ಸದಸ್ಯ:Uma rajappa dasar/ನನ್ನ ಪ್ರಯೋಗಪುಟ1

ವಿಕಿಪೀಡಿಯ ಇಂದ
Jump to navigation Jump to search

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಭೌಗೋಳಿಕವಾಗಿ ಚಾರಿತ್ರಿಕವಾಗಿ ಮತ್ತು ಸಾಂಸ್ಕ್ರತಿಕವಾಗಿ ಒಂದೇ ಪ್ರದೇಶ. ರಾಜಕೀಯ ಕಾರಣಗಳಿಗಾಗಿ ಬೇರ್ಪಟ್ಟ ಈ ಜಿಲ್ಲೆಗಳನ್ನು ಬೇರೆ ಬೇರೆಯಾಗಿ ಯೋಚಿಸುವುದೂ ಕಷ್ಟ. ದಕ್ಷಿಣ ಕನ್ನಡ ಎಂದಾಕ್ಷಣ ಉಡುಪಿ ಜಿಲ್ಲೆಯೂ ಮನಸ್ಸಿಗೆ ಬರುತ್ತದೆ. ಎರಡು ಜೆಲ್ಲೆಗಳನ್ನು ಒಟ್ಟಾಗಿ ದಕ್ಷಿಣ ಕರಾವಳಿ ಜಿಲ್ಲೆಗಳೆಂದು ಕರೆಯುತ್ತಾರೆ. ಸುಮಾರು ೮೮೪೧ ಚದರ ಕಿಲೋ ಮೀಟರು ವಿಸ್ತಾರವಾದ ದಕ್ಷಿಣ ಕರಾವಳಿ ಜಿಲ್ಲೆಗಳಲ್ಲಿ ೧೪೧ ಕಿಲೋ ಮೀಟರುಗಳಷ್ಟು ಉದ್ದದ ಸಮುದ್ರ ತೀರವಿದೆ,೨೧ ಚಿಕ್ಕ ಪುಟ್ಟ ನದಿಗಳಿವೆ. ಎಲ್ಲಾ ನದಿಗಳು ಗೋಡೆಯಂತಿರುವ ಪಶ್ಚಿಮ ಘಟ್ಟದಲ್ಲಿ ಹುಟ್ಟುವುದರಿಂದ ಅವುಗಳ ದೂರ ೮೦-೧೦೦ ಕಿಲೋ ಮೀಟರುಗಳಷ್ಟು ಮಾತ್ರ. ಬರಗಾಲ ಕಂಡರಿಯದ ಈ ಹಚ್ಚ ಹಸುರಿನ ನಾಡಿನಲ್ಲಿ ಅಪಾರ ನೈಸರ್ಗಿಕ ಸಂಪತ್ತಿದೆ. ಕಡಿದಾದ ಪಶ್ಚಿಮ ಘಟ್ಟ,ನಿತ್ಯಹರಿದ್ವರ್ಣ ಮತ್ತು ಎಲೆ ಉದುರುವ ಕಾಡುಗಳು,ಹುಲ್ಲುಗಾವಲು,ಹಿನ್ನೀರ ಪ್ರದೇಶಗಳು,ಕಾಂಡ್ಲವನ,ಕೆರೆ-ತೊರೆಗಳು,ಭತ್ತದ ಗದ್ದೆಗಳು,ತೆಂಗು-ಕಂಗು ತೋಟಗಳು ಹೀಗೆ ನಾನಾ ಜೀವವಾಸಗಳು ಜೀವ ಸಂಕುಲಕ್ಕೆ ನೆರವು ನೀಡಿವೆ.

ಪಕ್ಷಿ ಸಂಪತ್ತು[ಬದಲಾಯಿಸಿ]

ಪಕ್ಷಿಗಳು ನಮ್ಮ ಪರಿಸರದ,ಜನಜೀವನದ ಒಂದು ಅವಿಭಾಜ್ಯ ಅಂಗ. ಹಾರುವ ಯಂತ್ರಗಳೆಂದೇ ಪ್ರಸಿದ್ದಿಯಾಗಿರುವ ಪಕ್ಷಿ ಗುಂಪು ನಿಸರ್ಗದ ಅಪೂರ್ವ ಸ್ರಜನಶೀಲ ಕ್ರಿಯೆಗೊಂದು ಉದಾಹರಣೆ. ಹಕ್ಕಿಗಳ ರಚನೆಯಿಂದ ಹಿಡಿದು ಜೀವನದ ಎಲ್ಲಾ ಹಂತಗಳೂ ವಿಶಿಷ್ಟ ಮತ್ತು ಅದ್ಭುತ. ಪ್ರಾಚೀನ ಕಾಲದಿಂದಲೂ ಮಾನವನಿಗೆ ಅತಿ ಪ್ರಾಣಿ ಗುಂಪೆಂದರೆ ಹಕ್ಕಿಗಳು. ದಕ್ಷಿಣ ಕರಾವಳಿ ಜಿಲ್ಲೆಗಳಲ್ಲಿ ಹೇಳಿಕೊಳ್ಳುವಂತಹ ಪ್ರಸಿದ್ಧ ಪಕ್ಷಿಧಾಮಗಳಿಲ್ಲ. ಆದರೂ ಪಕ್ಷಿಗಳ ವೈವಿಧ್ಯಕ್ಕೆ ಕೊರತೆ ಇಲ್ಲ. ನಿತ್ಯ ಹರಿದ್ವರ್ಣ ಕಾಡುಗಳಿಂದ ಹಿಡಿದು ಸಮುದ್ರ ತೀರ ದ್ವೀಪಗಳ ವರೆಗೆ ವಿಭಿನ್ನ ಪಕ್ಷಿ ಸಂಕುಲಕ್ಕೆ ಅನುಕೂಲಕರವಾಗಿವೆ. ಸುಮಾರು೨೫೦(+೨೦)ಪಕ್ಷಿ ಪಭೇದಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಕಾಡು ಪಕ್ಷಿಗಳು,ಜಲ ಪಕ್ಷಿಗಳು,ಸಮುದ್ರ ಪಕ್ಷಿಗಳು ಸೇರಿವೆ. ದಕ್ಷಿಣ ಕರಾವಳಿ ಜಿಲ್ಲೆಗಳ ಪಕ್ಷಿ ಸಮೂಹವನ್ನು ಮೂರ ಗುಂಪುಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ,

  1. ದೂರದಿಂದ ವಲಸೆ ಬರುವ ಪಕ್ಷಿಗಳು
  2. ಸ್ಥಳೀಯವಾಗಿ ವಲಸೆ ಬರುವ ಹಕ್ಕಿಗಳು
  3. ಸ್ಥಳೀಯ ಹಕ್ಕಿಗಳು.

ದೂರದ ವಲಸೆ ಹಕ್ಕಿಗಳು[ಬದಲಾಯಿಸಿ]

ವರ್ಷಂಪ್ರತಿ ಆಗಸ್ಟ್ ತಿಂಗಳಿಂದ ಮಾರ್ಚ್-ಏಪ್ರಿಲ್ ತಿಂಗಳವರೆಗೆ ಉತ್ತಾರಾರ್ಧಗೋಳದಿಂದ ಅನೇಕ ಹಕ್ಕಿಗಳು ನಮ್ಮ ಕರಾವಳಿ ಜಿಲ್ಲೆಗಳಿಗೆ ವಲಸೆ ಬರುತ್ತವೆ. ವಿಂಬ್ರೆಲ್ ಮತ್ತು ಕರ್ಲ್ಯೂಪಕ್ಷಿಗಳು ಜೂನ್ -ಜುಲೈ ತಿಂಗಳಲ್ಲಿ ಉಡುಪಿ ಜಿಲ್ಲೆಯ ತಲ್ಲೂರು ಕಾಂಡ್ಲವನದಲ್ಲಿ ಬರುವುದು ಸಾಮಾನ್ಯವಾಗಿತ್ತು.

ದೂರದ ವಲಸೆಗೆ ಹೆಸರು ವಾಸಿಯಾದ ಗೋಲ್ಡನ್ ಪ್ಲೋವರ್ ಆಗಸ್ಟ್ ತಿಂಗಳ ೩೦ರಂದು ಪ್ರತಿವರ್ಷ ಉಡುಪಿ ಜಿಲ್ಲೆಯ ಅನೇಕ ಕಡೆಗಳಿಗೆ ಬರುತ್ತವೆ. ದೂರದಿಂದ ವಲಸೆ ಬರುವ ಹಕ್ಕಿಗಳು ಸಾಮಾನ್ಯವಾಗಿ ಹಿಂಡು ಹಿಂಡಾಗಿ ಕನ್ನಡುಬರುವುದಲ್ಲದೆ,ಎರಡು ಅಥವಾ ಮೂರು ವಿಭೀನ್ನ ಪ್ರಭೇದಗಳಲ್ಲಿ ಒಟ್ಟಿಗೆ ಇರುತ್ತವೆ. ಕಡಲ ತೀರ,ತೀರದ ಬಳಿ ಇರುವ ದ್ವೀಪ,ಭತ್ತದ ಗದ್ದೆಗಳು,ನದಿಗಳ ಮಧ್ಯೆ ಇರುವ ಮಣ್ಣಿನ ದಿಣ್ಣೆಗಳಲ್ಲಿ ವಲಸೆ ಹಕ್ಕಿಗಳು ಕಂಡುಬರುತ್ತವೆ.

ಸ್ಥಳೀಯವಾಗಿ ವಲಸೆ ಬರುವ ಹಕ್ಕಿಗಳು[ಬದಲಾಯಿಸಿ]

ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ನಮ್ಮ ನಾಡಿನ ಹಲವಾರು ಪಕ್ಷಿಗಳು ತಮ್ಮ ಅವಾಸಗಳನ್ನು ಬದಲಿಸುತ್ತವೆ. ಮಳೆಗಾಲದಲ್ಲಿ ಎಲ್ಲೆಡೆ ಚದುರಿರುವ ಈಪಕ್ಷಿಗಳು ಬೇಸಿಗೆ ತಿಂಗಳಲ್ಲಿ ಕೆರೆಗಳಿಗೆ ಬರುತ್ತವೆ. ಸ್ಥಳೀಯ ವಲಸೆ ಹಕ್ಕಿಗಳು ಪ್ರತಿವರ್ಷ ಒಂದೇ ಸ್ಥಳಕ್ಕೆ ವಲಸೆ ಬರಬೇಕಾಗಿಲ್ಲ. ಸೂಕ್ತ ನೆಲೆ ಕಂಡು ಬಂದಲ್ಲಿ ಉಳಿಯುವ ಪಕ್ಷಿಗಳು ಇವು. ನೀರ ಕಾಗೆ,ಹಾವುಹಕ್ಕಿ,ಪರ್ಪಲ್ ಹೆರಾನ್ ಮೊದಲಾದವು ಕೂಡಾ ಸ್ಥಳೀಯವಾಗಿ ತಮ್ಮ ವಾಸ ಸ್ಥಳಗನ್ನು ಬದಲಿಸುತ್ತವೆ.

ಸ್ಥಳೀಯ ಪಕ್ಷಿಗಳು[ಬದಲಾಯಿಸಿ]

ನಾವು ಗುರತಿಸಿದ,ದಾಖಲಿಸಿದ ಪಕ್ಷಿ ಪ್ರಭೇದಗಳಲ್ಲಿ ಬಹುತೇಕ ಪಕ್ಷಿಗಳು ಸ್ಥಳೀಯ ಪಕ್ಷಿಗಳು. ಕಾಗೆ ಗೂಬೆಗಳಿಂದ ಹಿಡಿದು ನೆತ್ತಿಂಗ,ಮಳೆ ಹಕ್ಕಿಗಳವರೆಗೆ ಅವುಗಳ ವೈವಿಧ್ಯ ಹರಡಿದೆ ಜಾಡ ಮಾಲಿಗಳಾಗಿ(ಕಾಗೆ,ಹದ್ದು,ಡೇಂಗೆ),ಪರಾಗಸ್ಪರ್ಶಗಳಾಗಿ(ಮೈನಾ),ಬೀಜ ಪ್ರಸರಣದ ವಾಹಕಗಳಾಜಿ(ಕೋಗಿಲೆ,ಪಿಕಳಾರ),ಇಲಿ ನಿಯಂತ್ರಕಗಳಾಗಿ(ಗೂಬೆ)ಸ್ಥಳೀಯ ಪಕ್ಷಿಪ್ರಭೇದಗಳು ಪರಿಸರ ಸೇವೆಯಲ್ಲಿ ಸದಾ ಮಗ್ನವಾಗಿರುತ್ತವೆ.

ದಕ್ಷಿಣ ಕರಾವಳಿ ಜಿಲ್ಲೆಗಳ ಕೆಲ ಪಕ್ಷಿ ತಾಣಗಳು[ಬದಲಾಯಿಸಿ]

ಸಂತಮೇರಿ ದ್ವೀಪ ಮತ್ತು ತೇಲುಕಲ್ಲು[ಬದಲಾಯಿಸಿ]

ಅಪರೂಪದ ವಲಸೆ ಬರುವ ಆಸ್ಟ್ರೆ ಹಕ್ಕಿಗಳು ಕಾಣ ಸಿಗುವುದು ಸಂತಮೇರಿ ದ್ವೀಪದ ಬಳಿಯ ಬಂಡೆಯ ಮೇಲೆ. ವಿವಿಧ ರೀತಿಯ ಪ್ಲೋವರ್,ಸ್ಯಾಂಡ್ ಪೈಪರ್(ಮರಳ ಪೀಪಿ),ಸ್ಯಾಂಡರ್ ಲಿಂಗ್ ಮೊದಲಾದವು ಇಲ್ಲಿ ಸಾಮಾನ್ಯ. ದ್ವೀಪದ ಸಮೀಪವಿರುವ 'ತೇಲುಕಲ್ಲು'ವಿನಲ್ಲಿ ಸಾವಿರಾರು ಸಂಖ್ಯೆಯ ಟರ್ನ್ ಮತ್ತು ಗಲ್(ಕಡಲು ಕಾಗೆ)ಗಳನ್ನು ಕಾಣಬಹುದು.

ಮಲ್ಯಾಡಿ ಪಕ್ಷಿ ತಾಣ[ಬದಲಾಯಿಸಿ]

ಕುಂದಾಪುರ ತಾಲೂಕಿನ ರಾಪ್ಟ್ರೀಯ ಹೆದ್ದಾರಿಯಲ್ಲಿ ತೆಕ್ಕಟ್ಟೆ ಊರಿದೆ.ಈ ಊರಿನಿಂದ ಒಂದು ಕಿಲೋ ಮೀಟರ್ ಪೂರ್ವಕ್ಕೆ ಒಂದು ಚಿಕ್ಕ ಹಳ್ಳಿ ಮಲ್ಯಾಡಿ.ಇಲ್ಲಿ ಪಕ್ಷಿಗಳು ಪಟ್ಟಣ ಕಟ್ಟಿವೆ.ಮೇಲ್ಮಣ್ಣು ತೆಗೆದು ಉಂಟಾದ ಹೊಂಡಗಳು ನೀರು ತುಂಬಿ,ಪಕ್ಷಿಗಳಿಗೆ ಆಶ್ರಯ ನೀಡಿದೆ.ಸುಮಾರು ಒಂದು ಚದರ ಕಿಲೋ ಮೀಟರಿನಷ್ಟು ವ್ಯಾಪಕವಾದ ಈ ನೀರಿನಾಶ್ರಯ ಸುಮಾರು ೪೫ ವಿಧದ ಪಕ್ಷಿಗಳಿಗೆ ತಾಣ.

ಆನೆಕೆರೆ[ಬದಲಾಯಿಸಿ]

ಕಾರ್ಕಳ ಪೇಟೆಗೆ ಹೊಂದಿಕೊಂಡು ಇರುವ ಆನೆಕೆರೆ,ಹೆಸರೇ ಹೇಳುವಂತೆ ಒಂದು ದೊಡ್ಡ ಕೆರೆ.ಸದಾ ನೀರಿನಿಂದ ತುಂಬಿರುತ್ತಿದ್ದ ಈ ಕೆರೆ ಊರವರಿಗೆ ವರದಾನ.ಮಲ್ಯಾಡಿಯ ಪಕ್ಷಿ ತಾಣದಂತೆ ಆನೆ ಕೆರೆಯೂ ಪ್ರಿಯರಿಗೆ ಅಚ್ಚುಮೇಚ್ಚು.