ಸುನಿಲ್ ದಬಾಸ್
ಸುನಿಲ್ ದಬಾಸ್ ಭಾರತದ ರಾಷ್ಟ್ರೀಯ ಮಹಿಳಾ ಕಬಡ್ಡಿ ತಂಡದ ಕೋಚ್ ಆಗಿದ್ದಾರೆ. [೧] ವರ್ಷಗಳಲ್ಲಿ, ಅವರು ೨೦೧೦ ರ ಏಷ್ಯನ್ ಗೇಮ್ಸ್ ಮತ್ತು ವಿಶ್ವಕಪ್-೨೦೧೨ ಸೇರಿದಂತೆ ಏಳು ಅಂತರಾಷ್ಟ್ರೀಯ ಚಿನ್ನದ ಪದಕಗಳನ್ನು ಗೆಲ್ಲಲು ತಮ್ಮ ತಂಡಕ್ಕೆ ತರಬೇತಿ ನೀಡಿದ್ದಾರೆ. [೨] ಆಕೆಗೆ ೨೦೧೨ ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಮತ್ತು ೨೦೧೪ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. [೩]
ಜೀವನಚರಿತ್ರೆ
[ಬದಲಾಯಿಸಿ]ಸುನಿಲ್ ದಾಬಾಸ್ ಅವರು ಭಾರತದ ಹರಿಯಾಣದ ಜಜ್ಜರ್ ಜಿಲ್ಲೆಯ ಬೆರಿ ತೆಹಸಿಲ್‌ನ ಮೊಹಮ್ಮದ್‌ಪುರ ಮಜ್ರಾ ಗ್ರಾಮದಲ್ಲಿ ಜನಿಸಿದರು. [೪] ತನ್ನ ಬಾಲ್ಯದ ಶಿಕ್ಷಣವನ್ನುಅವರ ಹಳ್ಳಿಯಲ್ಲಿ ಮುಗಿಸಿದರು. ನಂತರ ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಿಂದ (ಎಂ.ಎ) ಮತ್ತು ಮಾಸ್ಟರ್ ಆಫ್ ಫಿಸಿಕಲ್ ಎಜುಕೇಶನ್ (ಎಂ.ಪಿಎಚ್.ಇಡಿ) ಪಡೆದರು. ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ಎಂ. ಫಿಲ್ ಮತ್ತು ಆಗ್ರಾ ವಿಶ್ವವಿದ್ಯಾಲಯದಿಂದ ಕ್ರೀಡಾ ಮನೋವಿಜ್ಞಾನದಲ್ಲಿ ಪಿ.ಎಚ್.ಡಿ .. [೫]
ವೃತ್ತಿ
[ಬದಲಾಯಿಸಿ]ಸುನಿಲ್ ದಬಾಸ್ ಅವರು ೨೦೦೫ರಲ್ಲಿ ರಾಷ್ಟ್ರೀಯ ಮಹಿಳಾ ಕಬಡ್ಡಿ ತಂಡದ ಕೋಚ್ ಆಗಿದ್ದರು. ೨೦೦೬ರ ದಕ್ಷಿಣ ಏಷ್ಯನ್ ಗೇಮ್ಸ್, ೨೦೦೭ ರಲ್ಲಿ ೨ ನೇ ಏಷ್ಯನ್ ಚಾಂಪಿಯನ್‌ಶಿಪ್, ೨೦೦೭ ರಲ್ಲಿ ೩ ನೇ ಏಷ್ಯನ್ ಚಾಂಪಿಯನ್‌ಶಿಪ್, 2009 ಸೌತ್ ಏಷ್ಯನ್ ಗೇಮ್ಸ್, ೨೦೧೦ ಏಷ್ಯನ್ ಗೇಮ್ಸ್, ೨೦೧೨ ರ ಏಷ್ಯನ್ ಗೇಮ್ಸ್ ಮತ್ತು ೨೦೧೩ ರಲ್ಲಿ ಮಹಿಳಾ ಕಪ್ ಇಂಡೋನೇಷಿಯನ್ ಗೇಮ್ಸ್ ಸೇರಿದಂತೆ ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಏಳು ಚಿನ್ನದ ಪದಕಗಳನ್ನು ದಕ್ಕಿಸಿಕೊಂಡಿದ್ದಾರೆ. [೬]
ಇವರು ಗುರ್ಗಾಂವ್‌ನ ದ್ರೋಣಾಚಾರ್ಯ ಸರ್ಕಾರಿ ಸ್ನಾತಕೋತ್ತರ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರು ಮತ್ತು ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತಿದ್ದಾರೆ. [೭]
ಪ್ರಶಸ್ತಿಗಳು
[ಬದಲಾಯಿಸಿ]೨೦೧೨ ರಲ್ಲಿ ಭಾರತ ಸರ್ಕಾರದಿಂದ ಕ್ರೀಡಾ ತರಬೇತಿಯಲ್ಲಿನ ಶ್ರೇಷ್ಠತೆಗಾಗಿ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲಾಯಿತು. ಅವರು ಹರಿಯಾಣದ ಮೊದಲ ಮಹಿಳಾ ಕೋಚ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿಯನ್ನು ಪ್ರಶಸ್ತಿಯನ್ನು ಪಡೆದ ಭಾರತದ ನಾಲ್ಕನೆಯವರು. [೬]೨೦೧೪ ರಲ್ಲಿ ಭಾರತದಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು [೮] [೯] ಮತ್ತು ಹರಿಯಾಣ ಸರ್ಕಾರದಿಂದ ೨೦೧೪ ರ ಕ್ರೀಡಾ ಮಹಿಳಾ ಸಾಧಕಿ ಪ್ರಶಸ್ತಿಯನ್ನು ಪಡೆದರು. [೧೦]
ಗ್ರಂಥಸೂಚಿ
[ಬದಲಾಯಿಸಿ]ಈ ಕೆಳಗಿನ ಪುಸ್ತಕಗಳನ್ನು ಬರವಣಿಗೆ ಮತ್ತು ಸಂಪಾದನೆ :
- ವೈಜ್ಞಾನಿಕ ಕ್ರೀಡಾ ತರಬೇತಿಯ ಸಿದ್ಧಾಂತ
- ದೈಹಿಕ ಸಾಮರ್ಥ್ಯ ಮತ್ತು ಯೋಗ
- ದೈಹಿಕ ಶಿಕ್ಷಣದ ತತ್ವಗಳು ಮತ್ತು ಅಡಿಪಾಯ
- ದೈಹಿಕ ಚಟುವಟಿಕೆ ಮತ್ತು ಆರೋಗ್ಯ
- ಆರೋಗ್ಯ ಮತ್ತು ಯೋಗ
- ಶಾರೀರಿಕ್ ಶಿಕ್ಷಕೇ ಸಿಧಂತತಾತ ಮುಲಾಧರ್ (ಹಿಂದಿ)
- ಶಾರೀರಿಕ್ ಗತಿವಿಧಿಯುರ್ ಸ್ವಸ್ಥಯ (ಹಿಂದಿ)
- ಸ್ವಸ್ತೇವಂ ಯೋಗ (ಹಿಂದಿ)
- ಶಾರಿಕ್ ಫಿಟ್ನೆಸ್ ಮತ್ತು ಯೋಗ (ಹಿಂದಿ)
- ಶಾರೀರಿಕ್ ಶಿಕ್ಷಾಕಿ ಪ್ರಯೋಗಿಕ್ ಪುಸ್ತಕ (ಹಿಂದಿ)
- ದೈಹಿಕ ಶಿಕ್ಷಣದ ಪ್ರಾಯೋಗಿಕ ಪುಸ್ತಕ
- ಕ್ರೀಡಾ ಮನೋವಿಜ್ಞಾನ
- ಕ್ರೀಡೆ ಬಯೋಮೆಕಾನಿಕ್ಸ್ ಮತ್ತು ಕಿನಿಸಿಯಾಲಜಿ (ಹಿಂದಿ)
- ದೈಹಿಕ ಸಾಮರ್ಥ್ಯ ಮತ್ತು ಸ್ವಾಸ್ಥ್ಯ (ಹಿಂದಿ)
ಉಲ್ಲೇಖಗಳು
[ಬದಲಾಯಿಸಿ]- ↑ Ravinder Saini (28 February 2012). "Three Haryanavi girls selected for Indian kabaddi team". TheTribune,Chandigarh. Retrieved 2014-08-30.
- ↑ Cite web|url=http://www.tribuneindia.com/2012/20120828/harplus.htm#3%7Ctitle=No substitute for hard work, says Dronacharya awardee|last=Sunit Dhawan|date=28 August 2012|website=The Tribune (Chandigarh)|access-date=2014-08-30
- ↑ "हरियाणा की इस बेटी ने लड़कियों को दिखाई नई राह, लिम्का बुक में नाम दर्ज- Amarujala". Amar Ujala. Retrieved 2018-02-25.
- ↑ "Glad to be chosen for Dronacharya Award: Sunil Dabas". The Times of India. 2012-08-23. Archived from the original on 2014-03-05. Retrieved 2014-02-08.
- ↑ "Dronacharya Award Winner Sunil Dabas". Jagaran (in ಹಿಂದಿ). 17 Sep 2012. Retrieved 2014-08-30.
- ↑ ೬.೦ ೬.೧ "Glad to be chosen for Dronacharya Award: Sunil Dabas". The Times of India. 2012-08-23. Archived from the original on 2014-03-05. Retrieved 2014-02-08."Glad to be chosen for Dronacharya Award: Sunil Dabas". The Times of India. 23 August 2012. Archived from the original on 5 March 2014. Retrieved 8 February 2014.
- ↑ Sunit Dhawan (28 August 2012). "No substitute for hard work, says Dronacharya awardee". The Tribune (Chandigarh). Retrieved 2014-08-30.Sunit Dhawan (28 August 2012). "No substitute for hard work, says Dronacharya awardee". The Tribune (Chandigarh). Retrieved 30 August 2014.
- ↑ "Padma Bhushan for Paes, Gopichand". The Times of India. 2014-01-26. Archived from the original on 2014-02-15. Retrieved 2014-02-08.
- ↑ "Padma Awards Announced". Press Information Bureau, Ministry of Home Affairs, Government of India. 25 January 2014. Archived from the original on 22 February 2014. Retrieved 2014-01-26.
- ↑ "Gurugram women honoured at First Ladies Awards: 'It is like being etched in Indian history forever' - Times of India". The Times of India. Retrieved 2018-02-25.