ವಿಷಯಕ್ಕೆ ಹೋಗು

ಸೂಪರ್ ಶಾಸ್ತ್ರಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೂಪರ್ ಶಾಸ್ತ್ರಿ
ನಿರ್ದೇಶನರವಿರಾಜ್
ನಿರ್ಮಾಪಕಜಿ. ರಾಮಚಂದ್ರನ್
ಲೇಖಕರವಿರಾಜ್
ಪಾತ್ರವರ್ಗಪ್ರಜ್ವಲ್ ದೇವರಾಜ್j, ಹರಿಪ್ರಿಯಾ
ಸಂಗೀತದೇವಾ
ಛಾಯಾಗ್ರಹಣಕಾಶಿ ವಿಶ್ವನಾಥ್
ಸ್ಟುಡಿಯೋಜಿ. ಆರ್. ಗೋಲ್ಡ್ ಫಿಲಮ್ಸ್
ಬಿಡುಗಡೆಯಾಗಿದ್ದು9 ನವಂಬರ್ 2012
ದೇಶಭಾರತ
ಭಾಷೆಕನ್ನಡ
ಬಂಡವಾಳ15 ಕೋಟಿ

ಸೂಪರ್ ಶಾಸ್ತ್ರಿ 2012 ರ ಕನ್ನಡ ಭಾಷೆಯ ಸಾಹಸಮಯ ಚಿತ್ರವಾಗಿದ್ದು, ಇದನ್ನು ರವಿರಾಜ್ ನಿರ್ದೇಶಿಸಿದ್ದಾರೆ ಮತ್ತು ಜಿ. ರಾಮಚಂದ್ರನ್ ನಿರ್ಮಿಸಿದ್ದಾರೆ. ಇದರಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ತೆಲುಗಿನ ಕಾಮಿಡಿ ಸೀಮಾ ಶಾಸ್ತ್ರಿಯ ರಿಮೇಕ್ ಆಗಿದ್ದು ಅಲ್ಲರಿ ನರೇಶ್ ಮತ್ತು ಫರ್ಜಾನಾ ನಟಿಸಿದ್ದಾರೆ. ರಂಗಾಯಣ ರಘು, ಉಮಾಶ್ರೀ, ಬುಲೆಟ್ ಪ್ರಕಾಶ್ ಮತ್ತು ರೇಖಾ ಕುಮಾರ್ ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ದೇವಾ ಸಂಗೀತ ಸಂಯೋಜಕರು. [] ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿದೆ ಎಂದು ಘೋಷಿಸಲಾಯಿತು.

ಪಾತ್ರವರ್ಗ

[ಬದಲಾಯಿಸಿ]

ಧ್ವನಿಮುದ್ರಿಕೆ

[ಬದಲಾಯಿಸಿ]

ಕೆ. ಕಲ್ಯಾಣ್ ಅವರ ಸಾಹಿತ್ಯಕ್ಕೆ ದೇವಾ ಅವರು ಧ್ವನಿಮುದ್ರಿಕೆಯನ್ನು ಸಂಯೋಜಿಸಿದ್ದಾರೆ. []

ಸಂ.ಹಾಡುಹಾಡುಗಾರರುಸಮಯ
1."ಅರ್ಧ ಕೇಜಿ"ಪ್ರಸನ್ನ 
2."ಮನಸೇ ಬಾಲಂಗೋಚಿ"ಪ್ರಸನ್ನ 
3."ಒಂದೇ ಒಂದು"ಬದ್ರಿ ಪ್ರಸಾದ್, ನಂದಿತಾ ಗುರುರಾಜ್ 
4."ಪುನೀತ್ ರಾಜ್‍ಕುಮಾರ್"ಬದ್ರಿ ಪ್ರಸಾದ್, ಚೈತ್ರಾ ಎಚ್.ಜಿ. 
5."ವಿಶ್ವ ಸುಂದರಿ"ಪ್ರಸನ್ನ 

ಬಿಡುಗಡೆ

[ಬದಲಾಯಿಸಿ]

ಚಿತ್ರವು 9 ನವೆಂಬರ್ 2012 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ವಿಮರ್ಶೆಗಳು

[ಬದಲಾಯಿಸಿ]

ಸೂಪರ್ ಶಾಸ್ತ್ರಿ ಬಿಡುಗಡೆಯಾದ ನಂತರ ವಿಮರ್ಶಕರಿಂದ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. 2.5/5 ರೇಟಿಂಗ್‌ನೊಂದಿಗೆ ಚಿತ್ರಕ್ಕೆ ಋಣಾತ್ಮಕ ವಿಮರ್ಶೆಯನ್ನು ನೀಡಿದ ಟೈಮ್ಸ್ ಆಫ್ ಇಂಡಿಯಾವು "ನಿರ್ದೇಶಕರು ಕಳಪೆ ರೂಪದಲ್ಲಿರುವ ಸಂಭಾಷಣೆ, ನಿರೂಪಣೆ ಮತ್ತು ಪಾತ್ರವರ್ಗದ ಬಗ್ಗೆ ಕಾಳಜಿ ವಹಿಸಿದ್ದರೆ ಕಥೆಯು ಉತ್ತಮ ಹಾಸ್ಯಮಯವಾಗಬಹುದಿತ್ತು. ಪ್ರಜ್ವಲ್ ಖಂಡಿತವಾಗಿಯೂ ಈ ವಿಶಿಷ್ಟವಲ್ಲದ ಪಾತ್ರಕ್ಕೆ ಸರಿಹೊಂದುವುದಿಲ್ಲ." []ರೆಡಿಫ್ ಚಿತ್ರಕ್ಕೆ ಒನ್ ಸ್ಟಾರ್ ರೇಟಿಂಗ್ ನೀಡಿದ್ದು, ಚಿತ್ರವು ಎಲ್ಲಾ ಬಗೆಗಳಲ್ಲಿ ಕನ್ನಡ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ವಿಫಲವಾಗಿದೆ ಎಂದು ಹೇಳಿದ್ದಾರೆ. []

ಉಲ್ಲೇಖಗಳು

[ಬದಲಾಯಿಸಿ]
  1. "'Super Shastry' Complete Shoot". Supergoodmovies.com. 2012-04-22. Retrieved 2013-10-25.
  2. "Super Shastri songs". Southsongs4u. Archived from the original on 25 May 2012. Retrieved 29 May 2012. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. "'Super Shastri' review". timesofindia.com. 2012-11-09. Retrieved 2012-11-20.
  4. "Review: Super Shastri is unbearable". rediff.com. 2012-11-09. Retrieved 2012-11-20.


ಬಾಹ್ಯ ಕೊಂಡಿಗಳು

[ಬದಲಾಯಿಸಿ]