ಸೂಪರ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೂಪರ್
ನಿರ್ದೇಶನಉಪೇಂದ್ರ
ನಿರ್ಮಾಪಕರಾಕ್‍ಲೈನ್ ವೆಂಕಟೇಶ್
ಲೇಖಕಉಪೇಂದ್ರ
ಚಿತ್ರಕಥೆಉಪೇಂದ್ರ
ಪಾತ್ರವರ್ಗಉಪೇಂದ್ರ
ನಯನತಾರ
ಸಾಧು ಕೋಕಿಲ
ಟ್ಯೂಲಿಪ್ ಜೋಶಿ
ಸಂಗೀತವಿ. ಹರಿಕೃಷ್ಣ
ಛಾಯಾಗ್ರಹಣಅಶೋಕ್ ಕಶ್ಯಪ್
ಸಂಕಲನತಿರುಪತಿ ರೆಡ್ಡಿ
ವಿತರಕರುರಾಕ್‍ಲೈನ್ ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದು
  • 3 ಡಿಸೆಂಬರ್ 2010 (2010-12-03)
ಅವಧಿ135 ನಿಮಿಷಗಳು
ದೇಶಭಾರತ
ಭಾಷೆಕನ್ನಡ
ಬಂಡವಾಳ೧೨ ಕೋಟಿ (ಯುಎಸ್$೨.೬೬ ದಶಲಕ್ಷ)
ಬಾಕ್ಸ್ ಆಫೀಸ್೫೦ ಕೋಟಿ (ಯುಎಸ್$೧೧.೧ ದಶಲಕ್ಷ) [೧]

ಸೂಪರ್ (ಮೊದಲು ಕೇವಲ ವಿತರ್ಕ ಮುದ್ರೆಯಿಂದ ಪರಿಚಿತವಾಗಿತ್ತು) ೨೦೧೦ರ ಒಂದು ಕನ್ನಡ ನರಕರೂಪ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರ. ಇದನ್ನು ಉಪೇಂದ್ರ ಬರೆದು ನಿರ್ದೇಶಿಸಿದ್ದಾರೆ.[೨] ಚಿತ್ರವು ೩ ಡಿಸೆಂಬರ್ ೨೦೧೦ರಂದು ಕನ್ನಡದಲ್ಲಿ, ೧೧ ಮಾರ್ಚ್ ೨೦೧೧ರಂದು ತೆಲುಗಿನಲ್ಲಿ ಬಿಡುಗಡೆಯಾಯಿತು.[೩] ಈ ಆದರ್ಶರಾಜ್ಯ ಕಲ್ಪನೆಯ ಚಲನಚಿತ್ರವು ೨೦೩೦ರ ಹಿನ್ನೆಲೆಯಿರುವ ಭವಿಷ್ಯದ ಭಾರತ, ಮತ್ತು ಭಾರತದ ಸಮಕಾಲೀನ ಚಿತ್ರವಿರುವ ವ್ಯತಿರಿಕ್ತವಾದ ಪರಿಕಲ್ಪನೆಯನ್ನು ಹೊಂದಿತ್ತು.

ಈ ಚಲನಚಿತ್ರವು ತನ್ನ ನಿಶ್ಚಿತ ವಧುನಿನ ಸವಾಲಿಗೊಳಗಾಗುವ ಅನಿವಾಸಿ ಭಾರತೀಯನಾದ ಸುಭಾಷ್‍ನ ಮೇಲೆ ಕೇಂದ್ರೀಕರಿಸುತ್ತದೆ. ಅವಳು ಭಾರತವನ್ನು ಬದಲಿಸುವ ದೃಷ್ಟಿಯಲ್ಲಿ ಸಂಪೂರ್ಣವಾಗಿ ಆಧುನಿಕವಾಗಿರುತ್ತಾಳೆ. ಚಿತ್ರದ ಉಳಿದ ಭಾಗವು ಸುಭಾಷ್ ಭಾರತ ದೇಶದಲ್ಲಿ ಹೇಗೆ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಾನೆ ಎಂಬುದನ್ನು ತೋರಿಸುತ್ತದೆ. ಈ ಚಲನಚಿತ್ರವು ನಿರ್ದೇಶಕರಾಗಿ ಉಪೇಂದ್ರ ೧೦ ವರ್ಷಗಳ ಬಳಿಕ ಮರಳಿದ್ದನ್ನು ಗುರುತಿಸಿದ್ದರಿಂದ ಮಾಧ್ಯಮಗಳಲ್ಲಿ ಭಾರಿ ಪ್ರಚಾರವನ್ನು ಸೃಷ್ಟಿಸಿತು. ಈ ಚಲನಚಿತ್ರವು ಸಕಾರಾತ್ಮಕ ಮೆಚ್ಚುಗೆಯನ್ನು ಪಡೆಯಿತು ಮತ್ತು ವಿಮರ್ಶಕರು ಇದರ ಪರಿಕಲ್ಪನೆ ಮತ್ತು ಚಿತ್ರಕಥೆಯನ್ನು ಪ್ರಶಂಸಿಸಿದರು.

ಚಿತ್ರದ ಶೀರ್ಷಿಕೆಯನ್ನು ಕೇವಲ ಒಂದು ಚಿಹ್ನೆಯಿಂದ ಚಿತ್ರಿಸಲಾಗಿದೆ. ಮುಖ್ಯ ಪಾತ್ರಗಳಲ್ಲಿ ಉಪೇಂದ್ರ ಮತ್ತು ನಯನತಾರ ನಟಿಸಿದ್ದಾರೆ. ಇದನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ ಮತ್ತು ವಿ.ಹರಿಕೃಷ್ಣ ಇದರ ಸಂಗೀತ ಸಂಯೋಜಕರು.[೪] ಬಿಡುಗಡೆಗೆ ಮೊದಲೇ ಉಪಗ್ರಹೀಯ ದೂರದರ್ಶನ ಮತ್ತು ಆಡಿಯೊ ಹಕ್ಕುಗಳ ಮೂಲಕ 100 ಮಿಲಿಯನ್ ಗಳಿಸಿತು. ಈ ಚಲನಚಿತ್ರವು ಬಾಕ್ಸ್ ಆಫ಼ಿಸ್‌ನಲ್ಲಿ 500 ಮಿಲಿಯನ್ ಗಳಿಸಿತು ಮತ್ತು ಜಾಕಿ ಜೊತೆಗೆ ೨೦೧೦ರ ಅತ್ಯಂತ ಹೆಚ್ಚು ಹಣಗಳಿಸಿದ ಚಲನಚಿತ್ರಗಳಲ್ಲಿ ಒಂದಾಗಿತ್ತು. ಆಮೇಲೆ ಈ ಚಿತ್ರವನ್ನು ಹಿಂದಿಯಲ್ಲಿ ರೌಡಿ ಲೀಡರ್ ೨ ಎಂದು ಡಬ್ ಮಾಡಲಾಯಿತು.[೫][೬]

ಕಥಾವಸ್ತು[ಬದಲಾಯಿಸಿ]

ಪಾತ್ರವರ್ಗ[ಬದಲಾಯಿಸಿ]

  • ಸುಭಾಷ್ ಚಂದ್ರ ಗಾಂಧಿ ಆಗಿ ಉಪೇಂದ್ರ
  • ಇಂದಿರಾ ಆಗಿ ನಯನತಾರ
  • ಮಂದಿರಾ ಆಗಿ ಟ್ಯೂಲಿಪ್ ಜೋಶಿ
  • ಸುಭಾಷ್‍ನ ತಂದೆತಾಯಿಗಳಾಗಿ ಆರ್.ಎನ್.ಸುದರ್ಶನ್ ಮತ್ತು ಶೈಲಶ್ರೀ
  • ಚಡ್ಡಿ ಸಹೋದರರಾಗಿ ಸಾಧು ಕೋಕಿಲ ಮತ್ತು ಅಲಿ[೭]
  • ಎಸಿಪಿ ರುದ್ರ ಪ್ರತಾಪ್ ಆಗಿ ಜೀವಾ
  • ಮುಖ್ಯಮಂತ್ರಿ ಆಗಿ ದಂಡಪಾಣಿ
  • ತೆರೆಯಾಚೆಯ ನಿರೂಪಕರಾಗಿ ಯೋಗರಾಜ ಭಟ್
  • ಜನಪದ ನೃತ್ಯ ತಂಡದ ಮುಖ್ಯಸ್ಥನಾಗಿ ಅತಿಥಿ ಪಾತ್ರದಲ್ಲಿ ರಾಕ್‍ಲೈನ್ ವೆಂಕಟೇಶ್
  • ನಾಗೇಂದ್ರ ಶಾ
  • ರಮೇಶ್ ಪಂಡಿತ್
  • ಸಿದ್ದರಾಜ್ ಕಲ್ಯಾಣ್‍ಕರ್
  • ಹಂದಿ ಆಗಿ ಅರಸು ಮಹರಾಜ್
  • ದೀಪಕ್ ಮಧುವನಹಳ್ಳಿ
  • ಎಂ. ಜಿ. ಶ್ರೀನಿವಾಸ್
  • ರಾಕ್‍ಲೈನ್ ಸುಧಾಕರ್
  • ಲಾಲ್ ಬಹಾದ್ದುರ್ ಶಾಸ್ತ್ರಿ ಆಗಿ ಮಂಜುನಾಥ್ ರಾವ್
  • ಅನುಸೂಯ ರಾವ್
  • ಹೈ ಕೋರ್ಟ್ ಜಜ್ ಆಗಿ ತುಮಕೂರು ಮೋಹನ್

ತಯಾರಿಕೆ[ಬದಲಾಯಿಸಿ]

ಹೆಸರಿಲ್ಲದ ಚಿತ್ರಕ್ಕೆ ಪ್ರೇಕ್ಷಕರು ಹೆಸರಿಡಬೇಕೆಂದು ಉಪೇಂದ್ರ ಇಷ್ಟಪಟ್ಟರು. ಕೈ ಚಿಹ್ನೆಯ ಅರ್ಥ ಸೊನ್ನೆ, ಮೂರು ಅಥವಾ ಓಂ ಅಥವಾ ವಿತರ್ಕ ಮುದ್ರೆ (ಪ್ರಾಚೀನ ಬೌದ್ಧ ಸನ್ನೆ) ಇದ್ದಿರಬಹುದು. ಸಾರ್ವಜನಿಕರು ಮತು ಮಾಧ್ಯಮದವರು ಇದನ್ನು ಸೂಪರ್ ಎಂದು ಕರೆದರು.[೮]

ಚಿತ್ರೀಕರಣವು ೧೮ ಫ಼ೆಬ್ರುವರಿ ೨೦೧೦ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾಯಿತು ಮತ್ತು ಬೆಂಗಳೂರು, ದುಬೈ ಹಾಗೂ ಲಂಡ‍ನ್‍ನಲ್ಲಿನ ವಿವಿಧ ಸ್ಥಳಗಳನ್ನು ಒಳಗೊಂಡಿತ್ತು.[೯] ಇದನ್ನು ರಾಕ್‍ಲೈನ್ ಲಾಂಛನದಡಿ ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡಿದರು. ಈ ಚಿತ್ರವು ಕನ್ನಡ ಚಲನಚಿತ್ರಗಳಲ್ಲಿ ನಯನತಾರ ಅವರ ಪ್ರಥಮ ಪ್ರವೇಶವಾಗಿತ್ತು. ಬಹುಭಾಷಾ ಚಿತ್ರವಾದ್ದರಿಂದ, ಅಲಿ, ಕಾದಲ್ ದಂಡಪಾಣಿ, ಜೀವಾರಂತಹ ತೆಲುಗು ಮತ್ತು ತಮಿಳು ಚಿತ್ರೋದ್ಯಮಗಳ ಹಲವಾರು ಕಲಾವಿದರು ಕೂಡ ನಟಿಸಿದರು.[೧೦]

ಬಿಡುಗಡೆಗೆ ಮೊದಲು, ಚಿತ್ರದ ಬಗೆಗಿನ ಬಹಳಷ್ಟು ಮಾಹಿತಿಯನ್ನು ಗೋಪ್ಯವಾಗಿಡಲಾಗಿತ್ತು.

ವಿಷಯ[ಬದಲಾಯಿಸಿ]

ಚಿತ್ರದ ಶೀರ್ಷಿಕೆಯು ಚಿಹ್ನೆಯಾಗಿರುವುದರಿಂದ, ಇದರಲ್ಲಿ ಸಂಕೇತಗಳು ಹೇರಳವಾಗಿವೆ.[೧೧] ಇದು ವಿಭಿನ್ನವಾದ ಚಿತ್ರವಾಗಿದೆ ಮತ್ತು ವಿಭಿನ್ನತೆಯು ಶೀರ್ಷಿಕೆ ಕಾರ್ಡುಗಳ ಪ್ರದರ್ಶನದಿಂದ ಆರಂಭವಾಗುತ್ತದೆ. ಉದಾಹರಣೆಗೆ, ನಿರ್ದೇಶಕರ ಹೆಸರನ್ನು ಕೇವಲ "U" ಎಂದು ತೋರಿಸಲಾಗಿದೆ ಮತ್ತು ತೋರುಬೆರಳು ಪ್ರೇಕ್ಷಕರ ಕಡೆಗೆ ತೋರಿಸುತ್ತದೆ. ಭಾರತದ ಈ ಕಥೆಯನ್ನು ನಾಯಕಿಯಾದ ಇಂದಿರಾಳ ಕಥೆಯ ಮೂಲಕ ರೂಪಕಾರ್ಥದಲ್ಲಿ ಹೇಳಲಾಗಿದೆ.[೧೨]

ಸೂಪರ್ ೨೦೩೦ ನೆ ಇಸವಿಯಲ್ಲಿನ ಆದರ್ಶ ಭಾರತವನ್ನು ಚಿತ್ರಿಸುತ್ತದೆ. ಇಲ್ಲಿ ಭಾರತೀಯರನ್ನು ಶ್ರೀಮಂತರು, ಕಷ್ಟಪಡುವವರಾಗಿ ಚಿತ್ರಿಸಲಾಗಿದೆ ಮತ್ತು ಇವರು ಇಳಕಲ್ಲ ಸೀರೆ ಮತ್ತು ಪಂಚೆಯಂತಹ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವವರಾಗಿ ತೋರಿಸಲಾಗಿದೆ. ವ್ಯತಿರಿಕ್ತವಾಗಿ, ಪಾಶ್ಚಾತ್ಯರು ಟ್ಯಾಕ್ಸಿ ಚಾಲನೆ, ಬಾಗಿಲು ಕಾಯುವಿಕೆ ಇತ್ಯಾದಿಗಳಂತಹ ಗುಲಾಮಚಾಕರಿಗಳನ್ನು ಮಾಡುವವರಾಗಿರುತ್ತಾರೆ. ಈ ಭವಿಷ್ಯಕಾಲದಲ್ಲಿ ರೂಪಾಯಿಯ ಮೌಲ್ಯವು ಬ್ರಿಟಿಷ್ ಪೌಂಡಿಗಿಂತ ೭೦ ಪಟ್ಟು ಇರುತ್ತದೆ ಮತ್ತು ಕನ್ನಡ ಮಾತಾಡಲು ಬಾರದವರನ್ನು ಅನಕ್ಷರಸ್ಥರೆಂದು ಪರಿಗಣಿಸಲಾಗುತ್ತದೆ (ಮತ್ತು ಪಾಶ್ಚಾತ್ಯರು ಅದರ ಬಗ್ಗೆ ಕ್ಷಮೆಯಾಚಿಸುತ್ತಾರೆಂದು ತೋರಿಸಲಾಗಿದೆ). ಈ ಹಿನ್ನೆಲೆಯಿಂದ, ಚಿತ್ರವು ಈಗಿನ ವರ್ಷವಾದ ೨೦೧೦ಕ್ಕೆ ವಾಪಸು ಬರುತ್ತದೆ. ಇಲ್ಲಿ ಭಾರತವು ಭ್ರಷ್ಟಾಚಾರ, ವಿಧಾನ ವಿಳಂಬ, ಮಾಲಿನ್ಯ ಮತ್ತು ನಿರುದ್ಯೋಗದ ಸಮಸ್ಯೆಗಳಿಂದ ಆವರಿಸಲ್ಪಟ್ಟಿರುತ್ತದೆ. ರಾಜಕೀಯ ವಿಡಂಬನೆಯನ್ನು ಮಂತ್ರಿಗಳು ಪರದೆಯ ಮೇಲೆ ಕಾಣಿಸಿಕೊಂಡಾಗ ಕುದುರೆಗಳು ಮತ್ತು ಕತ್ತೆಗಳ ಶಬ್ದಗಳನ್ನು ಬಳಸಿ ತೋರಿಸಲಾಗಿದೆ. ಇದು ಕರ್ನಾಟಕದಲ್ಲಿ ಇತ್ತೀಚಿನ ಸಮಯದಲ್ಲಿ ಕಾಣಲಾದ ರಾಜಕೀಯ ಕುದುರೆ ವ್ಯಾಪಾರವನ್ನು ಪ್ರತಿನಿಧಿಸುತ್ತದೆ.[೧೩] ಇಂದಿರಾ ಮೇಲೆ ಅತ್ಯಾಚಾರ ಮಾಡುವ ಮತ್ತು ಒಂದು ಸಂಪೂರ್ಣ ಭಾರತೀಯ ರಾಜ್ಯದ ಹರಾಜು ಪ್ರಕ್ರಿಯೆಯ ದೃಶ್ಯಗಳನ್ನು ಎರಡರ ನಡುವಿನ ಹೋಲಿಕೆಗಳನ್ನು ತೋರಿಸಲು ಅಲ್ಲಲ್ಲಿ ಹಾಕಲಾಗಿದೆ.[೧೪] ಚಿತ್ರದ ಪರಾಕಾಷ್ಠೆಯನ್ನು ಮತ್ತೆ ೨೦೩೦ರಲ್ಲಿ ಕಂಡುಕೊಳ್ಳಬಹುದು. ಒಬ್ಬ ವಿದೇಶಿಯು ಒಬ್ಬ ಭಾರತೀಯನನ್ನು ಭಾರತದಲ್ಲಿನ ಎಲ್ಲ ಉತ್ತಮ ಬದಲಾವಣೆಗಳಿಗೆ ಯಾರು ಜವಾಬ್ದಾರರು ಎಂದು ಕೇಳುತ್ತಾನೆ, ಮತ್ತು ಇನ್ನೊಮ್ಮೆ ತೋರು ಬೆರಳನ್ನು ಪ್ರೇಕ್ಷಕರ ಕಡೆಗೆ ತೋರಿಸುವುದರೊಂದಿಗೆ ಚಿತ್ರವು ಥಟ್ಟನೇ ಅಂತ್ಯಗೊಳ್ಳುತ್ತದೆ. ಇದು ಒಂದು ರಾಷ್ಟ್ರದ ಮುನ್ನಡೆಗೆ ಅಂತಿಮವಾಗಿ ಜನರು ಜವಾಬ್ದಾರರು ಎಂಬುದನ್ನು ಸಂಕೇತಿಸುತ್ತದೆ.

ಧ್ವನಿವಾಹಿನಿ[ಬದಲಾಯಿಸಿ]

ಸೂಪರ್‌ನ ಧ್ವನಿವಾಹಿನಿ ಸಂಗ್ರಹದ ಹಕ್ಕುಗಳನ್ನು ಆಕಾಶ್ ಆಡಿಯೋದ ಮಧು ಬಂಗಾರಪ್ಪ 12.5 ಮಿಲಿಯನ್‍ನ ದಾಖಲೆ ಬೆಲೆಗೆ ಪಡೆದರು.[೧೫] ವಿ ಹರಿಕೃಷ್ಣ ಸಂಯೋಜಿಸಿದ ಈ ಧ್ವನಿಸುರುಳಿ ಸಂಗ್ರಹವು ಐದು ಹಾಡುಗಳನ್ನು ಹೊಂದಿದೆ. ಮೂರು ಹಾಡುಗಳಿಗೆ ಉಪೇಂದ್ರ ಸಾಹಿತ್ಯ ಬರೆದಿದ್ದರೆ ಉಳಿದ ಎರಡಕ್ಕೆ ಯೋಗರಾಜ್ ಭಟ್ ಮತ್ತು ವಿ. ಮನೋಹರ್ ಸಾಹಿತ್ಯ ನೀಡಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. ‘Super’ going super!. Indiaglitz.com (5 January 2011).
  2. "Upendra promises treat for Tamil, Telugu, Kannada fans". India Talkies. 1 March 2010. Archived from the original on 13 July 2011.
  3. "Upendra untitled film out on 11th in Telugu". Indiaglitz. Archived from the original on 2011-03-06. Retrieved 2020-02-10.
  4. "Super Muhurtha". Oneindia. 8 February 2010. Archived from the original on 21 July 2012.
  5. "'Super' 100 it is Super Time". Supergoodmovies.com. 13 March 2011. Archived from the original on 30 ಮೇ 2016. Retrieved 10 ಫೆಬ್ರವರಿ 2020.
  6. "Upendra Kannada Film Super Box Office Report, Collections". Cinemagupshup.com. 22 December 2010. Archived from the original on 22 Dec 2010.
  7. "Hindu - Loot in Bellary". Flonnet. 19 May 2011. Archived from the original on 19 May 2011.
  8. 'People should title my film' - Upendra. Deccan Herald.
  9. "Chitraloka Super info". Archived from the original on 2016-01-31. Retrieved 2020-02-10.
  10. Nayantara's Kannada debut Archived 2010-04-17 ವೇಬ್ಯಾಕ್ ಮೆಷಿನ್ ನಲ್ಲಿ.. Ibnlive.in.com (31 March 2010).
  11. "ಆರ್ಕೈವ್ ನಕಲು". Archived from the original on 2012-10-22. Retrieved 2020-02-10.
  12. "Upendra's Super movie review and audience response". Oneindia. 7 Dec 2010. Archived from the original on 9 December 2010.
  13. Lokayukta begins preliminary probe into horse-trading charge in Karnataka Archived 2012-10-21 ವೇಬ್ಯಾಕ್ ಮೆಷಿನ್ ನಲ್ಲಿ.. The Hindu. (3 November 2010).
  14. "Hero announces the rape of Nayantara". Gulte. Archived from the original on 2016-03-04. Retrieved 2020-02-10.
  15. "Stage set for Upendra's Super audio release". Oneindia. 8 Nov 2010. Archived from the original on 23 July 2012.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]