ಸಿಲಂಬಾಟ್ಟಮ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಲಂಬಾಟ್ಟಮ್‌
ಹೀಗೂ ಕರೆಯಲ್ಪಡುತ್ತದೆChilambam, Silambattam
ಗಮನWeapons (ಬಿದಿರು staff)
ಮೂಲ ದೇಶಭಾರತ ತಮಿಳುನಾಡು, ಭಾರತ
ಪ್ರಸಿದ್ಧ ಪಟುJasmine Simhalan
ಒಲಂಪಿಕ್ ಆಟಗಳುNo

ಸಿಲಂಬಮ್‌ (ತಮಿಳು:சிலம்பம்) ಅಥವಾ ಸಿಲಂಬಾಟ್ಟಮ್‌ ದಕ್ಷಿಣ ಭಾರತತಮಿಳುನಾಡಿನ ಒಂದು ಆಯುಧ-ಆಧಾರಿತ ದ್ರಾವಿಡ ಕದನ-ಕಲೆಯಾಗಿದೆ. ಇದನ್ನು ಮಲೇಷಿಯಾತಮಿಳು ಸಮುದಾಯವೂ ಸಹ ಅಭ್ಯಾಸ ಮಾಡುತ್ತದೆ. ತಮಿಳಿನಲ್ಲಿ, ಸಿಲಂಬಮ್‌ ಪದವು ಬಿದಿರು ಕೋಲನ್ನು ಸೂಚಿಸುತ್ತದೆ. ಅದು ಈ ಶೈಲಿಯಲ್ಲಿ ಬಳಸುವ ಪ್ರಮುಖ ಸಾಧನವಾಗಿದೆ. ಇತರ ಆಯುಧಗಳನ್ನೂ ಬಳಸಲಾಗುತ್ತದೆ, ಉದಾಹರಣೆಗಾಗಿ ಮಡುವು (ಜಿಂಕೆಯ ಕೊಂಬು), ಕತಿ (ಕತ್ತಿ) ಮತ್ತು ವಾಲ್ (ಖಡ್ಗ). ಕುಟ್ಟು ವರಿಸೈ ಎಂದು ಕರೆಯಲ್ಪಡುವ ನಿರಾಯುಧ ಸಿಲಂಬಮ್‌ ಹಾವು, ಹುಲಿ ಮತ್ತು ಹದ್ದು ಮೊದಲಾದ ಪ್ರಾಣಿಗಳ ಚಲನೆಗಳ ಆಧಾರದಲ್ಲಿ ಹೊಡೆತದ ಭಂಗಿಗಳು ಮತ್ತು ನಿಯತಕ್ರಮಗಳನ್ನು ಬಳಸುತ್ತದೆ.

ಕೋಲಿನ ಉದ್ದವು ಭಾಗವಹಿಸುವವರ ಎತ್ತರವನ್ನು ಆಧರಿಸಿರುತ್ತದೆ. ಅದು ತಲೆಯಿಂದ ಮೂರು ಬೆರಳುಗಳಷ್ಟು ಕೆಳಗೆ ಹಣೆಯನ್ನು ತಲುಪಬೇಕು. ಆದರೂ ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ಉದ್ದಗಳನ್ನು ಬಳಸಲಾಗುತ್ತದೆ. ಇದು ಸಾಮಾನ್ಯವಾಗಿ ಸರಿಸುಮಾರು 1.68 ಮೀಟರ್‌ಗಳಷ್ಟು (ಐದೂವರೆ ಅಡಿ) ಉದ್ದವಿರುತ್ತದೆ. ಸೆಡಿಕುಟ್ಚಿ ಎಂದು ಕರೆಯುವ 3 ಅಡಿಯ ಕೋಲನ್ನು ಸುಲಭವಾಗಿ ಮರೆಮಾಡಬಹುದು. ವಿವಿಧ ಉದ್ದದ ಕೋಲುಗಳ ಬಳಕೆಗೆ ಪ್ರತ್ಯೇಕ ಅಭ್ಯಾಸದ ಅಗತ್ಯವಿರುತ್ತದೆ. ಸಾಮಾನ್ಯ ಹೊಡೆತದ ಭಂಗಿಯೆಂದರೆ ಬಲಕೈಯನ್ನು ಕೋಲಿನ ಹಿಂಭಾಗದ ತುದಿಗೆ ಹತ್ತಿರವಾಗಿ, ಎಡಕೈಯನ್ನು ಸುಮಾರು 40 ಸೆಂಟಿಮೀಟರ್‌ಗಳಷ್ಟು (16 ಇಂಚುಗಳು) ದೂರದಲ್ಲಿ ಹಿಡಿದುಕೊಳ್ಳುವುದು. ಈ ಸ್ಥಾನವು ಸಂಕೀರ್ಣವಾದ ದಾಳಿ ಮತ್ತು ತಡೆಗಳನ್ನೂ ಒಳಗೊಂಡಂತೆ ತಿವಿಯಲು ಮತ್ತು ದೇಹದ ಚಲನೆಗಳಿಗೆ ಉತ್ತಮ ಅವಕಾಶ ಮಾಡಿಕೊಡುತ್ತದೆ.

ಸಿಲಂಬಮ್‌ನಲ್ಲಿ ಹಲವಾರು ಉಪ-ವಿಭಾಗಗಳಿವೆ - ನಾಗಮ್-16 (ನಾಗರಹಾವು-16), ಕಳ್ಳಪತ್ತು (ಕಳ್ಳರು ಹತ್ತು), ಕಿಡಮುಟ್ಟು (ಆಡಿನ ತಲೆಯ ಭಾಗ), ಕುರವಂಚಿ , ಕಲ್ಯಾಣವರಿಸೈ (ಕ್ವಾರ್ಟರ್‌ಸ್ಟಾಫ್‌ನಂತಹ), ತುಳುಕ್ಕನಮ್ ಮತ್ತು ಇತ್ಯಾದಿ. ಪ್ರತಿಯೊಂದು ಅನನ್ಯವಾಗಿದೆ ಹಾಗೂ ಹಿಡಿತ, ಭಂಗಿ, ಕಾಲ್ಚಳಕ, ದಾಳಿಯ ರೀತಿ, ಕೋಲಿನ ಉದ್ದ ಮತ್ತು ಕೋಲಿನ ಚಲನೆ ಇತ್ಯಾದಿಗಳಲ್ಲಿ ಪರಸ್ಪರ ಭಿನ್ನವಾಗಿರುತ್ತವೆ.[೧]

ಇತಿಹಾಸ[ಬದಲಾಯಿಸಿ]

ಸಿಲಂಬಮ್‌ ಬಹುಶಃ ಕುರಿಂಜಿ ಬೆಟ್ಟಗಳಲ್ಲಿ ಹುಟ್ಟಿಕೊಂಡಿರಬಹುದು. ಇದು ಈಗಿನ ದಕ್ಷಿಣ ಭಾರತದ ಕೇರಳದಲ್ಲಿದೆ. ಸುಮಾರು 5000 ವರ್ಷಗಳ ಹಿಂದೆ ಅದು ನಿಜವಾಗಿ ತಮಿಳು ಪ್ರದೇಶವಾಗಿತ್ತು. ಆ ಪ್ರದೇಶದ ನರಿಕುರಾವರ್, ಯುದ್ಧದಲ್ಲಿ ಮತ್ತು ಕಾಡು ಪ್ರಾಣಿಗಳ ವಿರುದ್ಧ ರಕ್ಷಿಸಿಕೊಳ್ಳಲು ಚಿಲಂಬಂಬೂ ಎನ್ನುವ ಬಾಗುಹಲಗೆ(ಸ್ಟೇವ್)ಗಳನ್ನು ಬಳಸುತ್ತಿದ್ದರೆಂದು ಹೇಳಲಾಗಿದೆ. ಅವರು ಹಿಂದು ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ಏಕ ಕೋಲಿನ-ಕಾದಾಟ ಪ್ರದರ್ಶನಗಳನ್ನೂ ನಿರ್ವಹಿಸುತ್ತಿದ್ದರು. ಈ ಕಲೆಯು ಸಂಗಮ್ ಅವಧಿಯಲ್ಲಿ ದಕ್ಷಿಣ ಭಾರತದ ಪ್ರಾಚೀನ ಚೋಳ, ಚೇರ ಮತ್ತು ಪಾಂಡ್ಯ ರಾಜರುಗಳಿಂದ ಪ್ರೋತ್ಸಾಹಿಸಲ್ಪಟ್ಟಿತು. ಟ್ರಾವನ್ಕೋರ್ ರಾಜರ ಮರಾವರ್ ಪಾಡ , ಸಿಲಂಬಮ್‌ಅನ್ನು ಶತ್ರುಗಳ ವಿರುದ್ಧದ ಯುದ್ಧದಲ್ಲಿ ಬಳಸಿದರು.

ತಮಿಳುನಾಡು ಮತ್ತು ಆಗ್ನೇಯ ಏಷ್ಯಾದ ನಡುವಿನ ಪುರಾತನ ಸಂಬಂಧವು ಸಿಲಂಬಮ್‌ಅನ್ನು ಮಲೈ ಪೆನಿನ್ಸುಲಕ್ಕೆ ತಂದಿತು. ಆ ಸಂದರ್ಭದಲ್ಲಿ ಸಿಲಂಬಮ್‌ ಪದವನ್ನು ಕಲೆ ಮತ್ತು ಆಯುಧಗಳೆರಡನ್ನೂ ಸೂಚಿಸಲು ಬಳಸಲಾಗುತ್ತಿತ್ತು. ಆಗ್ನೇಯ ಏಷ್ಯಾದ ಹೆಚ್ಚಿನ ಕದನ-ಕಲೆಗಳು ಸಿಲಂಬಮ್‌‌ನಿಂದ ಪ್ರಭಾವಕ್ಕೆ ಒಳಗಾದವು, ಉದಾಹರಣೆಗಾಗಿ, ಸಿಲಾಟ್ ಮತ್ತು ಕ್ರಾಬಿ ಕ್ರೆಬಾಂಗ್.

ತಮಿಳು ಸಂಗಮ್ ಸಾಹಿತ್ಯದಲ್ಲಿ ಸಿಲಪ್ಪಾಡಿಕ್ಕರಮ್ ಸೂಚನೆಯು 2ನೇ ಶತಮಾನದಷ್ಟು ಹಿಂದಿನದಾಗಿದೆ. ಇದು ವಿದೇಶಿ ವ್ಯಾಪಾರಿಗಳಿಗೆ ಸಿಲಂಬಮ್ ಕೋಲುಗಳು, ಖಡ್ಗಗಳು, ಮುತ್ತುಗಳು ಮತ್ತು ಯುದ್ಧ ಕವಚಗಳ ಮಾರಾಟವನ್ನು ಸೂಚಿಸುತ್ತದೆ. ಮಧುರೈ ನಗರದ ಪುರಾತನ ವ್ಯಾಪಾರ ಕೇಂದ್ರವು ಜಾಗತಿಕವಾಗಿ ಬಹುಪ್ರಸಿದ್ಧಿಯನ್ನು ಗಳಿಸಿತು ಹಾಗೂ ಅಲ್ಲಿಗೆ ರೋಮನ್ನರು, ಗ್ರೀಕರು ಮತ್ತು ಈಜಿಪ್ಟರು ಗುಂಪುಗುಂಪಾಗಿ ಬರುತ್ತಿದ್ದರೆಂದು ಹೇಳಲಾಗಿದೆ. ಅವರು ತಮಿಳು ಪ್ರದೇಶಗಳೊಂದಿಗೆ ನಿಯಮಿತವಾಗಿ ಸಮುದ್ರ ವ್ಯಾಪಾರವನ್ನು ಹೊಂದಿದ್ದರು. ಭಾರತದ ಕದನ-ಕಲೆಗಳಲ್ಲಿ ಬಳಸಲಾದ ಮೊದಲ ಆಯುಧವಾದ ಬಿದಿರಿನ ಕೋಲು ಪ್ರವಾಸಿಗರಲ್ಲಿ ಅಧಿಕ ಬೇಡಿಕೆಯನ್ನು ಪಡೆದಿತ್ತು.[೨][೩]

ರಾಜ ವೀರಪಾಂಡ್ಯ ಕಟ್ಟಾಬೊಮ್ಮನ್ (1760–1799)ನ ಸೈನಿಕರು ಮುಖ್ಯವಾಗಿ ಬ್ರಿಟಿಷ್ ಸೈನ್ಯದ ವಿರುದ್ಧದ ಯುದ್ಧದಲ್ಲಿ ಅವರ ಸಿಲಂಬಮ್‌ ಕೌಶಲಗಳನ್ನು ಅವಲಂಬಿಸಿದ್ದರು.[೨] ಬ್ರಿಟಿಷ್ ವಸಾಹತುಗಾರರು ಇತರ ಅನೇಕ ವ್ಯವಸ್ಥೆಗಳೊಂದಿಗೆ ಸಿಲಂಬಮ್‌ಅನ್ನೂ ನಿಷೇಧಿಸಿದ ನಂತರ ಭಾರತದ ಕದನ-ಕಲೆಗಳು ಅವನತಿಯತ್ತ ಸಾಗಿದವು. ಅವರು ಆಧುನಿಕ ಪಾಶ್ಚಿಮಾತ್ಯ ಮಿಲಿಟರಿ ತರಬೇತಿ ವಿಧಾನವನ್ನೂ ಬಳಕೆಗೆ ತಂದರು. ಅದು ಸಾಂಪ್ರದಾಯಿಕ ಆಯುಧ ಸಮುದಾಯಕ್ಕೆ ವಿರುದ್ಧವಾಗಿ ಫಿರಂಗಿ, ಬಂದೂಕಗಳು ಚಾಲ್ತಿಗೆ ಬರುವಂತೆ ಮಾಡಿತು. ಕೋಲು ಅದರ ಕದನದ-ಶ್ರೇಷ್ಠತೆಯನ್ನು ಕಳೆದುಕೊಂಡಿತು ಹಾಗೂ ಸಿಲಂಬಮ್‌ನ ಕೆಲವು ವ್ಯಾಪಕ ತಂತ್ರಗಳು ಮತ್ತು ಶೈಲಿಗಳು ನಾಶವಾದವು. ಆ ಸಂದರ್ಭದಲ್ಲಿ, ಸಿಲಂಬಮ್‌ ಭಾರತಕ್ಕಿಂತ ಆಗ್ನೇಯ ಏಷ್ಯಾದಲ್ಲಿ ಹೆಚ್ಚು ವ್ಯಾಪಕವಾಗಿ ಹರಡಿತು. ಇದನ್ನೂ ಇಂದೂ ಸಹ ಮಲೇಷಿಯಾದಲ್ಲಿ ಅಭ್ಯಾಸ ಮಾಡಲಾಗುತ್ತದೆ. ಉದಾ. ಸೆಲಾಂಗರ್‌ನಲ್ಲಿರುವ ಮಲೇಷಿಯನ್ ಸಿಲಂಬಮ್‌ ಸೊಸೈಟಿಯ ಸಂಸ್ಥಾಪಕನಾದ ಮಹಾಗುರು ಶ್ರೀ S. ಅರುಮುಗಮ್; ಅಥವಾ ಪೆನಾಂಗ್‌ನಲ್ಲಿರುವ ಪೆನ್ಸಿಲನ್ ಸಂಸ್ಥೆಯ ಸ್ಥಾಪಕನಾದ ಮಾಸ್ಟರ್ ಅನ್ಬನಾತಮ್.

ಆರೋಗ್ಯ ಮತ್ತು ವೈದ್ಯಕೀಯ ಪ್ರಯೋಜನಗಳು[ಬದಲಾಯಿಸಿ]

ವೈದ್ಯರು ಅಥವಾ ಅಂತಹ ಚಾಣಾಕ್ಷತೆ, ಆರ್ಮ್ ಮತ್ತು ಕಣ್ಣುಗಳು ಸಹಕಾರ, ಪಾದ ಮತ್ತು ಐಸ್ ಸಹಕಾರ, ದೇಹ ಸಮತೋಲನ, ಸ್ನಾಯುಗಳ ಪವರ್ ಸುಧಾರಿಸುವ ವೈದ್ಯಕೀಯ ಪ್ರಯೋಜನಗಳು ಗಳಿಸುವಿರಿ ಸಿಲಂಬಮ್ ಮತ್ತು ಕೈ ಸಿಲಂಬಮ್ '(ಕುಟ್ಟು ವರಿಸೈ) ಸಾಮಾನ್ಯ ತರಬೇತಿ, ಸ್ಪೀಡ್, ಸ್ನಾಯು ಕ್ಷಮತೆ, Circulo ಸಹಿಷ್ಣುತೆ ಸ್ನಾಯುಗಳ ಸಾಮರ್ಥ್ಯ ಮತ್ತು ಕಾರ್ಡಿಯೋ (ಹೃದಯ) ದಕ್ಷತೆಯನ್ನು ಹೆಚ್ಚಿಸುತ್ತದೆ.[೧]

ತಂತ್ರಗಳು[ಬದಲಾಯಿಸಿ]

ನೆಗೆಯುವ ತಂತ್ರಗಳು ಮತ್ತು ಕ್ರಮಗಳನ್ನು ಕಲಿಯುವುದಕ್ಕಿಂತ ಮೊದಲು ಆರಂಭದಲ್ಲಿ ಕಾಲ್ಚಳಕವನ್ನು (ಕಾಲಡಿ ) ಕಲಿಸಿಕೊಡಲಾಗುತ್ತದೆ. ಅವರು ಆನಂತರ ಕೋಲಿನ ಚಲನೆಯನ್ನು ನಿಲ್ಲಿಸದೆ ನೆಗೆತಗಳನ್ನು ಬದಲಾಯಿಸುವ ವಿಧಾನಗಳನ್ನು ಕಲಿಯುತ್ತಾರೆ. ಹದಿನಾರು ವಿಧಾನಗಳಿವೆ, ಅವುಗಳಲ್ಲಿ ನಾಲ್ಕು ಅತಿ ಮುಖ್ಯವಾದವು. ಕಾಲ್ಚಳಕ ಕ್ರಮಗಳು ಸಿಲಂಬಮ್‌ ಮತ್ತು ಕುಟ್ಟು ವರಿಸೈ (ಖಾಲಿ ಕೈಯ ಕಲೆ)ಯ ಪ್ರಮುಖ ಅಂಶಗಳಾಗಿವೆ. ಸಾಂಪ್ರದಾಯಿಕವಾಗಿ, ತರಬೇತಿದಾರರು ಮೊದಲು ದೀರ್ಘಕಾಲದವರೆಗೆ ಕಾಲಡಿಯನ್ನು ಕಲಿಸುತ್ತಾರೆ, ನಂತರ ಕುಟ್ಟು ವರಿಸೈಗೆ ಮುಂದುವರಿಯುತ್ತಾರೆ. ಕುಟ್ಟು ವರಿಸೈಯಲ್ಲಿನ ತರಬೇತಿಯು, ಭಾಗವಹಿಸುವವರಿಗೆ ಖಾಲಿ ಕೈಗಳನ್ನು ಬಳಸುವಾಗ ಸಿಲಂಬಮ್‌ ಕೋಲಿನ ಚಲನೆಗಳ ಬಗ್ಗೆ ನೆನೆಯುವಂತೆ ಮಾಡುತ್ತದೆ. ಆದ್ದರಿಂದ ಕಾಳಗದಾಳುಗಳಿಗೆ ಕೋಲಿನ ತರಬೇತಿಗಿಂತ ಮೊದಲು ಬರಿಯ ಕೈಗಳ ತರಬೇತಿಯನ್ನು ನೀಡಲಾಗುತ್ತದೆ.

ಕ್ರಮೇಣ ಕಾಳಗದಾಳುಗಳು ಕೋಲಿನ ಚಲನೆಗಳೊಂದಿಗೆ ಕೂಡಿಕೊಂಡು ಅದೇ ರೀತಿ ಚಲಿಸಲು ಕಾಲ್ಚಳಕವನ್ನು ಕಲಿಯುತ್ತಾರೆ. ತರಬೇತಿಯ ಅಂತಿಮ ಗುರಿಯೆಂದರೆ ಬಹು ಆಯುಧಗಳ ವಿರೋಧಿಗಳ ವಿರುದ್ಧ ಸೆಣಸಾಡುವುದು. ಸಿಲಂಬಮ್‌ ಮತ್ತು ಕುಟ್ಟು ವರಿಸೈಯಲ್ಲಿ, ಕಾಲಡಿಯು ಹೊಡೆತಗಳಿಗೆ ಸಾಮರ್ಥ್ಯವನ್ನು ಪಡೆಯುವುದರಲ್ಲಿ ಮುಖ್ಯವಾಗಿರುತ್ತದೆ. ಇದು ರಕ್ಷಣೆಯನ್ನು ಕಡಿಮೆ ಮಾಡದೆ ವಿರೋಧಿಯ ವ್ಯಾಪ್ತಿಯನ್ನು ಮುಟ್ಟಲು ಹೇಗೆ ಮುಂದುವರಿಯಬೇಕು ಮತ್ತು ಹಿಂದಕ್ಕೆ ಸರಿಯಬೇಕೆಂಬುದನ್ನು ಕಲಿಸಿಕೊಡುತ್ತದೆ, ಹೊಡೆಯುವುದು ಮತ್ತು ತಪ್ಪಿಸಿಕೊಳ್ಳುವುದರಲ್ಲಿ ನೆರವಾಗುತ್ತದೆ ಹಾಗೂ ದೇಹವನ್ನು ಬಲಯುತಗೊಳಿಸಿ, ಮಾರಕವಲ್ಲದ ಹೊಡೆತಗಳನ್ನು ತಡೆದುಕೊಂಡು ಕಾದಾಟವನ್ನು ಮುಂದುವರಿಸುವಂತೆ ಮಾಡುತ್ತದೆ. ಬಲವನ್ನು ಉಂಟುಮಾಡಲು ಸಂಪೂರ್ಣ ದೇಹವನ್ನು ಬಳಸಲಾಗುತ್ತದೆ.

ಕಲಿಯುವವನು ಅಂತಿಮ ಹಂತವನ್ನು ತಲುಪಿದಾಗ, ಕೋಲನ್ನು ಒಂದು ತುದಿಯಲ್ಲಿ ಚೂಪುಗೊಳಿಸಲಾಗುತ್ತದೆ. ನಿಜವಾದ ಸ್ಪರ್ಧೆಯಲ್ಲಿ ತುದಿಗಳಿಗೆ ವಿಷವನ್ನು ಲೇಪಿಸಬಹುದು. ತರಬೇತಿಯ ಅಂತಿಮ ಗುರಿಯೆಂದರೆ ಬಹು ಆಯುಧಗಳ ವಿರೋಧಿಗಳ ವಿರುದ್ಧ ಸೆಣಸಾಡುವುದು.

ಸಿಲಂಬಮ್‌ ಮುಖ್ಯ ಕೈಯು ಮೇಲ್ಭಾಗಕ್ಕಿರುವ ದುರ್ಬಲ ಕೈಯ ಹಿಂಭಾಗಕ್ಕೆ ಚಾಚಿಕೊಳ್ಳುವುದರೊಂದಿಗೆ ಬಲವಾದ ಹ್ಯಾಮರ್ ಹಿಡಿತಕ್ಕೆ ಹೆಚ್ಚು ಆದ್ಯತೆ ಕೊಡುತ್ತದೆ. ಪ್ರಬಲ ಕೈ ಕೋಲಿನ ಒಂದು ತುದಿಯಿಂದ ಕೈಯ ಅಗಲ ಮತ್ತು ಹೆಬ್ಬೆರಳಿನ ಉದ್ದದಷ್ಟು ದೂರದಲ್ಲಿ ಕೋಲನ್ನು ಭದ್ರವಾಗಿ ಹಿಡಿಯುತ್ತದೆ ಹಾಗೂ ದುರ್ಬಲ ಕೈಯು ಪ್ರಬಲ ಕೈಯಿಂದ ಹೆಬ್ಬೆರಳಿನ ಉದ್ದದಷ್ಟು ದೂರದಲ್ಲಿರುತ್ತದೆ. ದುರ್ಬಲ ಕೈ ಕೋಲನ್ನು ಮುಟ್ಟುವುದು ಮತ್ತು ಅದರ ಚಲನೆಯನ್ನು ನಿರ್ದೇಶಿಸುವುದು ಮಾತ್ರ. ಸಿಲಂಬಮ್‌ ಬಹುಮುಖ ಸಾಮರ್ಥ್ಯಕ್ಕೆ ಹೆಚ್ಚು ಒತ್ತು ನೀಡುತ್ತದೆ. ಹ್ಯಾಮರ್ ಹಿಡಿತವನ್ನು ಹೊರತುಪಡಿಸಿ ಕೋಲನ್ನು ಹಿಡಿಯುವುದರಲ್ಲಿ ಇತರ ಎರಡು ವಿಧಾನಗಳಿವೆ. ಕೋಲನ್ನು ಹಿಡಿಯುವ ವಿಧಾನದಿಂದಾಗಿ ಮತ್ತು ಅದು ಹೆಚ್ಚು ತೆಳ್ಳಗಿರುವುದರಿಂದ, ತೊಡೆಸಂದುಗಳಿಗೆ ಹೊಡೆತಗಳು ಬೀಳುವ ಸಂಭವವು ಹೆಚ್ಚಾಗಿರುತ್ತದೆ ಮತ್ತು ಅದನ್ನು ತಡೆಯುವುದು ಕಷ್ಟವಾಗಿರುತ್ತದೆ. ಹ್ಯಾಮರ್ ಹಿಡಿತವನ್ನು ಹೊರತು ಪಡಿಸಿ, ಸಿಲಬಂಮ್ ಪೋಕರ್ ಹಿಡಿತ ಮತ್ತು ಐಸ್-ಪಿಕ್ ಹಿಡಿತವನ್ನೂ ಬಳಸುತ್ತದೆ. ಕೆಲವು ತಡೆ ಮತ್ತು ಹೊಡೆತಗಳನ್ನು ಪೋಕರ್ ಹಿಡಿತವನ್ನು ಬಳಸಿಕೊಂಡು ನೀಡಲಾಗುತ್ತದೆ. ಐಸ್-ಪಿಕ್ ಹಿಡಿತವನ್ನು ಒಂದು ಕೈಯ ದಾಳಿಯಲ್ಲಿ ಬಳಸಲಾಗುತ್ತದೆ. ಕೋಲನ್ನು ನಡೆಯುವಾಗ-ಬಳಸುವ-ಕೋಲಿನಂತೆ ಹಿಡಿಯಲಾಗುತ್ತದೆ ಮತ್ತು ಮಣಿಕಟ್ಟನ್ನು ಬಳಸಿಕೊಂಡು ಕೈ ಅದನ್ನು ತಿರುಗಿಸುತ್ತದೆ.

ಕಾದಾಟದಲ್ಲಿ, ಕಾದಾಳಿಗಳು ಕೋಲನ್ನು ಅವರ ದೇಹದ ಮುಂಭಾಗದಲ್ಲಿ, ಕೈಗಳನ್ನು ಮುಕ್ಕಾಲು ಭಾಗದಷ್ಟು ಮುಂದಕ್ಕೆ ಚಾಚಿಕೊಂಡು ಹಿಡಿದುಕೊಂಡಿರುತ್ತಾರೆ. ಆ ಸ್ಥಾನದಿಂದ ಅವರು ಮಣಿಕಟ್ಟನ್ನು ಮಾತ್ರ ಚಲಿಸಿ ಎಲ್ಲಾ ರೀತಿಯ ದಾಳಿಗಳನ್ನು ಮಾಡಬಹುದು. ನಿಜವಾಗಿ, ಹೆಚ್ಚಿನ ಸಿಲಂಬಮ್‌ ಚಲನೆಗಳನ್ನು ಮಣಿಕಟ್ಟಿನ ಚಲನೆಯಿಂದ ಮಾಡಲಾಗುತ್ತದೆ. ಆ ಮೂಲಕ ಇದನ್ನು ಶೈಲಿಯ ಪ್ರಮುಖ ಅಂಶವಾಗಿ ಮಾಡುತ್ತದೆ. ಹೊಡೆತವು ಕಾಲಡಿ (ಕಾಲ್ಚಳಕ)ಯ ಮೂಲಕ ಮಣಿಕಟ್ಟಿನಿಂದ ವೇಗವನ್ನು ಮತ್ತು ದೇಹದಿಂದ ಬಲವನ್ನು ಪಡೆಯುತ್ತದೆ. ಕೋಲನ್ನು ಮುಂಭಾಗದಲ್ಲಿ ಹಿಡಿಯುವುದರಿಂದ, ಹೊಡೆತಗಳು ಟೆಲಿಗ್ರಾಫಿಕ್ ಆಗಿರುತ್ತವೆ, ಅಂದರೆ ಕಾಳಗದಾಳುಗಳು ಅವರ ಉದ್ದೇಶಗಳನ್ನು ವಿರೋಧಿಯಿಂದ ಮುಚ್ಚಿಡುವುದಿಲ್ಲ. ಅವರು ಎದುರಾಳಿಯು ತಡೆಯಲಾರದಷ್ಟು ಸಂಪೂರ್ಣ ವೇಗದಲ್ಲಿ ನಿರಂತರವಾಗಿ ಸತತ ಹೊಡೆತಗಳೊಂದಿಗೆ ದಾಳಿ ಮಾಡುತ್ತಾರೆ. ಸಿಲಂಬಮ್‌ನಲ್ಲಿ, ಒಂದು ಹೊಡೆತವು ಆರಂಭಗೊಂಡು, ಮತ್ತೊಂದಕ್ಕೆ ನೆರವು ನೀಡುತ್ತದೆ. ಒಂದು ದಾಳಿಯನ್ನು ಮತ್ತೊಂದಾಗಿ ತಪ್ಪಾಗಿ ತೋರಿಸುವ ಮೂಲಕ ಮೋಸವನ್ನೂ ಮಾಡಲಾಗುತ್ತದೆ.

ಹೊಡೆತಗಳೊಂದಿಗೆ ಸಿಲಂಬಮ್‌ ಪೂಟ್ಟು ಎಂದು ಕರೆಯುವ ವಿವಿಧ ರೀತಿಯ ಪಟ್ಟುಗಳನ್ನು ಒಳಗೊಂಡಿದೆ. ಕಾಳಗದಾಳುಗಳು ಕೋಲನ್ನು ಹಿಡಿದು ಪ್ರಯೋಗಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಅವರು ಹಿಡಿದೆಳೆಯಲ್ಪಟ್ಟು, ಕಾದಾಟದಲ್ಲಿ ಸೋಲನ್ನು ಅನುಭವಿಸುತ್ತಾರೆ. ತಡೆಗಳನ್ನು ವಿರೋಧಿಯನ್ನು ನಿಷ್ಕ್ರಿಯಗೊಳಿಸಲು ಅಥವಾ ಅವರ ಆಯುಧವನ್ನು ಹಿಡಿಯಲು ಬಳಸಲಾಗುತ್ತದೆ. ತಿರಪ್ಪು ಎನ್ನುವ ತಂತ್ರಗಳನ್ನು ಪಟ್ಟುಗಳನ್ನು ಎದುರಿಸಲು ಬಳಸಲಾಗುತ್ತದೆ. ಆದರೆ ಇವನ್ನು ಪಟ್ಟಿನಲ್ಲಿ ಸಿಗುವುದಕ್ಕಿಂತ ಮುಂಚೆಯೇ ಪ್ರಯೋಗಿಸಬೇಕು. ಸಿಲಂಬಮ್‌ನಲ್ಲಿ ದಾಳಿಯಿಂದ ತಪ್ಪಿಸಿಕೊಳ್ಳುವುದರಲ್ಲೂ ಅನೇಕ ವಿಧಾನಗಳಿವೆ - ತಡೆಯುವುದು, ಚತುರತೆಯಿಂದ ತಪ್ಪಿಸಿಕೊಳ್ಳುವುದು, ತಾಳಿಕೊಳ್ಳುವುದು, ಸುತ್ತಿಕೊಂಡು ತಪ್ಪಿಸಿಕೊಳ್ಳುವುದು, ಬಡಿಯವುದು (ಕೋಲಿನಿಂದ), ಕೊಲ್ಲುವುತಲ್ (ಒಂದೇ ಬಾರಿಗೆ ದಾಳಿ ಮಾಡುವುದು ಮತ್ತು ತಡೆಯುವುದು) ಹಾಗೂ ಕುಳಿತುಕೊಳ್ಳುವುದು ಅಥವಾ ಮಂಡಿಯೂರುವುದು, ಹೊರಕ್ಕೆ ಸರಿಯುವುದು, ಎತ್ತರಕ್ಕೆ ಹಾರುವುದು ಮೊದಲಾದ ನುಣುಚಿಕೊಳ್ಳುವ ಚಲನೆಗಳು.

ಹಲವು ಕಾಳಗದಾಳುಗಳ ವಿರುದ್ಧದ ಕಾಳಗದಲ್ಲಿ ಸಿಲಂಬಮ್‌ ನಿಪುಣರು ಕೋಲುಗಳನ್ನು ಏಕ ಮಂದಿಯ-ಕಾದಾಟದಲ್ಲಿ ಹಿಡಿಯುವಂತೆ ಹಿಡಿದುಕೊಳ್ಳುವುದಿಲ್ಲ. ಬದಲಿಗೆ ಅವರು ಪ್ರಾಣಿಗಳ ಹೊಡೆತದ ಭಂಗಿಯನ್ನು ಬಳಸುತ್ತಾರೆ. ಅದು ವಿರೋಧಿಗೆ ಮುಂದಿನ ದಾಳಿಯನ್ನು ನಿರೀಕ್ಷಿಸಲು ಕಷ್ಟಗೊಳಿಸುತ್ತದೆ.

ಸಿಲಂಬಮ್‌ ಶೈಲಿಯ ಚತುರನು ವರ್ಮ ಕಲೈಯಲ್ಲಿ ಪಳಗಿರುತ್ತಾನೆ ಹಾಗೂ ಕಡಿಮೆ ಶಕ್ತಿಯನ್ನು ಬಳಸಿಕೊಂಡು ಹಾನಿಕಾರಿ ಅಥವಾ ಶಕ್ತಿಗುಂದಿಸುವ ಪರಿಣಾಮಗಳನ್ನು ಉಂಟುಮಾಡಲು ದೇಹದ ಮೇಲೆ ಎಲ್ಲಿ ಹೊಡೆಯಬೇಕೆಂಬುದನ್ನು ತಿಳಿದಿರುತ್ತಾನೆ. ಏಕ-ವ್ಯಕ್ತಿಗಳ ಕಾಳಗದಲ್ಲಿ, ಚತುರನು ಕಾದಾಟದ ಸಂದರ್ಭದಲ್ಲಿ ಅನೇಕ ಬಾರಿ ಅವನ ಕೋಲನ್ನು ವಿರೋಧಿಯ ಮಣಿಕಟ್ಟಿಗೆ ಸರಿಸುತ್ತಿರುತ್ತಾನೆ. ಇದನ್ನು ವಿರೋಧಿಯು ಕಾಳಗದ ತೀವ್ರತೆಯಲ್ಲಿ ಗಮನಿಸುವುದಿಲ್ಲ. ಆದರೆ ಒಮ್ಮೆಗೆ ಮಣಿಕಟ್ಟಿನಲ್ಲಿ ತಕ್ಷಣದ ನೋವು ಕಾಣಿಸಿಕೊಂಡಾಗ ವಿರೋಧಿಯು ಯಾವುದು ಹೊಡೆದಿದೆಯೆಂದು ತಿಳಿಯದೆ ತನ್ನಷ್ಟಕ್ಕೇ ಕೋಲನ್ನು ಬಿಸಾಡಿ ಬಿಡುತ್ತಾನೆ. ಇಬ್ಬರು ನಿಪುಣರು ಪರಸ್ಪರ ಕಾದಾಡುವಾಗ, ಒಬ್ಬರು ಮತ್ತೊಬ್ಬರ ಕಾಲಿನ ಹೆಬ್ಬೆರಳಿಗೆ ಹೊಡೆತ ನೀಡುವ ಸವಾಲನ್ನು ಹೊಂದಿರುತ್ತಾರೆ. ಕಾಲಿನ ಹೆಬ್ಬೆರಳಿಗೆ ಹೊಡೆಯುವುದು ಕಾಳಗದಾಳಿಗೆ ಶಕ್ತಿಗುಂದಿಸುವ ಪರಿಣಾಮವನ್ನು ಉಂಟುಮಾಡಿ, ಕಾದಾಟವು ಕೊನೆಗೊಳ್ಳುವಂತೆ ಮಾಡುತ್ತದೆ. ಇದನ್ನು ಸೊಲ್ಲಿ ಅದಿತಾಲ್ ಎಂದು ಕರೆಯಲಾಗುತ್ತದೆ, ಅಂದರೆ "ಸವಾಲೊಡ್ಡುವುದು ಮತ್ತು ಯಶಸ್ವಿಯಾಗಿ ಹೊಡೆಯುವುದು".

ಇವನ್ನೂ ಗಮನಿಸಿ[ಬದಲಾಯಿಸಿ]

 • ದ್ರಾವಿಡ ಕದನ-ಕಲೆಗಳು
 • ಭಾರತದ ಕದನ-ಕಲೆಗಳು
 • ಕಲರಿಪಾಯಟ್
 • ಕುಟ್ಟು ವರಿಸೈ
 • ವರ್ಮ ಕಲೈ
 • ಕ್ಬಾಚ್ಕನ್ ಬೋರಾನ್
 • ಕ್ರಾಬಿ ಕ್ರೆಬಾಂಗ್
 • ಸಿಲಾಟ್

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ Guruji Murugan, Chillayah (20 October 2012). "Silambam Fencing techniques and variation". Silambam.
 2. ೨.೦ ೨.೧ Raj, J. David Manuel (1977). The Origin and the Historical Developlment of Silambam Fencing: An Ancient Self-Defence Sport of India. Oregon: College of Health, Physical Education and Recreation, Univ. of Oregon. pp. 44, 50, & 83.
 3. Sports Authority of India (1987). Indigenous Games and Martial Arts of India. New Delhi: Sports Authority of India. pp. 91 & 94.

ಬಾಹ್ಯ ಕೊಂಡಿಗಳು[ಬದಲಾಯಿಸಿ]