ವಿಷಯಕ್ಕೆ ಹೋಗು

ಸುದಕ್ಷಿಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುದಕ್ಷಿಣ
ಮಾಹಿತಿ
ಕುಟುಂಬಪ್ರಪಕ್ಷ (ಸಹೋದರ)

ಸುದಕ್ಷಿಣನು ಹಿಂದೂ ಮಹಾಕಾವ್ಯವಾದ, ಮಹಾಭಾರತದಲ್ಲಿ ಕಂಡುಬರುವ ಕಾಂಬೋಜರ ರಾಜ.[೧]

ದಂತಕಥೆ[ಬದಲಾಯಿಸಿ]

ಕುರುಕ್ಷೇತ್ರ ಯುದ್ಧದ ೧೪ ನೇ ದಿನದಂದು, ಅರ್ಜುನನು ತನ್ನ ಸಾರಥಿ ಕೃಷ್ಣನೊಂದಿಗೆ ಜಯದ್ರಥನನ್ನು ಭೇಟಿ ಮಡಲು ಪ್ರಯತ್ನಿಸುತ್ತಾನೆ. ದ್ರೋಣ ಮತ್ತು ದುರ್ಯೋಧನರು ಅರ್ಜುನನ ಹಾದಿಯಲ್ಲಿ ಯೋಧರನ್ನು ಏರ್ಪಡಿಸುತ್ತಾರೆ. ಸೂರ್ಯಾಸ್ತದವರೆಗೆ ಅವನು ಏನೂ ಪ್ರಗತಿ ಕಾಣದಂತೆ ಮಾಡಲು ಪ್ರಯತ್ನಿಸುತ್ತಾನೆ. ಸುದಕ್ಷಿಣನು ಕೌರವರ ಅಕ್ಷೌಹಿಣಿಯನ್ನು ಒಟ್ಟುಗೂಡಿಸಿ, ಅರ್ಜುನನಿಗೆ ಸವಾಲು ಹಾಕುತ್ತಾನೆ. ಅವನು ಅರ್ಜುನನು ಮೇಲೆ ಈಟಿಯನ್ನು ಎಸೆಯುತ್ತಾನೆ. ಈಟಿಯು ಅರ್ಜುನನೈಗೆ ನಾಟುತ್ತದೆ. ಇದರಿಂದ ಅರ್ಜುನನು ತನ್ನ ಆಸನದಲ್ಲೇ ಮೂರ್ಛೆ ಹೋಗುತ್ತಾನೆ, ಆತನ ರಕ್ತ ತೊಟ್ಟಿಕ್ಕುತ್ತದೆ. ಕೌರವ ಸೇನೆಯು ಅರ್ಜುನ ಸತ್ತಿದ್ದಾನೆ ಎಂದು ಭಾವಿಸಿ ಹರ್ಷೋದ್ಗಾರ ಮಾಡುತ್ತದೆ. ಆದಾಗ್ಯೂ, ಅರ್ಜುನನು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾನೆ ಮತ್ತು ಕೋಪದಿಂದ ಇಂದ್ರಾಸ್ತ್ರವನ್ನು ಆಹ್ವಾನಿಸುತ್ತಾನೆ. ಇಂದ್ರಾಸ್ತ್ರವೆಂಬ ಒಂದು ಬಾಣವು ಅನೇಕ ಉಪಬಾಣಗಳಾಗಿ ಕೌರವ ಯೋಧರನ್ನು ನಾಶಪಡಿಸುತ್ತದೆ. ಈ ಬಾಣಗಳಲ್ಲಿ ಒಂದು ಸುದಕ್ಷಿಣನಿಗೂ ತಾಗಿ ಆತ ಸಾಯುತ್ತಾನೆ.[೨]

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Mahabharata Book Nine (Volume 2): Shalya (in ಇಂಗ್ಲಿಷ್). NYU Press. 2016-10-01. p. 27. ISBN 978-1-4798-4769-3.
  2. Vyasa, Dwaipayana (2021-08-24). The Mahabharata of Vyasa: (Complete 18 Volumes) (in ಇಂಗ್ಲಿಷ್). Enigma Edizioni. p. 3383.