ವಿಷಯಕ್ಕೆ ಹೋಗು

ಸಿಸೇರಿಯನ್ ಶಸ್ತ್ರಚಿಕಿತ್ಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಿ ಸೆಕ್ಷನ್ ಇಂದ ಪುನರ್ನಿರ್ದೇಶಿತ)

ಸಿಸೇರಿಯನ್ ಶಸ್ತ್ರಚಿಕಿತ್ಸೆ
ಸಿಸೇರಿಯನ್ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುತ್ತಿರುವ ತಂಡ[]
Synonymsಸಿ- ಸೆಕ್ಷನ್, ಸಿಸೇರಿಯನ್ ಸೆಕ್ಷನ್, ಸಿಸೇರಿಯನ್ ಡೆಲಿವರಿ
ICD-10-PCS10D00Z0
ICD-9-CMಟೆಂಪ್ಲೇಟು:ICD9proc
MeSHD002585
MedlinePlus002911

ಕಿಬ್ಬೊಟ್ಟೆಯ ಮೂಲಕ ಅಥವಾ ಗರ್ಭಕೋಶವನ್ನು ಕೊಯ್ದು ಗರ್ಭಸ್ಥ ಶಿಶುವನ್ನು ಹೊರತೆಗೆಯುವುದು. ಗರ್ಭಿಣಿಗೆ ಇಪ್ಪತ್ತೆಂಟು ವಾರಗಳ ಮೇಲೆ ಯಾವುದೇ ಕಾರಣಕ್ಕಾಗಿ ಸ್ವಾಭಾವಿಕ ಹೆರಿಗೆ ಆಗುವುದಿಲ್ಲವಾದರೆ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾಗುವುದು.[]

ಇತಿಹಾಸ

[ಬದಲಾಯಿಸಿ]

ಹಲವು ವರ್ಷಗಳ ಹಿಂದೆ ಸೀಸರ್ ಎಂವ ದೊರೆ ರೋಮ್ ರಾಜ್ಯವನ್ನು ಆಳುತ್ತಿದ್ದನು. ಗರ್ಭಿಣಿಯರು ಸತ್ತರೆ ಹಾಗೆಯೇ ಸಮಾಧಿ ಮಾಡುವುದನ್ನು ಕಾನೂನಿನ ಮೂಲಕ ನಿಷೇಧಿಸಲಾಗಿತ್ತು. ಆಕೆಯ ಶವವನ್ನು ಹೂಳುವ ಮೊದಲು ಆಕೆಯ ಶವದ ಹೊಟ್ಟೆಯನ್ನು ಸೀಳಿ ಗರ್ಭಸ್ಥ ಶಿಶುವನ್ನು ಹೊರತೆಗೆಯಬೇಕಿತ್ತು. ಇದು ಆ ರಾಜನ ಆಜ್ಞೆಯಾಗಿತ್ತು. ಆದ್ದರಿಂದ ಈ ಪ್ರಕ್ರಿಯೆಗೆ ಸಿಸೇರಿಯನ್ ಎಂಬ ಹೆಸರು ಬಂತು.[]

ಸಂದರ್ಭಗಳು

[ಬದಲಾಯಿಸಿ]

ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬರುವ ಸಂದರ್ಭಗಳು:-

  • ಯಾವುದೇ ಕಾರಣದಿಂದಾಗಿ ತಾಯಿಗೂ ಮಗುವಿಗೂ ಅಪಾಯವಾಗದಿರಲು ತಜ್ಞರು ಈ ವಿಧಾನವನ್ನು ಆರಿಸಿಕೊಳ್ಳುತಾರೆ.
  • ತಾಯಿಯ ಕಿಳ್ಗುಳಿಯ ಅಳತೆ ಬಹಳ ಕಡಿಮೆ ಇದ್ದು ಅಥವಾ ಮಗುವಿನ ತಲೆ ದೊಡ್ಡದ್ದಾಗಿದ್ದಾಗ.
  • ಗರ್ಭಾಶಯದ ಅಥವಾ ಆಸುಪಾಸಿನ ಅಂಗಗಳಲ್ಲಿ ಗೆಡ್ಡೆಗಳು ಮಗುವಿಗೆ ಅಡ್ಡವಾಗಿದ್ದಾಗ.
  • ಯೋನಿ ಅಥವಾ ಗರ್ಭಾಶಯದ ಕೊರಳು ವಿಪರೀತ ಸಂಕೋಚನಗೊಂಡು ಹೆಚ್ಚು ಕಮ್ಮಿ ಮುಚ್ಚಿಕೊಂಡಿರುವಾಗ.
  • ಈಗಾಗಲೇ ಗರ್ಭಿಣಿ ಎರಡು ಸಲ ಸಿಸೇರಿಯನ್ ಆಗಿದ್ದರೆ.
  • ಗರ್ಭದಲ್ಲಿ ಮಗುವು ಇರುವ ರೀತಿ, ಭಂಗಿಗಳು ಸರಿ ಇಲ್ಲದ್ದಿದಾಗ.
  • ಗರ್ಭಾಶಯ ಅಪೇಕ್ಷಿತ ರೀತಿಯಲ್ಲಿ ಸಂಕುಚಿತವಾಗದ್ದಿದ್ದಾಗ ಮತ್ತು ಅದರ ಕೊರಳು ಸರಿಯಾದ ಸಮಯದಲ್ಲಿ ಅಗಲವಾಗದ್ದಿದ್ದಾಗ.
  • ತಾಯಿಗೆ ತೀವ್ರವಾದ ಗರ್ಭಿಣಿಯ ನಂಜು ಇದ್ದಾಗ. ಪ್ರಸವಪೂರ್ವ ರಕ್ತಸ್ರಾವ, ಸಿಹಿಮೂತ್ರ ರೋಗ ಇತ್ಯಾದಿ ರೋಗಗಳಿದ್ದಾಗ.
  • ಹೊಕ್ಕುಳಬಳ್ಳಿ ಮಗುವಿನ ಕತ್ತಿಗೆ ಸುತ್ತಿಕೊಂಡು ಹೆರಿಗೆ ಮುಂದುವರಿಯದೆ ಮಗುವಿನ ಹೃದಯದ ಬಡಿತ ಕ್ಷೀಣಿಸುತ್ತಿರುವಾಗ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ಸಿ ಸೆಕ್ಷನ್ ಹೊಲಿಗೆಗಳು

ಉಲ್ಲೇಖಗಳು

[ಬದಲಾಯಿಸಿ]
  1. Fadhley, Salim (2014). "Caesarean section photography". WikiJournal of Medicine. 1 (2). doi:10.15347/wjm/2014.006. Archived from the original on 6 ಅಕ್ಟೋಬರ್ 2016. {{cite journal}}: Unknown parameter |deadurl= ignored (help)
  2. https://www.healthline.com/health/c-section#followup
  3. ವೈದ್ಯಕೀಯ ವಿಶ್ವಕೋಶ, ಡಾ. ಪಿ. ಎಸ್. ಶಂಕರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, (೨೦೧೭), ಪುಟ- ೫೮