ವಿಷಯಕ್ಕೆ ಹೋಗು

ಸುಜಾತಾ ಮೊಹಾಪಾತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಜಾತಾ ಮೊಹಾಪಾತ್ರ
ಜನನ
ಸುಜಾತಾ ಮೊಹಾಂತಿ

(1968-06-27) ೨೭ ಜೂನ್ ೧೯೬೮ (ವಯಸ್ಸು ೫೬)
ಬಾಲಾಸೋರ್, ಒಡಿಶಾ, ಭಾರತ
ವೃತ್ತಿ(ಗಳು)ಭಾರತದ ಶಾಸ್ತ್ರೀಯ ನೃತ್ಯಗಾರ್ತಿ, ಕಾರ್ಯಕ್ರಮ ನೀಡುವುದು
ಜಾಲತಾಣOfficial website

ಸುಜಾತಾ ಮೊಹಾಪಾತ್ರ (ಜನನ ೨೭ ಜೂನ್ ೧೯೬೮) ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಒಡಿಸ್ಸಿ ನೃತ್ಯ ಶೈಲಿಯ ಶಿಕ್ಷಕಿಯಾಗಿದ್ದಾರೆ. [೧] [೨]

ಆರಂಭಿಕ ಜೀವನ ಮತ್ತು ಹಿನ್ನೆಲೆ[ಬದಲಾಯಿಸಿ]

ಸುಜಾತಾ ಮೊಹಾಪಾತ್ರ ಅವರು ೧೯೬೮ ರಲ್ಲಿ ಬಾಲಸೋರ್‌ನಲ್ಲಿ ಜನಿಸಿದರು. ಇವರು ಚಿಕ್ಕ ವಯಸ್ಸಿನಲ್ಲೇ ಗುರು ಸುಧಾಕರ್ ಸಾಹು ಅವರಿಂದ ಒಡಿಸ್ಸಿ ಕಲಿಯಲು ಆರಂಭಿಸಿದರು. [೩]

ಸುಜಾತಾ ಮೊಹಾಪಾತ್ರ ಅವರು ೧೯೮೭ ರಲ್ಲಿ ಒಡಿಶಾದ ಭುವನೇಶ್ವರಕ್ಕೆ ಬಂದರು. [೪] ಭುವನೇಶ್ವರದಲ್ಲಿರುವ ಒಡಿಸ್ಸಿ ಸಂಶೋಧನಾ ಕೇಂದ್ರದಲ್ಲಿ ಪದ್ಮವಿಭೂಷಣ ಗುರು ಕೇಲುಚರಣ್ ಮೊಹಾಪಾತ್ರ ಅವರಲ್ಲಿ ತರಬೇತಿಯನ್ನು ಮುಂದುವರೆಸಿದರು. ಅವರು ಗುರು ಕೇಲುಚರಣ್ ಮಹಾಪಾತ್ರ ಅವರ ಮಗ ರತಿಕಾಂತ್ ಮೊಹಾಪಾತ್ರ ಅವರನ್ನು ವಿವಾಹವಾದರು. [೫] ಇವರ ಮಗಳು ಪ್ರೀತಿಶಾ ಮೊಹಾಪಾತ್ರ ಕೂಡ ಒಡಿಸ್ಸಿ ನೃತ್ಯಗಾರ್ತಿಯಾಗಿದ್ದಾಳೆ.

ಸುಜಾತಾ ಮೊಹಾಪಾತ್ರ

ಸುಜಾತಾ ಮೊಹಾಪಾತ್ರ ಅವರು ಒಡಿಶಾದಾದ್ಯಂತ ನಡೆಯುವ ಅನೇಕ ಕಾರ್ಯಕ್ರಮಗಳಲ್ಲಿ ಸಾಹು ಅವರ ನೃತ್ಯ ತಂಡದೊಂದಿಗೆ ಒಡಿಸ್ಸಿ ಶಾಸ್ತ್ರೀಯ ಮತ್ತು ಜಾನಪದ ನೃತ್ಯವನ್ನು ಪ್ರದರ್ಶಿಸಿರುತ್ತಾರೆ. ಕೇಲುಚರಣ್ ಮೊಹಾಪಾತ್ರ ಅವರ ಮಾರ್ಗದರ್ಶನದಲ್ಲಿ ಇವರ ನೃತ್ಯ ಶೈಲಿಯು ವಿಕಸನಗೊಂಡಿತು. ಇವರ ಸಮಕಾಲೀನ ಅಗ್ರಗಣ್ಯ ಒಡಿಸ್ಸಿ ನೃತ್ಯಗಾರರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. [೬] ಸುಜಾತಾ ಮೊಹಾಪಾತ್ರ ಅವರು ಭಾರತ ಮತ್ತು ಇತರ ದೇಶಗಳಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶಕರಾಗಿ ಮತ್ತು ಅವರ ತಂಡದವರು ಸ್ಥಾಪಿಸಿದ ಸೃಜನ್ ನೃತ್ಯ ತಂಡದ (ಸೃಜನ್ ಡ್ಯಾನ್ಸ್ ಟ್ರೂಪ್) ಪ್ರಮುಖ ಸದಸ್ಯರಾಗಿ ಪ್ರದರ್ಶನ ನೀಡುತ್ತಾರೆ. [೭]

ಸುಜಾತಾ ಮೊಹಾಪಾತ್ರ ಅವರು ಒಡಿಸ್ಸಿ ಕಲಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಮಹಾಗುರು ಕೇಲುಚರಣ್ ಮೊಹಾಪಾತ್ರರಿಂದ ಸ್ಥಾಪಿಸಲ್ಪಟ್ಟ 'ಸರ್ಜನ್' (ಒಡಿಸ್ಸಿ ನೃತ್ಯಭಾ‍‍‍‍‌‍ಷ), [೮] ದ ಒಂದು ಪ್ರಧಾನ ಒಡಿಸ್ಸಿ ನೃತ್ಯ ಸಂಸ್ಥೆಯ ಪ್ರಾಂಶುಪಾಲರಾಗಿದ್ದಾರೆ. ಅವರು ಉತ್ಕಲ್ ವಿಶ್ವವಿದ್ಯಾಲಯದಿಂದ ಒರಿಯಾ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ ಮತ್ತು ಭುವನೇಶ್ವರದ ಒಡಿಸ್ಸಿ ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾ ಕಾರ್ಯವನ್ನು ಮಾಡಿದ್ದಾರೆ. . [೯]

ಇವರು ತಮ್ಮ ಗುರುಗಳಾದ ಕೀರ್ತಿ ಸರ್ಜನ್ ಅವರ ಹೆಸರಿನಲ್ಲಿ ತಮ್ಮ ತವರಾದ ಬಾಲಸೋರ್ ನಲ್ಲಿ [೧೦] ಜುಲೈ ೨೦೧೧ ರಲ್ಲಿ, ಒಡಿಸ್ಸಿ ಸಂಸ್ಥೆಯೊಂದನ್ನು ತೆರೆದರು.

ಪ್ರಶಸ್ತಿಗಳು[ಬದಲಾಯಿಸಿ]

 • ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ೨೦೧೭
 • ೨೦೧೪ ರಲ್ಲಿ ಕೃಷ್ಣ ಗಾನ ಸಭಾ, ಚೆನ್ನೈ ಅವರು ಕೊಡುವ ನೃತ್ಯ ಚೂಡಾಮಣಿ [೧೧]
 • ಮಹಾರಿ ಪ್ರಶಸ್ತಿ, ಪಂಕಜ್ ಚರಣ್ ಒಡಿಸ್ಸಿ ರಿಸರ್ಚ್ ಫೌಂಡೇಶನ್
 • ವಾಷಿಂಗ್ಟನ್ ಡಿಸಿಯಿಂದ ಚಿತ್ರಾ ಕೃಷ್ಣಮೂರ್ತಿಯವರು ಕೊಟ್ಟ ೨ ನೇ ಸಂಯುಕ್ತ ಪಾಣಿಗ್ರಾಹಿ ಪ್ರಶಸ್ತಿ.
 • ಆದಿತ್ಯ ಬಿರ್ಲಾ ಕಲಾ ಕಿರಣ್ ಪ್ರಶಸ್ತಿ, ಮುಂಬೈ
 • ರಾಝಾ ಫೌಂಡೇಶನ್ ಪ್ರಶಸ್ತಿ, ದೆಹಲಿ
 • ಹೋಪ್ ಆಫ್ ಇಂಡಿಯಾ, ೨೦೦೧
 • ನೃತ್ಯ ರಾಗಿಣಿ, ಪುರಿ, ೨೦೦೨
 • ಬೈಸಾಖಿ ಪ್ರಶಸ್ತಿ
 • ಪ್ರಾಣ ನಟ್ಟ ಸಮ್ಮಾನ್
 • ಅಭಿ ನಂದಿಕ, ಪುರಿ, ೨೦೦೪
 • ಭೀಮೇಶ್ವರ ಪ್ರತಿಖಾ ಸಮ್ಮಾನ್, ೨೦೦೪
 • ರಾಝಾ ಪುರಸ್ಕರ್, ೨೦೦೮
 • ಐ‌ಸಿ‌ಸಿ‌ಆರ್‌ನ ದೂರದರ್ಶನದ ಉನ್ನತ ದರ್ಜೆಯ ಕಲಾವಿದೆ, ಅತ್ಯುತ್ತಮ ವರ್ಗದ ಕಲಾವಿದೆ [೧೨]

ಉಲ್ಲೇಖಗಳು[ಬದಲಾಯಿಸಿ]

 1. "Israel to host Indian art exhibition | The South Asian Times". 28 March 2012. Archived from the original on 28 March 2012. Retrieved 2 August 2017.
 2. "Statuesque postures". The Hindu (in ಇಂಗ್ಲಿಷ್). Retrieved 2 August 2017.
 3. "Friday Review Hyderabad / Dance : The state of Odissi". The Hindu. 10 November 2012. Archived from the original on 10 November 2012. Retrieved 2 August 2017.
 4. "Entertainment Delhi / Dance : A feast for Delhi dance lovers". The Hindu. 2005-08-12. Retrieved 2 August 2017.[ಮಡಿದ ಕೊಂಡಿ]
 5. Mehta, Kamini. "Odissi dancer Sujata Mohapatra mesmerizes school students". Times of India. Retrieved 19 December 2015.
 6. "Friday Review Hyderabad / Dance : 'Discipline makes a good dancer'". The Hindu. 2 October 2008. Archived from the original on 2 October 2008. Retrieved 2 August 2017.
 7. "IPAAC Home". www.ipaac.org. Archived from the original on 2 ಆಗಸ್ಟ್ 2017. Retrieved 2 August 2017.
 8. "Srjan GURU Kelucharan Odissi Nrityabasa ..." www.srjan.com. 30 October 2008. Archived from the original on 30 October 2008. Retrieved 2 August 2017.
 9. "Interview - Sujata Mohapatra - Kiran Rajagopalan". www.narthaki.com. Retrieved 2 August 2017.
 10. "Odisha HRD » Dance: Odissi". Archived from the original on 2011-09-27. Retrieved 2011-09-13.
 11. "Awards for veterans". The Hindu (in ಇಂಗ್ಲಿಷ್). December 2014. Retrieved 2 August 2017.
 12. "Sujata Mohapatra - Odissi Dancer | Awards". Archived from the original on 2011-09-27. Retrieved 2011-09-07.

ಸಹ ನೋಡಿ[ಬದಲಾಯಿಸಿ]

ನೃತ್ಯದಲ್ಲಿ ಭಾರತೀಯ ಮಹಿಳೆಯರು