ಸೀನು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೀನುವಿಕೆಯು ಗಾಳಿಗೆ ರೋಗವಾಹಕವನ್ನು ಬಿಡುಗಡೆ ಮಾಡುವ ಮೂಲಕ ರೋಗವನ್ನು ಹರಡಬಹುದು.

ಸೀನು (ಅಥವಾ ಸೀನುವ ಪ್ರಕ್ರಿಯೆ ) ಎಂಬುದು ಗಾಳಿಯನ್ನು ಶ್ವಾಸಕೋಶಗಳಿಂದ ಮೂಗು ಮತ್ತು ಬಾಯಿಯ ಮೂಲಕ ಅರೆ ಸ್ವನಿಯಂತ್ರಿತ ಸೆಟೆತದ ಹೊರದೂಡುವಿಕೆ ಆಗಿದೆ. ಇದು ಸಾಮಾನ್ಯವಾಗಿ ಬಾಹ್ಯ ಕಣಗಳು ನಾಸಿಕದ ಲೋಳೆಪೊರೆಗೆ ಉಪದ್ರವವನ್ನು ಕೊಟ್ಟಾಗ ಉಂಟಾಗುತ್ತದೆ. ಸೀನುವಿಕೆಯು, ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕಿನೆದುರಿಗೆ ಒಡ್ಡಿಕೊಂಡಾಗ, ಪೂರ್ತಿ ಹೊಟ್ಟೆ ತುಂಬಿದಾಗ, ಅಥವಾ ವೈರಲ್ ಸೋಂಕು ತಗುಲಿದಾಗ ಉಂಟಾಗುತ್ತದೆ . ಅಲ್ಲದೇ ರೋಗವು ಹರಡುವಂತೆ ಮಾಡುತ್ತದೆ.

ಜೀವವಿಜ್ಞಾನದ ಅಂಶಗಳು[ಬದಲಾಯಿಸಿ]

ಸೀನುವ ಕ್ರಿಯೆಯು , ಹೊರಗಿನ ಕಣಗಳನ್ನು ಅಥವಾ ಉಪದ್ರವಕಾರಿಗಳನ್ನು ಹೊಂದಿರುವ ಲೋಳೆಪದಾರ್ಥವನ್ನು ಹೊರಹಾಕಿ ಮೂಗಿನ ಕುಹರವನ್ನು ಸ್ವಚ್ಚಗೊಳಿಸುವುದಾಗಿದೆ. ಸೀನುವಾಗ, ಮೃದು ತಾಲು ಮತ್ತು ಕಿರುನಾಲಗೆ ಕೆಳಕ್ಕೆ ನೂಕಲ್ಪಡುವ ಕಾರಣ ನಾಲಿಗೆಯ ಹಿಂದಿನ ಭಾಗ ಮೇಲಕ್ಕೇರುತ್ತದೆ. ಇದರಿಂದಾಗಿ ಬಾಯಿಯ ಮಾರ್ಗವನ್ನು ಅದು ಮುಚ್ಚಿ, ಗಾಳಿ ಶ್ವಾಸಕೋಶಗಳಿಂದ ಮೂಗಿನ ಮೂಲಕ ಹೊರಹೋಗುತ್ತದೆ. ಆಂಶಿಕವಾಗಿ ಬಾಯಿಯನ್ನು ಮುಚ್ಚುವ ಕಾರಣ, ಗಣನೀಯ ಪ್ರಮಾಣದ ಗಾಳಿ ಬಾಯಿಯ ಮೂಲಕವೂ ಹೊರಹಾಕಲಾಗುತ್ತದೆ. ಮೂಗಿನ ಮೂಲಕ ಉಚ್ಚಾಟಿಸಲಾಗುವ ಗಾಳಿಯ ರಭಸ ಮತ್ತು ವ್ಯಾಪ್ತಿ ವಿಭಿನ್ನವಾಗಿರುತ್ತದೆ.

ಸಂಪೂರ್ಣ ಕಾರ್ಯವಿಧಾನ[ಬದಲಾಯಿಸಿ]

ಇದು ಥಾಮಸ್ ಎಡಿಸನ್ ಲ್ಯಾಬೊರೆಟರಿಯಿಂದ ತೆಗೆದುಕೊಂಡ ಫ್ರೆಡ್ ಆಟ್ ಸೀನುವಿಕೆಯ 1894 ರ ಕೈನೆಟ್ ಸ್ಕೋಪ್,

ಸೀನುವಿಕೆಯು ಸಾಮಾನ್ಯವಾಗಿ ಹೊರಗಿನ ಕಣಗಳು ಅಥವಾ ಸಾಕಷ್ಟು ಬಾಹ್ಯ ಉತ್ತೇಜಕಗಳು, ಮೂಗಿನ ಲೋಳೆಪೊರೆಯನ್ನು ತಲುಪಲು ಮೂಗಿನ ಕೂದಲುಗಳ ಮೂಲಕ ಸಾಗಿದಾಗ ಉಂಟಾಗುತ್ತದೆ. ಇದು ಹಿಸ್ಟಮಿ‌ನ್‌ಗಳನ್ನು (ಒಂದು ಕಾರ್ಬನಿಕ ಪ್ರತ್ಯಾಮ್ಲ) ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಈ ಹಿಸ್ಟಮಿನ್ ಮೂಗಿನಲ್ಲಿರುವ ನರಕೋಶಗಳಿಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಈ ಕಿರಿಕಿರಿಯಿಂದಾಗಿ ತಕ್ಷಣವೇ ಕಪಾಲ ನರ ಸಂಪರ್ಕ ದ ಮೂಲಕ ಮೆದುಳಿಗೆ ಸೀನುವ ಉಪಕ್ರಮಕ್ಕೆ ಸಂಕೇತವನ್ನು ಕಳುಹಿಸಲಾಗುತ್ತದೆ. ನಂತರ ಮೆದುಳು ಈ ಆರಂಭಿಕ ಸಂಕೇತವನ್ನು ತೆಗೆದುಕೊಂಡು, ಗಂಟಲ ಕುಳಿ(ಫ್ಯಾರಿಂಗಲ್)ಯ ಮತ್ತು ಶ್ವಾಸನಾಳದ ಸ್ನಾಯುಗಳನ್ನು ಕ್ರಿಯಾಶೀಲವಾಗಿಸುತ್ತದೆ. ಅಲ್ಲದೇ ಬಾಯಿ ಮತ್ತು ಮೂಗಿನ ಕುಹರಗಳನ್ನು ದೊಡ್ಡದಾಗಿ ತೆರೆದುಕೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ಗಾಳಿ ಮತ್ತು ಜೈವಿಕಕಣಗಳು ರಭಸವಾಗಿ ಹೊರಬರುತ್ತವೆ. ಪ್ರಬಲವಾದ ಸೀನು , ಮೇಲ್ಭಾಗದ ದೇಹದಲ್ಲಿರುವ ಅದರ ಅನೇಕ ಅಂಗಗಳು ಸೀನುವ ಕ್ರಿಯೆಯಲ್ಲಿ ಒಳಗೊಂಡಿರುವುದರ ಲಕ್ಷಣವಾಗಿದೆ. ಇದು ಆತ್ಮಾರ್ಥಕ ಪ್ರತಿಕ್ರಿಯೆಯಾಗಿದ್ದು, ಮುಖ, ಗಂಟಲು ಮತ್ತು ಎದೆಯ ಸ್ನಾಯುಗಳನ್ನು ಒಳಗೊಂಡಿದೆ.

ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕಿನಡಿಯಲ್ಲಿ ಬರುವುದರಿಂದ ಸೀನು ಬರುತ್ತದೆ. ಈ ಪ್ರಕಾಶಮಾನವಾದ ಬೆಳಕನ್ನು ಫೋಟಿಕ್ ಸ್ನೀಸ್ ರಿಫ್ಲೆಕ್ಸ್ ಎಂದು ಕರೆಯಲಾಗುತ್ತದೆ.

ಸೀನುವಿಕೆಯು, ಸೈನಸ್ ಸೋಂಕು ಮತ್ತು ಅಲರ್ಜಿಗಳಿಂದಾಗುವ ಸೈನಸ್ ನರದ ಉದ್ದೀಪನದಿಂದಾಗಿಯೂ ಉಂಟಾಗುತ್ತದೆ.

ವಿರಳವಾದ ಸೀನನ್ನು ಕೆಲವು ವ್ಯಕ್ತಿಗಳಲ್ಲಿ ಕಾಣಬಹುದಾಗಿದೆ. ಇದು ಹೆಚ್ಚು ಊಟಮಾಡಿದ ನಂತರ ಹೊಟ್ಟೆ ತುಂಬಿದ ಕೂಡಲೇ ಬರುತ್ತದೆ. ಇದನ್ನು ಸ್ನ್ಯಾಟಿಯೇಷನ್ ಎಂದು ಕರೆಯಲಾಗುತ್ತದೆ. ಅಲ್ಲದೇ ಇದನ್ನು ಅಲಿಂಗವರ್ಣತಂತುವಿನ ಪ್ರಧಾನ ಲಕ್ಷಣವಾಗಿ ಆನುವಂಶಿಕವಾಗಿ ಬಂದಂತಹ ವೈದ್ಯಕೀಯ ಅಸ್ತವ್ಯಸ್ತತೆ ಎಂದು ಪರಿಗಣಿಸಲಾಗಿದೆ.

ಸೀನುವಿಕೆಯು REM ಕ್ಷೀಣಿಸುವಿಕೆಯಿಂದಾಗಿ ಮಲಗಿರುವ ಸಮಯದಲ್ಲಿ ಬರುವುದಿಲ್ಲ - ಇದು ಚಲನ ನರಕೋಶಗಳು ಉತ್ತೇಜಿತಗೊಳ್ಳದ ದೈಹಿಕ ಸ್ಥಿತಿಯಾಗಿದೆ . ಈ ಸ್ಥಿತಿಯಲ್ಲಿ ಪ್ರತಿಫಲಿತ ಸಂಕೇತಗಳು ಮೆದುಳನ್ನು ತಲುಪುದಿಲ್ಲ. ಆದರೂ, ಸಾಕಷ್ಟು ಬಾಹ್ಯ ಉತ್ತೇಜಕಗಳು, ಸೀನುವ ಉದ್ದೇಶಕ್ಕಾಗಿ ವ್ಯಕ್ತಿಯನ್ನು ನಿದ್ರೆಯಿಂದ ಎಚ್ಚರಗೊಳ್ಳುವಂತೆ ಮಾಡಿದರೂ ಕೂಡ, ಸೀನು ಸಾಮಾನ್ಯವಾಗಿ ಆಂಶಿಕವಾಗಿ ಎಚ್ಚರಗೊಂಡ ಸ್ಥಿತಿಯಲ್ಲಿ ಬರುತ್ತದೆ.[೧]

ಸೋಂಕು ಶಾಸ್ತ್ರ[ಬದಲಾಯಿಸಿ]

ಆರೋಗ್ಯಕರ ವ್ಯಕ್ತಿಗಳಲ್ಲಿ ಅಪಾಯಕರವಲ್ಲದಿದ್ದರೂ, ಸೀನುಗಳು ಸಾಂಕ್ರಾಮಿಕ ವಾಯುಕಲಿಲ ಸಣ್ಣ ಹನಿಗಳ ಮೂಲಕ ರೋಗವನ್ನು ಹರಡುತ್ತವೆ. ಸಾಮಾನ್ಯವಾಗಿ ಸೀನಿನ ಮೂಲಕ 0.5 ಯಿಂದ 5 µm. 40,000 ವರೆಗೆ ಸಣ್ಣ ಹನಿಗಳು ಬಿಡುಗಡೆಯಾಗುತ್ತವೆ.[೨]

ಮಿತವಾದ ಅಂದಾಜಿನ ಪ್ರಕಾರ ಅದು ಸುಮಾರು 100 mph ವೇಗದಲ್ಲಿ ಬಿಡುಗಡೆಯಾಗುತ್ತದೆ. ಆದರೂ, ಮಿತ್ ಬಸ್ಟರ್ಸ್ ನ 'ಫ್ಲ್ಯು ಫಿಕ್ಷನ್' ಎಂಬ ಶೀರ್ಷಿಕೆಯಡಿ ಬಂದಂತಹ 147 ನೇ ಎಪಿಸೋಡ್ ನಿಂದ ಸಂಗ್ರಹಿಸಲಾದ ದತ್ತಾಂಶ, ಇದರ ವೇಗವು 35-40 mph ನ ಸಮೀಪದಲ್ಲಿರುತ್ತದೆ ಹಾಗು ಈ ವೇಗದಲ್ಲಿ ಸೀನು 15 ರಿಂದ 20 ಅಡಿಗಳ ವರೆಗೆ ಸಣ್ಣ ಹನಿಗಳನ್ನು ಬಿಡುಗಡೆ ಮಾಡಬಲ್ಲದು ಎಂಬುದು ತಿಳಿದುಬಂದಿದೆ.

ಮುಂಜಾಗ್ರತಾ ಕ್ರಮಗಳು[ಬದಲಾಯಿಸಿ]

ಮಂಜಾಗ್ರತಾ ಕ್ರಮಗಳಿಗೆ ಇರುವಂತಹ ಉದಾಹರಣೆಗಳು ಈ ಕೆಳಕಂಡಂತಿವೆ:ಶ್ವಾಸಕೋಶಗಳಲ್ಲಿ ಗಾಳಿಯ ಆಳವಾದ ನಿಶ್ವಾಸದ ಮೂಲಕ ಸೀನುವಿಕೆ ತಪ್ಪಿಸಬಹುದು.ಇಲ್ಲದಿದ್ದರೆ ಸೀನುವ ಪ್ರಕ್ರಿಯೆಯಲ್ಲಿ ಇದು ಬಳಕೆಯಾಗುತ್ತದೆ. ಹತ್ತರ ವರೆಗೆ ಎಣಿಸುತ್ತಾ ಸ್ವಲ್ಪ ಕಾಲದ ವರೆಗೆ ಉಸಿರನ್ನು ಹಿಡಿದಿಟ್ಟುಕೊಂಡು, ಮೂಗನ್ನು ಉಜ್ಜಿಕೊಳ್ಳಬೇಕು ಮತ್ತು ಕಣ್ಣನ್ನು ತೆರೆದಿರಬೇಕು ಅಥವಾ ಕೆಲವು ನಿಮಿಷಗಳವರೆಗೆ ಮೂಗಿನ ತುದಿಯನ್ನು ಮೆತ್ತಗೆ ಚಿವುಟಬೇಕು.

ಸೀನುವುದನ್ನು ಕಡಿಮೆ ಮಾಡಲು ಸಾಬೀತಾಗಿರುವ ವಿಧಾನಗಳು ಸಾಮಾನ್ಯವಾಗಿ, ಉದ್ರೇಕಕಾರಿಗಳೊಂದಿಗೆ ಸಂಪರ್ಕವನ್ನು ಕಡಿಮೆಮಾಡಬೇಕೆಂದು ಸೂಚಿಸುತ್ತವೆ. ಉದಾಹರಣೆಗೆ ಪ್ರಾಣಿಗಳ ಚರ್ಮದ ಹೊಟ್ಟನ್ನು(ಪೊರೆ) ತಡೆಗಟ್ಟಲು ಸಾಕು ಪ್ರಾಣಿಗಳನ್ನು ಮನೆಯಹೊರಗಿರಿಸುವುದು; ಸರಿಯಾಗಿ ಮನೆಯನ್ನು ಸ್ವಚ್ಛಗೊಳಿಸುವ ಮೂಲಕ ಕಸ ಮತ್ತು ಧೂಳಿನ ಕಣಗಳನ್ನು ನಿರ್ಮೂಲನೆ ಮಾಡುವುದು; ಕೈಯಿಂದ ಬಳಸುವ ಘಟಕಗಳಿಗೆ ಮತ್ತು ಕಬ್ಬಿಣದ ತಟ್ಟೆಗಳಿಗೆ ಶೋಧಕಗಳನ್ನು ಬದಲಿಸುವುದು; ವಾಯು ಶೋಧಕ ಸಾಧನಗಳನ್ನು ಮತ್ತು ಆರ್ದ್ರಕಗಳನ್ನು ಬಳಸುವುದು; ಅಲ್ಲದೇ ಕೈಗಾರಿಕಾ ಮತ್ತು ವ್ಯಾವಸಾಯಿಕ ವಲಯಗಳಿಂದ ದೂರವಿರುವುದು. ಆದರೂ ಕೆಲವು ಜನರು ಸೀನುವುದನ್ನು ಇಷ್ಟಪಡುತ್ತಾರೆ ಹಾಗು ಅದನ್ನು ತಡೆಯಲು ಪ್ರಯತ್ನಿಸುವುದಿಲ್ಲ.[೩]

ಐತಿಹಾಸಿಕ ಉದಾಹರಣೆಗಳು ಮತ್ತು ಅಭ್ಯಾಸಗಳು[ಬದಲಾಯಿಸಿ]

ಪ್ರಾಚೀನ ಗ್ರೀಸ್ ನಲ್ಲಿ, ಸೀನುಗಳನ್ನು, ದೇವತೆಗಳಭವಿಷ್ಯ ಸೂಚಕ ಸಂಕೇತಗಳು ಎಂದು ನಂಬಲಾಗುತ್ತಿತ್ತು. ಉದಾಹರಣೆಗೆ, ಕ್ರಿಸ್ತಪೂರ್ವ 410 ರಲ್ಲಿ, ಅಥೆನ್ಸ್ ನ ಜನರಲ್ ಕ್ಸೆನೊಫೋನ್ , ಅವರ ಸೈನಿಕರನ್ನು ಪರ್ಷಿಯನ್ನರ ವಿರುದ್ಧ ಸ್ವತಂತ್ರ ಅಥವಾ ಮರಣಕ್ಕಾಗಿ ಅವರನ್ನು ಅನುಸರಿಸುವಂತೆ ಹುರಿದುಂಬಿಸಲು ಮನಮಟ್ಟುವ ಭಾಷಣವನ್ನು ಮಾಡಿದ. ಅವನು ತನ್ನ ಸೈನ್ಯವನ್ನು ಪ್ರೇರೇಪಿಸಲು ಸುಮಾರು ಒಂದು ಗಂಟೆಗಳ ಕಾಲ ಮಾತನಾಡಿದ ಹಾಗು ಅವರು ಸುರಕ್ಷಿತವಾಗಿ ಅಥೆನ್ಸ್ ಗೆ ಹಿಂದಿರುಗುವುದಾಗಿ ಭರವಸೆ ನೀಡಿದ. ಸೈನಿಕರುನೊಬ್ಬ ಅವನ ತೀರ್ಮಾನವನ್ನು ಸೀನಿನೊಂದಿಗೆ ಪ್ರತಿಕ್ರಿಯಿಸಿದಾಗ, ಈ ಸೀನು ದೇವತೆಗಳಿಂದ ದೊರೆತ ಅನುಕೂಲಕರ ಸಂಕೇತವೆಂದು ಭಾವಿಸಿ, ಸೈನಿಕರು ಕ್ಸೆನೊಫೋನ್‌ಗೆ ತಲೆಬಾಗಿದರು ಮತ್ತು ಅವನ ಆಜ್ಞೆಯನ್ನು ಅನುಸರಿಸಿದರು. ಗ್ರೀಕರಿಗೆ ಸೀನುವಿಕೆಯ ಮತ್ತೊಂದು ಪವಿತ್ರ ಕ್ಷಣವು ಓಡಿಸಿಯಸ್‌ನ ಕಥೆಯಲ್ಲಿ ಕಾಣಿಸಿಕೊಂಡಿದೆ. ಓಡಿಸಿಯಸ್ ಬಿಕ್ಷುಕನಂತೆ ವೇಷಧರಿಸಿ, ಅವನಿಗಾಗಿ ಕಾದುಕುಳಿತಿದ್ದ ಅವನ ಹೆಂಡತಿ ಪೆನೆಲೋಪ್ ಳೊಂದಿಗೆ ಮಾತನಾಡುತ್ತಾನೆ. ಆತ ಓಡಿಸಿಯಸ್ ಎಂಬುದನ್ನು ಅರಿಯದೆ ಆತನನ್ನು ಕುರಿತು ಅವಳು "[ಅವಳ ಗಂಡ] ಅವಳನ್ನು ಓಲೈಸುವ ಕನ್ಯಾರ್ಥಿಗಳಿಗೆ ಸವಾಲು ಹಾಕಲು ಆತ ಸುರಕ್ಷಿತವಾಗಿ ಹಿಂದಿರುಗುತ್ತಾನೆ"ಎಂದು ಹೇಳುತ್ತಾಳೆ. ಆ ಸಮಯದಲ್ಲಿ ಅವರ ಮಗ ಜೋರಾಗಿ ಸೀನುತ್ತಾನೆ ಹಾಗು ಪೆನೆಲೋಪ್, ಇದು ದೇವರಿಂದ ಬಂದಂತಹ ಸಂಕೇತವೆಂಬ ಖಚಿತ ಭರವಸೆಯೊಂದಿಗೆ ಸಂತೋಷದಿಂದ ನಗುತ್ತಾಳೆ.(ಓಡಿಸ್ಸೆ 17: 541-550).

ಯುರೋಪ್ ನಲ್ಲಿ, ಬಹುಮಟ್ಟಿಗೆ ಸುಮಾರು ಮಧ್ಯಕಾಲಿನ ಯುಗದ ಪೂರ್ವಾರ್ಧದಲ್ಲಿ, ಒಬ್ಬರ ಜೀವನವನ್ನು ಅವರ ಉಸಿರಿಗೆ ಕಟ್ಟಲಾಗುತ್ತದೆ ಎಂದು ನಂಬಲಾಗಿತ್ತು - ಈ ನಂಬಿಕೆಯು "ಅಂತ್ಯ" ಎಂಬ ಪದದಲ್ಲಿ ಪ್ರತಿಫಲಿಸುತ್ತದೆ (ಇದು ಮೂಲತಃ "ಉಸಿರುಬಿಡು" ಎಂಬ ಅರ್ಥವನ್ನು ಕೊಡುತ್ತದೆ) ಅಲ್ಲದೇ "ಕೊನೆಯ ಸ್ಥಿತಿಗೆ ಬರುವುದು" ಅಥವಾ "ಮರಣಹೊಂದುವುದು" ಎಂಬ ಅಧಿಕ ಅರ್ಥವನ್ನು ಕೊಡುತ್ತದೆ. ಸೀನುವಾಗ ಹೊರಹಾಕುವ ನಿರ್ದಿಷ್ಟ ಪ್ರಮಾಣದ ಗಾಳಿಯೊಂದಿಗೆ ಈ ಸಂಬಂಧ ಸೇರಿಕೊಂಡು[citation needed] ಸೀನು ಮಾರಣಾಂತಿಕವಾಗಿ ಪರಿಣಮಿಸಬಹುದು ಎಂದು ಜನರು ಸುಲಭವಾಗಿ ನಂಬುವಂತೆ ಮಾಡಿತು. ಈ ಸಿದ್ದಾಂತವು, ವ್ಯಕ್ತಿಯು ಸೀನಿದಾಗ ಸಾಂಪ್ರದಾಯಿಕವಾಗಿ ಹೇಳುವ "ಗಾಡ್ ಬ್ಲೆಸ್ ಯು "(ದೇವರು ಅನುಗ್ರಹಿಸಲಿ) ಎಂಬ ಪದಗಳನ್ನು ಏಕೆ ಹೇಳಲಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಈ ಪದದ ಹುಟ್ಟು ಇಲ್ಲಿವರೆಗು ಸ್ವಷ್ಟವಾಗಿಲ್ಲ. (ಪರ್ಯಾಯ ವಿವರಣೆಗಾಗಿ ಕೆಳಗೆ ಕೊಟ್ಟಿರುವ, "ಸೀನುವಿಕೆಯ ಬಗೆಗಿರುವ ಸಾಂಪ್ರದಾಯಿಕ ಪ್ರತಿಕ್ರಿಯೆಗಳನ್ನು" ನೋಡಿ ). ಉದಾಹರಣೆಗೆ, ಸರ್ ರೆಮಂಡ್ ಹೆನ್ರಿ ಪೈನೆ ಕ್ರೌಫರ್ಡ್, ಇವರು ವೈದ್ಯರ ರಾಯಲ್ ಕಾಲೇಜ್ ನಲ್ಲಿ ಮಾಜಿ ರೆಜಿಸ್ಟ್ರಾರ್[disambiguation needed] ಆಗಿದ್ದರು, "ಚಾಲ್ಸ್ IIನ ಕೊನೆಯ ದಿನಗಳು" ಎಂಬ ಅವರ 1909 ರ ಪುಸ್ತಕದಲ್ಲಿ, ವಿವಾದಾತ್ಮಕ ಅರಸ ಆತನ ಅಂತ್ಯಕಾಲದಲ್ಲಿದ್ದಾಗ, ಸೀನುವಂತೆ ಮಾಡಲು ಆತನ ಖಾಸಗಿ ವೈದ್ಯರು, ಕೌವ್ ಸ್ಲೀಪ್ಸ್(ಸೇವಂತಿಗೆ) ಮಿಶ್ರಣ ಮತ್ತು ಅಮೋನಿಯಾದ ಸಾರವನ್ನು ಬಳಸಿದರು ಎಂದು ಬರೆದಿದ್ದಾರೆ.[೪] ಆದರೂ, ಆತ ಬೇಗ ಮರಣಹೊಂದಲೆಂದು ಈ ರೀತಿ ಸೀನು ಉದ್ದೀಪಿಸುವ ಕ್ರಿಯೆ ಮಾಡಲಾಯಿತೇ (ಕೂಪ್ ದಿ ಗ್ರೇಸ್(ಸಾವಿನ ಪೆಟ್ಟು) ), ಅಥವಾ ಚಿಕಿತ್ಸೆಯ ಕೊನೆಯ ಪ್ರಯತ್ನವೆಂಬಂತೆ ಇದನ್ನು ಮಾಡಲಾಯಿತೇ ಎಂಬುದು ತಿಳಿದಿಲ್ಲ.

ಪೂರ್ವ ಏಷ್ಯಾದ ಕೆಲವೊಂದು ಭಾಗಗಳಲ್ಲಿ, ವಿಶೇಷವಾಗಿ ಚೀನೀ ಸಂಸ್ಕೃತಿ, ಜಪಾನೀ ಸಂಸ್ಕೃತಿ ಮತ್ತು ವಿಯಟ್ನಾಂ ಸಂಸ್ಕೃತಿ ಯಲ್ಲಿ , ಯಾವುದೇ ಕಾರಣವಿಲ್ಲದೆ ಸೀನು ಬಂದರೆ, ಸಾಮಾನ್ಯವಾಗಿ ಆ ಕ್ಷಣದಲ್ಲಿ ಯಾರೋ ಸೀನಿದವರ ಬಗ್ಗೆ ಮಾತನಾಡುವ ಸಂಕೇತ ಎಂದು ಭಾವಿಸಲಾಯಿತು. ಇದನ್ನು ಪ್ರಾಚೀನ ಚೀನಾದಲ್ಲಿ ಕ್ರಿಸ್ತಪೂರ್ವ 1000 ದ ಉತ್ತರಾರ್ಧದಲ್ಲಿ ಬರೆಯಲಾದ ಬುಕ್ ಆಫ್ ಸಾಂಗ್ಸ್ ನಲ್ಲಿ ನೋಡಬಹುದಾಗಿದೆ (ಚೀನೀ ಹಾಡುಗಳ ಸಂಗ್ರಹ)[೫] ಅಲ್ಲದೇ ಈ ನಂಬಿಕೆಯನ್ನು ಇನ್ನೂ ಇಂದಿನ ಮಾಂಗ ಮತ್ತು ಅನಿಮ್ ನಲ್ಲಿ ಚಿತ್ರಿಸಲಾಗಿದೆ. ಉದಾಹರಣೆಗೆ, ಚೀನಾ, ವಿಯೆಟ್ನಾಂ ಮತ್ತು ಜಪಾನ್ನಲ್ಲಿ , ಯಾರಾದರು ಒಬ್ಬ ವ್ಯಕ್ತಿಯನ್ನು ಕುರಿತು ಹಿಂದಿನಿಂದ ಮಾತನಾಡಿದರೆ ಆ ವ್ಯಕ್ತಿಗೆ ಸೀನು ಬರುತ್ತದೆ ಎಂಬ ಮೂಢ ನಂಬಿಕೆಯಿದೆ; ಇದೇ ರೀತಿಯಲ್ಲಿ ಸೀನುವವನ ಬಗ್ಗೆ ಒಳ್ಳೆಯದು ಹೇಳಿದ್ದಾರೆಂದು (ಒಂಟಿ ಸೀನು ಬಂದರೆ), ಅಥವಾ ಕೆಟ್ಟ ಮಾತನಾಡಿದ್ದಾರೆಂದು(ಒಟ್ಟಿಗೆ ಜೋಡಿ ಸೀನುಬಂದರೆ) , ಯಾರಾದರು ಅವನನ್ನು ಪ್ರೀತಿಸುತ್ತಿದ್ದಾರೆಂದು (ಸಾಲಾಗಿ ಮೂರು ಸೀನು ಬಂದರೆ) ಸೀನುವಾತ ಹೇಳಬಹುದು ಅಥವಾ ಇದು ಅವರಿಗೆ ಶೀತವಾಗಲಿರುವ ಸೂಚಕವಾಗಿರಬಹುದು (ಬಹು ಸೀನು ಬಂದರೆ).

ಇಂತಹದ್ದೆ ನಂಬಿಕೆಗಳು ಪ್ರಪಂಚದಲ್ಲೆಲ್ಲಾ ಇವೆ ಎಂದು ಹೇಳಲಾಗುತ್ತದೆ, ವಿಶೇಷವಾಗಿ ಈ ರೀತಿಯ ನಂಬಿಕೆಗಳು ಸಮಕಾಲೀನ ಗ್ರೀಕ್, ಸೆಲ್ಟಿಕ್, ಇಂಗ್ಲೀಷ್, ಫ್ರೆಂಚ್, ಮತ್ತು ಭಾರತೀಯ ಸಂಸ್ಕೃತಿಗಳಲ್ಲಿ ಕಂಡುಬರುತ್ತವೆ. ಇದೆ ರೀತಿಯಾಗಿ, ನೇಪಾಳದಲ್ಲಿ, ಸೀನು ಬಂದರೆ ಆ ಕ್ಷಣದಲ್ಲಿ ಆ ವ್ಯಕ್ತಿಯನ್ನು ಯಾರಾದರು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ನಂಬಲಾಗುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ, ಅದರಲ್ಲೂ ವಿಶೇಷವಾಗಿ ಭಾರತದ ಉತ್ತರ ಭಾಗಗಳಲ್ಲಿ, ಮತ್ತು ಇರಾನ್ ನಲ್ಲಿಯೂ ಕೂಡ, ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಸೀನು ಬಂದರೆ ಅದು ಕೆಟ್ಟ ಅಡಚಣೆಯ ಮುನ್ಸೂಚನೆ ಎಂಬ ಸಾಮಾನ್ಯ ಮೂಢನಂಬಿಕೆಯಿದೆ. ಆದ್ದರಿಂದ, ಯಾವುದೇ ದುರದೃಷ್ಟ ಘಟಿಸದಂತೆ ತಡೆಯಲು ಸೀನು ಬಂದಾಗ ಸ್ವಲ್ಪ ಕಾಲ ನಿಂತು ನೀರು ಕುಡಿಯಬೇಕು ಅಥವಾ ಕೆಲಸವನ್ನು ಸ್ವಲ್ಪ ತಡವಾಗಿ ಪ್ರಾರಂಭಿಸುವುದು ವಾಡಿಕೆಯಾಗಿದೆ.

ಪಾಕಿಸ್ತಾನಿ ಸಂಸ್ಕೃತಿಯಲ್ಲಿ, ಯಾರದರೂ ಅಚ್ಚು ಮೆಚ್ಚಿನವರು , ಅದರಲ್ಲೂ ಮುಖ್ಯವಾಗಿ ಪತ್ನಿ ನೆನಪಿಸಿಕೊಂಡಾಗ ಸೀನು ಬರುತ್ತದೆ ಎಂಬ ಮೂಢ ನಂಬಿಕೆಯಿದೆ.

ಇಸ್ಲಾಂ ಧರ್ಮದ ಸಂಸ್ಕೃತಿಯಲ್ಲಿ, ಈ ನಂಬಿಕೆಯು ಹೆಚ್ಚಾಗಿ ಅನೇಕ ಪ್ರವಾದಿ ಸಂಪ್ರದಾಯಗಳ ಮೇಲೆ ಮತ್ತು ಮೊಹಮದ್ ನ ಭೋಧನೆಗಳನ್ನು ಆಧರಿಸಿರುತ್ತದೆ. ಅಬು ಹುರ್ಯಾರಹ್ ನ ಭೋಧನೆಯಿಂದ ತೆಗೆದುಕೊಂಡ ಅಲ್-ಬುಖಾರಿಯ ನಿರೂಪಣೆ ಇದಕ್ಕೆ ಉದಾಹರಣೆಯಾಗಿದೆ:

ನಿಮ್ಮಲ್ಲಿ ಯಾರಾದರು ಒಬ್ಬ ಸೀನಿದಾಗ, ಅವನಿಗೆ "ಅಲ್-ಹಮ್ದು-ಲಿಲ್ಹಾ" ಎಂದು ಹೇಳಲು ಬಿಡಿ ( ಅಲ್ಲಾ ನನ್ನು ಸ್ತುತಿಸುವುದು), ಅವನ ಸಹೋದರ ಅಥವಾ ಜೊತೆಗಾರನಿಗೆ ,"ಯಾರಮುಖ್ ಅಲ್ಲಾ" ( ಅಲ್ಲಾ ನಿಮ್ಮ ಮೇಲೆ ಕರುಣೆ ತೋರಿಸಲಿ ) ಎಂದು ಹೇಳಲು ಬಿಡಿ. ಒಂದು ವೇಳೆ ಅವನು, "ಯಾರಮುಖ್-ಅಲ್ಲಾ" ಎಂದು ಹೇಳಿದರೆ, ಆಗ [ಸೀನಿದವನು] "ಯ್ಹ್ ದಿಕಮ್ ಅಲ್ಲಾ ವಾ ಯುಸ್ಲಿಹು ಬಾಲಕುಮ್" ಎಂದು ಹೇಳಲಿ (ಅಲ್ಲಾ ನಿಮಗೆ ದಾರಿ ತೋರಿಸಲಿ ಮತ್ತು ನಿಮ್ಮ ಸ್ಥಿತಿಯನ್ನು ಗುರುತಿಸಲಿ) .

ಸೀನುವಿಕೆಯ ಬಗೆಗಿರುವ ಸಂಪ್ರದಾಯಿಕ ಪ್ರತಿಕ್ರಿಯೆಗಳು[ಬದಲಾಯಿಸಿ]

ಇಂಗ್ಲೀಷ್ ಅನ್ನು ಮಾತನಾಡುವ ರಾಷ್ಟ್ರಗಳಲ್ಲಿ , ಸಾಮಾನ್ಯವಾಗಿ ಯಾರಾದರು ಸೀನಿದಾಗ ಅವರಿಗೆ "ಬ್ಲೆಸ್ ಯು" (ನಿಮಗೆ ಅನುಗ್ರಹಿಸಲಿ)ಎಂದು ಹೇಳಿ ಪ್ರತಿಕ್ರಿಯಿಸಲಾಗುತ್ತದೆ ಅಥವಾ ಅತ್ಯಂತ ವಿರಳವಾಗಿ ಬಳಸುವ "Gesundheit" ("ಉತ್ತಮ ಆರೋಗ್ಯ"ಕ್ಕಾಗಿ ಬಳಸುವ ಜರ್ಮನ್ ಪದ) ಎಂದು ಹೇಳಿ ಪ್ರತಿಕ್ರಿಯಿಸಲಾಗುತ್ತದೆ. ಸೀನುವಿಕೆಯ ವಿಷಯದಲ್ಲಿ ಬಳಸುವಂತಹ "ಬ್ಲೆಸ್ ಯು" ಎಂಬ ಪದ ಅನೇಕ ಮೂಲಗಳಿಂದ ಹುಟ್ಟಿದೆ ಎಂದು ಸೂಚಿಸಲಾಗಿದೆ ಅವು ಕೆಳಕಂಡತಿವೆ:

  • ಸೀನುವಿಕೆಯನ್ನು ದುಷ್ಟಶಕ್ತಿಗಳೊಂದಿಗೆ ಸಂಬಂಧ ಕಲ್ಪಿಸುವ ವೈರುದ್ಧ್ಯದ ಮೂಢನಂಬಿಕೆಗಳಿವೆ. ಇದು ಈ ಕೆಳಕಂಡವುಗಳನ್ನು ಒಳಗೊಂಡಿದೆ: ಸೀನುವಿಕೆ, ಒಬ್ಬನ ಆತ್ಮವನ್ನು ಬಿಡುಗಡೆ ಮಾಡಬಲ್ಲದು ಎಂಬ ನಂಬಿಕೆಯನ್ನು ಒಳಗೊಳ್ಳುತ್ತದೆ. ಆದ್ದರಿಂದ ಸುಪ್ತ ದುಷ್ಟ ಶಕ್ತಿಗಳು ಅದನ್ನು ವಶಪಡಿಸಿಕೊಳ್ಳಬಹುದು("ಐತಿಹಾಸಿಕ ಉದಾಹರಣೆಗಳು ಮತ್ತು ಅಭ್ಯಾಸಗಳು" ವಿಭಾಗದಲ್ಲಿ ಮೇಲೆ ವಿವರಿಸಿರುವಂತೆ), ಅಥವಾ ಸೀನುವಾಗ ವ್ಯಕ್ತಿ ಬಾಯಿಯನ್ನು ತೆರೆದಾಗ ದುಷ್ಟ ಶಕ್ತಿಗಳು ಅವನ ದೇಹವನ್ನು ಪ್ರವೇಶಿಸಬಹುದು,ಅಥವಾ ವ್ಯಕ್ತಿಯು ಸೀನುವ ಮೂಲಕ ದೇಹದಲ್ಲಿ ಆಶ್ರಯ ಪಡೆದ ಪಾಪವನ್ನು ಅಥವಾ ದುಷ್ಟ ಶಕ್ತಿ ಗಳನ್ನು ಹೊರದೂಡಿ ಅವು ಮತ್ತೊಮ್ಮೆ ದೇಹದೊಳಗೆ ಪ್ರವೇಶಿಸದಂತೆ ಓಡಿಸಲು ಮಾಡಲು ದೇವರ ಅನುಗ್ರಹದ ಅವಶ್ಯಕತೆ ಇರುತ್ತದೆ. ಈ ಕೊನೆಯ ಸಿದ್ಧಾಂತದ ಸ್ವಲ್ಪ ಭಾಗವು ಮುಂದೆ, ಯಾರು "ಬ್ಲೆಸ್ ಯು" ಎಂದು ಹೇಳುವರೋ ಅವರಿಗೆ ಮತ್ತೊಮ್ಮೆ ಧನ್ಯವಾದ ಹೇಳಲು ಬಾಯಿ ತೆರೆಯುವುದು ದುರಾದೃಷ್ಟವೆನಿಸುತ್ತದೆ. ಅನುಗ್ರಹದ ನಿಜವಾದ ಉದ್ದೇಶವನ್ನು ವ್ಯರ್ಥವಾಗಿಸಬಹುದಾದ ಭಯದಿಂದ ಹೀಗೆ ಹೇಳಲಾಗಿದೆ.[citation needed]
  • 14 ನೇ ಶತಮಾನದಲ್ಲಿ ಸರ್ವವ್ಯಾಪಿ ಪ್ಲೇಗ್ ಬಂದಂತಹ ಸಂದರ್ಭದಲ್ಲಿ ಇದನ್ನು ಬಳಸಲಾಯಿತು ಎಂದು ಕೆಲವರು ಹೇಳಿದ್ದಾರೆ. ಅಂತಹ ಲಕ್ಷಣವನ್ನು ತೋರಿಸಿದ ನಂತರ ಅವನನ್ನು ಆಶೀರ್ವದಿಸುವುದರಿಂದ ಮಾರಕ ರೋಗದಿಂದ ಸನ್ನಿಹಿತವಾದ ಮರಣವನ್ನು ತಡೆಗಟ್ಟಬಹುದೆಂದು ಭಾವಿಸಲಾಗಿದೆ.
  • ರಿನೇಸಾನ್ಸ್ ಕಾಲದಲ್ಲಿ , ಸೀನುವಾಗ ವ್ಯಕ್ತಿಯ ಹೃದಯ ಕೆಲ ಕ್ಷಣಗಳವರೆಗೆ ನಿಂತುಹೋಗುತ್ತದೆ ಎಂಬ ಮೂಢ ನಂಬಿಕೆಯಿತ್ತು. ಬ್ಲೆಸ್ ಯು ಎಂಬುದು , ದೆವ್ವವು ದುಷ್ಟ ಶಕ್ತಿಗಳನ್ನು ಕಳುಹಿಸಿ , ಸೀನಿನ ಆಘಾತದ ಕ್ಷಣದಲ್ಲಿ ಹೃದಯವನ್ನು ಬಿಗಿಯಾಗಿ ಹಿಡಿದು ಹೃದಯದ ವೈಫಲ್ಯತೆಯನ್ನು ತಪ್ಪಿಸಲು ಸೀನಿದಾಗ, ಬ್ಲೆಸ್ ಯು ಎಂದು ಹೇಳುವುದು ಪ್ರಾರ್ಥನೆಯ ಸಂಕೇತವಾಗಿದೆ ಎಂದು ಹೇಳಲಾಗಿತ್ತು.
  • ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಸೀನುವ ವ್ಯಕ್ತಿ, "ಅಲ್ ಹಮ್ ದುಲಿಲ್ಹ್" ಎಂದು ಹೇಳಬೇಕು. ಇದರ ಅರ್ಥ "ದೇವರನ್ನು ಸ್ತುತಿಸು" ಅಥವಾ "ಎಲ್ಲಾ ಪ್ರಶಂಸೆಯು ಅಲ್ಲಾನಿಂದಾಗಿ."
  • ಸ್ಯೆನ್ ಫೆಲ್ಡ್ ನ ಎಪಿಸೋಡ್ "ದಿ ಗಾಡ್ ಸ್ಮ್ಯಾರಿಟನ್" ನಲ್ಲಿ "ನೀವು ತುಂಬ ಚೆನ್ನಾಗಿ ಕಾಣುತ್ತಿದ್ದೀರಿ ಎಂದು ಹೇಳಬೇಕೆಂದು ಜೆರಿ ಸೂಚಿಸಿದನು.

!" ಸೀನಿದಾಗ "ಗಾಡ್ ಬ್ಲೆಸ್ ಯು" ಎಂದು ಪ್ರತಿಕ್ರಿಯಿಸುವ ಬದಲು ಮೇಲೆ ಹೇಳಿರುವಂತೆ ಪ್ರತಿಕ್ರಿಯಿಸಲು ಸೂಚಿಸಿದನು.

ಅಕೂ , ಅಟ್ಕೂ , ಆಖಿವ್ , ಮತ್ತು ಅಟ್ಶೂ ಎಂಬ ಶಬ್ದಗಳು ಸೀನುವಿಕೆಗಿರುವಂತಹ ಇಂಗ್ಲೀಷ್ ನ ಸಾಮಾನ್ಯ ಅನುಕರಣ ಶಬ್ದಗಳಾಗಿವೆ. ಈ ಶಬ್ದಗಳಲ್ಲಿ ಮೊದಲನೆಯ ಅಕ್ಷರವು ಇದ್ದಕ್ಕಿದ್ದಂತೆ ತೆಗೆದುಕೊಳ್ಳುವ ಗಾಳಿಗೆ ಅನುಗುಣವಾಗಿದೆ. ಅಲ್ಲದೇ ಕೊನೆ ಅಕ್ಷರ ಸೀನಿನ ಶಬ್ದಕ್ಕೆ ಸಂಬಂಧಿಸಿದೆ.

ಇವನ್ನೂ ಗಮನಿಸಿ[ಬದಲಾಯಿಸಿ]

  • ಆಟೋಸೊಮಲ್ ಡಾಮಿನೆಂಟ್ ಕಾಂಪೇಲಿಂಗ್ ಹೆಲಿಯೊಪ್ ಥಲ್ಮಿಕ್ ಔಟ್ ಬರ್ಸ್ಟ್ ಸಿಂಡ್ರೋಮ್ (ACHOO)
  • ಫೋಟಿಕ್ ಸ್ನೀಸ್ ರಿಫ್ಲೆಕ್ಸ್
  • ಸ್ನ್ಯಾಟಿಯೇಷನ್

ಟಿಪ್ಪಣಿಗಳು[ಬದಲಾಯಿಸಿ]

  1. "A Moment of Science: Sleep On, Sneeze Not". Retrieved 2008-11-14. 
  2. ಕೋಲೆ EC, ಕುಕ್ CE. ಕ್ಯಾರೆಕ್ಟರೈಸೇಷನ್ ಆಫ್ ಇನ್ ಫೆಕ್ಟಿಯಸ್ ಏರೋಸೊಲ್ಸ್ ಇನ್ ಹೆಲ್ತ್ ಕೇರ್ ಫೆಸಿಲಿಟೀಸ್: ಆನ್ ಏಡ್ ಟು ಎಫೆಕ್ಟಿವ್ ಇಂಜಿನಿಯರಿಂಗ್ ಕಂಟ್ರೋಲ್ಸ್ ಅಂಡ್ ಪಿವೆಂಟೀವ್ ಸ್ಟ್ಯಾಟರ್ಜೀಸ್. ಆಮ್ J ಇನ್ ಫೆಕ್ಟ್ ಕಂಟ್ರೋಲ್ . 1998 ಆಗಸ್ಟ್;26(4):453-64. ಸ್ನೀಸಿಂಗ್ ಕ್ಯಾನ್ ಟ್ರಾನ್ಸ್ ಮಿಟ್ ಮೆನಿ ಡಿಸಿಸಸ್ PMID 9721404
  3. Adkinson NF Jr. (2003). "Middleton’s Allergy: Principles and Practice.". Phytomedicine. (6 ed.). 
  4. Wylie, A, (1927). "Rhinology and laryngology in literature and Folk-Lore". The Journal of Laryngology & Otology 42 (2): 81–87. 
  5. 《诗经·终风》 「寤言不寐,愿言则嚏」

ಉಲ್ಲೇಖಗಳು[ಬದಲಾಯಿಸಿ]

ಮುಂದಿನ ಓದಿಗಾಗಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

  1. REDIRECT Template:Common cold
"http://kn.wikipedia.org/w/index.php?title=ಸೀನು&oldid=407432" ಇಂದ ಪಡೆಯಲ್ಪಟ್ಟಿದೆ