ಸಿಂಧೂ ಗಂಗಾ ಬಯಲು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸಿಂಧೂ ಗಾಂಗಾ ಬಯಲಿನ ನಕಾಶೆ

ಸಿಂಧೂ ಗಂಗಾ ಬಯಲು ಉತ್ತರ ಭಾರತದ ವಿಶಾಲ ಮತ್ತು ಫಲವತ್ತಾದ ಬಯಲು ಪ್ರದೇಶವಾಗಿದೆ. ಸಿಂಧೂ ಗಂಗಾ ಬಯಲು ಭಾರತದ ಉತ್ತರ ಮತ್ತು ಪೂರ್ವ ಭಾಗಗಳ ಬಹುಪಾಲು ಪ್ರದೇಶವನ್ನು ಆವರಿಸಿದೆ. ಜೊತೆಗೆ ಸಂಪೂರ್ಣ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಿಬಿಡ ಜನವಸತಿಯುಳ್ಳ ಭಾಗಗಳನ್ನು ಸಹ ಒಳಗೊಂಡಿದೆ. ಸಿಂಧೂ ನದಿ ಮತ್ತು ಗಂಗಾ ನದಿ ಮತ್ತವುಗಳ ದೊಡ್ಡ ಸಂಖ್ಯೆಯ ಉಪನದಿಗಳು ಈ ವಿಶಾಲ ಪ್ರದೇಶಕ್ಕೆ ನೀರುಣಿಸುವುದರಿಂದ ಈ ಹೆಸರಿನಿಂದ ಕರೆಯಲಾಗುತ್ತದೆ.

ಸಿಂಧೂ ಗಂಗಾ ಬಯಲಿನ ಉತ್ತರಕ್ಕೆ ಹಿಮಾಲಯ ಪರ್ವತಸಾಲಿದೆ. ಈ ಪರ್ವತಗಳು ಇಲ್ಲಿನ ಎಲ್ಲಾ ನದಿಗಳಿಗೆ ಮೂಲ ಮತ್ತು ಬಯಲಿನಲ್ಲಿ ಸಂಚಯವಾಗಿರುವ ಫಲವತ್ತಾದ ಮೆಕ್ಕಲುಮಣ್ಣಿಗೆ ಆಕರವಾಗಿವೆ. ಸಿಂಧೂ ಗಂಗಾ ಬಯಲಿನ ದಕ್ಷಿಣದಂಚಿನಲ್ಲಿ ವಿಂಧ್ಯ ಪರ್ವತಗಳು ಮತ್ತು ಸಾತ್ಪುರ ಪರ್ವತಗಳು ಹಾಗೂ ಛೋಟಾ ನಾಗ್ಪುರ್ ಪೀಠಭೂಮಿಗಳಿವೆ. ಬಯಲಿನ ಪಶ್ಚಿಮಕ್ಕೆ ಇರಾನ್ ಪೀಠಭೂಮಿಯಿರುತ್ತದೆ. ಸಿಂಧೂ ಗಂಗಾ ಬಯಲು ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ. ಸುಮಾರು ೯೦ ಕೋಟಿ ಜನರು ಇಲ್ಲಿ ವಾಸವಾಗಿದ್ದಾರೆ. ಇದು ಜಗತ್ತಿನ ಒಟ್ಟು ಜನಸಂಖ್ಯೆಯ ಏಳನೆಯ ಒಂದು ಭಾಗಕ್ಕಿಂತ ಹೆಚ್ಚು.

ಸಿಂಧೂ ಗಂಗಾ ಬಯಲು ಪ್ರದೇಶದ ಕೆಲ ಮುಖ್ಯ ನಗರಗಳೆಂದರೆ ಅಹಮದಾಬಾದ್, ಲೂಧಿಯಾನಾ, ದೆಹಲಿ, ಕಾನ್ಪುರ, ಪಾಟ್ನಾ, ಕೋಲ್ಕಾಟಾ, ಢಾಕಾ, ಲಾಹೋರ್‍‍, ಕರಾಚಿ ಮತ್ತು ರಾವಲ್ಪಿಂಡಿ.