ವಿಷಯಕ್ಕೆ ಹೋಗು

ಸರಳಾ ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಳಾ ದೇವಿ
ସରଳା ଦେବୀ
ಜನನ(೧೯೦೪-೦೮-೧೯)೧೯ ಆಗಸ್ಟ್ ೧೯೦೪
ನಾರಿಲೋ ಗ್ರಾಮ, ಒರಿಸ್ಸಾ ವಿಭಾಗ, ಬಂಗಾಳ ಪ್ರೆಸಿಡೆನ್ಸಿ, ಬ್ರಿಟಿಷ್ ಭಾರತ
ಮರಣ4 October 1986(1986-10-04) (aged 82)
ರಾಷ್ಟ್ರೀಯತೆಭಾರತೀಯ
ರಾಜಕೀಯ ಪಕ್ಷಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ
ಭಾಗೀರಥಿ ಮೊಹಾಪಾತ್ರ
(m. ೧೯೧೭)
ಮಕ್ಕಳು
ಪೋಷಕರು
  • ಬಸುದೇವ್ ಕನುಂಗೋ (ತಂದೆ)
  • ಪದ್ಮಾವತಿ ದೇವಿ (ತಾಯಿ)
ಸಂಬಂಧಿಕರುಬಾಲಮುಕುಂದ ಕನುಂಗೋ (ದೊಡ್ಡಪ್ಪ)
ನಿರ್ಮಲಾ ದೇವಿ, ಪ್ರಶಸ್ತಿ ವಿಜೇತ ಕವಯಿತ್ರಿ (ಸಹೋದರಿ)
ನಿತ್ಯಾನಂದ ಕನುಂಗೋ (ಸಹೋದರ)
ಬಿಧು ಭೂಷಣ ದಾಸ್ (ಸೋದರಳಿಯ)
ಜಗದೀಶ್ ಚಂದ್ರ ಕನುಂಗೋ, ವರ್ಣಚಿತ್ರಕಾರ (ಸೋದರಳಿಯ)

 

ಸರಳಾ ದೇವಿ (೧೯ ಆಗಸ್ಟ್ ೧೯೦೪ - ೪ ಅಕ್ಟೋಬರ್ ೧೯೮೬) ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ, ಸ್ತ್ರೀವಾದಿ, ಸಾಮಾಜಿಕ ಕಾರ್ಯಕರ್ತೆ, ರಾಜಕಾರಣಿ ಮತ್ತು ಲೇಖಕಿ. ಇವರು, ೧೯೨೧ ರಲ್ಲಿ ಅಸಹಕಾರ ಚಳವಳಿಗೆ ಸೇರಿದ ಮೊದಲ ಒಡಿಯಾ ಮಹಿಳೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಒಡಿಯಾ ಮಹಿಳಾ ಪ್ರತಿನಿಧಿ. ಅವರು ೧ ಏಪ್ರಿಲ್ ೧೯೩೬ ರಂದು ಒಡಿಶಾ ವಿಧಾನಸಭೆಗೆ ಚುನಾಯಿತರಾದ ಮೊದಲ ಮಹಿಳೆಯಾಗಿದ್ದಾರೆ. ಅವರು ಒಡಿಶಾ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್, ಕಟಕ್ ಸಹಕಾರಿ ಬ್ಯಾಂಕ್‌ನ ಮೊದಲ ಮಹಿಳಾ ನಿರ್ದೇಶಕರು ಮತ್ತು ಉತ್ಕಲ್ ವಿಶ್ವವಿದ್ಯಾಲಯದ ಮೊದಲ ಮಹಿಳಾ ಸೆನೆಟ್ ಸದಸ್ಯರಾಗಿದ್ದರು. ಇವರು ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್ ಅವರ ಶಿಕ್ಷಣ ಆಯೋಗದ ಒಡಿಶಾದ ಏಕೈಕ ಪ್ರತಿನಿಧಿಯಾಗಿದ್ದರು.

ಆರಂಭಿಕ ಜೀವನ

[ಬದಲಾಯಿಸಿ]
೧೯೩೮

ಸರಳಾ ದೇವಿಯವರು ೧೯ ಆಗಸ್ಟ್ ೧೯೦೪ ರಂದು ಬಾಲಿಕುಡ ಬಳಿಯ ನಾರಿಲೋ ಗ್ರಾಮದಲ್ಲಿ ಬಂಗಾಳ ಪ್ರೆಸಿಡೆನ್ಸಿಯ (ಈಗ ಜಗತ್‌ಸಿಂಗ್‌ಪುರ ಜಿಲ್ಲೆ, ಒಡಿಶಾ) ಒರಿಸ್ಸಾ ವಿಭಾಗದಲ್ಲಿ ಶ್ರೀಮಂತ ಜಮೀನ್ದಾರ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ದಿವಾನ್ ಬಸುದೇವ್ ಕನುಂಗೋ, ಮತ್ತು ತಾಯಿ ಪದ್ಮಾವತಿ ದೇವಿ. ಸರಳಾರನ್ನು, ತಂದೆಯ ಹಿರಿಯ ಸಹೋದರ, ಡೆಪ್ಯೂಟಿ ಕಲೆಕ್ಟರ್ ಆಗಿದ್ದ ಬಾಲಮುಕುಂದ ಕನುಂಗೋ ಅವರು ದತ್ತು ಪಡೆದು ಬೆಳೆಸಿದರು. [] [] [] [] [] [] ಸರಳಾ ತನ್ನ ಪ್ರಾಥಮಿಕ ಶಿಕ್ಷಣವನ್ನು ಬಂಕಿಯಲ್ಲಿ ಪಡೆದರು. ಅಲ್ಲಿ ಅವರ ದೊಡ್ಡಪ್ಪ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕವಾಗಿದ್ದರು. ಆ ಸಮಯದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶವಿರಲಿಲ್ಲ, ಆದ್ದರಿಂದ ಆಕೆಯ ದೊಡ್ಡಪ್ಪ ಮನೆ ಬೋಧಕರನ್ನು ನೇಮಿಸಿದ್ದರು. ಸರಳಾ ತನ್ನ ಬೋಧಕರಿಂದ ಬಂಗಾಳಿ, ಸಂಸ್ಕೃತ, ಒಡಿಯಾ ಮತ್ತು ಮೂಲ ಇಂಗ್ಲಿಷ್ ಭಷೆಯನ್ನು ಕಲಿತರು. ಅವರು ತನ್ನ ದೊಡ್ಡಪ್ಪನೊಂದಿಗೆ ೧೩ ನೇ ವಯಸ್ಸಿನವರೆಗೆ ವಾಸಿಸಿದ್ದರು.

ಸಾರ್ವಜನಿಕ ಜೀವನ

[ಬದಲಾಯಿಸಿ]

ಬಂಕಿಯಲ್ಲಿದ್ದಾಗ, ಸರಳಾ ಅವರು ಬಂಕಿಯ ರಾಣಿಯಾದ ಸುಕಾದೇವಿಯ ಕಥೆಗಳಿಂದ ಪ್ರೇರೇಪಿಸಲ್ಪಟ್ಟರು. ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ದೊಡ್ಡ ಸಂಗ್ರಹಣೆಯ ಆಭರಣಗಳು ಮತ್ತು ಜಮೀನಿನ ಗಮನಾರ್ಹ ಭಾಗವನ್ನು ದಾನ ಮಾಡಿದರು. ಅವರು ೧೯೧೭ ರಲ್ಲಿ ಪ್ರಸಿದ್ಧ ವಕೀಲರಾದ ಭಾಗೀರಥಿ ಮೊಹಾಪಾತ್ರ ಅವರನ್ನು ವಿವಾಹವಾದರು. ಮಹಾತ್ಮ ಗಾಂಧಿಯವರ ಮೊದಲ ಒರಿಸ್ಸಾ ಭೇಟಿಯ ನಂತರ ೧೯೨೧ ರಲ್ಲಿ ಸರಳಾ ಅವರು ಸ್ವತಃ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಅವರು ಒಡಿಶಾ ವಿಧಾನಸಭೆಯ ಮೊದಲ ಮಹಿಳಾ ಸದಸ್ಯೆ ಮತ್ತು ಅದರ ಮೊದಲ ಮಹಿಳಾ ಸ್ಪೀಕರ್. ಅವರು ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು, ದುರ್ಗಾಬಾಯಿ ದೇಶಮುಖ್, ಆಚಾರ್ಯ ಕೃಪಲಾನಿ, ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ಸರೋಜಿನಿ ನಾಯ್ಡು ಅವರ ಜೊತೆ ಸಂಪರ್ಕ ಹೊಂದಿದ್ದರು. [] ಅವರು ೧೯೪೩ ರಿಂದ ೧೯೪೬ ರವರೆಗೆ ಕಟಕ್‌ನಲ್ಲಿ ಸಾಹಿತ್ಯ ಸಮಾಜದ ಕಾರ್ಯದರ್ಶಿಯಾಗಿದ್ದರು.[]

ಸಾಹಿತ್ಯ ಕೃತಿಗಳು

[ಬದಲಾಯಿಸಿ]

ಸರಳಾ ಅವರು ೩೦ ಪುಸ್ತಕಗಳು ಮತ್ತು ೩೦೦ ಪ್ರಬಂಧಗಳನ್ನು ಬರೆದಿದ್ದಾರೆ. [] [೧೦]

  • ಬಿಶ್ವಾ ಬಿಪ್ಲಬಾನಿ, ೧೯೩೦
  • ಉತ್ಕಲಾ ನಾರಿ ಸಮಸ್ಯ, ೧೯೩೪
  • ನಾರಿರಾ ದಾಬಿ, ೧೯೩೪
  • ಭಾರತೀಯ ಮಹಿಳಾ ಪ್ರಸಂಗ, ೧೯೩೫
  • ರವೀಂದ್ರ ಪೂಜೆ, ೧೯೩೫
  • ಬೀರ ರಮಣಿ, ೧೯೪೯

ಉಲ್ಲೇಖಗಳು

[ಬದಲಾಯಿಸಿ]
  1. "Sarala Devi: A centenary tribute". The Hindu. 7 ನವೆಂಬರ್ 2004. Archived from the original on 26 ಆಗಸ್ಟ್ 2015. Retrieved 18 ಡಿಸೆಂಬರ್ 2016.
  2. Mohanty, Sachidananda. "Sarala Devi: The Biplababi of Orissa" (PDF). Manushi. Retrieved 18 ಡಿಸೆಂಬರ್ 2016.
  3. Mohanty, Sachidananda. "Sarala Devi: The Biplababi of Orissa" (PDF). Manushi. Archived from the original (PDF) on 20 ಡಿಸೆಂಬರ್ 2016. Retrieved 18 ಡಿಸೆಂಬರ್ 2016.
  4. Jena, Bijaya Lakhmi (ಜನವರಿ 2014). "Sarala Devi, An Inspiration for Women" (PDF). Government of Odisha. Retrieved 18 ಡಿಸೆಂಬರ್ 2016.
  5. Prabhukalyan, Mohapatra (ಜನವರಿ 2008). "Oriya Women in National Movement" (PDF). Government of Odisha. Retrieved 18 ಡಿಸೆಂಬರ್ 2016.
  6. Dhyanimudra, Kanungo (ಆಗಸ್ಟ್ 2014). "Sarala Devi as a Freedom Fighter" (PDF). Government of Odisha. Retrieved 18 ಡಿಸೆಂಬರ್ 2016.
  7. Giri, Pradeep Kumar (ಆಗಸ್ಟ್ 2016). "The Role of Odia Women in Salt Satyagraha : Sarala Devi" (PDF). Government of Orissa. Retrieved 18 ಡಿಸೆಂಬರ್ 2016.
  8. Ratha, Prabodha Kumar (ಆಗಸ್ಟ್ 2013). "Sarala Devi : the Socio-Political Reformer of Odisha" (PDF). Government of Odisha. Retrieved 18 ಡಿಸೆಂಬರ್ 2016.
  9. Dasgupta, Sanjukta (30 ಅಕ್ಟೋಬರ್ 2016). "More than just 'presiding deities in their kitchen'". The Statesman. Archived from the original on 21 ಡಿಸೆಂಬರ್ 2016. Retrieved 18 ಡಿಸೆಂಬರ್ 2016.
  10. Mohanty, Sachidananda (7 ಡಿಸೆಂಬರ್ 2004). Early Women's Writings in Orissa, 1898-1950: A Lost Tradition (in ಇಂಗ್ಲಿಷ್). SAGE Publications India. p. 151. ISBN 9788132101956. Retrieved 18 ಡಿಸೆಂಬರ್ 2016.

ಹೆಚ್ಚಿನ ಓದುವಿಕೆ

[ಬದಲಾಯಿಸಿ]