ಸದಸ್ಯ:Yuktha.s1910376/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೋಹಿಣಿ ಸಿಂಧೂರಿ[ಬದಲಾಯಿಸಿ]

ರೋಹಿಣಿ ಸಿಂಧೂರಿ

ರೋಹಿಣಿ ಸಿಂಧೂರಿ ಕರ್ನಾಟಕದ ಐಎಎಸ್ ಅಧಿಕಾರಿ ಯಾಗಿ ಸೆವೆ ಸಲ್ಲಿಸುತ್ತಿದ್ದಾರೆ. ಅವರ ಪೂರ್ಣ ಹೆಸರು ರೋಹಿಣಿ ಸಿಂಧೂರಿ ದಸರಿ. ರೋಹಿಣಿಯವರು ಯುಪಿಎಸ್ಸಿ ಪರೀಕ್ಷೆಯಲ್ಲಿ 43 ನೇ ರ್ಯಾಂಕ್ ಗಳಿಸಿ 2009 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಐಎಎಸ್ ಅಧಿಕಾರಿಯಾಗಿ ವೃತ್ತಿಜೀವನದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಆಂರಭಿಕ ಜೀವನ[ಬದಲಾಯಿಸಿ]

ರೋಹಿಣಿ ಮೇ 30, 1984 ರಂದು ತೆಲಂಗಾಣದಲ್ಲಿ ಜನಿಸಿದರು. ಇವರು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್, ಕೆಮಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. ಕನ್ನಡ, ಇಂಗ್ಲಿಷ್, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ಅವರು ನಿರರ್ಗಳವಾಗಿ ಮಾತನಾಡುತ್ತಾರೆ. ತಾಯಿಯ ಹೆಸರು ಲಕ್ಷ್ಮಿ ರೆಡ್ಡಿ. ರೋಹಿಣಿಯವರು ಆಂಧ್ರಪ್ರದೇಶದ ಸಾಫ್ಟ್‌ವೇರ್ ಎಂಜಿನಿಯರ್ ಸುಧೀರ್ ರೆಡ್ಡಿ ಅವರನ್ನು ವಿವಾಹವಾದರು ಮತ್ತು ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.

ವೃತ್ತಿ ಜೀವನ[ಬದಲಾಯಿಸಿ]

ರೋಹಿಣಿಯನ್ನು ಮೊದಲ ಬಾರಿಗೆ 2011 ರ ಆಗಸ್ಟ್ 29 ರಂದು ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಸಹಾಯಕ ಆಯುಕ್ತರನ್ನಾಗಿ ನೇಮಿಸಲಾಯಿತು. ಅದೇ ಅವಧಿಯಲ್ಲಿ ಅವರು ತುಮಕೂರಿನ ನಗರಾಭಿವೃದ್ಧಿ ವಿಭಾಗದ ಕಮಿಷನರ್ ಆಗಿದ್ದರು ಮತ್ತು ಈ ಹುದ್ದೆಯನ್ನು 2012 ರ ಡಿಸೆಂಬರ್ 31 ರವರೆಗೆ ಮುಂದುವರೆದರು. ಆಯುಕ್ತರಾಗಿ ಅವರು ಮೂಲದಲ್ಲಿ ತೆರಿಗೆ ಸಂಗ್ರಹವನ್ನು ಗಣಕೀಕರಿಸಿದ್ದರು, 2006 ರಿಂದ ಬಾಕಿ ಇದ್ದ ಅಜ್ಜಗೊಂಡನಹಳ್ಳಿ ಗ್ರಾಮದಲ್ಲಿ ಅವರು 42 ಎಕರೆ ನಿಗಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡರು. ಖಾಲಿ ಇರುವ ನಿಗಮದ ಅಂಗಡಿಗಳನ್ನು ಹರಾಜು ಮಾಡಿ ಮತ್ತು ನಿಗಮಕ್ಕೆ 10 ಕೋಟಿ ಮೌಲ್ಯದ ಆದಾಯವನ್ನು ಬರುವಂತೆ ಮಾಡಿದರು. ಹೊರ್ಪೆಟ್ ರಸ್ತೆ, ಜೆ.ಸಿ.ರೋಡ್ ಮತ್ತು ಕ್ಯಾತ್ಸಂದ್ರ ಮುಖ್ಯ ರಸ್ತೆಗಳಲ್ಲಿ ಅತಿಕ್ರಮಣಗಳನ್ನು ತೆಗೆದುಹಾಕುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಎಂ.ಜಿ.ರೋಡ್‌ನಲ್ಲಿನ ಅತಿಕ್ರಮಣಗಳನ್ನು ಕೇವಲ ೯ ತಿಂಗಳಲ್ಲಿ ತೆಗೆದುಹಾಕಿ ಮತ್ತು ಜಿಲ್ಲೆಯ ಅತ್ಯಂತ ಜನನಿಬಿಡ ರಸ್ತೆಯಲ್ಲಿ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಈಗಲೂ ಅವರನ್ನು ತುಮಕೂರು ಜನರು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ನಂತರ ಅವರು ಆಗಸ್ಟ್ 10, 2013 ರಂದು ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವ ಉದ್ಯೋಗ ಯೋಜನೆ (ಎಸ್‌ಇಪಿ) ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ನಂತರ ಅವರನ್ನು 2014 ರಲ್ಲಿ ಮಂಡ್ಯ ಜಿಲ್ಲೆಗೆ ವರ್ಗಾಯಿಸಲಾಯಿತು, ಅಲ್ಲಿ ರೊಹಿಣಿಯವರನ್ನು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಿಸಲಾಯಿತು. ಅವರು ಅಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದರು. ಮುಂದೆ, ಮಂಡ್ಯದಲ್ಲಿ ರೋಹಿಣಿ 2014–15ರ ಅವಧಿಯಲ್ಲಿ 1.02 ಲಕ್ಷ ಮನೆಗಳಿಗೆ ವೈಯಕ್ತಿಕ ಶೌಚಾಲಯಗಳನ್ನು ಒದಗಿಸಲು ಮುಂದಾದರು. ಆ ಒಂದು ವರ್ಷದ ಅವಧಿಯಲ್ಲಿ 1 ಲಕ್ಷ ಶೌಚಾಲಯಗಳನ್ನು ನಿರ್ಮಿಸಿದರು ಮತ್ತು ಅಲ್ಲಿಯ ಜನರಿಗೆ ಶೌಚಾಲಯದ ಮಹತ್ವವನ್ನು ತಿಳಿಸಿದರು. ಇವರ ಉಪಕ್ರಮದಿಂದಾಗಿ ರಾಜ್ಯದ ಸ್ವಚ್ ಭಾರತ್ ಅಭಿಯಾನದಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯನ್ನು ಇಡೀ ಭಾರತದಲ್ಲಿ ಪ್ರಥಮ ಸ್ಥಾನವನ್ನಾಗಿ ಮಾಡಿದರು. ಶೌಚಾಲಯಗಳ ಬಳಕೆಯನ್ನು ಉತ್ತೇಜಿಸಲು ರೋಹಿಣಿಯವರು ಮುಂಜಾನೆಯೆ ಜನರನ್ನು ಭೇಟಿ ಮಾಡುತ್ತಿದರು. ಈ ಕಾರ್ಯಕ್ರಮವು 'ಮುಂಜಾನೆ' ಎಂದು ಕರೆಯಲ್ಪಟ್ಟಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿತು ಮತ್ತು ಮೆಚ್ಚುಗೆ ಗಳಿಸಿತು. ಮಂಡ್ಯ ಜಿಲ್ಲೆಯಲ್ಲಿ ಸ್ವಾಚ್ ಭಾರತ್ ಅಭಿಯಾನವನ್ನು ಅನುಷ್ಠಾನಗೊಳಿಸುವಲ್ಲಿ ರೋಹಿಣಿಯವರ ಸಾಧನೆ ದೇಶದಲ್ಲಿ ಮಾನ್ಯತೆ ಪಡೆಯಿತು. ಇದರಿಂದಾಗಿ 2015 ರಲ್ಲಿ ನವದೆಹಲಿಯಲ್ಲಿ ಡೀಸಿಗಳಿಗೆ ತರಬೇತಿ ನೀಡುವ ಮೂರು ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾಗಿ ಕೇಂದ್ರ ಸರ್ಕಾರದಿಂದ ಆಯ್ಕೆಯಾದರು. ರೋಹಿಣಿ ಕೇಂದ್ರ ಸರ್ಕಾರದ 65 ಕೋಟಿ ಅನುದಾನವನ್ನು ಕುಡಿಯುವ ನೀರಿಗಾಗಿ ಯಶಸ್ವಿಯಾಗಿ ಬಳಸಿಕೊಂಡರು ಮತ್ತು ಈ ಅನುದಾನವನ್ನು ಬಳಸಿಕೊಂಡು ರೋಹಿಣಿ ಮತ್ತು ಅವರ ತಂಡ ಜಿಲ್ಲೆಯಾದ್ಯಂತ 100 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದರು. ಕೇಂದ್ರ ಸರ್ಕಾರ ಇದನ್ನು ಗುರುತಿಸಿ ಅದೇ ಉದ್ದೇಶಕ್ಕಾಗಿ 6 ​​ಕೋಟಿ ಹೆಚ್ಚುವರಿ ಹಣವನ್ನು ಒದಗಿಸಿದೆ. ಮಂಡ್ಯ ಮುಖ್ಯವಾಗಿ ಕಬ್ಬು ಮತ್ತು ಭತ್ತವನ್ನು ಬೆಳೆಯುವ ಕೃಷಿ ಜಿಲ್ಲೆಯಾಗಿರುವುದರಿಂದ, ಅವರು ರೈತರಿಗೆ ಸಮಗ್ರ ಕೃಷಿ ಪದ್ಧತಿಗಳ ಬಗ್ಗೆ ಶಿಕ್ಷಣ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಅವರಿಗೆ ಬ್ಯಾಂಕ್ ಸಂಪರ್ಕವನ್ನು ಒದಗಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಮತ್ತೊಂದು ಗಂಭೀರ ವಿಶಯವನ್ನು ಅವರು ಕೈಗೆತ್ತಿಕೊಂದರು, ಜಿಲ್ಲೆಯ ಸ್ತ್ರೀ ಭ್ರೂಣ ಹತ್ಯೆಯ ಬಗ್ಗೆ ದೃಷ್ಟಿಕೋನವನ್ನು ತೆಗೆದುಕೊಂಡರು ಮತ್ತು ಆರೋಗ್ಯ ಇಲಾಖೆಯನ್ನು ಸಂಘಟಿಸಿದರು. ಈ ಅಭ್ಯಾಸದ ವಿರುದ್ಧ ಪೋಷಕರಿಗೆ ಶಿಕ್ಷಣ ನೀಡುವಲ್ಲಿ ಇಂತಹ ಘಟನೆಗಳನ್ನು ವರದಿ ಮಾಡಲು ಆಶಾ ಕಾರ್ಯಕರ್ತರನ್ನು ನೇಮಿಸಿದರು. ರಾಜ್ಯದಲ್ಲಿ ಈ ರೀತಿಯ ಮೊದಲ ಯೋಜನೆಯಲ್ಲಿ, ಮಂಡ್ಯ ಜಿಲ್ಲಾ ಪಂಚಾಯತ್‌ನ ಸಿಇಒ ಆಗಿ ಅವರು ಆಸ್ತಿ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಮೊಬೈಲ್ ಆ್ಯಪ್ ಅನ್ನು ಪ್ರಾರಂಭಿಸಿದ್ದರು, ಇದು ಅನೇಕ ಜನರಿಗೆ ಬಹಳಾ ಉಪಕಾರಿಯಾಗ್ಗಿದು ಮತ್ತು ಕಚೇರಿಗಳನ್ನು ಸುತ್ತಿ ತಮ್ಮ ಆಸ್ತಿ ದಾಖಲೆಗಳನ್ನು ಪಡೆಯುವುದರ ಬದಲಾಗಿ ಈ ಮೂಲಕ ಪಡೆಯಲು ಸಹಾಯಕವಾಗಿದೆ. ಇವೆಲ್ಲವನ್ನು ಮಾಡುವುದರೊಳಗೆ ಅವರನ್ನು ವರ್ಗಾವಣೆ ಮಾದಲಾಯಿತು, ರೊಹಿಣಿಯವರಿಗೆ ಮಂಡ್ಯಾಜಿಲ್ಲೆಯನ್ನು ಕೊರತೆ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕೆಂಬ ಆಸೆ ನಿರಾಸೆಯಾಯಿತು. ಆ ವರ್ಗಾವಣೆಯಿಂದ ಅವರು ಬೇಸರಗೊಂಡು ಮೇಲಧಿಕಾರಿಗಲನ್ನು ಭೇಟಿ ಮಾಡಿ ಕೇವಲ 3 ತಿಂಗಳ ಕಾಲಾವಕಾಶ ನೀಡಿ ಎಂದು ಮನವಿ ಮಾಡಿ ಕೊಳ್ಳುತ್ತಾರೆ, ರೋಹಿಣಿಯವರ ಮನವಿಯನ್ನು ಲೆಕ್ಕಿಸದೆ ಅವರನ್ನು ವರ್ಗಾಯಿಸುತ್ತಾರೆ. ರೋಹಿಣಿ 16 ಸೆಪ್ಟೆಂಬರ್ 2015 ರಂದು ಬೆಂಗಳೂರಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಲಿಮಿಟೆಡ್ (ಕೆಎಫ್‌ಸಿಎಸ್‌ಸಿ) ಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಸಿಂಧೂರಿಯವರನ್ನು ಜುಲೈ, 2017 ರಂದು ಹಾಸನದ ಜಿಲ್ಲಾಧಿಕಾರಿಯಾಗಿ ನೇಮಿಸಲಾಯಿತು. ಅವರನ್ನು ಅಲ್ಲಿಗೆ ವರ್ಗಾಯಿಸಿದ ಕೂಡಲೇ, ಮಹಾ ಮಸ್ತಾಭಿಷೇಕ ಎಂಬ ಬೃಹತ್ ಕಾರ್ಯಕ್ರಮವನ್ನು ನಡೆಸಲು ಅವರಿಗೆ ಕೇವಲ 5 ತಿಂಗಳುಗಳಿವೆ ಎಂದು ಅವರ ಗಮನಕ್ಕೆ ಬಂದಿತು. ಮಸ್ತಾಭಿಷೇಕಕ್ಕೆ ಸುಮಾರು 25 ಸಾವಿರ ಪ್ರಿಲಿಗ್ರಿಂ‌ಗಳು ಬರುವ ನಿರೀಕ್ಷೆಯಿತ್ತು, ಆದುದ್ದರಿಂದ ಯಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಅಲ್ಲಿಗೆ ಬಂದ ಯಲ್ಲಾ ಜನರನ್ನು ಅವರ ತಂಡ ಚನ್ನಾಗಿ ನೋಡಿಕೊಂಡಿತು ಮತ್ತು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದರು. ಇದಾದ ನಂತರ ಅವರು ಬಹಳ ಸೂಕ್ಷ್ಮವಾಗಿ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಬಗ್ಗೆ ಗಮನ ವಹಿಸಿದರು. ಕರ್ನಾಟಕದಲ್ಲಿ 32 ಶಿಕ್ಷಣ ಸಂಸ್ಥೆಗಳಿದ್ದು, ಹಾಸನ ಜಿಲ್ಲೆಯು 2017 ರಲ್ಲಿ 31 ನೇ ಸ್ತಾನದಲ್ಲಿತ್ತು, ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡೀ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಅದೇವಿಚಾರದಮೇಲೆ ಕೆಲಸ ಪ್ರಾರಂಬಿಸಿದರು. ರೊಹಿಣಿಯವರು ಶಿಕ್ಷಣ ಇಲಾಖೆಯ ಜೊತೆಗೆ ಕೈಗೂಡಿಸಿ ಶಿಕ್ಷಕರಿಗೆ ಅನೇಕ ಕಾರ್ಯಾಗಾರಗಳನ್ನು ನಡೆಸಿದರು. ಮಂದ ವಿದ್ಯಾರ್ಥಿಗಳ ತಾಯಂದಿರಿಗೂ ಕಾರ್ಯಾಗಾರಗಳನ್ನು ಮಾಡಿದರು. ಈ ಎಲ್ಲಾ ಕಾರಣಗಳಿಂದಾಗಿ ಹಾಸನ ಜಿಲ್ಲೆಯು 2018 ರಲ್ಲಿ 3 ನೇ ಸ್ಥಾನವನ್ನು ಪಡೇದುಕೊಂಡಿತು ಮತ್ತು 2019 ರಲ್ಲಿ ಹಸಾನದ ಇತಿಹಾಸದಲ್ಲಿಯೇ ಮೊದಲಬಾರಿಗೆ ಪ್ರಥಮ ಸ್ಥಾನವನ್ನು ಗಳಿಸಿತು. ಇದು ಸಾದ್ಯವಾದದ್ದು ರೊಹಿನಣಿಯವರು ಶಿಕ್ಷಣಕ್ಕೆ ನೀಡಿದ ಪ್ರಾಮುಖ್ಯತೆಯಿಂದಲೇ. ಅವರು ಜಿಲ್ಲೆಯಲ್ಲಿದ್ದ ಸ್ಯಾಂಡ್ ಮಾಫಿಯಾವನ್ನು ಸಹ ನಿಯಂತ್ರಿಸಿದರು, ಅನೇಕ ದಾಳಿಗಳನ್ನು ನಡೆಸಿದರು ಮತ್ತು ಸಾಕಷ್ಟು ಅಕ್ರಮ ಉಪಕರಣಗಳನ್ನು ಮುಟ್ಟುಗೋಲು ಹಾಕಿದರು. ಇದರಿಂದಾಗಿ ಆಕೆಯನ್ನು ಅನೇಕ ಬಾರಿ ವರ್ಗಾಯಿಸಲಾಯಿತು. ಸ್ಥಳೀಯ ರಾಜಕಾರಣಿಗಳ ಒತ್ತಡದಿಂದಾಗಿ ಈ ವರ್ಗಾವಣೆಯಾಯಿತು, ನಂತರ ಅವರು ಹೈಕೋರ್ಟ್ ಅನ್ನು ಸಂಪರ್ಕಿಸಿದರು, ಅದು ವರ್ಗಾವಣೆಯನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಿತು. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರೊಹಿನಿಯವರನ್ನು ಮತ್ತೆ ಹಾಸನದ ಡೀಸಿ ಆಗಿ ನೇಮಕ ಮಾಡಿದರು.

ಅವರು 1 ಜನವರಿ 2019 ರಂದು ರಾಜ್ಯದಲ್ಲಿ ಮೊದಲ ಬಾರಿಗೆ ಬಂದ 'ಸ್ಪಂದಾನಾ' ಎಂಬ ಆನ್‌ಲೈನ್ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಸಹ ಪ್ರಾರಂಭಿಸಿದರು. ಇಲ್ಲಿ ಒಬ್ಬರು ತಮ್ಮ ಕೊರತೆಗಳನ್ನು ನೊಂದಾಯಿಸಲು ಪೋರ್ಟಲ್‌ಗೆ ಲಾಗ್ ಇನ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ಕುಂದುಕೊರತೆಗಳನ್ನು ಸುಲಭವಾಗಿ ಸಲ್ಲಿಸಬಹುದು. ಈ ವ್ಯವಸ್ಥೆಯು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಆದ್ಯತೆಯ ಮೇಲೆ ಸಮಸ್ಯೆಗಳನ್ನು ನಿರ್ಣಯಿಸುವುದು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಸುಲಭವಾಗುತ್ತದೆ.

ರೋಹಿಣಿಯವರು 29 ಸೆಪ್ಟೆಂಬರ್, 2020 ರಂದು ಮೈಸೂರಿನ ಡೀಸಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಮೈಸೂರಿನ ಹುಣಸೂರು ರಸ್ತೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

ಪ್ರಮುಖ ಹುದ್ದೆಗಳು[ಬದಲಾಯಿಸಿ]

2011- ಸಹಾಯಕ ಆಯುಕ್ತರು, ತುಮುಕೂರು, ಕರ್ನಾಟಕ

2012- ತುಮಕೂರಿನ ನಗರಾಭಿವೃದ್ಧಿ ವಿಭಾಗದ ಆಯುಕ್ತರು

2013- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ವಯಂ ಉದ್ಯೋಗ ಯೋಜನೆ (ಎಸ್‌ಇಪಿ), ಬೆಂಗಳೂರು

2014- ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಮಂಡ್ಯ, ಕರ್ನಾಟಕ ಸರ್ಕಾರ

2015- ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆದಾರರ ನಿಗಮದ ಸೀಮಿತ (ಕೆಎಫ್‌ಸಿಎಸ್‌ಸಿ) ವ್ಯವಸ್ಥಾಪಕ ನಿರ್ದೇಶಕರು

2017- ಜಿಲ್ಲಾಧಿಕಾರಿ, ಹಾಸನ, ಕರ್ನಾಟಕ

2020- ಹುಣಸೂರು ರಸ್ತೆಯಲ್ಲಿ ಜಿಲ್ಲಾಧಿಕಾರಿ, ಮೈಸೂರು


ನಮ್ಮ ರಾಜ್ಯದಲ್ಲಿ ಈ ರೀತಿಯ ಅಧಿಕಾರಿಗಳಿದ್ದರೆ ಚೆನ್ನಾಗಿರುತ್ತದೆ. ರೊಹಿಣಿಯವರು ನಮ್ಮ ರಾಜ್ಯದ ಹೆಮ್ಮೆಯಾಗಿದ್ದಾರೆ.



<r>https://alchetron.com/Rohini-Sindhuri-(IAS)</r>

<r>https://starsunfolded.com/rohini-sindhuri/</r>

<r>https://theprint.in/india/governance/upright-karnataka-ias-officer-transferred-again-4th-time-for-taking-on-political-class/296287/</r>