ಸವರ್ಣ ದೀರ್ಘ ಸಂಧಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸವರ್ಣ ದೀರ್ಘ ಸಂಧಿ- ಇದು ವೀರೇಂದ್ರ ಶೆಟ್ಟಿ ಬರೆದು ನಿರ್ದೇಶಿಸಿದ 2019 ರ ಕನ್ನಡ ಭಾಷೆಯ ಆಕ್ಷನ್ ಹಾಸ್ಯ-ನಾಟಕವಾಗಿದೆ. 'ಸವರ್ಣ ದೀರ್ಘ ಸಂಧಿ' ಎಂಬ ಶೀರ್ಷಿಕೆಯು ಕನ್ನಡ ವ್ಯಾಕರಣದಲ್ಲಿ ಒಂದು ಪದವಾಗಿದೆ. ವೀರೇಂದ್ರ ಶೆಟ್ಟಿ ಮತ್ತು ನಟಿ ಕೃಷ್ಣ ಈ ಚಿತ್ರದಲ್ಲಿ ನಟಿಸಿದ್ದಾರೆ. [೧] ಮನೋಮೂರ್ತಿ ಸಂಗೀತ ಸಂಯೋಜಿಸಿದ್ದು, ಲುಶಿಗ್ಟನ್ ಥಾಮಸ್, ಹೇಮಂತ್ ಕುಮಾರ್, ಮನೋಮೂರ್ತಿ, ವೀರೇಂದ್ರ ಶೆಟ್ಟಿ ನಿರ್ಮಿಸಿದ್ದಾರೆ. [೨]

ಪಾತ್ರವರ್ಗ[ಬದಲಾಯಿಸಿ]

  • ವೀರೇಂದ್ರ ಶೆಟ್ಟಿ
  • ಕೃಷ್ಣಾ
  • ಸುರೇಂದ್ರ ಬಂಟ್ವಾಳ್
  • ಪದ್ಮಜಾ ರಾವ್
  • ರವಿ ಭಟ್
  • ಕೃಷ್ಣ ನಾಡಿಗ್
  • ರವಿ ಮಂಡ್ಯ
  • ಅಜಿತ್ ಹನುಮಕ್ಕನವರ್
  • ನಿರಂಜನ ದೇಶಪಾಂಡೆ
  • ಮಧು ಭಾರದ್ವಾಜ್

ಕಥಾವಸ್ತು[ಬದಲಾಯಿಸಿ]

ಈ ಗ್ಯಾಂಗ್‌ಸ್ಟರ್ ಕಾಮಿಡಿಯು ಒಬ್ಬ ಮುದ್ದಣ್ಣನ ಸುತ್ತ ಸುತ್ತುತ್ತದೆ - ಅವನು ಒಬ್ಬ ಅಶಿಕ್ಷಿತ ದರೋಡೆಕೋರ, ಅವನಿಗೆ ವ್ಯಾಕರಣದ ಬಗ್ಗೆ ಅತಿಯಾದ ಒಲವಿದೆ. ಅವನು ಮತ್ತು ಅವನ ಗ್ಯಾಂಗ್ ಸಮಾಜಕ್ಕೆ ಸಹಾಯ ಮಾಡಲು ಅಪರಾಧಗಳನ್ನು ಮಾಡುತ್ತಾರೆ, ಆದರೆ ಅದೇ ಸಮಯದಲ್ಲಿ ಪೊಲೀಸರನ್ನು ಜಾಣತನದಲ್ಲಿ ಮೀರಿಸಿ ಎಂದಿಗೂ ಸಿಕ್ಕಿಬೀಳುವುದಿಲ್ಲ. ಆದರೆ ಒಂದು ದಿನ ಮುದ್ದಣ್ಣನಿಗೆ ಅಮೃತವರ್ಷಿಣಿ ಎಂಬ ಸುಂದರ ಗಾಯಕಿಯ ಮೇಲೆ ಒಲವಾಗುತ್ತದೆ. ಚಲನಚಿತ್ರವು ಅತ್ಯಂತ ವಿನೋದ, ಹಾಸ್ಯ, ಅನಿರೀಕ್ಷಿತ ತಿರುವುಗಳು ಮತ್ತು ಸಂಗೀತ ನಾಟಕದಿಂದ ಕೂಡಿದೆ. ಇದು ತನ್ನ ವೀಕ್ಷಕರನ್ನು ನಕ್ಕು ನಗಿಸುವ ಎಲ್ಲಾ ಅಂಶಗಳನ್ನು ಹೊಂದಿದೆ. [೩]

ನಿರ್ಮಾಣ[ಬದಲಾಯಿಸಿ]

ಚಿತ್ರವು "ರೌಡಿಸಂ ಕಾಮಿಡಿ" ಪ್ರಕಾರವಾಗಿದೆ. ಆನೇಕಲ್ಲು, ಮೂಡಿಗೆರೆ, ತುಮಕೂರು, ದೇವರಾಯನದುರ್ಗ, ಜಿಗಣಿ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. [೪] ಮನೋಮೂರ್ತಿ ಸಂಗೀತ ನೀಡಿದ್ದಾರೆ. ಶಂಕರ್ ಮಹದೇವನ್, ಶ್ರೇಯಾ ಘೋಷಾಲ್ ಮುಂತಾದವರು ಹಾಡುಗಳನ್ನು ಹಾಡಿದ್ದಾರೆ. ಮಲಯಾಳಂನ ' ಉಸ್ತಾದ್ ಹೋಟೆಲ್ ' ಖ್ಯಾತಿಯ ಲೋಗನಾಥನ್ ಶ್ರೀನಿವಾಸನ್ ಛಾಯಾಗ್ರಹಣ ಮಾಡಿದ್ದಾರೆ. [೫]

ಹಿನ್ನೆಲೆಸಂಗೀತ[ಬದಲಾಯಿಸಿ]

ಸಂ.ಹಾಡುಸಾಹಿತ್ಯಗಾಯಕ(ರು)ಸಮಯ
1."ಕೊಳಲಾದೆನಾ"ವೀರೇಂದ್ರ ಶೆಟ್ಟಿಶ್ರೇಯಾ ಘೋಷಾಲ್3:50
2."ಮಧು ಮಧುರ"ವೀರೇಂದ್ರ ಶೆಟ್ಟಿಶ್ರೇಯಾ ಘೋಷಾಲ್3:52
3."SDS ಕ್ಲಬ್ ಮಿಕ್ಸ್"ವೀರೇಂದ್ರ ಶೆಟ್ಟಿಶಂಕರ್ ಮಹಾದೇವನ್3:17
4."ದೂರದ ಈ ಯಾನ"ಅರ್ಜುನ್ ಲೂಯಿಸ್ಶಶಿಕಲಾ ಸುನಿಲ್3:25
5."ನೀ ನುಡಿಸೋ ಬೆರಳು"ಪುನೀತ್ ಅಪ್ಪುವಿದಿಶಾ ವಿಶ್ವಾಸ3:38
6."ಎಡೆ ವೀಣೆ"ವೀರೇಂದ್ರ ಶೆಟ್ಟಿಶಶಿಕಲಾ ಸುನಿಲ್1:22
7."ನೆನಪು ಹಸಿರಿದೆ"ವೀರೇಂದ್ರ ಶೆಟ್ಟಿಶಶಿಕಲಾ ಸುನಿಲ್1:47
8."ಸವರ್ಣ ದೀರ್ಘ ಸಂಧಿ"ವೀರೇಂದ್ರ ಶೆಟ್ಟಿಶಂಕರ್ ಮಹಾದೇವನ್3:12

ಉಲ್ಲೇಖಗಳು[ಬದಲಾಯಿಸಿ]

  1. "'Savarnadeergha Sandhi' to hit screens soon". Deccan Herald (in ಇಂಗ್ಲಿಷ್). 2 August 2019. Retrieved 5 December 2019.
  2. "Savarna Deergha Sandhi' is a laughter riot". Happy Amoeba (in ಇಂಗ್ಲಿಷ್). 18 October 2019. Archived from the original on 5 ಡಿಸೆಂಬರ್ 2019. Retrieved 5 December 2019.
  3. "Movie Tickets, Plays, Sports, Music Concerts, Theater & Reviews BookMyShow".
  4. "Mangaluru: 'Savarna Dheerga Sandhi' to release on Oct 18". www.daijiworld.com. Retrieved 5 December 2019.
  5. "'Savarnadeergha Sandhi' to hit screens soon". Deccan Herald (in ಇಂಗ್ಲಿಷ್). 2 August 2019. Retrieved 5 December 2019.

ಬಾಹ್ಯ ಕೊಂಡಿಗಳು[ಬದಲಾಯಿಸಿ]