ವಿಷಯಕ್ಕೆ ಹೋಗು

ಬುಲೆಟ್ ಪ್ರಕಾಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬುಲೆಟ್ ಪ್ರಕಾಶ್
Born
ಪ್ರಕಾಶ್

(೧೯೭೬-೦೪-೦೨)೨ ಏಪ್ರಿಲ್ ೧೯೭೬
Died6 April 2020(2020-04-06) (aged 44)
Cause of deathಮೂತ್ರಪಿಂಡ ಮತ್ತು ಯಕೃತ್ತು ವೈಫಲ್ಯ[]
Occupationsನಟ, ರಾಜಕೀಯ ನಾಯಕ
Years active1999–2020
Political partyಭಾರತೀಯ ಜನತಾ ಪಕ್ಷ

ಬುಲೆಟ್ ಪ್ರಕಾಶ್ (ಜನನ: 2 ಏಪ್ರಿಲ್ 1976, ಸಾವು: 6 ಏಪ್ರಿಲ್ 2020) ಅವರು ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟರಾಗಿದ್ದರು. ತಮ್ಮ ವೈಚಿತ್ರ್ಯಪೂರ್ಣ ನಟನೆ ಹಾಗೂ ಸಮಯೋಚಿತ ಹಾಸ್ಯದಿಂದಾಗಿ 325 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮನಮೆಚ್ಚುವ ಪಾತ್ರಗಳನ್ನು ನಿರ್ವಹಿಸಿದ್ದರು. ಅವರು ಸದಾ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕನ್ನು ಬಳಸುತ್ತಿದ್ದರಿಂದ, ಅವರು "ಬುಲೆಟ್" ಎಂಬ ಅಡ್ಡಹೆಸರನ್ನು ಗಳಿಸಿದರು ಹಾಗೂ ಅದೇ ಹೆಸರಿನಲ್ಲಿಯೇ ಪ್ರಸಿದ್ಧರಾದರು. 2015 ರಲ್ಲಿ ಪ್ರಕಾಶ್ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದರು.

ಸಾಧನೆ

[ಬದಲಾಯಿಸಿ]

ಪ್ರಕಾಶ್‌ರವರು ಕನ್ನಡದ ಸುವರ್ಣ ಚಾನಲ್‌ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋನಲ್ಲಿ ಬಿಗ್‌ಬಾಸ್ ಎರಡನೇ ಋತುವಿನಲ್ಲಿ ಪಾಲ್ಗೊಂಡಿದ್ದರು. ಸೂಂಬೆ ಎಂಬ ತುಳು ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ[] ಹಾಗೂ ೩೦೦ಕ್ಕೂ ಹೆಚ್ಚು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ.

ಚಲನಚಿತ್ರಗಳ ಪಟ್ಟಿ[]

[ಬದಲಾಯಿಸಿ]
ಚಿತ್ರವರ್ಷ
ದ್ರುವ೨೦೦೨
ಪಾರ್ಥ೨೦೦೩
ಓ೦ಕಾರ೨೦೦೪
ಅ೦ಬಿ೨೦೦೬
ಮಾಸ್ತ್ ಮಜಾ ಮಾಡಿ೨೦೦೮
ಐತಲಕ್ಕಡಿ೨೦೧೦
ಜಾಕಿ೨೦೧೦
ಮಲ್ಲಿಕಾರ್ಜುನ೨೦೧೧
ದೆವ್ರಾಣೆ೨೦೧೩
ರಜಿನಿ ಕಾ೦ತ೨೦೧೩
ಪಾರಾರಿ೨೦೧೩
ಜಟಾಯು೨೦೧೩
ಶತ್ರು೨೦೧೩
ಜ೦ಗಲ್ ಜಾಕಿ೨೦೧೩
ಧನು೨೦೧೩
ಸವಾಲ್೨೦೧೩
ಲವ್ ಶೋ೨೦೧೪
ನಿ೦ಬೆ ಹುಳಿ೨೦೧೪
ಪು೦ಗಿ ದಾಸ೨೦೧೪
ರೋಜ್೨೦೧೪
ಆರ್ಯನ್೨೦೧೪
ಮಾಸ್ಟರ್ ಮೈ೦ಡ್೨೦೧೫
ರಾಟೆ೨೦೧೫
ದಕ್ಷ೨೦೧೫
ಬಾ೦ಬೆ ಮಿಟಾಯಿ೨೦೧೫
ಪಾತರಗಿತ್ತಿ೨೦೧೫
ರೆಡ್ ಅಲರ್ಟ್೨೦೧೫
ಮಳೆ೨೦೧೫
ಲವ್ ಯು ಆಲಿಯ೨೦೧೫
ಮಿ. ಐರಾವತ೨೦೧೫
ಗ೦ಗ೨೦೧೫
ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ೨೦೧೬
ಮದುವೆಯ ಮಮತೆಯ ಕರೆಯೋಲೆ೨೦೧೬
ಅಕಿರ೨೦೧೬
ಸಾಹೇಬ೨೦೧೬
ಜಗ್ಗುದಾದ೨೦೧೬
ರಾಜಸಿಂಹ೨೦೧೮

ಯಕೃತ್ತಿನ ಸೋಂಕಿನಿಂದಾಗಿ ೬ ಏಪ್ರಿಲ್ ೨೦೨೦ ರಂದು 44 ನೇ ವಯಸ್ಸಿನಲ್ಲಿ ಅವರು ವಿಧಿವಶರಾದರು.

ಉಲ್ಲೇಖಗಳು

[ಬದಲಾಯಿಸಿ]
  1. Kannada comedian Bullet Prakash succumbs to a liver problem. Times of India (6 April 2020)
  2. "Tulu film 'Soombe' set for release". mangaloretoday.com. Mangalore Today. Retrieved 19 May 2025.
  3. https://www.imdb.com/name/nm5308603/