ಸುಶೀಲಾ ಕೊಪ್ಪರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಮತಿ ಸುಶೀಲಾ ಕೊಪ್ಪರ ಇವರು ಕನ್ನಡದ ಪ್ರಥಮ ಮಹಿಳಾ ಕಾರ್ಯನಿರತ ಪತ್ರಿಕೋದ್ಯಮಿ.ಇವರು ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಹಾಗು ಸಮಾಚಾರ ಭಾರತಿಯಲ್ಲಿ ಪತ್ರಿಕೋದ್ಯಮಿಯಾಗಿ ಕೆಲಸ ಮಾಡಿದ್ದಾರೆ. ಕೆನಡಾದ ಟೊರೊಂಟೊದಲ್ಲಿ ವೇಲ್ಬೋರ್ಡ ಪಬ್ಲಿಕ್ ಸ್ಕೂಲಿನಲ್ಲಿ ಇಂಡೋಕೆನಡಿಯನ್ ಮಕ್ಕಳಿಗೆ ಕನ್ನಡ ಮತ್ತು ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಮಾಧವಚ್ ರಾವ್ ಇನಾಂದಾರ್ ಮತ್ತು ಕಮಲಾ ಬಾಯಿ ದಂಪತಿಗಳ ಪುತ್ರಿಯಾಗಿ ೧೬-೩-೧೯೨೪ ರಂದು ಜನಿಸಿದರು.

ಸಾಹಿತ್ಯ[ಬದಲಾಯಿಸಿ]

ಸುಶೀಲಾ ಕೊಪ್ಪರ ಅವರು ರಚಿಸಿದ ಕಥಾಸಂಕಲನ “ಲೇಖಕನ ಹೆಂಡತಿ ಮತ್ತು ಇತರ ಕತೆಗಳು” ಕೃತಿಗೆ ಕರ್ನಾಟಕ ರಾಜ್ಯಸರ್ಕಾರದ ಪ್ರಶಸ್ತಿ ದೊರಕಿದೆ. ಇವರು ಶ್ರೀ ವ್ಹಿ.ಎಸ್.ಖಾಂಡೇಕರರು ರಚಿಸಿದ ಎರಡು ಮರಾಠಿ ಕಾದಂಬರಿಗಳನ್ನು ಹಾಗು ಶ್ರೀ ಶಿರವಾಡಕರ ಅವರ ಮರಾಠಿ ನಾಟಕ “ನಟಸಾಮ್ರಾಟ”ವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಲ್ಲದೆ ಪ್ರಪಂಚದ ಪತ್ರಿಕೋದ್ಯಮಿ ಮಹಿಳೆಯರನ್ನು ಕುರಿತು ಹಾಗು ವಿದೇಶ ಪ್ರವಾಸ ಕುರಿತು ಲೇಖನಗಳನ್ನು ಬರೆದಿದ್ದಾರೆ. ಇವರ ಅನೇಕ ಬಿಡಿ ಲೇಖನಗಳು ವಿವಿಧ ಕನ್ನಡ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. "ಮಹಿಳೆಯರಲ್ಲಿ ಮಾತುಕತೆ "ಕೃತಿಗೆ ಜನತಾ ಶಿಕ್ಷಣ ಸಮಿತಿ ಪ್ರಶಸ್ತಿ ದೊರೆತಿದೆ.

ಕೃತಿಗಳು[ಬದಲಾಯಿಸಿ]

ಸಣ್ಣ ಕತೆಗಳು[ಬದಲಾಯಿಸಿ]

  • ಲೇಖಕನ ಹೆಂಡತಿ ಮತ್ತು ಇತರ ಕಥೆಗಳು
  • ಸಾಲು ದೀಪ
  • ನಾನು ನಿಮ್ಮ ಅಜ್ಜಿ

ಪ್ರಬಂಧ[ಬದಲಾಯಿಸಿ]

ಮಹಿಳೆಯರಲ್ಲಿ ಮಾತುಕತೆ

ಅನುವಾದ[ಬದಲಾಯಿಸಿ]

ಅಶ್ರು ಕಮರಿದ ಚಿಗುರು

ಪ್ರವಾಸ ಕಥನ[ಬದಲಾಯಿಸಿ]

ಪಡುವಣದ ಪಾತ್ರಮಲೆ

ಇತರೆ[ಬದಲಾಯಿಸಿ]

ಪತ್ರಿಕೋದ್ಯಮದಲ್ಲಿ ಮಹಿಳೆಯರು