ಸಿ. ಎಸ್. ಶೇಷಾದ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಸಿ. ಎಸ್. ಶೇಷಾದ್ರಿ
ಜನನ(೧೯೩೨-೦೨-೨೯)೨೯ ಫೆಬ್ರವರಿ ೧೯೩೨
ಮರಣ17 July 2020(2020-07-17) (aged 88)

ಕಾಂಜೀವರಂ ಶ್ರೀರಂಗಾಚಾರಿ ಶೇಷಾದ್ರಿ [೧] (೨೯ ಫೆಬ್ರವರಿ ೧೯೩೨ - ೧೭ ಜುಲೈ ೨೦೨೦) ಒಬ್ಬ ಭಾರತೀಯ ಗಣಿತಶಾಸ್ತ್ರಜ್ಞ. [೨] ಅವರು ಚೆನ್ನೈ ಮ್ಯಾಥಮ್ಯಾಟಿಕಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕ ಮತ್ತು ಗೌರವ ನಿರ್ದೇಶಕರಾಗಿದ್ದು, ಬೀಜಗಣಿತ ಮತ್ತು ರೇಖಾಗಣಿತದ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ [೩] ಮತ್ತು ಶೇಷಾದ್ರಿ ಸ್ಥಿರಾಂಕವನ್ನು ನೀಡಿದ್ದಾರೆ. ರೀಮನ್ ಮೇಲ್ಮೈಯಲ್ಲಿ ಸ್ಥಿರ ವೆಕ್ಟರ್ ಬಂಡಲ್‌ಗಳಿಗೆ ಅಗತ್ಯವಾದ ಪರಿಸ್ಥಿತಿಗಳನ್ನು ಸಾಬೀತುಪಡಿಸಿದ ನರಸಿಂಹನ್-ಶೇಷಾದ್ರಿಯವರು ಪ್ರಮೇಯದ ಪುರಾವೆಗಾಗಿ ಗಣಿತಜ್ಞ ಎಂಎಸ್ ನರಸಿಂಹನ್ ಅವರ ಸಹಯೋಗಕ್ಕಾಗಿ ಹೆಸರುವಾಸಿಯಾಗಿದ್ದರು.

ಇವರು ೨೦೦೯ ರಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು. [೪]

ಪದವಿಗಳು ಮತ್ತು ಹುದ್ದೆಗಳು[ಬದಲಾಯಿಸಿ]

ಶೇಷಾದ್ರಿಯವರು ತಮಿಳುನಾಡಿನ ಕಾಂಚೀಪುರಂನಲ್ಲಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. [೫] ೧೯೫೩ ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರದಲ್ಲಿ ಜೆಸ್ಯೂಟ್ ಪಾದ್ರಿ ಎಫ಼್‌ಆರ್. ಚಾರ್ಲ್ಸ್ ರೇಸಿನ್ ಮತ್ತು ಎಸ್. ನಾರಾಯಣನ್‌ರವರ ಮಾರ್ಗದರ್ಶನದಲ್ಲಿ ತಮ್ಮ ಬಿಎ ಗೌರವ ಪದವಿಯನ್ನು ಪಡೆದರು. [೬] [೭] ೧೯೫೮ ರಲ್ಲಿ ಕೆ ಎಸ್ ಚಂದ್ರಶೇಖರನ್ ಅವರ ಮೇಲ್ವಿಚಾರಣೆಯಲ್ಲಿ ಬಾಂಬೆ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪೂರ್ಣಗೊಳಿಸಿ, ೧೯೭೧ರಲ್ಲಿ [೮] ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಸಹವರ್ತಿಯಾಗಿ ಆಯ್ಕೆಯಾದರು.

ಶೇಷಾದ್ರಿ ಅವರು ೧೯೫೩ ರಿಂದ ೧೯೮೪ ರವರೆಗೆ ಬಾಂಬೆಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಗಣಿತಶಾಸ್ತ್ರದ ಶಾಲೆಯಲ್ಲಿ ಸಂಶೋಧನಾ ವಿದ್ವಾಂಸರಾಗಿ ಪ್ರಾರಂಭಿಸಿ ಹಿರಿಯ ಪ್ರಾಧ್ಯಾಪಕರಾಗಿ ಏರಿದರು ಮತ್ತು ೧೯೮೪ ರಿಂದ ೧೯೮೯ ರವರೆಗೆ ಚೆನ್ನೈನ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್‌ನಲ್ಲಿ ಕೆಲಸ ಮಾಡಿದರು. ೧೯೮೯ ರಿಂದ ೨೦೧೦ ರವರೆಗೆ ಅವರು ಚೆನ್ನೈ ಮ್ಯಾಥಮ್ಯಾಟಿಕಲ್ ಇನ್ಸ್ಟಿಟ್ಯೂಟ್ನ ಸಂಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿ, ಅದರಿಂದ ಕೆಳಗಿಳಿದ ನಂತರ ೨೦೨೦ ರಲ್ಲಿ ತಮ್ಮ ಕೊನೆಗಾಲದವರೆಗೂ ಸಂಸ್ಥೆಯ ಗೌರವ ನಿರ್ದೇಶಕರಾಗಿ ಮುಂದುವರೆದರು. ಹಾಗೆಯೇ ೨೦೧೦ ಮತ್ತು ೨೦೧೧ ರಲ್ಲಿ ಇನ್ಫೋಸಿಸ್ ಪ್ರಶಸ್ತಿಗಾಗಿ ಗಣಿತ ವಿಜ್ಞಾನದ ತೀರ್ಪುಗಾರರಾಗಿ ಸೇವೆ ಸಲ್ಲಿಸಿದರು.

ಸಂದರ್ಶಕ ಪ್ರಾಧ್ಯಾಪಕರ ಹುದ್ದೆಗಳು[ಬದಲಾಯಿಸಿ]

  • ಪ್ಯಾರಿಸ್ ವಿಶ್ವವಿದ್ಯಾನಿಲಯ, ಫ್ರಾನ್ಸ್
  • ಹಾರ್ವರ್ಡ್ ವಿಶ್ವವಿದ್ಯಾನಿಲಯ, ಕೇಂಬ್ರಿಡ್ಜ್
  • ಯುಸಿಎಲ್‌ಎ
  • ಬ್ರಾಂಡೀಸ್ ವಿಶ್ವವಿದ್ಯಾನಿಲಯ
  • ಬಾನ್ ವಿಶ್ವವಿದ್ಯಾನಿಲಯ, ಬಾನ್
  • ಕ್ಯೋಟೋ ವಿಶ್ವವಿದ್ಯಾನಿಲಯ, ಕ್ಯೋಟೋ, ಜಪಾನ್

ಅವರು ಐಸಿಎಂನಲ್ಲಿ ಭಾಷಣ ನಡೆಸಿದ್ದಾರೆ.

ಪ್ರಶಸ್ತಿಗಳು ಮತ್ತು ಫೆಲೋಶಿಪ್‌ಗಳು[ಬದಲಾಯಿಸಿ]

  • ಗೌರವ ಪದವಿ, ಯೂನಿವರ್ಸಿಟಿ ಪಿಯರೆ ಎಟ್ ಮೇರಿ ಕ್ಯೂರಿ (ಯುಪಿಎಮ್‌ಸಿ), ಪ್ಯಾರಿಸ್, ೨೦೧೩[೯]
  • ಹೊನೊರಿಸ್ ಕಾಸಾ, ಹೈದರಾಬಾದ್ ವಿಶ್ವವಿದ್ಯಾನಿಲಯ, ಭಾರತ
  • ಪದ್ಮಭೂಷಣ
  • ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ
  • ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‌ನಿಂದ ಶ್ರೀನಿವಾಸ ರಾಮಾನುಜನ್ ಪದಕ
  • ಗೌರವ ಡಿ.ಎಸ್ಸಿ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ
  • ಟಿಡಬ್ಲೂಎಸ್ ವಿಜ್ಞಾನ ಪ್ರಶಸ್ತಿ [೧೦]
  • ಐಎ‍ಎಸ್, ಐಎನ್‌ಎಸ್‌ಎ ನ ಫೆಲೋ ಮತ್ತು ರಾಯಲ್ ಸೊಸೈಟಿಯ ಫೆಲೋ
  • ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‍ನ ಸದಸ್ಯತ್ವ [೧೧]
  • ಅಮೆರಿಕನ್ ಮ್ಯಾಥಮೆಟಿಕಲ್ ಸೊಸೈಟಿಯ ಫೆಲೋ, ೨೦೧೨ [೧೨]

ಸಂಶೋಧನಾ ಕಾರ್ಯ[ಬದಲಾಯಿಸಿ]

ಶೇಷಾದ್ರಿಯವರು ಬೀಜಗಣಿತದ ಜ್ಯಾಮಿತಿಯ ಕ್ಷೇತ್ರದ ಮೇಲೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇವರು ಎಂ.ಎಸ್. ನರಸಿಂಹನ್ ಅವರ ಜೊತೆಗೆ ಏಕೀಕೃತ ವೆಕ್ಟರ್ ಬಂಡಲ್ಸ್‌ನ ಕೆಲಸದಲ್ಲಿ ಸೇರಿದ್ದು, ಇದು ನರಸಿಂಹನ್-ಶೇಷಾದ್ರಿ ಪ್ರಮೇಯದ ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ. ಜ್ಯಾಮಿತೀಯ ಅಸ್ಥಿರ ಸಿದ್ಧಾಂತ ಮತ್ತು ಶುಬರ್ಟ್ ಪ್ರಭೇದಗಳನ್ನು ಆಧಾರಿಸಿದ ಪ್ರಮಾಣಿತ ಏಕಪದ ಸಿದ್ಧಾಂತದ ಮೇಲಿನ ಕೆಲಸದಿಂದಾಗಿ ಶೇಷಾದ್ರಿಯವರು ಪ್ರಸಿಧ್ಹರಾದರು.

ಪ್ರಕಟಣೆಗಳು[ಬದಲಾಯಿಸಿ]

  • Narasimhan, M. S.; Seshadri, C. S. (1965). "Stable and unitary vector bundles on a compact Riemann surface". Annals of Mathematics. The Annals of Mathematics, Vol. 82, No. 3. 82 (3): 540–567. doi:10.2307/1970710. JSTOR 1970710. MR 0184252.
  • Seshadri, C. S. (2007), Introduction to the theory of standard monomials, Texts and Readings in Mathematics, vol. 46, New Delhi: Hindustan Book Agency, ISBN 9788185931784, MR 2347272
  • Seshadri, C.S. (2010). Studies in the History of Indian Mathematics. New Delhi: Hindustan Book Agency. ISBN 9789380250069.
  • Seshadri, C. S. (2012), Collected papers of C. S. Seshadri. Volume 1. Vector bundles and invariant theory, New Delhi: Hindustan Book Agency, ISBN 9789380250175, MR 2905897
  • Seshadri, C. S. (2012), Collected papers of C. S. Seshadri. Volume 2. Schubert geometry and representation theory., New Delhi: Hindustan Book Agency, ISBN 9789380250175, MR 2905898

ಟಿಪ್ಪಣಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]