ವಿಷಯಕ್ಕೆ ಹೋಗು

ವೈನೋದಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಧುನಿಕ ಅರ್ಥದಲ್ಲಿ, ವೈನೋದಿಕ (ಕಾಮೆಡಿ) ನಗೆಯನ್ನು ಪ್ರೇರೇಪಿಸುವ ಮೂಲಕ ಹಾಸ್ಯಮಯ ಅಥವಾ ಮನರಂಜಿಸುವ ಉದ್ದೇಶ ಹೊಂದಿರುವ ಯಾವುದೇ ಸಂವಾದ ಅಥವಾ ಕೃತಿಯನ್ನು ಸೂಚಿಸುವ ಕಾಲ್ಪನಿಕ ನಿರೂಪಣೆಯ ಒಂದು ಪ್ರಕಾರವಾಗಿದೆ, ವಿಶೇಷವಾಗಿ ನಾಟಕ ಕಲೆ, ದೂರದರ್ಶನ, ಸಿನಿಮಾ, ಏಕಪಾತ್ರಾಭಿನಯ, ಪುಸ್ತಕಗಳು ಮತ್ತು ಕಾದಂಬರಿಗಳು ಅಥವಾ ಯಾವುದೇ ಇತರ ಮನೋರಂಜನಾ ಮಾಧ್ಯಮದಲ್ಲಿ. ಕಾಮೆಡಿ ಪದದ ಮೂಲಗಳು ಪ್ರಾಚಿನ ಗ್ರೀಸ್‍ನಲ್ಲಿ ಕಂಡುಬರುತ್ತವೆ. ಅಥೇನಿಯನ್ ಪ್ರಜಾಪ್ರಭುತ್ವದಲ್ಲಿ, ಮತದಾರರ ಸಾರ್ವಜನಿಕ ಅಭಿಪ್ರಾಯವು ರಂಗಮಂದಿರಗಳಲ್ಲಿ ಹಾಸ್ಯಕವಿಗಳು ಪ್ರದರ್ಶಿಸಿದ ರಾಜಕೀಯ ವಿಡಂಬನೆಯಿಂದ ಪ್ರಭಾವಿತವಾಗುತ್ತಿತ್ತು.[] ಗ್ರೀಕ್ ವೈನೋದಿಕದ ರಂಗಮಂದಿರ ಪ್ರಕಾರವನ್ನು ಎರಡು ಗುಂಪುಗಳು ಅಥವಾ ಸಮಾಜಗಳನ್ನು ಒಬ್ಬರ ವಿರುದ್ಧ ಒಬ್ಬರನ್ನು ಮನೋರಂಜಕ ಹೋರಾಟ/ಸಂಘರ್ಷದಲ್ಲಿ ತರುತ್ತಿದ್ದ ನಾಟಕೀಯ ಪ್ರದರ್ಶನ ಎಂದು ವರ್ಣಿಸಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Henderson, J. (1993) Comic Hero versus Political Elite pp. 307–19 in Sommerstein, A.H.; S. Halliwell; J. Henderson; B. Zimmerman, eds. (1993). Tragedy, Comedy and the Polis. Bari: Levante Editori.


"https://kn.wikipedia.org/w/index.php?title=ವೈನೋದಿಕ&oldid=958862" ಇಂದ ಪಡೆಯಲ್ಪಟ್ಟಿದೆ