ಸಾಧನ ಸರ್ಗಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಧನ ಸರ್ಗಮ್
Sadhana Sargam.jpg
ಹಿನ್ನೆಲೆ ಮಾಹಿತಿ
ಜನ್ಮನಾಮಸಾಧನಾ ಘನೇಕರ್[೧]
ಜನನ (1969-03-07) ೭ ಮಾರ್ಚ್ ೧೯೬೯ (ವಯಸ್ಸು ೫೪)[೨]
ಡಬೊಲ್, ಮಹಾರಾಷ್ಟ್ರ, ಭಾರತ
ಸಂಗೀತ ಶೈಲಿPlayback singing, Indian classical, ಭಕ್ತಿಗೀತೆಗಳು,ಪಾಪ್, ಗಝಲ್, ಪ್ರಾದೇಶಿಕ ಚಲನಚಿತ್ರ ಸಂಗೀತ, ಜಾನಪದ ಮತ್ತು ಶಾಸ್ತ್ರೀಯ ಸ೦ಗೀತ ಗಾಯಕಿ
ವೃತ್ತಿಗಾಯಕಿ
ವಾದ್ಯಗಳುVocalist
ಸಕ್ರಿಯ ವರ್ಷಗಳು1982-ಪ್ರಸ್ತುತ

ಸಾಧನಾ ಸರ್ಗಮ್ (ಜನನ ಮಾರ್ಚ್ 7, 1969) ಭಾರತೀಯ  ಹಿನ್ನೆಲೆ ಗಾಯಕಿ . ಚಲನಚಿತ್ರ ಸಂಗೀತದ ಜೊತೆಗೆ, ಅವರು ಭಕ್ತಿಗೀತೆಗಳು, ಶಾಸ್ತ್ರೀಯ ಸಂಗೀತ, ಗಝಲ್, ಪ್ರಾದೇಶಿಕ ಚಿತ್ರಗೀತೆಗಳು ಮತ್ತು ಪಾಪ್ ಆಲ್ಬಮ್ಗಳನ್ನು ಹಾಡಿದ್ದಾರೆ . ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ , ದಕ್ಷಿಣ ಭಾರತ ಸಿನೆಮಾ ಫಿಲ್ಮ್ಫೇರ್ ಪ್ರಶಸ್ತಿ, ಐದು  ಬಾರಿ ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ನಾಲ್ಕು ಬಾರಿ ಗುಜರಾತ್ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದ್ದಾರೆ. 

ಸರ್ಗಮ್ ಅವರಿಗೆ ಮಧ್ಯ ಪ್ರದೇಶದ ಸರ್ಕಾರದಿಂದ 'ಲತಾ ಮಂಗೇಶ್ಕರ್ ಪ್ರಶಸ್ತಿ' ನೀಡಲಾಗಿದೆ.

ಚಲನಚಿತ್ರಗಳು, ಕಿರುತೆರೆ ಧಾರಾವಾಹಿಗಳು, ಭಕ್ತಿಗೀತೆಗಳು ಮತ್ತು ಪಾಪ್ ಸಂಗೀತದ ಅಲ್ಬಮ್ ಎಲ್ಲಾ ಸೇರಿ ಸರ್ಗಂ ಅವರು ಸುಮಾರು 34 ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ.   ದಕ್ಷಿಣ ಭಾರತೀಯರಲ್ಲದಿದ್ದರು  ದಕ್ಷಿಣ ಭಾರತ ಸಿನೆಮಾ ಗೀತೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಹೆಗ್ಗಳಿಕೆ ಇವರದು. ಅವರು  ಹಿಂದೂಸ್ಥಾನಿ ಶಾಸ್ತ್ರೀಯ ಸ೦ಗೀತ ಗಾಯಕಿ ಕೂಡ. 1980 ರ ದಶಕದ ಆರಂಭದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು, ಹಿಂದಿ, ತಮಿಳು, ಮರಾಠಿ, ಓಡಿಯಾ, ತೆಲುಗು, ಬೆಂಗಾಲಿ, ಕನ್ನಡ, ಮಲಯಾಳಂ, ಗುಜರಾತಿ, ನೇಪಾಳಿ  ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. 


ಆರಂಭಿಕ ಜೀವನ[ಬದಲಾಯಿಸಿ]

ಸರ್ಗಾಮ್ ಅವರು ಮಹಾರಾಷ್ಟ್ರರತ್ನಾಗಿರಿ ಜಿಲ್ಲೆಯ ಡಬೊಲ್ ಎ೦ಬಲ್ಲಿ   ಸಂಗೀತಗಾರರ ಕುಟುಂಬಕ್ಕೆ ಜನಿಸಿದರು. 

ಅಂಕಿಅಂಶಗಳು[ಬದಲಾಯಿಸಿ]

ಸರ್ಗಮ್ ಅವರು 1938  ಹಿಂದಿ ಗೀತೆಗಳು ಮತ್ತು 1111 ತಮಿಳು  , 2500 ಬೆಂಗಾಲಿ ಮತ್ತು ಮರಾಠಿ ಭಾಷೆಯಲ್ಲಿ 3467 ಹಾಡುಗಳನ್ನು ಹಾಡಿದ್ದಾರೆ. ಅವರು 34 ಭಾರತೀಯ ಭಾಷೆಗಳಲ್ಲಿ 15,000 ಗೀತೆಗಳನ್ನು ಹಾಡಿದ್ದಾರೆ.


ಕನ್ನಡ ಸಿನಿಮಾದಲ್ಲಿ ಜನಪ್ರಿಯತೆ[ಬದಲಾಯಿಸಿ]

ಕನ್ನಡದ 'ಸವಾರಿ' ಚಿತ್ರದಲ್ಲಿ 'ಮರಳಿ ಮರೆಯಾಗಿ' ಹಾಡು ಇವರಿಗೆ ಜನಪ್ರಿಯತೆ ತ೦ದುಕೊಟ್ಟಿತು.

ಯುನಿನಾರ್ ಸೌತ್ ರೇಡಿಯೋ ಮಿರ್ಚಿ ಪ್ರಶಸ್ತಿಗಳು

  • 2009 - ಅತ್ಯುತ್ತಮ ಹಿನ್ನೆಲೆ ಗಾಯಕಿ  - "ಮರಳಿ ಮರೆಯಾಗಿ" (ಸವಾರಿ)
  • 2009 - ವರ್ಷದ ಹಾಡು - "ಮರಳಿ ಮರೆಯಾಗಿ" (ಸವಾರಿ;  ಸ೦ಗೀತ  ಸಂಯೋಜಕ ಮನಿಕಾ೦ತ್ ಕದ್ರಿ ಅವರೊಂದಿಗೆ)
  • 2009 - ಕನ್ನಡದ ಅತ್ಯುತ್ತಮ ಕನ್ನಡ ಕೇಳುಗರ ಆಯ್ಕೆ - "ಮರಳಿ ಮರೆಯಾಗಿ" (ಸವಾರಿ)

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Singer Sadhana Sargam | About Sadhana Sargam – List of Sadhana Sargam Hindi Movies Songs and Lyrics". Hindilyrix.com. Archived from the original on 13 April 2010. Retrieved 10 August 2011.
  2. PTI (18 November 2015). "Sadhana Sargam prefers melodious songs". India Today. Retrieved 2016-06-27.