ವಿಷಯಕ್ಕೆ ಹೋಗು

ಸದಸ್ಯ:Ushacsheelin/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

=='ಪಾಲಕ್ ಪನೀರ್==

ಪಾಲಕ್ ಪನೀರ್

ಪಾಲಕ್ ಪನೀರ್ ಪಾಲಕ್ ತಿಳ್ಳಿನಿಂದ ತಯಾರಿಸಲಾದ ಮತ್ತು ಬೆಳ್ಳುಳ್ಳಿ, ಗರಮ್ ಮಸಾಲಾ, ಹಾಗೂ ಇತರ ಸಂಬಾರ ಪದಾರ್ಥಗಳಿಂದ ರುಚಿಗೊಳಿಸಲಾದ ಒಂದು ದಟ್ಟ ಜಲಪಿಷ್ಟದಲ್ಲಿ ಪಾಲಕ್, ಟೊಮ್ಯಾಟೊ ಗ್ರೇವಿ ಸಾಸ್ ಮತ್ತು ಪನೀರ್ ಅನ್ನು ಹೊಂದಿರುವ ಒಂದು ಸಸ್ಯಾಹಾರಿ ಭಾರತೀಯ ಭಕ್ಷ್ಯ. ಪಾಲಕ್ ಪನೀರ್ ಒಂದು ಬಗೆಯ ಸಾಗ್, ಇದನ್ನು ಪಾಲಕ್ ಎಲೆಗಳಿಂದಲೂ ತಯಾರಿಸಬಹುದು. ಪಾಲಕ್ ಪನೀರ್ ಕೆಲಮಟ್ಟಿಗೆ ಸಾಗ್ ಪನೀರ್‍ಗಿಂತ ಹೆಚ್ಚು ನೀರಾಗಿರುತ್ತದೆ.

ಪಾಲಕ್ ಪನೀರ್ ಎಂಬುವುದು ಒಂದು ಉತ್ತರ ಭಾರತದ ಭಕ್ಷವಾಗಿದೆ .ಪೂರ್ಣ ಆಗಿರುವ ಈ ಭಕ್ಷವು ಒಂದು ಉತ್ತಮ ಆಹಾರ .ಇತ್ತೀಚಿನ ವರ್ಷಗಳಲ್ಲಿ ಭಾರತೀಯರು ಒಂದು ರಾಜ್ಯಕ್ಕೆ ಸೀಮಿತವಾಗದೆ ಎಲ್ಲಾ ಕಡೆಗಳಲ್ಲೂ ಹಂಚಿ ಹೋಗಿರುವುದರಿಂದ ಈ ಪಾಲಕ್ ಪನೀರ್ ದಕ್ಷಿಣ ಭಾರತದಲ್ಲೂ ಹೆಸರುವಾಸಿಯಾಗಿದೆ .ನಾವು ಭಾರತಿಯರು ಒಂದೇ ರೀತಿಯ ಅಡುಗೆಯನ್ನು ತಿನ್ನದೆ ಅದರಲ್ಲೆ ಹೊಸ ಹೊಸ ರೀತಿಯ ಅಡುಗೆಯನ್ನು ಮಾಡಲು ಪ್ರಯತ್ನಿಸುತ್ತೇವೆ ಅದರಲ್ಲೂ ಪನೀರಂತಹ ಪದಾರ್ಥವನ್ನು ಹೆಚ್ಚು ಬಳಸುತ್ತೇವೆ . ಪಾಲಕ್ ಪನೀರ್ ಮಣ್ಣಿನ ಮಡ್ಕೆಯಲ್ಲಿ ಮಾಡುವುದರಿಂದ ಹೆಚ್ಚು ರುಚಿಯನ್ನು ನೀಡುತ್ತದೆ .ಪಾಲಕ್ ಪನೀರ್ ತಿನ್ನಲು ತುಂಬಾ ರುಚಿಕರವಾಗಿರುತ್ತದೆ . ಪಾಲಕ್ ಸೊಪ್ಪು ಆರೋಗ್ಯಕ್ಕೆ ಬಹಳ ತಂಪನು ಕೊಡುತ್ತದೆ.ಪಾಲಕ್ ಸೊಪ್ಪಿನಿಂದ ವಿವಿಧ ರೀತಿಯ ಅಡುಗೆಯನ್ನು ತಯಾರಿಸಬಹುದು . ಆ ವಿವಿಧ ರೀತಿಯ ಅಡುಗೆಯಲ್ಲಿ ಪಾಲಕ್ ಪನೀರ್ ಕೂಡ ಒಂದು ರಿತೀಯ ಅಡುಗೆ . ಚಪಾತಿ ಅಥವ ರೋಟಿಯ ಜೊತೆ ಪಾಲಕ್ ಪನೀರ್ ಸೇವಿಸುವುದು ಬಹಳ ರುಚಿಕರವಾಗಿರುತ್ತದೆ . ಆದುದರಿಂದಲೇ ಉತ್ತರ ಭಾರತಿಯರಿಗೆ ಪಾಲಕ್ ಪನೀರ್ ಬಹಳ ಅಚ್ಚು ಮೆಚ್ಚಿನ ಆಹಾರವಾಗಿದೆ .

ಪಾಲಕ್ ಸೊಪ್ಪಿನ ಉಪಯೋಗಗಳು

[ಬದಲಾಯಿಸಿ]
               ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ,ಆಂಟಿ ಆಕ್ಸಿಡೆಂಟ್ ,ಮತ್ತು ಖನಿಜಾಂಶಗಳ ಅಂಶಗಳು ಇರುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಉಪಯೋಗವಾಗುತ್ತದೆ  ಪಾಲಕ್ ಸೊಪ್ಪು ಸೇವಿಸುವುದರಿಂದ ಆಗುವ ಉಪಯೋಗಗಳು ನಮ್ಮ ದೃಷ್ಟಿಯನ್ನು ಮೊನಚಾಗಿಸುತ್ತದೆ ,ವಸಡುಗಳಿಂದ ರಕ್ತವು ಒಸರುವ ಸಮಸ್ಯೆಯನ್ನು ಗುಣಪಡಿಸಲು ಪಾಲಕ್ ಜ್ಯೂಸ್ ಸೇವಿಸಬೇಕು ,ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ ,ರಕ್ತ ಶುದ್ಧಿಗೊಳಿಸುತ್ತದೆ ,ಮೂಳೆಗಳನ್ನು ಗಟ್ಟಿಗೊಳಿಸುತ್ತದೆ ,ರಕ್ತದೊತ್ತಡವನ್ನು ನಿಭಾಯಿಸುತ್ತದೆ ,ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆಮಾಡುತ್ತದೆ . ಪಾಲಕ್ ಸೊಪ್ಪಿನಿಂದ ನಮಗೆ ಈ ರೀತಿಯ ಉಪಯೋಗಗಳು ಲಭ್ಯವಿದೆ .  

ಪನೀರ್ ಉಪಯೋಗಳು

[ಬದಲಾಯಿಸಿ]
             ಪನೀರಿನಲ್ಲಿ ಪ್ರೋಟೀನ್ ಅಂಶಗಳು ಇರುವುದರಿಂದ ಇದು ಕ್ಯಾನ್ಸರ್ ರೋಗವನ್ನುನಿವಾರಿಸುತ್ತದೆ . ಪನೀರನ್ನು ಸೇವಿಸುವುದರಿಂದ ನಮ್ಮ ಮೂಳೆಗಳು ಮತ್ತು ಹಲ್ಲುಗಳು ಗಟ್ಟಿಯಾಗುತ್ತದೆ ಮತ್ತೆ ಮೂತ್ರ ಸಮಸ್ಯೆಯನ್ನು ನಿವಾರಿಸುತ್ತದೆ . ಪನೀರನ್ನು ಸೇವಿಸುವುದರಿಂದ ಈ ರೀತಿಯ ಹಲವಾರು ಸಮಸ್ಯಗಳಿಂದ ದೂರ ಉಳಿಯಬಹುದು .

ಈರುಳ್ಳಿ ಉಪಯೋಗಗಳು

[ಬದಲಾಯಿಸಿ]
             ಯಾವುದೆ ಒಂದು ಉತ್ತಮ ಅಡುಗೆ ಮಾಡಬೇಕಾದರೆ ಈರುಳ್ಳಿ ಅತ್ಯಗತ್ಯ . ಈರುಳ್ಳಿ ಇಲ್ಲದ ಅಡುಗೆಯಲ್ಲಿ ರುಚಿ ಕಾಣುವುದಿಲ್ಲ. ಈರುಳ್ಳಿ ಒಂದು ಉತ್ತಮವಾದ ಮನೆಮದ್ದು .ಈರುಳ್ಳಿ ನಿಂದ ಸಾಕಷ್ಟು ರೋಗಗಳನ್ನು ತಡೆಗಟ್ಟಬಹುದು . ಸಾಮಾನ್ಯ ಕಾಯಿಲೆಗಳಾದ ಕೆಮ್ಮು , ತಂಡಿ , ಉಸಿರಾಟದ ತೊಂದರೆ , ಆಸ್ತಮಗಳಂತ ರೋಗಗಳನ್ನು ಗುಣಪಡಿಸಿಕೊಳ್ಳಬಹುದು . 

ಬೆಳ್ಳುಳ್ಳಿ ಉಪಯೋಗಗಳು

[ಬದಲಾಯಿಸಿ]
             ಬೆಳ್ಳುಳ್ಳಿ ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ ಕಹಿ ಇದ್ದರು, ಈ ಪುಟ್ಟ ಬೆಳ್ಳುಳ್ಳಿ ಅಡುಗೆಗೆ ನಂಬಲಸಾಧ್ಯವಾದ ರೀತಿಯಲ್ಲಿ ರುಚಿ ನೀಡುತ್ತದೆ . ಬಹಳ ಹಿಂದಿನಿಂದಲೂ ಹಲವು ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಬಳಸುತ್ತಿದ್ದಾರೆ . 

ಶುಂಠಿ ಉಪಯೋಗಗಳು

[ಬದಲಾಯಿಸಿ]
            ಚಳಿಗಾಲದಲ್ಲಿ ಒಂದು ಲೋಟ ಬಿಸಿ ಬಿಸಿ ಶುಂಠಿ ಚಹಾ ಕುಡಿದರೆ ಅದು ನೀಡುವಷ್ಠು ಆರಾಮವನ್ನು ಬೇರೆ ಯಾವುದೂ ನೀಡುಲು ಸಾಧ್ಯವಿಲ್ಲ . ಶುಂಠಿಯಲ್ಲಿ ವಿಟಮಿನ್ ಸಿ , ಮೆಗ್ನೀಶಿಯಂ ಮತ್ತು ಇತರ ಖನಿಜಗಳನ್ನು ಹೊಂದಿರುವದರಿಂದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ . 

ಪನೀರ್ ಮಾಡುವ ವಿಧಾನ

[ಬದಲಾಯಿಸಿ]
           ಅರ್ಧ ಲೀಟರ್ ಹಾಲನ್ನು ಕುದಿಸಿ ತಣ್ಣಗಾಗಿಸಬೇಕು . ತಣ್ಣಗಾದ ಹಾಲಿಗೆ ನಿಂಬೆ ಹಣ್ಣಿನ ಎರಡು ಹನಿ ರಸವನ್ನು ಸೇರಿಸಿ ಇಡಬೇಕು  , ನಿಂಬೆ ಹಣ್ಣಿನ ರಸ ಹಾಕುವುದರಿಂದ ಹಾಲು  ಒಡೆಯುತ್ತದೆ ಸ್ವಲ್ಪ ಸಮಯದನಂತರ ಒಡೆದಿರುವ ಹಾಲನ್ನು ಒಂದು ಬಟ್ಟೆಯಲ್ಲಿ ಸೋಸಿ ನೀರಿನಂಶವನ್ನು ತೆಗೆಯಬೇಕು . ಬಟ್ಟೆಯಲ್ಲಿ ಉಳಿದ ಪನೀರನ್ನು ಒಂದು ಸಮತಟ್ಟೆಯಲ್ಲಿ ಹಾಕಿ ಸಮವಾಗಿ ಒತ್ತಬೇಕು . ಈ ತಟ್ಟೆಯನ್ನು ತಂಗಲು ಪೆಟ್ಟಿಗೆಯಲ್ಲಿ ಒಂದು ಗಂಟೆ ಇಡಬೇಕು . ಒಂದು ಗಂಟೆಯ ಬಳಿಕ ಪನೀರ್ ತಟ್ಟೆಯನ್ನು ಹೊರ ತೆಗೆದು ಸಮವಾಗಿ  ಕತ್ತರಿಸಿ ಇಡಬೇಕು . ಈಗ ಪನೀರ್ ತಯಾರಾಯಿತು . ಪನೀರ್ ಬೆಲೆ ಹೆಚ್ಚಾದಾಗ ನಾವು ಹೀಗೆ ಪನೀರನ್ನು ಮನೆಯಲ್ಲಿ ತಯಾರಿಸಬಹುಸದು . 

ಈ ಪಾಲಕ್ ಪನೀರ್ ಮಾಡಲು ಬೇಕಾಗುವ ಪ್ರಮುಖ ಸಾಮಗ್ರಿಗಳೆಂದರೆ

[ಬದಲಾಯಿಸಿ]
           ಪನೀರ್ ೧೦೦ ಗ್ರಾಂಮ , ಪಾಲಕ್ ಸೊಪ್ಪು ೧ ಕಟ್ಟು , ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ೧ ಅಥವ ಅರ್ಧ ಚಮಚ , ಕತ್ತರಿಸಿದ ಈರುಳ್ಳಿ ೧ ಅಥವ ೨ , ಕರಿಮೆಣಸು , ಹಸಿಮೆಣಸು ೨ ಅಥವ ೩ , ಪಲಾವ್ ಎಲೆ ೧ ಅಥವ ೨ , ಜೀರಿಗೆ ಪುಡಿ ಸ್ವಲ್ಪ , ಮೆಣಸು ಅರ್ಧ ಚಮಚ , ಜೀರಿಗೆ ಪುಡಿ ಅರ್ಧ ಚಮಚ , ಏಲಕ್ಕಿ , ಲವಂಗ , ಚಕ್ಕೆ , ಬೆಳ್ಳುಳ್ಳಿಯಿಂದ ಮಾಡಿದ ಗರಂ ಮಸಾಲ , ತುಪ್ಪ ೧ ಚಮಚ , ಎಣ್ಣೆ ಒಂದು ಚಮಚ , ಹಾಲಿನ ಕೆನೆ ೧ ರಿಂದ ೨ ಕಪ್ , ಉಪ್ಪು ರುಚಿಗೆ ತಕ್ಕಷ್ಟು . 

ಪಾಲಕ ಪನೀರ್ ಮಾಡುವ ವಿಧನ

[ಬದಲಾಯಿಸಿ]
           ಪಾಲಕ್ ಸೊಪ್ಪನ್ನು ಕುದಿಸಿದ ನೀರಿಗೆ ಹಾಕಿ ಎರಡು ನಿಮಿಷ ಬೇಯಿಸಬೇಕು , ಬೇಯಿಸಿದ ಪಾಲಕ್ ಸೊಪ್ಪನ್ನು ತೆಗೆದು ತಣ್ಣೀರಿನಲ್ಲಿ ಇಡಬೇಕು ಹೀಗೆ ಮಾಡುವದರಿಂದ ಪಾಲಕ್ ಸೊಪ್ಪಿನ ಹಸಿರು ಬಣ್ಣ ಉಳಿಯುತ್ತದೆ. ಇದರಿಂದ ನಮಗೆ ಹಸಿರಾದ ಪಾಲಕ್ ಪನೀರ್ ಮಾಡಬಹುದು . ನಂತರ ಪನೀರನ್ನು ಒಂದು ಬಾಣಲಿಗೆ ಹಾಕಿ ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಎರಡು ನಿಮಿಷ ಕಾಲ ಹುರಿಯಬೇಕು ಪನೀರ್ ಹೆಚ್ಚು ಹುರಿಯಲು ಬಿಡಬಾರದು . ತಣ್ಣೀರಲ್ಲಿ ಹಾಕಿದ ಪನೀರನ್ನು ತೆಗೆದು ಅದನ್ನು ಅರೆಯಬೇಕು ,  ಹಸಿಮೆಣಸು ಮತ್ತು ಶುಂಠಿಯನ್ನು ಕೂಡ ಅರೆಯ ಬೇಕು ನಂತರ ಒಂದು ಬಾಣಲಿಗೆ ಎಣ್ಣೆ ಹಾಕಿ ಅದರಲ್ಲಿ ಪಲಾವ್ ಎಲೆ ಮತ್ತು ಜೀರಿಗೆಯನ್ನು ಹುರಿದುಕೊಳ್ಳಬೇಕು ನಂತರ ಕತ್ತರಿಸಿ ಇಟ್ಟಿರುವ ಈರುಳ್ಳಿಯನ್ನು ಹಾಕಿ ಕಂದು ಬಣ್ಣಕ್ಕೆ ಬರುವ ಹಾಗೆ ಹುರಿದು. ಹುರಿದ ಈರುಳ್ಳಿಗೆ ಶುಂಠಿ ಮತ್ತು ಬೆಳ್ಳುಳ್ಳಿ ಮಿಶ್ರಣ ಹಾಕಿ ಹುರಿಯಿರಿ ನಂತರ ಅರೆದ ಪಾಲಕ್  ಸೊಪ್ಪನ್ನು ಹುರಿದು ಈರುಳ್ಳಿಯೊಂದಿಗೆ ಮಿಶ್ರಣ ಮಾಡಿ ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು , ಮೆಣಸು , ಜೀರಿಗೆ ಪುಡಿ ಹಾಕಿ ಎರಡ ರಿಂದ ಮೂರು ನಿಮಿಷ ಬೇಯಿಸಿ , ನಂತರ ಬೆಂದ ಪಾಲಕಿಗೆ ಪನೀರನ್ನು ಹಾಕಿ , ಬೇಯುತ್ತಿರುವಾಗ ಪಾಲಕ್ ಪನೀರಿನ ಮೇಲೆ ಎಣ್ಣೆ ಕಾಣರಾರಂಭಿಸಿದಾಗ ಪಾಲಕ್ ಪನೀರ್ ತಯಾರಗಿದೆ ಎಂದು ಅರ್ಥ. ಅದರ ಮೇಲೆ ಸ್ವಲ್ಪ ಗರಂ ಮಸಾಲವನ್ನು ಹಾಕಿ ಬೇಯಿಸಿದರೆ  ಘಮಘಮವಾದ ಪಾಲಕ್ ಪನೀರ್ ತಯಾರಾಗಿದೆ .ಪಾಲಕ್ ಮತ್ತು ಪನೀರಿನಿಂದ ಹಲವಾರು ರೀತಿಯ ಅಡುಗೆಗಳನ್ನು ತಯಾರಿಸಬಹುದು , ಪಾಲಕ್ ಸೊಪ್ಪು ಮತ್ತು ಪನೀರನ್ನು ಅಡುಗೆಗಳಲ್ಲಿ ಉಪಯೋಗಿಸುವುದರಿಂದ ಅಡುಗೆಗೆ ಒಂದು ರೀತಿಯ ರುಚಿ ಕೊಡುತ್ತದೆ ಮತ್ತು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಉಲ್ಲೇಖಗಳು

[ಬದಲಾಯಿಸಿ]

[] []

  1. http://hebbarskitchen.com/palak-paneer-recipe-restaurant-style-palak-paneer-recipe/
  2. https://en.wikipedia.org/wiki/Palak_paneer