ಸೂಪರ್ ಶಾಸ್ತ್ರಿ (ಚಲನಚಿತ್ರ)
ಸೂಪರ್ ಶಾಸ್ತ್ರಿ | |
---|---|
ನಿರ್ದೇಶನ | ರವಿರಾಜ್ |
ನಿರ್ಮಾಪಕ | ಜಿ. ರಾಮಚಂದ್ರನ್ |
ಲೇಖಕ | ರವಿರಾಜ್ |
ಪಾತ್ರವರ್ಗ | ಪ್ರಜ್ವಲ್ ದೇವರಾಜ್j, ಹರಿಪ್ರಿಯಾ |
ಸಂಗೀತ | ದೇವಾ |
ಛಾಯಾಗ್ರಹಣ | ಕಾಶಿ ವಿಶ್ವನಾಥ್ |
ಸ್ಟುಡಿಯೋ | ಜಿ. ಆರ್. ಗೋಲ್ಡ್ ಫಿಲಮ್ಸ್ |
ಬಿಡುಗಡೆಯಾಗಿದ್ದು | 9 ನವಂಬರ್ 2012 |
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | 15 ಕೋಟಿ |
ಸೂಪರ್ ಶಾಸ್ತ್ರಿ 2012 ರ ಕನ್ನಡ ಭಾಷೆಯ ಸಾಹಸಮಯ ಚಿತ್ರವಾಗಿದ್ದು, ಇದನ್ನು ರವಿರಾಜ್ ನಿರ್ದೇಶಿಸಿದ್ದಾರೆ ಮತ್ತು ಜಿ. ರಾಮಚಂದ್ರನ್ ನಿರ್ಮಿಸಿದ್ದಾರೆ. ಇದರಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ತೆಲುಗಿನ ಕಾಮಿಡಿ ಸೀಮಾ ಶಾಸ್ತ್ರಿಯ ರಿಮೇಕ್ ಆಗಿದ್ದು ಅಲ್ಲರಿ ನರೇಶ್ ಮತ್ತು ಫರ್ಜಾನಾ ನಟಿಸಿದ್ದಾರೆ. ರಂಗಾಯಣ ರಘು, ಉಮಾಶ್ರೀ, ಬುಲೆಟ್ ಪ್ರಕಾಶ್ ಮತ್ತು ರೇಖಾ ಕುಮಾರ್ ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ದೇವಾ ಸಂಗೀತ ಸಂಯೋಜಕರು. [೧] ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿದೆ ಎಂದು ಘೋಷಿಸಲಾಯಿತು.
ಪಾತ್ರವರ್ಗ
[ಬದಲಾಯಿಸಿ]- ಸುಬ್ರಹ್ಮಣ್ಯ ಶಾಸ್ತ್ರಿಯಾಗಿ ಪ್ರಜ್ವಲ್ ದೇವರಾಜ್
- ಸೌಮ್ಯಾ ಪಾತ್ರದಲ್ಲಿ ಹರಿಪ್ರಿಯಾ
- ಉಮಾಶ್ರೀ
- ರಂಗಾಯಣ ರಘು
- ಬುಲೆಟ್ ಪ್ರಕಾಶ್
- ವೆಂಕಟಪ್ಪ ಗೌಡನಾಗಿ ಪಲ್ಲಕ್ಕಿ ರಾಧಾಕೃಷ್ಣ
- ಅಂಬಿಕಾ ಸೋನಿ
- ಮಾಸ್ಟರ್ ಮಂಜು
- ಮಾಸ್ಟರ್ ಸುರೇಶ್
- ರೇಖಾ ಕುಮಾರ್
- ಕೋಟೆ ಪ್ರಭಾಕರ್
- ಸುರೇಶ ವಡಗೇರಿ
ಧ್ವನಿಮುದ್ರಿಕೆ
[ಬದಲಾಯಿಸಿ]ಕೆ. ಕಲ್ಯಾಣ್ ಅವರ ಸಾಹಿತ್ಯಕ್ಕೆ ದೇವಾ ಅವರು ಧ್ವನಿಮುದ್ರಿಕೆಯನ್ನು ಸಂಯೋಜಿಸಿದ್ದಾರೆ. [೨]
ಸಂ. | ಹಾಡು | ಹಾಡುಗಾರರು | ಸಮಯ |
---|---|---|---|
1. | "ಅರ್ಧ ಕೇಜಿ" | ಪ್ರಸನ್ನ | |
2. | "ಮನಸೇ ಬಾಲಂಗೋಚಿ" | ಪ್ರಸನ್ನ | |
3. | "ಒಂದೇ ಒಂದು" | ಬದ್ರಿ ಪ್ರಸಾದ್, ನಂದಿತಾ ಗುರುರಾಜ್ | |
4. | "ಪುನೀತ್ ರಾಜ್‍ಕುಮಾರ್" | ಬದ್ರಿ ಪ್ರಸಾದ್, ಚೈತ್ರಾ ಎಚ್.ಜಿ. | |
5. | "ವಿಶ್ವ ಸುಂದರಿ" | ಪ್ರಸನ್ನ |
ಬಿಡುಗಡೆ
[ಬದಲಾಯಿಸಿ]ಚಿತ್ರವು 9 ನವೆಂಬರ್ 2012 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ವಿಮರ್ಶೆಗಳು
[ಬದಲಾಯಿಸಿ]ಸೂಪರ್ ಶಾಸ್ತ್ರಿ ಬಿಡುಗಡೆಯಾದ ನಂತರ ವಿಮರ್ಶಕರಿಂದ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. 2.5/5 ರೇಟಿಂಗ್‌ನೊಂದಿಗೆ ಚಿತ್ರಕ್ಕೆ ಋಣಾತ್ಮಕ ವಿಮರ್ಶೆಯನ್ನು ನೀಡಿದ ಟೈಮ್ಸ್ ಆಫ್ ಇಂಡಿಯಾವು "ನಿರ್ದೇಶಕರು ಕಳಪೆ ರೂಪದಲ್ಲಿರುವ ಸಂಭಾಷಣೆ, ನಿರೂಪಣೆ ಮತ್ತು ಪಾತ್ರವರ್ಗದ ಬಗ್ಗೆ ಕಾಳಜಿ ವಹಿಸಿದ್ದರೆ ಕಥೆಯು ಉತ್ತಮ ಹಾಸ್ಯಮಯವಾಗಬಹುದಿತ್ತು. ಪ್ರಜ್ವಲ್ ಖಂಡಿತವಾಗಿಯೂ ಈ ವಿಶಿಷ್ಟವಲ್ಲದ ಪಾತ್ರಕ್ಕೆ ಸರಿಹೊಂದುವುದಿಲ್ಲ." [೩]ರೆಡಿಫ್ ಚಿತ್ರಕ್ಕೆ ಒನ್ ಸ್ಟಾರ್ ರೇಟಿಂಗ್ ನೀಡಿದ್ದು, ಚಿತ್ರವು ಎಲ್ಲಾ ಬಗೆಗಳಲ್ಲಿ ಕನ್ನಡ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ವಿಫಲವಾಗಿದೆ ಎಂದು ಹೇಳಿದ್ದಾರೆ. [೪]
ಉಲ್ಲೇಖಗಳು
[ಬದಲಾಯಿಸಿ]- ↑ "'Super Shastry' Complete Shoot". Supergoodmovies.com. 2012-04-22. Retrieved 2013-10-25.
- ↑ "Super Shastri songs". Southsongs4u. Archived from the original on 25 May 2012. Retrieved 29 May 2012.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "'Super Shastri' review". timesofindia.com. 2012-11-09. Retrieved 2012-11-20.
- ↑ "Review: Super Shastri is unbearable". rediff.com. 2012-11-09. Retrieved 2012-11-20.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Nowrunning.com Archived 2021-10-28 ವೇಬ್ಯಾಕ್ ಮೆಷಿನ್ ನಲ್ಲಿ.