ಸಿಸೇರಿಯನ್ ಶಸ್ತ್ರಚಿಕಿತ್ಸೆ
ಗೋಚರ
ಸಿಸೇರಿಯನ್ ಶಸ್ತ್ರಚಿಕಿತ್ಸೆ | |
---|---|
Synonyms | ಸಿ- ಸೆಕ್ಷನ್, ಸಿಸೇರಿಯನ್ ಸೆಕ್ಷನ್, ಸಿಸೇರಿಯನ್ ಡೆಲಿವರಿ |
ICD-10-PCS | 10D00Z0 |
ICD-9-CM | ಟೆಂಪ್ಲೇಟು:ICD9proc |
MeSH | D002585 |
MedlinePlus | 002911 |
ಕಿಬ್ಬೊಟ್ಟೆಯ ಮೂಲಕ ಅಥವಾ ಗರ್ಭಕೋಶವನ್ನು ಕೊಯ್ದು ಗರ್ಭಸ್ಥ ಶಿಶುವನ್ನು ಹೊರತೆಗೆಯುವುದು. ಗರ್ಭಿಣಿಗೆ ಇಪ್ಪತ್ತೆಂಟು ವಾರಗಳ ಮೇಲೆ ಯಾವುದೇ ಕಾರಣಕ್ಕಾಗಿ ಸ್ವಾಭಾವಿಕ ಹೆರಿಗೆ ಆಗುವುದಿಲ್ಲವಾದರೆ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾಗುವುದು.[೨]
ಇತಿಹಾಸ
[ಬದಲಾಯಿಸಿ]ಹಲವು ವರ್ಷಗಳ ಹಿಂದೆ ಸೀಸರ್ ಎಂವ ದೊರೆ ರೋಮ್ ರಾಜ್ಯವನ್ನು ಆಳುತ್ತಿದ್ದನು. ಗರ್ಭಿಣಿಯರು ಸತ್ತರೆ ಹಾಗೆಯೇ ಸಮಾಧಿ ಮಾಡುವುದನ್ನು ಕಾನೂನಿನ ಮೂಲಕ ನಿಷೇಧಿಸಲಾಗಿತ್ತು. ಆಕೆಯ ಶವವನ್ನು ಹೂಳುವ ಮೊದಲು ಆಕೆಯ ಶವದ ಹೊಟ್ಟೆಯನ್ನು ಸೀಳಿ ಗರ್ಭಸ್ಥ ಶಿಶುವನ್ನು ಹೊರತೆಗೆಯಬೇಕಿತ್ತು. ಇದು ಆ ರಾಜನ ಆಜ್ಞೆಯಾಗಿತ್ತು. ಆದ್ದರಿಂದ ಈ ಪ್ರಕ್ರಿಯೆಗೆ ಸಿಸೇರಿಯನ್ ಎಂಬ ಹೆಸರು ಬಂತು.[೩]
ಸಂದರ್ಭಗಳು
[ಬದಲಾಯಿಸಿ]ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬರುವ ಸಂದರ್ಭಗಳು:-
- ಯಾವುದೇ ಕಾರಣದಿಂದಾಗಿ ತಾಯಿಗೂ ಮಗುವಿಗೂ ಅಪಾಯವಾಗದಿರಲು ತಜ್ಞರು ಈ ವಿಧಾನವನ್ನು ಆರಿಸಿಕೊಳ್ಳುತಾರೆ.
- ತಾಯಿಯ ಕಿಳ್ಗುಳಿಯ ಅಳತೆ ಬಹಳ ಕಡಿಮೆ ಇದ್ದು ಅಥವಾ ಮಗುವಿನ ತಲೆ ದೊಡ್ಡದ್ದಾಗಿದ್ದಾಗ.
- ಗರ್ಭಾಶಯದ ಅಥವಾ ಆಸುಪಾಸಿನ ಅಂಗಗಳಲ್ಲಿ ಗೆಡ್ಡೆಗಳು ಮಗುವಿಗೆ ಅಡ್ಡವಾಗಿದ್ದಾಗ.
- ಯೋನಿ ಅಥವಾ ಗರ್ಭಾಶಯದ ಕೊರಳು ವಿಪರೀತ ಸಂಕೋಚನಗೊಂಡು ಹೆಚ್ಚು ಕಮ್ಮಿ ಮುಚ್ಚಿಕೊಂಡಿರುವಾಗ.
- ಈಗಾಗಲೇ ಗರ್ಭಿಣಿ ಎರಡು ಸಲ ಸಿಸೇರಿಯನ್ ಆಗಿದ್ದರೆ.
- ಗರ್ಭದಲ್ಲಿ ಮಗುವು ಇರುವ ರೀತಿ, ಭಂಗಿಗಳು ಸರಿ ಇಲ್ಲದ್ದಿದಾಗ.
- ಗರ್ಭಾಶಯ ಅಪೇಕ್ಷಿತ ರೀತಿಯಲ್ಲಿ ಸಂಕುಚಿತವಾಗದ್ದಿದ್ದಾಗ ಮತ್ತು ಅದರ ಕೊರಳು ಸರಿಯಾದ ಸಮಯದಲ್ಲಿ ಅಗಲವಾಗದ್ದಿದ್ದಾಗ.
- ತಾಯಿಗೆ ತೀವ್ರವಾದ ಗರ್ಭಿಣಿಯ ನಂಜು ಇದ್ದಾಗ. ಪ್ರಸವಪೂರ್ವ ರಕ್ತಸ್ರಾವ, ಸಿಹಿಮೂತ್ರ ರೋಗ ಇತ್ಯಾದಿ ರೋಗಗಳಿದ್ದಾಗ.
- ಹೊಕ್ಕುಳಬಳ್ಳಿ ಮಗುವಿನ ಕತ್ತಿಗೆ ಸುತ್ತಿಕೊಂಡು ಹೆರಿಗೆ ಮುಂದುವರಿಯದೆ ಮಗುವಿನ ಹೃದಯದ ಬಡಿತ ಕ್ಷೀಣಿಸುತ್ತಿರುವಾಗ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಕಾರ್ಯವಿಧಾನಗಳು
- ಸಿಸೇರಿಯನ್ ಬಗ್ಗೆ
- ಸಿಸೇರಿಯನ್ ವ್ಯುತ್ಪತ್ತಿ Archived 3 April 2013[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ Fadhley, Salim (2014). "Caesarean section photography". WikiJournal of Medicine. 1 (2). doi:10.15347/wjm/2014.006. Archived from the original on 6 ಅಕ್ಟೋಬರ್ 2016.
{{cite journal}}
: Unknown parameter|deadurl=
ignored (help)CS1 maint: unflagged free DOI (link) - ↑ https://www.healthline.com/health/c-section#followup
- ↑ ವೈದ್ಯಕೀಯ ವಿಶ್ವಕೋಶ, ಡಾ. ಪಿ. ಎಸ್. ಶಂಕರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, (೨೦೧೭), ಪುಟ- ೫೮