ಸುಲ್ತಾನ (ದ್ರಾಕ್ಷಿ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸುಲ್ತಾನ (ಥಾಂಪ್ಸನ್ ಸೀಡ್ಲೆಸ್) ದ್ರಾಕ್ಷಿಗಳು

ಸುಲ್ತಾನ (ಸುಲ್ತಾನಿನ ಎಂದೂ ಕರೆಯುತ್ತಾರೆ) ಟರ್ಕಿಶ್, ಗ್ರೀಕ್, ದಕ್ಷಿಣ ಆಫ್ರಿಕಾ ಅಥವಾ ಇರಾನ್ ಮೂಲದ ಒಂದು ಜಾತಿಯ ಬಿಳಿ, ಬೀಜವಿಲ್ಲದ ದ್ರಾಕ್ಷಿ ಹಣ್ಣಾಗಿದೆ. ಕೆಲವು ರಾಷ್ಟ್ರಗಳಲ್ಲಿ, ವಿಶೇಷವಾಗಿ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ, ಅದರಿಂದ ಮಾಡಿದ ಒಣದ್ರಾಕ್ಷಿಗೆ ಈ ಹೆಸರಿನಿಂದ ಕರೆಯಲಾಗುತ್ತದೆ; ಅಂತಹ ಸುಲ್ತಾನ ಒಣದ್ರಾಕ್ಷಿ ಗಳನ್ನು ಹೆಚ್ಚಾಗಿ ಸುಲ್ತಾನಗಳು ಅಥವಾ ಸುಲ್ತಾನಿಗಳು ಎಂದು ಕರೆಯುತ್ತಾರೆ. ಇವು ಜಾಂಟೆ ಕುರ್ರಾಂಟ್‌ಗಳಿಗಿಂತ (ಇವು ನಿಜವಾದ ಕುರ್ರಾಂಟ್‌ಗಳಾಗಿರದೆ ಒಂದು ರೀತಿಯ ಒಣದ್ರಾಕ್ಷಿಗಳಾಗಿವೆ) ದೊಡ್ಡದಾಗಿರುತ್ತವೆ. ಆದರೆ "ಸಾಮಾನ್ಯ" ಒಣದ್ರಾಕ್ಷಿಗಳಿಗಿಂತ ಸಣ್ಣದಾಗಿರುತ್ತವೆ. ಕೆಲವೊಮ್ಮೆ "ಸುಲ್ತಾನ" ಹೆಸರನ್ನು ಎಲ್ಲಾ ಒಣದ್ರಾಕ್ಷಿಗಳಿಗೆ ಬಳಸಲಾಗುತ್ತದೆ. ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಹೆಚ್ಚಿನ ಇಂಗ್ಲಿಷ್ ಮಾತನಾಡುವ ರಾಷ್ಟ್ರಗಳಲ್ಲಿ ರೈಸಿನ್ ಬ್ರ್ಯಾನ್ ಎಂದು ಕರೆಯುವ ತಿಂಡಿಯನ್ನು ಆಸ್ಟ್ರೇಲಿಯಾದಲ್ಲಿ "ಸುಲ್ತಾನ ಬ್ರ್ಯಾನ್" ಎಂದು ಕರೆಯಲಾಗುತ್ತದೆ.[೧] ಸುಲ್ತಾನ ಒಣದ್ರಾಕ್ಷಿಗಳು ಒಂದು ಸವಿಯಾದ ಮತ್ತು ಭಿನ್ನವಾದ ರುಚಿಯನ್ನು ಹೊಂದಿರುತ್ತವೆ ಹಾಗೂ ಅವುಗಳ ಸಿಹಿ ಮತ್ತು ಚಿನ್ನದ ಬಣ್ಣದಿಂದ ವಿಶೇಷವಾಗಿ ಗುರುತಿಸಲ್ಪಟ್ಟಿವೆ.[೨]

ಇತಿಹಾಸ[ಬದಲಾಯಿಸಿ]

ಸುಲ್ತಾನಗಳಿಂದ ತುಂಬಿರುವ ಧಾರಕ, ಇದನ್ನು ಮಕ್ಕಳಿಗೆ ಅವರ ಶಾಲಾ ವಿರಾಮದ ವೇಳೆಯಲ್ಲಿ ಲಘು ಉಪಹಾರವಾಗಿ ಸೇವಿಸಲು ಸಾಮಾನ್ಯವಾಗಿ ನೀಡಲಾಗುತ್ತದೆ
 • ಸುಲ್ತಾನ ಒಣದ್ರಾಕ್ಷಿಯನ್ನು ಸಾಂಪ್ರದಾಯಿಕವಾಗಿ ಇಂಗ್ಲಿಷ್-ಮಾತನಾಡುವ ರಾಷ್ಟ್ರಗಳಿಗೆ ಒಟ್ಟೋಮನ್ ಸಾಮ್ರಾಜ್ಯದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈ ಸಾಮ್ರಾಜ್ಯದ ಪ್ರಸಿದ್ಧ ಜಾನಪದ ಕಥೆಗಳ ಪ್ರಕಾರ- ಸುಲ್ತಾನ್ ಹುಲಿಯ ದಾಳಿಯಿಂದ ಹೆದರಿ ತನ್ನ ದ್ರಾಕ್ಷಿಹಣ್ಣುಗಳನ್ನು ಅಲ್ಲಿಯೇ ಬಿಸಿಲಿಗೆ ಬಿಟ್ಟು ಓಡಿಹೋಗುತ್ತಾನೆ. ಇದರಿಂದ ಸುಲ್ತಾನವು ಹುಟ್ಟಿಕೊಂಡಿತು. ಅದರಿಂದಾಗಿ ಸುಲ್ತಾನ್ ‌ನ ಸ್ತ್ರೀ ರೂಪದಿಂದ ಸುಲ್ತಾನ ಎಂಬ ಹೆಸರು ಬಂದಿತು. (ಈ ಕಥೆಯಲ್ಲಿ ಸೂಚಿಸಲಾದ ಐತಿಹಾಸಿಕ ಸುಲ್ತಾನ್‌ನ ಬಗ್ಗೆ ಮಾಹಿತಿಯು ಅಸ್ಪಷ್ಟವಾಗಿದೆ, ಆದ್ದರಿಂದ ಇದು ಜಾನಪದ ಕಲ್ಪಿತ ಕಥೆಯಾಗಿರಬಹುದು). ಟರ್ಕಿ ಮತ್ತು ಆಸ್ಟ್ರೇಲಿಯಾ ಇದರ ಪ್ರಮುಖ ಉತ್ಪಾದಕ ರಾಷ್ಟ್ರಗಳಾಗಿವೆ.[೩]
 • ಸುಲ್ತಾನ ದ್ರಾಕ್ಷಿಯನ್ನು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಥಾಂಪ್ಸನ್ ಸೀಡ್ಲೆಸ್ ಎಂಬ ಹೆಸರಿನಲ್ಲಿ ಬೆಳೆಯಲಾಗುತ್ತದೆ. ಇದಕ್ಕೆ ಒಬ್ಬ ದ್ರಾಕ್ಷಿ-ಕೃಷಿಕ ವಿಲಿಯಂ ಥಾಂಪ್ಸನ್‌ನ ನಂತರ ಈ ಹೆಸರನ್ನಿಡಲಾಯಿತು. ಈತ ಕ್ಯಾಲಿಫೋರ್ನಿಯಾದ ಆರಂಭಿಕ ಬೆಳೆಗಾರ ಮತ್ತು ಈತನನ್ನು ಕೆಲವೊಮ್ಮೆ ಈ ಜಾತಿಯ ದ್ರಾಕ್ಷಿಯನ್ನು ಪರಿಚಯಿಸಿದ ವ್ಯಕ್ತಿಯೆಂದು ಪ್ರಶಂಸಿಸಲಾಗುತ್ತದೆ.[೪][೫] U.S. ಕೋಡ್ ಆಫ್ ಫೆಡರಲ್ ರೆಗ್ಯುಲೇಶನ್ಸ್‌ನ ಪ್ರಕಾರ, ಈ ಎರಡು ಹೆಸರುಗಳು ಪರ್ಯಾಯ ಪದಗಳಾಗಿವೆ.[೬]
 • ಕ್ಯಾಲಿಫೋರ್ನಿಯಾದ ಎಲ್ಲಾ ಒಣದ್ರಾಕ್ಷಿ ಉತ್ಪನ್ನ (2000ರಲ್ಲಿ ಸರಿಸುಮಾರು 97%) ಮತ್ತು ಸುಮಾರು ಮೂರನೇ ಒಂದರಷ್ಟು ಕ್ಯಾಲಿಫೋರ್ನಿಯಾದ ಒಟ್ಟು ದ್ರಾಕ್ಷಿ ಪ್ರದೇಶವು ಈ ಜಾತಿಯದಾಗಿದೆ, ಆ ಮೂಲಕ ಇದನ್ನು ಏಕೈಕ ಅತಿ ಹೆಚ್ಚು ವ್ಯಾಪಕವಾಗಿ ಬೆಳೆಯುವ ದ್ರಾಕ್ಷಿಯಾಗಿ ಮಾಡಿದೆ.[೫][೭]

ಒಣ ದ್ರಾಕ್ಷಿಗಳು[ಬದಲಾಯಿಸಿ]

 • ಆಂಗ್ಲೊ-ಅಮೇರಿಕಾದಲ್ಲಿ, ವಿಶಿಷ್ಟ ಗಾಢ ಕಂದು ಬಣ್ಣದವನ್ನೂ ಒಳಗೊಂಡು ಹೆಚ್ಚಿನ ಒಣದ್ರಾಕ್ಷಿಗಳನ್ನು ಸಾಮಾನ್ಯವಾಗಿ ಥಾಂಪ್ಸನ್ ಸೀಡ್ಲೆಸ್ ಎಂದು ಕರೆಯುವ ಸುಲ್ತಾನ ದ್ರಾಕ್ಷಿಯಿಂದ ಮಾಡಲಾಗುತ್ತದೆ. "ಸುಲ್ತಾನ" ಪದವನ್ನು ಒಣದ್ರಾಕ್ಷಿಗಳನ್ನು ಸೂಚಿಸಲು ವಿರಳವಾಗಿ ಬಳಸ ಲಾಗುತ್ತದೆ. ಸಾಮಾನ್ಯವಾಗಿ 'ಹೊಂಬಣ್ಣದ ಒಣ ದ್ರಾಕ್ಷಿ'ಗಳೆಂದು ಕರೆಯುವ ಚಿನ್ನದ-ಬಣ್ಣದ ಒಣದ್ರಾಕ್ಷಿಗಳನ್ನು ಸೂಚಿಸಲು ಈ ಪದವು ಸೀಮಿತವಾಗಿದೆ.
 • ಯಾವುದೇ ಜಾತಿಯ ದ್ರಾಕ್ಷಿಯನ್ನು ಹೊಂಬಣ್ಣದ ಒಣದ್ರಾಕ್ಷಿಯನ್ನು ತಯಾರಿಸಲು ಬಳಸಬಹುದು ಹಾಗು ಯಾವುದೇ ಜಾತಿಯ ದ್ರಾಕ್ಷಿಯಿಂದ ತಯಾರಾದ ಯಾವುದೇ ಬಗೆಯ ಹೊಂಬಣ್ಣದ ಒಣದ್ರಾಕ್ಷಿಗಳನ್ನು "ಸುಲ್ತಾನಗಳೆಂದು" ಮಾರಾಟಗಾರಿಕೆ ಮಾಡಬಹುದು. ಇದಕ್ಕಿಂತ ಹೆಚ್ಚಾಗಿ, ಸಾಂಪ್ರದಾಯಿಕವಾಗಿ ಒಣಗಿಸುವುದು ಹಾಗು ಸಂರಕ್ಷಣಾ ವಿಧಾನಗಳಿಗೆ ಬದಲಾಗಿ ಸಲ್ಫರ್ ಡೈಆಕ್ಸೈಡ್ ನೊಂದಿಗೆ ಸಂಸ್ಕರಣೆ ಮಾಡಿದ್ದರಿಂದ ಹೊಂಬಣ್ಣವು ಬರುತ್ತದೆ.[೮]
 • ಕ್ಯಾಲಿಫೋರ್ನಿಯಾ ಹಾಗು ಬೇರೆ ಕಡೆಗಳಲ್ಲಿ ಹೆಚ್ಚಿನ ಅಜೈವಿಕ ಸುಲ್ತಾನ ದ್ರಾಕ್ಷಿಗಳನ್ನು ಸಸ್ಯಕ ಹಾರ್ಮೋನು ಗಿಬ್ಬರೆಲ್ಲಿನ್ ನೊಂದಿಗೆ ಸಂಸ್ಕರಿಸಲಾಗುತ್ತದೆ.[೯]

ಇತರೆ ಉಪಯೋಗಗಳು[ಬದಲಾಯಿಸಿ]

 • ಮತ್ತಷ್ಟು ಸಂಸ್ಕರಿಸದೆ ಒಂದು ಲಘು ಉಪಹಾರವಾಗಿ ಬಳಕೆಯಾಗುವುದರ ಜೊತೆಗೆ ಸುಲ್ತಾನ ಒಣದ್ರಾಕ್ಷಿಯನ್ನು ವಿವಿಧ ಖಾದ್ಯಗಳಲ್ಲಿ ಹಾಗು ಅಡುಗೆಗಳಲ್ಲಿ ಬಳಸಲಾಗುತ್ತದೆ, ಉದಾಹರಣೆಗೆ ಹಣ್ಣಿನ-ಕೇಕ್ ಗಳು ಹಾಗು ದ್ರಾಕ್ಷಿ ಬನ್ನುಗಳು, ಕೆಲವೊಂದು ಬಾರಿ ನೀರು, ಹಣ್ಣಿನ ರಸ, ಅಥವಾ ಆಲ್ಕೋಹಾಲ್ ನಲ್ಲಿ ನೆನೆಸಿ ತಯಾರಿಸಲಾಗುತ್ತದೆ. ಸುಲ್ತಾನ ದ್ರಾಕ್ಷಿಯನ್ನು ಬಿಳಿ ವೈನ್ ತಯಾರಿಕೆಯಲ್ಲಿಯೂ ಸಹ ಬಳಸಲಾಗುತ್ತದೆ, ಇದರ "ಮಧುರ ಮೃದುತ್ವಕ್ಕೆ" ಇದು ಜನಪ್ರಿಯವಾಗಿದೆ.[೪][೫]
 • ಇದನ್ನು "ಮೂರು ರೀತಿಯ ದ್ರಾಕ್ಷಿ" ಎಂದೂ ಸಹ ಸೂಚಿಸಲಾಗುತ್ತದೆ ಏಕೆಂದರೆ ಇದನ್ನು ಟೇಬಲ್ ದ್ರಾಕ್ಷಿಗಳು, ಒಣದ್ರಾಕ್ಷಿ ಹಾಗು ವೈನ್ ನಲ್ಲಿ ಬಳಸಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, "ಚಬ್ಲಿಸ್" ಎಂದು ಸಾಮಾನ್ಯವಾಗಿ ಕರೆಯಲ್ಪಡುವ ವೈನ್ ನ ತಯಾರಿಕೆಯಲ್ಲಿ ಮೂಲ ಪದಾರ್ಥವಾಗಿದೆ (ಫ್ರಾನ್ಸ್ ನ ಚಬ್ಲಿಸ್ ಪ್ರದೇಶದಿಂದ ಇದಕ್ಕೆ ಈ ಹೆಸರು ಬಂದಿದೆ). ಆದಾಗ್ಯೂ, ಈ ದ್ರಾಕ್ಷಿಯಿಂದ ತಯಾರಾಗುವ ವೈನ್ ವಸ್ತುತಃ ಚಬ್ಲಿಸ್ ವೈನ್ ಅಲ್ಲ.
 • ಯುರೋಪಿಯನ್ ಒಕ್ಕೂಟದಲ್ಲಿ ಚಬ್ಲಿಸ್ ಎಂಬ ಹೆಸರನ್ನು ಕಾಯ್ದಿರಿಸಿಕೊಳ್ಳಲಾಗಿದೆ. EUನಲ್ಲಿ ಮಾರಾಟ ವಾಗುವ ವೈನ್, ಯೋನ್ನೇ ಡೆಪಾರ್ಟೆಮೆಂಟ್ ಪ್ರದೇಶದಲ್ಲಿ ತಯಾರಾಗುವ ಚಾರ್ಡೋನ್ನಿ ದ್ರಾಕ್ಷಿಯಿಂದ ತಯಾರಾಗುತ್ತದೆ. ಮೂರು ತರವಾದ ಇದರ ಬಳಕೆಯ ಕಾರಣದಿಂದಾಗಿ ಕ್ಯಾಲಿಫೋರ್ನಿಯಾನಲ್ಲಿ ಸಾಮಾನ್ಯವಾಗಿ ಬೆಳೆಯುವ ದ್ರಾಕ್ಷಿಯಾಗಿದೆ. [೧]
 • ಸುಲ್ತಾನ ದ್ರಾಕ್ಷಾ ರಸವನ್ನು ಆಸ್ಟ್ರೇಲಿಯಾನಲ್ಲಿ ವೈನ್ ತಯಾರಿಕೆಯಲ್ಲಿ ಚಾರ್ಡೋನ್ನಿ ದ್ರಾಕ್ಷಿಗಳ ಮೂಲವೆಂದು ವಂಚನೆಯಿಂದ ಮಾರಾಟ ಮಾಡಲಾಗುತ್ತದೆ, ಇದಕ್ಕೆ ಕಾರಣ ಸುಲ್ತಾನ ದ್ರಾಕ್ಷಿಗಳಿಗೆ ತಗಲುವ ಕಡಿಮೆ ವೆಚ್ಚ. ಈ ವಂಚನೆಯನ್ನು 2003ರಲ್ಲಿ ಆಸ್ಟ್ರೇಲಿಯನ್ ವೈನ್ ಅಂಡ್ ಬ್ರಾಂಡಿ ಕಾರ್ಪೋರೇಶನ್ ಪತ್ತೆ ಮಾಡಿತು. ಇದನ್ನು ಆಸ್ಟ್ರೇಲಿಯನ್ ಇತಿಹಾಸದಲ್ಲೇ ವೈನ್ ವಂಚನೆಯ ಅತ್ಯಂತ ದೊಡ್ಡ ಪ್ರಕರಣವೆಂದು ಪರಿಗಣಿಸಲಾಗಿದೆ.[೨][೩].

ಇವನ್ನೂ ಗಮನಿಸಿ‌[ಬದಲಾಯಿಸಿ]

 • ದ್ರಾಕ್ಷಿ
 • ಒಣದ್ರಾಕ್ಷಿ
 • ಜಾನ್ಟೆ ಕರ್ರಂಟ್

ಉಲ್ಲೇಖಗಳು‌‌[ಬದಲಾಯಿಸಿ]

 1. http://www.kelloggs.com.au/Home/Products/Cereal/SultanaBran/tabid/390/Default.aspx
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. "Sultana". Oxford English Dictionary (2nd ed. ed.). 1989. 
 4. ೪.೦ ೪.೧ "Sultana". [[American Heritage Dictionary]] (4th ed. ed.). 2000.  URL–wikilink conflict (help)
 5. ೫.೦ ೫.೧ ೫.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. ಗಿಬ್ಬೆರೆಲ್ಲಿನ್ ಅಂಡ್ ಫ್ಲೇಮ್ ಸೀಡ್ಲೆಸ್ಸ್ ಗ್ರೇಪ್ಸ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಡೇವಿಸ್ 2009-04-13ರಂದು ವೆಬ್ಸೈಟ್ ನಿಂದ ಮರುಸಂಪಾದಿಸಲಾಗಿದೆ