣೆದಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ಪ್ರಭು ಅವನ ಪೋಷಕನಾಗಿ ಮತ್ತು ತಮನ್ನಾ ಭಾಟಿಯಾ ಪ್ರಮುಖ ನಟಿಯಾಗಿ ಕಾಣಿಸಿಕೊಂಡಿದ್ದರು. ಭಾರತದಲ್ಲಷ್ಟೇ ಅಲ್ಲದೇ, ಟಾಂಜಾನಿಯಾ, ನಮೀಬಿಯಾ, ಮತ್ತು ಮಲೇಷಿಯಾಗಳಲ್ಲೂ ಈ ಚಲನಚಿತ್ರದ ಚಿತ್ರೀಕರಣವನ್ನು ನಡೆಸಲಾಗಿತ್ತು. ಸಾಹಸದೃಶ್ಯಗಳಿಗೆ ಸಂಬಂಧಿಸಿದಂತೆ ಓರ್ವ ಬದಲಿ ಸಾಹಸ ಕಲಾವಿದನನ್ನು ಬಳಸಿಕೊಳ್ಳದೆಯೇ ಸೂರ್ಯನು ಸ್ವತಃ ಪಾರ್ಕೌರ್‌ ಸಾಹಸಗಳನ್ನು ನಿರ್ವಹಿಸಿದ್ದು ಈ ಚಿತ್ರದ ವಿಶೇಷತೆಯಾಗಿತ್ತು.[೧೭] ಬಿಡುಗಡೆಯಾದ ಮೇಲೆ ಈ ಚಲನಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿತು; ಇದೊಂದು "ನೋಡಲೇಬೇಕಾದ" ಚಲನಚಿತ್ರ ಎಂಬ ಉಲ್ಲೇಖಗಳನ್ನು ವಿಮರ್ಶಕರು ಮಾಡಿದರು. ಸೂರ್ಯನ ಪಾತ್ರ ನಿರ್ವಹಣೆಯು ಮತ್ತೊಮ್ಮೆ ಮೆಚ್ಚುಗೆ ಪಡೆಯಿತು ಹಾಗೂ ಆತ ಅಗ್ರಗಣ್ಯ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನಗೊಂಡ; ಅಷ್ಟೇ ಅಲ್ಲ, ಆ ವರ್ಷದ ಮನೋರಂಜನೆಗಾರನಿಗೆ ಮೀಸಲಾದ ವಿಜಯ್‌ ಪ್ರಶಸ್ತಿಯನ್ನೂ ಅವನು ಗೆದ್ದುಕೊಂಡ. [೧೮] ಈ ಚಲನಚಿತ್ರದ ಯಶಸ್ಸಿನಿಂದಾಗಿ ಸೂರ್ಯ ತಮಿಳು ಚಲನಚಿತ್ರಗಳಲ್ಲಿನ ಅತ್ಯಂತ ಲಾಭದಾಯಕ ನಾಯಕನಟನಾಗಿ ಹೊರಹೊಮ್ಮಿದ; ದೊಡ್ಡ ವ್ಯಾಪಾರಿ ಯಶಸ್ಸಿನ ಚಿತ್ರಗಳ ಒಂದು ಹ್ಯಾಟ್ರಿಕ್‌ನ್ನು ಅವನು ದಾಖಲಿಸಿದ್ದು ಇದಕ್ಕೆ ಕಾರಣವಾಗಿತ್ತು. ಅವನು "ವ್ಯಾಪಾರಿ ಸ್ವರೂಪದ ಸೂತ್ರಗಳ ವ್ಯಾಪ್ತಿಯೊಳಗೇ ಪ್ರಯೋಗಗಳನ್ನು" ಕೈಗೊಂಡ ಕಾರಣದಿಂದಾಗಿ ಹಾಗೂ "ಏಕತಾನತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದನ್ನು ತಪ್ಪಿಸುವಲ್ಲಿ" ಅವನು ಯಶಸ್ವಿಯಾದ ಕಾರಣದಿಂದಾಗಿ, ಅವನಿಗೆ ಯಶಸ್ಸು ದಕ್ಕಿದೆ ಎಂದು ಕೆಲವೊಂದು ಚಲನಚಿತ್ರ ನಿಯತಕಾಲಿಕಗಳು ಉಲ್ಲೇಖಿಸಿದವು.[೧೯]

K. S. ರವಿಕುಮಾರ್‌ ನಿರ್ದೇಶಿಸಿದ ಆಧವನ್‌ , ಬಿಡುಗಡೆಯಾದ ಅವನ ಮುಂದಿನ ಚಲನಚಿತ್ರವಾಗಿತ್ತು. 2010ರಲ್ಲಿ ಅವನ 25ನೇ ಚಿತ್ರವಾದ ಸಿಂಗಮ್‌ ಬಿಡುಗಡೆಯಾಯಿತು; ಹರಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಅವನು ಆರಕ್ಷಕ ಅಧಿಕಾರಿಯೊಬ್ಬನ ಪಾತ್ರವನ್ನು ನಿರ್ವಹಿಸಿದ್ದ. ಈ ಚಲನಚಿತ್ರವು ವರ್ಷದ ಎರಡನೇ ಅತಿ ಹೆಚ್ಚಿನ ಹಣಗಳಿಕೆಯ ಚಲನಚಿತ್ರ ಎಂಬ ಕೀರ್ತಿಗೆ ಪಾತ್ರವಾಯಿತು.[೨೦] ಇದರ ತೆಲುಗು ಆವೃತ್ತಿಯಾದ ಯಮುಡು ಎಂಬ ಚಿತ್ರವೂ, ಆಂಧ್ರಪ್ರದೇಶದಲ್ಲಿ ಡಬ್‌ ಮಾಡಲಾದ ಚಲನಚಿತ್ರಗಳ ಪೈಕಿ ಯಶಸ್ವಿ ಎನಿಸಿಕೊಂಡ ಕೆಲವೇ ಚಿತ್ರಗಳ ಪೈಕಿ ಒಂದೆನಿಸಿಕೊಂಡಿತು.[೨೧]

ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದಲ್ಲಿ ಎರಡು-ಭಾಗಗಳಲ್ಲಿ ಬಂದ ರಕ್ತ ಚರಿತ್ರ ಎಂಬ ರಾಜಕೀಯ ಕಥೆಯಾಧಾರಿತ ನಾಟಕೀಯ ಚಿತ್ರದ ಮೂಲಕ ಸೂರ್ಯ ಬಾಲಿವುಡ್‌‌‌ನ್ನು ಮೊದಲ ಬಾರಿಗೆ ಪ್ರವೇಶಿಸಿದ. 2011ರ ಜನವರಿ ವೇಳೆಗೆ ಇದ್ದಂತೆ, A. R. ಮುರುಗದಾಸ್‌ರವರ 7ಆಮ್‌ ಅರಿವು , K. V. ಆನಂದ್‌ರವರ ಮಾತ್ರಾನ್‌ ಎಂಬ ಚಿತ್ರಗಳಲ್ಲಿ ಅವನು ಕೆಲಸ ಮಾಡುತ್ತಿದ್ದಾನೆ; ಅಷ್ಟೇ ಅಲ್ಲ, ಅತೀವ ನಿರೀಕ್ಷೆಯ ಮತ್ತು ಗಮನ ಸೆಳೆಯುವ ಕೆಲವೊಂದು ಚಿತ್ರಗಳಲ್ಲಿ ಅವನು ಕಿರುಪಾತ್ರಗಳನ್ನು ನಿರ್ವಹಿಸಲು ಸಜ್ಜುಗೊಂಡಿದ್ದು, ಅವುಗಳ ಬಿಡುಗಡೆಯು ಇನ್ನೂ ಬಾಕಿಯಿದೆ.

ಲೋಕೋಪಕಾರ[ಬದಲಾಯಿಸಿ]

2008ರಲ್ಲಿ ಅಗರಮ್‌ ಫೌಂಡೇಷನ್‌[೨] ಎಂಬ ಪ್ರತಿಷ್ಠಾನವನ್ನು ಸೂರ್ಯ ಪ್ರಾರಂಭಿಸಿದ; ಇದು ತಮಿಳುನಾಡಿನಲ್ಲಿ ಬಾಲ್ಯದ ಆರಂಭದಲ್ಲೇ ಶಾಲೆಯನ್ನು ಬಿಟ್ಟಂಥ ಮಕ್ಕಳಿಗೆ ನೆರವಾಗುವಲ್ಲಿ ತೊಡಗಿಸಿಕೊಂಡಿರುವ ಒಂದು ಸಂಸ್ಥೆಯಾಗಿದೆ. ತಮಿಳುನಾಡಿನಲ್ಲಿ ಶಿಕ್ಷಣ ಖಾತೆಯ ಸಹಯೋಗದೊಂದಿಗೆ ಆತ ಒಂದು ಕಿರು ಜಾಹೀರಾತು ವಿಡಿಯೋವನ್ನು ಅವನು ರೂಪಿಸಿದ; ಮಗುವಿನ ಬಡತನ, ಬಾಲಕಾರ್ಮಿಕತನ ಮತ್ತು ಮಗುವು ಎದುರಿಸುತ್ತಿರುವ ಶಿಕ್ಷಣದ ಕೊರತೆಯ ಕುರಿತಾಗಿ ಸ್ಥೂಲ ವಿವರಣೆಯನ್ನು ನೀಡುವ ಈ ವಿಡಿಯೋ ಚಿತ್ರಕ್ಕೆ ಹೀರೋವಾ? ಝೀರೋವಾ? [೨೨] ಎಂಬ ಶೀರ್ಷಿಕೆಯನ್ನು ಇರಿಸಲಾಗಿತ್ತು. ಶಿವಕುಮಾರ್‌ ಕಥೆ ಬರೆದು ನಿರ್ಮಿಸಿದ ಈ ಚಲನಚಿತ್ರದಲ್ಲಿ, ಜೋಸೆಫ್‌ ವಿಜಯ್‌, R. ಮಾಧವನ್‌ ಮತ್ತು ಜ್ಯೋತಿಕಾ ಮೊದಲಾದವರೂ ಸಹ ಮುಖ್ಯಪಾತ್ರಗಳಲ್ಲಿ ನಟಿಸಿದ್ದರು. ಕಡಿಮೆ ಸವಲತ್ತುಗಳನ್ನು ಹೊಂದಿರುವ 159 ವಿದ್ಯಾರ್ಥಿಗಳ ಪ್ರಾಯೋಜಕತ್ವವನ್ನು ಅಗರಮ್‌ ಪ್ರತಿಷ್ಠಾನವು 2010ರಲ್ಲಿ ವಹಿಸಿಕೊಂಡಿದ್ದು, ನಾನಾಬಗೆಯ ವಿದ್ಯಾವಿಭಾಗಗಳಲ್ಲಿನ ಅವರ ಉನ್ನತ ಶಿಕ್ಷಣದ ಕಡೆಗೆ ಅದು ಗಮನ ಹರಿಸುತ್ತಿದೆ. ವಿದ್ಯಾವಂತ ಮನಸ್ಸೆಂಬುದು ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕುವುದು ಮಾತ್ರವಲ್ಲದೇ ಸಮಾಜದ ಸಮಾಜೋ-ಆರ್ಥಿಕ ಪೋಷಣೆಯಲ್ಲಿಯೂ ಸಹಾಯಕವಾಗಿ ನಿಲ್ಲುತ್ತದೆ ಎಂಬ ಸದೃಢ ನಂಬಿಕೆಯೊಂದಿಗೆ ಅಗರಮ್‌ ಪ್ರತಿಷ್ಠಾನವು ಕೆಲಸಮಾಡುತ್ತಿದ್ದು, ಅವಕಾದ ನೀಡದೇ ಹೋದರೆ ಉತ್ತಮ ಗುಣಮಟ್ಟ ಶಿಕ್ಷಣಕ್ಕಿರುವ ಪ್ರವೇಶ ಲಭ್ಯತೆಯಿಂದ ವಂಚಿತರಾಗುವ ಗ್ರಾಮೀಣ ಜನತೆಗೆ ಸೂಕ್ತವಾದ ಕಲಿಕಾ ಅವಕಾಶಗಳನ್ನು ಒದಗಿಸುವ ಕಡೆಗೆ ದೃಷ್ಟಿಯಿರಿಸಿಕೊಂಡಿದೆ.[೨]

ವೈಯಕ್ತಿಕ ಜೀವನ[ಬದಲಾಯಿಸಿ]

ನಿಶ್ಚಿತಾರ್ಥವಾಗಿ ಸಾಕಷ್ಟು ವರ್ಷಗಳಾದ ನಂತರ, 2006ರ[೨೩] ಸೆಪ್ಟೆಂಬರ್‌ 11ರಂದು ನಟಿ ಜ್ಯೋತಿಕಾ ಸಾಧನಾಳನ್ನು ಸೂರ್ಯ ಮದುವೆಯಾದ; ಅವಳೊಂದಿಗೆ ಆತ ಏಳು ಚಲನಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾನೆ ಎಂಬುದಿಲ್ಲಿ ಗಮನಾರ್ಹ ಅಂಶವಾಗಿದೆ. ಆ ಚಿತ್ರಗಳೆಂದರೆ: ಪೂವೆಲ್ಲಾಮ್‌ ಕೆಟ್ಟುಪ್ಪಾರ್‌ , ಉಯಿರಿಲೆ ಕಲಂಥಾಥು , ಕಾಕ ಕಾಕ , ಪೇರಳಗನ್‌ , ಮಾಯಾವಿ , ಜೂನ್‌ R ಮತ್ತು ಸಿಲ್ಲುನು ಒರು ಕಾದಲ್‌ . ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಅವರೆಂದರೆ: ಮಗಳು ದಿಯಾ (ಜನನ: 2007ನೇ ಆಗಸ್ಟ್‌ 10ರಂದು)[೨೪] ಮತ್ತು ಪುತ್ರ ದೇವ್‌ (ಜನನ: 2010ರ ಜೂನ್‌ 7ರಂದು).[೨೫]

ಪ್ರಶಸ್ತಿಗಳು[ಬದಲಾಯಿಸಿ]

ದಕ್ಷಿಣದ ಫಿಲ್ಮ್‌ಫೇರ್ ಪ್ರಶಸ್ತಿಗಳು
 • ಅತ್ಯುತ್ತಮ ಪೋಷಕ ನಟ – ಪಿತಾಮಗನ್‌ (2003)
 • ಅತ್ಯುತ್ತಮ ನಟ – ಪೇರಳಗನ್‌ (2004)[೨೬]
 • ಅತ್ಯುತ್ತಮ ನಟ – ವಾರಣಮ್‌ ಆಯಿರಂ (2008)[೨೭]
ತಮಿಳುನಾಡು ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿಗಳು
 • ಅತ್ಯುತ್ತಮ ನಟ – ನಂದಾ (2002)
 • ಅತ್ಯುತ್ತಮ ನಟನಿಗೆ ಮೀಸಲಾದ ವಿಶೇಷ ಪ್ರಶಸ್ತಿ – ಘಜಿನಿ (2005)
 • ಅತ್ಯುತ್ತಮ ನಟನಿಗೆ ಮೀಸಲಾದ ವಿಶೇಷ ಪ್ರಶಸ್ತಿ – ವಾರಣಮ್‌ ಆಯಿರಂ (2008)
ವಿಜಯ್‌ ಪ್ರಶಸ್ತಿಗಳು
 • ವರ್ಷದ ಮಾದರಿ ನಟನಿಗೆ ಮೀಸಲಾದ ವಿಜಯ್‌ ಪ್ರಶಸ್ತಿ (2007)[೨೮]
 • ಅತ್ಯುತ್ತಮ ನಟನಿಗೆ ಮೀಸಲಾದ ವಿಜಯ್‌ ಪ್ರಶಸ್ತಿ – ವಾರಣಮ್‌ ಆಯಿರಂ (2008)
 • ವರ್ಷದ ಮನೋರಂಜನೆಗಾರನಿಗೆ ಮೀಸಲಾದ ವಿಜಯ್‌ ಪ್ರಶಸ್ತಿಯು (2009) ಅಯ್ಯನ್‌/ಆಧವನ್‌ ಚಿತ್ರಗಳಿಗೆ ಸಂಬಂಧಿಸಿದಂತೆ ಲಭಿಸಿದೆ
 • ವರ್ಷದ ಮಾದರಿ ನಟನಿಗೆ ಮೀಸಲಾದ ವಿಜಯ್‌ ಪ್ರಶಸ್ತಿ (2009) – ಅಗರಮ್‌ ಪ್ರತಿಷ್ಠಾನ ದತ್ತಿ ಸಂಸ್ಥೆಯ ಮೂಲಕ ಸಲ್ಲಿಸಿದ ಸಾಮಾಜಿಕ ಸೇವೆಗಳಿಗಾಗಿ ದೊರೆತ ವಿಶೇಷ ಪ್ರಶಸ್ತಿ[೨೯]
ಇತರ ಪ್ರಶಸ್ತಿಗಳು ಮತ್ತು ಮಾನ್ಯತೆ
 • ಕಲೈಮಾಮಣಿ ಪ್ರಶಸ್ತಿ (2004)
 • ನೇರುಕ್ಕು ನೇರ್‌ (1997)[೩೦] ಚಿತ್ರದಲ್ಲಿನ ಅಭಿನಯಕ್ಕಾಗಿ ದಿನಕರನ್‌ ಅತ್ಯುತ್ತಮ ಹೊಸ ಮುಖ ನಟ ಪ್ರಶಸ್ತಿ
 • ಕಾಕ ಕಾಕ (2003) ಚಿತ್ರದಲ್ಲಿನ ಅಭಿನಯಕ್ಕಾಗಿ ITFA ಅತ್ಯುತ್ತಮ ನಟ ಪ್ರಶಸ್ತಿ
 • ವಾರಣಮ್‌ ಆಯಿರಂ [೩೧] ಚಿತ್ರದಲ್ಲಿನ ಅಭಿನಯಕ್ಕಾಗಿ, 2008ರ ಅತ್ಯುತ್ತಮ ನಟನಿಗೆ ಮೀಸಲಾದ ಚಿತ್ರರಸಿಕರ ಪ್ರಶಸ್ತಿ
 • 2009ರ ವಿಶಿಷ್ಟ ಶೈಲಿಯ ಮಾದರಿ ನಟನಿಗಾಗಿ ಮೀಸಲಾದ ಸೌತ್‌ ಸ್ಕೋಪ್‌ ಪ್ರಶಸ್ತಿ
 • ತಮಿಳಿನಲ್ಲಿನ ಅತ್ಯುತ್ತಮ ನಟನಿಗೆ ಮೀಸಲಾದ ಅಮೃತ ಮಾತೃಭೂಮಿ ಪ್ರಶಸ್ತಿ – ಅಯ್ಯನ್‌ / ಆಧವನ್‌ (2009) [೩೨]
 • ಗೀತೆಯೊಂದರಲ್ಲಿನ ಅತ್ಯುತ್ತಮ ಪಾತ್ರ ನಿರ್ವಹಣೆಗಾಗಿ ಮೀಸಲಾದ ಮೀರಾ ಇಸೈಅರುವಿ ತಮಿಳು ಸಂಗೀತ ಪ್ರಶಸ್ತಿಗಳು (2009) – ಆಧವನ್‌ (ದಮಕ್ಕು ದಮಕ್ಕು)
ನಾಮನಿರ್ದೇಶನಗಳು
 • ಫಿಲ್ಮ್‌ಫೇರ್‌‌ ಅತ್ಯುತ್ತಮ ತಮಿಳು ನಟ ಪ್ರಶಸ್ತಿ – ಕಾಕ ಕಾಕ (2003)
 • ಫಿಲ್ಮ್‌ಫೇರ್‌‌ ಅತ್ಯುತ್ತಮ ತಮಿಳು ನಟ ಪ್ರಶಸ್ತಿ – ಅಯ್ಯನ್‌ (2009)
 • ಅಚ್ಚುಮೆಚ್ಚಿನ ನಾಯಕನಟನಿಗೆ ಮೀಸಲಾದ ವಿಜಯ್‌ ಪ್ರಶಸ್ತಿ – ವಾರಣಮ್‌ ಆಯಿರಂ (2008)
 • ಅಚ್ಚುಮೆಚ್ಚಿನ ನಾಯಕನಟನಿಗೆ ಮೀಸಲಾದ ವಿಜಯ್‌ ಪ್ರಶಸ್ತಿ – ಅಯ್ಯನ್‌/ಆಧವನ್‌ (2009)
 • ‌ಅತ್ಯಂತ ಭರವಸೆಯ ಹೊಸ ಕಲಾವಿದನಿಗೆ ಮೀಸಲಾದ ಸ್ಟಾರ್‌ ಸ್ಕ್ರೀನ್ ಪ್ರಶಸ್ತಿ – ಪುರುಷ – ರಕ್ತ ಚರಿತ್ರ-2 (2010)[೩೩]
 • ನಾಳಿನ ಮಹಾನ್‌ತಾರೆಗೆ ಮೀಸಲಾದ ಸ್ಟಾರ್‌ಡಸ್ಟ್‌ ಪ್ರಶಸ್ತಿ – ಪುರುಷ – ರಕ್ತ ಚರಿತ್ರ-2 (2010)[೩೪]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಲನಚಿತ್ರ ಪಾತ್ರ ಭಾಷೆ ಟಿಪ್ಪಣಿಗಳು
1997 ನೇರುಕ್ಕು ನೇರ್‌ ಸೂರ್ಯ ತಮಿಳು ದಿನಕರನ್‌ ಅತ್ಯುತ್ತಮ ಹೊಸ ಮುಖ ನಟ ಪ್ರಶಸ್ತಿಯ ವಿಜೇತ
1998 ಕಾದಲೆ ನಿಮ್ಮದಿ ಚಂದ್ರು ತಮಿಳು
1998 ಸಂಧಿಪ್ಪೊಮ ವಿಷ್ಣು ತಮಿಳು
1999 ಪೆರಿಯಣ್ಣ ಸೂರ್ಯ ತಮಿಳು
1999 ಪೂವೆಲ್ಲಾಮ್‌ ಕೆಟ್ಟುಪ್ಪಾರ್‌ ಕೃಷ್ಣ ತಮಿಳು
2000 ಉಯಿರಿಲೆ ಕಲಂಥಾಥು ಸೂರ್ಯ ತಮಿಳು
2001 ಫ್ರೆಂಡ್ಸ್‌ ಚಂದ್ರು ತಮಿಳು
2001 ನಂದಾ ನಂದಾ ತಮಿಳು ಅತ್ಯುತ್ತಮ ನಟನಿಗೆ ಮೀಸಲಾದ ತಮಿಳುನಾಡು ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿಯ ವಿಜೇತ
2002 ಉನ್ನೈ ನಿನೈತು ಸೂರ್ಯ ತಮಿಳು
2002 ಶ್ರೀ ಶ್ರೀ ತಮಿಳು
2002 ಮೌನಂ ಪೇಸಿಯಾದೆ ಗೌತಮ್‌ ತಮಿಳು
2003 ಕಾಕ ಕಾಕ ಅನ್ಬುಸೆಲ್ವನ್‌ ತಮಿಳು ITFA ಅತ್ಯುತ್ತಮ ನಟ ಪ್ರಶಸ್ತಿಯ ವಿಜೇತ
ಫಿಲ್ಮ್‌ಫೇರ್‌‌ ಅತ್ಯುತ್ತಮ ತಮಿಳು ನಟ ಪ್ರಶಸ್ತಿಗಾಗಿ ನಾಮನಿರ್ದೇಶಿತ
2003 ಪಿತಾಮಗನ್‌ ಸಕ್ತಿ ತಮಿಳು ಫಿಲ್ಮ್‌ಫೇರ್‌‌ ಅತ್ಯುತ್ತಮ ತಮಿಳು ಪೋಷಕ ನಟ ಪ್ರಶಸ್ತಿಯ ವಿಜೇತ
2004 ಪೇರಳಗನ್‌ ಕಾರ್ತಿಕ್
ಚಿನ್ನ
ತಮಿಳು ಫಿಲ್ಮ್ ಫೇರ್ ಅತ್ಯುತ್ತಮ ತಮಿಳು ನಟ ಪ್ರಶಸ್ತಿಯ ವಿಜೇತ
2004 ಆಯುಥಾ ಎಳುಥು ಮೈಕೇಲ್‌ ವಸಂತ್‌ ತಮಿಳು
2005 ಮಾಯಾವಿ ಬಾಲಯ್ಯ ತಮಿಳು
2005 ಘಜಿನಿ ಸಂಜಯ್‌ ರಾಮಸಾಮಿ (ಮನೋಹರ್‌) ತಮಿಳು ತಮಿಳುನಾಡು ರಾಜ್ಯ ಚಲನಚಿತ್ರ ಅತ್ಯುತ್ತಮ ನಟನಿಗೆ ಮೀಸಲಾದ ವಿಶೇಷ ಪ್ರಶಸ್ತಿಯ ವಿಜೇತ
2005 ಆರು ಆರ್ಮುಗಂ (ಆರು) ತಮಿಳು
2005 ಜೂನ್‌ R ರಾಜಾ ತಮಿಳು ಅತಿಥಿ ಪಾತ್ರ
2006 ಸಿಲ್ಲುನು ಒರು ಕಾದಲ್‌ ಗೌತಮ್‌ ತಮಿಳು
2007 ವೇಲ್‌ ವೆಟ್ರಿವೇಲ್‌‌,
ವಾಸುದೇವನ್‌
ತಮಿಳು
2008 ಕುಸೇಲನ್‌ ಸ್ವತಃ ತಾನೇ ತಮಿಳು ಕಿರು ಪಾತ್ರ

|- | 2008 ||ವಾರಣಮ್‌ ಆಯಿರಂ || ಕೃಷ್ಣನ್‌,
ಸೂರ್ಯ ಕೃಷ್ಣನ್‌|| ತಮಿಳು || ವಿಜೇತ, ಫಿಲ್ಮ್‌ಫೇರ್‌‌ ಅತ್ಯುತ್ತಮ ತಮಿಳು ನಟ ಪ್ರಶಸ್ತಿ
ವಿಜೇತ, ಅತ್ಯುತ್ತಮ ನಟನಿಗೆ ಮೀಸಲಾದ ತಮಿಳುನಾಡು ರಾಜ್ಯ ಸರ್ಕಾರದ ಚಲನಚಿತ್ರ ವಿಶೇಷ ಪ್ರಶಸ್ತಿ
ವಿಜೇತ, ಅತ್ಯುತ್ತಮ ನಟನಿಗೆ ಮೀಸಲಾದ ವಿಜಯ್‌ ಪ್ರಶಸ್ತಿ
ನಾಮನಿರ್ದೇಶಿತ, ಅಚ್ಚುಮೆಚ್ಚಿನ ನಾಯಕನಟನಿಗೆ ಮೀಸಲಾದ ವಿಜಯ್‌ ಪ್ರಶಸ್ತಿ |- | 2009 || ಅಯ್ಯನ್‌ || ದೇವರಾಜ್‌ ವೇಲುಸಾಮಿ || ತಮಿಳು || ವಿಜೇತ, ವರ್ಷದ ಮನೋರಂಜನೆಗಾರನಿಗೆ ಮೀಸಲಾದ ವಿಜಯ್‌ ಪ್ರಶಸ್ತಿ
ನಾಮನಿರ್ದೇಶಿತ, ಫಿಲ್ಮ್‌ಫೇರ್‌‌ ಅತ್ಯುತ್ತಮ ತಮಿಳು ನಟ ಪ್ರಶಸ್ತಿ
ನಾಮನಿರ್ದೇಶಿತ, ಅಚ್ಚುಮೆಚ್ಚಿನ ನಾಯಕನಟನಿಗೆ ಮೀಸಲಾದ ವಿಜಯ್‌ ಪ್ರಶಸ್ತಿ |- | 2009 || ಆಧವನ್‌ || ಮಾಧವನ್‌ ಸುಬ್ರಮಣಿಯಮ್‌
(ಆಧವನ್‌/ಮುರುಗನ್‌) || ತಮಿಳು ||ವಿಜೇತ, ವರ್ಷದ ಮನೋರಂಜನೆಗಾರನಿಗೆ ಮೀಸಲಾದ ವಿಜಯ್‌ ಪ್ರಶಸ್ತಿ
ನಾಮನಿರ್ದೇಶಿತ, ಅಚ್ಚುಮೆಚ್ಚಿನ ನಾಯಕನಟನಿಗೆ ಮೀಸಲಾದ ವಿಜಯ್‌ ಪ್ರಶಸ್ತಿ |- | 2010 || ಸಿಂಗಮ್‌ || ದುರೈ ಸಿಂಗಮ್‌ || ತಮಿಳು || |- | 2010 || ರಕ್ತ ಚರಿತ್ರ I || rowspan="2"|ಸೂರ್ಯನಾರಾಯಣನ್‌ ರೆಡ್ಡಿ || rowspan="2"| ತೆಲುಗು || rowspan="2"|ನಾಮನಿರ್ದೇಶಿತ, ಅತ್ಯಂತ ಭರವಸೆಯ ಹೊಸ ಕಲಾವಿದನಿಗೆ ಮೀಸಲಾದ ಸ್ಟಾರ್‌ ಸ್ಕ್ರೀನ್‌ ಪ್ರಶಸ್ತಿ – ಪುರುಷ
ನಾಮನಿರ್ದೇಶಿತ, ನಾಳಿನ ಮಹಾನ್‌ತಾರೆಗೆ ಮೀಸಲಾದ ಸ್ಟಾರ್‌ಡಸ್ಟ್‌ ಪ್ರಶಸ್ತಿ – ಪುರುಷ |- | 2010 || ರಕ್ತ ಚರಿತ್ರ II |- | 2010 || ಮನ್ಮದನ್‌ ಅಂಬು || ಸ್ವತಃ ತಾನೇ || ತಮಿಳು || ಅತಿಥಿ ಪಾತ್ರ |- | 2011 || ಕೋ || ಸ್ವತಃ ತಾನೇ || ತಮಿಳು || ನಿರ್ಮಾಣಾನಂತರದ ಹಂತ. ಅತಿಥಿ ಪಾತ್ರ |- | 2011 || ಅವನ್‌ ಇವನ್‌ || || ತಮಿಳು || ಚಿತ್ರೀಕರಣ ನಡೆಯುತ್ತಿದೆ
ಅತಿಥಿ ಪಾತ್ರ |- | 2011 || 7ಆಮ್‌ ಅರಿವು || ಅನ್ವರ್‌ ಬಾಷಾ || ತಮಿಳು || ಚಿತ್ರೀಕರಣ ನಡೆಯುತ್ತಿದೆ |- | 2011 || ಮಾತ್ರಾನ್‌ || || ತಮಿಳು || ನಿರ್ಮಾಣ-ಪೂರ್ವ ಹಂತದಲ್ಲಿದೆ |- |}

ಉಲ್ಲೇಖಗಳು[ಬದಲಾಯಿಸಿ]

 1. Dashing Suriya's birthday bash – Tamil Movie News. IndiaGlitz. Retrieved on 2011-02-26.
 2. ೨.೦ ೨.೧ ೨.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. ಸೂರ್ಯ – ತಮಿಳ್‌ ಮೂವೀ ಆಕ್ಟರ್ಸ್‌ ಇಂಟರ್‌ವ್ಯೂ – ಆಧವನ್‌ | ಅಯ್ಯನ್‌ | ಸಿಂಗಮ್‌ | ವೇಲ್‌ | ವಾರಣಮ್‌ ಆಯಿರಂ | ಕುಸೇಲನ್‌ | ವೇಲ್‌ | ಸಿಲ್ಲುನು ಒರು ಕಾದಲ್‌ | ಆರು | ಘಜಿನಿ | ಮಾಯಾವಿ | ಆಯುಥಾ ಎಳುಥು | ಪಿತಾಮಗನ್‌ | ಕಾಕ ಕಾಕ – Behindwoods.com. Videos.behindwoods.com 2011-02-26ರಂದು ಮರುಸಂಪಾದಿಸಲಾಯಿತು.
 6. ಸೂರ್ಯ ಟು ಆಕ್ಟ್‌ ವಿತ್‌ ಅಮೀರ್‌ ಖಾನ್‌? – ತಮಿಳ್ ಮೂವೀ ನ್ಯೂಸ್‌. ಇಂಡಿಯಾಗ್ಲಿಟ್ಜ್‌. 2011-02-26ರಂದು ಮರುಸಂಪಾದಿಸಲಾಯಿತು.
 7. CBO- Dec14 to 16. Sify.com (2007-12-19). 2011-02-26ರಂದು ಮರುಸಂಪಾದಿಸಲಾಯಿತು.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. ಗೌತಮ್‌ ಮೆನನ್‌ ಬ್ಯಾಗ್ಸ್‌ ನ್ಯಾಷನಲ್‌ ಅವಾರ್ಡ್‌ ಫಾರ್‌ ‘ವಾರಣಂ ಆಯಿರಂ‌’ | ಡೆಕ್ಕನ್‌ ಕ್ರಾನಿಕಲ್‌ | 2010-01-24. ಡೆಕ್ಕನ್‌ ಕ್ರಾನಿಕಲ್‌ (2010-01-24). 2011-02-26ರಂದು ಮರುಸಂಪಾದಿಸಲಾಯಿತು.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. ಸಿಫಿ-ಟಾಪ್‌ 10 ಕಾಲಿವುಡ್‌ ಹಿಟ್ಸ್‌ ಆಫ್‌ 2010. Sify.com (2010-12-23). 2011-02-26ರಂದು ಮರುಸಂಪಾದಿಸಲಾಯಿತು.
 21. ಇಂಡಿಯಾಗ್ಲಿಟ್ಜ್‌ – ರೆಟ್ರೋಸ್ಪೆಕ್ಟಿವ್‌ 2010. E.indiaglitz.com. 2011-02-26ರಂದು ಮರುಸಂಪಾದಿಸಲಾಯಿತು.
 22. ಇವೆಂಟ್ಸ್‌ – ಹೀರೋವಾ? ಝೀರೋವಾ? ಎಜುಕೇಷನಲ್‌ ಅವೇರ್‌ನೆಸ್‌ ಕ್ಯಾಂಪೇನ್‌. ಇಂಡಿಯಾಗ್ಲಿಟ್ಜ್‌ (2008-05-16). 2011-02-26ರಂದು ಮರುಸಂಪಾದಿಸಲಾಯಿತು.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. ಆಕ್ಟರ್‌ ಸೂರ್ಯ | ಆಕ್ಟ್ರೆಸ್‌ ಜ್ಯೋತಿಕಾ | ನ್ಯೂಲಿ ಬಾರ್ನ್‌ ಸನ್‌ | ನೇಮ್ಡ್‌ ಆಸ್‌ ದೇವ್‌ | ಬೇಬಿ ಬಾಯ್‌ – ಒನ್‌ಇಂಡಿಯಾ ಎಂಟರ್‌ಟೈನ್‌ಮೆಂಟ್‌. Entertainment.oneindia.in (2010-07-22). 2011-02-26ರಂದು ಮರುಸಂಪಾದಿಸಲಾಯಿತು.
 26. ಸೂರ್ಯ ಶೈನ್ಸ್‌, ಚೇರನ್‌ ಸಿಜಲ್ಸ್‌ – ತಮಿಳ್‌ ಮೂವೀ ನ್ಯೂಸ್‌. ಇಂಡಿಯಾಗ್ಲಿಟ್ಜ್‌. 2011-02-26ರಂದು ಮರುಸಂಪಾದಿಸಲಾಯಿತು.
 27. ದಿ ಗ್ಲೋಯಿಂಗ್‌ ಫಿಲ್ಮ್‌ಫೇರ್‌‌ ನೈಟ್‌! – ದಿ ಟೈಮ್ಸ್‌ ಆಫ್‌ ಇಂಡಿಯಾ. Timesofindia.indiatimes.com (2009-08-02). 2011-02-26ರಂದು ಮರುಸಂಪಾದಿಸಲಾಯಿತು.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. ನಾಮಿನೇಷನ್ಸ್‌ | 17ತ್‌ ಆನ್ಯುಯಲ್‌ ಸ್ಟಾರ್‌ ಸ್ಕ್ರೀನ್‌ ಅವಾರ್ಡ್ಸ್‌ | 2011 | ಡಿಕ್ಲೇರ್ಡ್‌ – ಒನ್‌ಇಂಡಿಯಾ ಎಂಟರ್ಟೈನ್‌ಮೆಂಟ್‌. Entertainment.oneindia.in (2011-01-03). 2011-02-26ರಂದು ಮರುಸಂಪಾದಿಸಲಾಯಿತು.
 34. ನಾಮಿನೇಷನ್ಸ್‌ ಆಫ್‌ ಸ್ಟಾರ್‌ಡಸ್ಟ್‌ ಅವಾರ್ಡ್ಸ್ 2011. Bollywoodhungama.com (2011-01-22). 2011-02-26ರಂದು ಮರುಸಂಪಾದಿಸಲಾಯಿತು.

ಬಾಹ್ಯ ಕೊಂಡಿಗಳು‌[ಬದಲಾಯಿಸಿ]

 1. REDIRECT Template:Tamil Nadu State Award for Best Actor