ಸದಸ್ಯ:Supriya chandrashekar
ಬಾಂಬೆ ರಕ್ತ ಗುಂಪನ್ನು ಎಚ್/ಎಚ್ ರಕ್ತ ಗುಂಪೆಂದು ಸಹ ಕರೆಯಲಾಗುತ್ತದೆ.[೧] ಇದು ಒಂದು ಅಪರೂಪದ ರಕ್ತ ಗುಂಪು. ಈ ರಕ್ತ ಗುಂಪು ಮೊದಲ ಬಾರಿಗೆ ೧೯೫೨ ರಲ್ಲಿ ಭಾರತದ ಬಾಂಬೆ ನಗರ ಅಂದರೆ ಇಂದಿನ ಮುಂಬೈಯಿ ನಗರದಲ್ಲಿ ಬೆಳಕಿಗೆ ಬಂದಿತು. ಇದನ್ನು ಕಂಡು ಹಿಡಿದವರು ಡಾ.ವೈ.ಎಂ.ಬೆನ್ಡೆ. ಇದು ಹೆಚ್ಚಾಗಿ ಭಾರತದ ಉಪ-ಖಂಡ (ಭಾರತ, ಬಾಂಗ್ಲಾದೇಶ, ಪಾಕಿಸ್ತಾನ) ಮತ್ತು ಇರಾನ್ ನಲ್ಲಿ ಕಂಡುಬರುತ್ತದೆ.
ರಕ್ತ ವರ್ಗಾವಣೆಯ ತೊಂದರೆಗಳು
[ಬದಲಾಯಿಸಿ]ಬಾಂಬೆ ಫಿನೋಟೈಪ್ ಹೊಂದಿರುವ ಮೊದಲ ವ್ಯಕ್ತಿ ರಕ್ತದ ಪ್ರಕಾರವನ್ನು ಹೊಂದಿದ್ದು ಅದು ಹಿಂದೆಂದೂ ನೋಡಿರದ ರೀತಿಯಲ್ಲಿ ಇತರ ರಕ್ತ ಪ್ರಕಾರಗಳಿಗೆ ಪ್ರತಿಕ್ರಿಯಿಸಿತು. ಸೀರಮ್ ಪ್ರತಿಕಾಯಗಳನ್ನು ಕೆಂಪು ರಕ್ತ ಕಣಗಳು ಹೊಂದಿದ್ದು ಅದು ಎಲ್ಲಾ ಸಾಮಾನ್ಯ ಎಬಿಒ ಫಿನೋಟೈಪ್ಸ್ ಮೇಲೆ ದಾಳಿ ಮಾಡಿತು. ಕೆಂಪು ರಕ್ತ ಕಣಗಳು ಎಬಿಒ ರಕ್ತದ ಗುಂಪಿನ ಎಲ್ಲಾ ಪ್ರತಿಜನಕಗಳನ್ನು ಹೊಂದಿರುವುದಿಲ್ಲ ಮತ್ತು ಹಿಂದೆ ತಿಳಿದಿಲ್ಲದ ಹೆಚ್ಚುವರಿ ಪ್ರತಿಜನಕವನ್ನು ಹೊಂದಿದ್ದವು.[೧]
ಒ ರಕ್ತ ಗುಂಪಿನಲ್ಲಿರುವ ಎಚ್ ಪ್ರತಿಜನಕ ಅಪರೂಪದ ಬಾಂಬೆ ಫಿನೋಟೈಪ್ ವ್ಯಕ್ತಿಗಳು ಎಚ್ ಪ್ರತಿಜನಕದ ವ್ಯಕ್ತಪಡಿಸುವುದಿಲ್ಲ. ಆದ್ದರಿಂದ ಅವರು ತಮ್ಮ ಕೆಂಪು ರಕ್ತ ಜೀವಕೋಶದಲ್ಲಿ ಎ ಮತ್ತು ಬಿ ಪ್ರತಿಜನಕಗಳನ್ನು ಉತ್ಪತಿ ಮಾಡುವುದಿಲ್ಲ. ಈ ಕಾರಣದಿಂದ ಈ ರಕ್ತ ಗುಂಪೊಂದಿರುವ ವ್ಯಕ್ತಿಗಳು ಎಬಿಒ ರಕ್ತ ಗುಂಪಿನವರಿಗೆ ತಮ್ಮ ಕೆಂಪು ರಕ್ತ ಜೀವಕೋಶಗಳನ್ನು ದಾನ ಮಾಡಬಹುದು. ಆದರೆ ಅವರು ಯಾವುದೇ ರಕ್ತದ ಗುಂಪಿನಿಂದ ರಕ್ತವನ್ನು ಪಡೆಯಲು ಸಾದ್ಯವಾಗುವುದಿಲ್ಲ. ಬಾಂಬೆ ರಕ್ತ ಗುಂಪು ಹೊಂದಿರುವವರು ಮಾತ್ರ ಅವರಿಗೆ ರಕ್ತವನ್ನು ನೀಡಬಹುದು. ಎಚ್ ಪ್ರತಿಜನಕ ಒಂದು ನಿರ್ದಿಶ್ಟ ಕಿಣ್ವ ಫ್ಯೊಕೋಸಿಲ್ಟ್ರಾನ್ಸರೇಸ್ಯ್ ಯಿಂದ ಉತ್ಪಾದಿಸಲಾಗಿದೆ. ಈ ಎಚ್ ಲೋಕಸ್ ಎಫ್ ಯು ಟಿ ಐ ಜೀನ್ನನ್ನು ಹೊಂದಿದೆ. ಕನಿಶ್ಟ ಒಂದು ಎಫ್ ಯು ಟಿ ಐ ಕಾರ್ಯನಿರ್ವಹಣೆಯ ಪ್ರತಿಯು ಎಚ್ ಪ್ರತಿಕಜನಕ ಆರ್ ಬಿಸಿ ಮೇಲೆ ಉತ್ಪತಿಯಾಗುವುದು ಅಗತ್ಯವಿದೆ. ಒಂದು ವೇಳೆ ಎರಡು ಎಫ್ ಯು ಟಿ ಐ ಪ್ರತಿಗಳು ನಿಶ್ಕ್ರಯಾದಲ್ಲಿ ಬಾಂಬೆ ರಕ್ತ ಗುಂಪಾಗಿ ಕೊನೆಗೊಳ್ಳುತ್ತದೆ.[೧]
ರಕ್ತ ವರ್ಗಾವಣೆ ಸಮಯದಲ್ಲಿ ತೊಡಕುಗಳನ್ನು ತಪ್ಪಿಸಲು, ಬಾಂಬೆ ಫಿನೋಟೈಪ್ ವ್ಯಕ್ತಿಗಳನ್ನು ಕಂಡುಹಿಡಿಯುವುದು ಬಹಳ ಮುಖ್ಯ, ಆದರೆ ಎಬಿಓ ರಕ್ತದ ಗುಂಪು ವ್ಯವಸ್ಥೆಗೆ ಸಾಮಾನ್ಯ ಪರೀಕ್ಷೆಗಳು ಅವರನ್ನು ಗುಂಪು ಒ ಎಂದು ತೋರಿಸುತ್ತವೆ. ಆಂಟಿ-ಎಚ್ ಇಮ್ಯುನೊಗ್ಲಾಬ್ಯುಲಿನ್ಸ್ ಮಾಡಬಹುದು ಕಾಂಪ್ಲಿಮೆಂಟ್ ಕ್ಯಾಸ್ಕೇಡ್ ಅನ್ನು ಸಕ್ರಿಯಗೊಳಿಸಿ, ಇದು ರಕ್ತ ಪರಿಚಲನೆಯಲ್ಲಿರುವಾಗ ಕೆಂಪು ರಕ್ತ ಕಣಗಳ ವಿಘಟನೆಗೆ ಕಾರಣವಾಗುತ್ತದೆ, ತೀವ್ರವಾದ ಹೆಮೋಲಿಟಿಕ್ ಟ್ರಾನ್ಸ್‌ಫ್ಯೂಷನ್ ಪ್ರತಿಕ್ರಿಯೆ ಅನ್ನು ಪ್ರಚೋದಿಸುತ್ತದೆ. ರಕ್ತವನ್ನು ಟೈಪ್ ಮಾಡುವವರು ಮತ್ತು ಆರೈಕೆ ನೀಡುವವರು ಬಾಂಬೆ ರಕ್ತದ ಗುಂಪಿನ ಅಸ್ತಿತ್ವದ ಬಗ್ಗೆ ತಿಳಿದಿರದ ಹೊರತು ಮತ್ತು ಅದನ್ನು ಪರೀಕ್ಷಿಸುವ ವಿಧಾನಗಳನ್ನು ಹೊಂದಿರದ ಹೊರತು ಇದನ್ನು ತಡೆಯಲಾಗುವುದಿಲ್ಲ.
ಸಂಭವ
[ಬದಲಾಯಿಸಿ]ಈ ಅಪರೂಪದ ಫಿನೋಟೈಪ್ ಮಾನವ ಜನಸಂಖ್ಯೆಯಲ್ಲಿ ಸುಮಾರು ೦.೦೦೦೪% ಸಾಮಾನ್ಯವಾಗಿ ಇದೆ. ಈ ರಕ್ತದ ಗುಂಪಿಗೆ ಸೇರಿದ ಯಾವುದೇ ವ್ಯಕ್ತಿ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದಾಗ ರಕ್ತ ಪಡೆಯಲು ಸಾಧ್ಯವಾಗುವುದಿಲ್ಲ ಏಕೆಂದರೆ ಯಾವುದೇ ರಕ್ತ ಬ್ಯಾಂಕ್ ಸ್ಟಾಕ್ ಹೊಂದಿರುವುದಿಲ್ಲ. ರಕ್ತ ವರ್ಗಾವಣೆಯ ಅಗತ್ಯವನ್ನು ನಿರೀಕ್ಷಿಸುವವರು ತಮ್ಮ ಸ್ವಂತ ಬಳಕೆಗಾಗಿ ರಕ್ತವನ್ನು ಬ್ಯಾಂಕ್ ಮಾಡಬಹುದು, ಆದರೆ ಆಕಸ್ಮಿಕ ಗಾಯದ ಸಂದರ್ಭಗಳಲ್ಲಿ ಈ ಆಯ್ಕೆಯು ಲಭ್ಯವಿರುವುದಿಲ್ಲ. ಉದಾಹರಣೆಗೆ, ೨೦೧೭ ರ ಹೊತ್ತಿಗೆ ಒಬ್ಬ ಕೊಲಂಬಿಯಾ ಒಬ್ಬ ವ್ಯಕ್ತಿ ಮಾತ್ರ ಈ ಫಿನೋಟೈಪ್ ಅನ್ನು ಹೊಂದಿದ್ದಾನೆ ಎಂದು ತಿಳಿದುಬಂದಿದೆ ಮತ್ತು ರಕ್ತವನ್ನು ಬ್ರೆಜಿಲ್ ನಿಂದ ಆಮದು ಮಾಡಿಕೊಳ್ಳಬೇಕಾಗಿತ್ತು.[೨]೨೦೨೩ ರಲ್ಲಿ, ರಾಷ್ಟ್ರಾದ್ಯಂತ ಕೇವಲ ಮೂರು ನೋಂದಾಯಿತ ಬ್ರೆಜಿಲಿಯನ್ನರು ಈ ಫಿನೋಟೈಪ್ ಅನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.[೩] ಒ ರಕ್ತ ಗುಂಪು ಎಂದು ಪರೀಖಕ್ಶಿಸಿದ ರೋಗಿ ಬಾಂಬೆ ಫಿನೋಟೈಪ್ ಹೊಂದಿರುವ ಸಾಧ್ಯತೆ ಇದೆ, ಏಕೆಂದರೆ ಒಂದು ವೇಳೆ ಅವರ ಎರಡು ಗೌಣ ಆನುವಂಶಿಕ ಎಚ್ ಜೀನು ಅನುವಂಶಿಕವಾದಾಗ ಅವರು ಎ ಮತ್ತು ಬಿ ಕಿಣ್ವವನ್ನು ತಯಾರಿಸಲು ಬೇಕಾದ ಎಚ್ ಕಾರ್ಬೋಹೈಡ್ರೇಟ ಉತ್ಪತಿಯಾಗುವುದಿಲ್ಲ. ಇದರಿಂದ ಎ ಮತ್ತು ಬಿ ಕಿಣ್ವಗಳು ಉತ್ಪತಿಯಾಗುವುದೋ ಇಲ್ಲವೋ.... ಎಚ್ ಪ್ರತಿಜನಕ ಇಲ್ಲದ ಕಾರಣ ಎ ಮತ್ತು ಬಿ ಪ್ರತಿಜನಕವು ಉತ್ಪತಿಯಾಗುವುದು ಆಗದಿರುವುದು ಅತಿ ಮುಖ್ಯ ವಿಶಯ ಆಗುವುದಿಲ್ಲ.
ಜೀವರಸಾಯನಶಾಸ್ತ್ರ
[ಬದಲಾಯಿಸಿ]ಎಚ್, ಎ ಮತ್ತು ಬಿ ಪ್ರತಿಜನಕಗಳ ಬಯೋಸಿಂಥೆಸಿಸ್ ಮೊನೊಸ್ಯಾಕರೈಡ್ಗಳನ್ನು ವರ್ಗಾಯಿಸುವ ಕಿಣ್ವಗಳ (ಗ್ಲೈಕೋಸಿಲ್ ಟ್ರಾನ್ಸ್‌ಫರೇಸ್‌ಗಳು) ಸರಣಿಯನ್ನು ಒಳಗೊಂಡಿರುತ್ತದೆ. ಪರಿಣಾಮವಾಗಿ ಉಂಟಾಗುವ ಪ್ರತಿಜನಕಗಳು ಆಲಿಗೋಸ್ಯಾಕರೈಡ್ ಸರಪಳಿಗಳಾಗಿವೆ, ಇವುಗಳು ಕೆಂಪು ರಕ್ತ ಕಣಗಳ ಪೊರೆಯಲ್ಲಿ ಲಂಗರು ಹಾಕಲಾದ ಲಿಪಿಡ್ಗಳು ಮತ್ತು ಪ್ರೋಟೀನ್ಗಳಿಗೆ ಲಗತ್ತಿಸಲಾಗಿದೆ. ಎಬಿಒ ರಕ್ತದ ಗುಂಪಿನ ಪ್ರತಿಜನಕಗಳ ಸಂಶ್ಲೇಷಣೆಯಲ್ಲಿ ಮಧ್ಯಂತರ ತಲಾಧಾರವಾಗಿರುವುದರ ಹೊರತಾಗಿ ಎಚ್ ಪ್ರತಿಜನಕದ ಕಾರ್ಯವು ತಿಳಿದಿಲ್ಲ, ಆದಾಗ್ಯೂ ಇದು ಕೋಶ ಅಂಟಿಕೊಳ್ಳುವಿಕೆ ನಲ್ಲಿ ತೊಡಗಿಕೊಂಡಿರಬಹುದು. ಎಚ್ ಪ್ರತಿಜನಕವನ್ನು ಹೊಂದಿರದ ಜನರು ಹಾನಿಕಾರಕ ಪರಿಣಾಮಗಳಿಂದ ಬಳಲುತ್ತಿಲ್ಲ, ಮತ್ತು ಎಚ್- ಕೊರತೆಯು ಅವರಿಗೆ ರಕ್ತ ವರ್ಗಾವಣೆಯ ಅಗತ್ಯವಿದ್ದರೆ ಮಾತ್ರ ಸಮಸ್ಯೆಯಾಗಿದೆ, ಏಕೆಂದರೆ ಅವರಿಗೆ ಕೆಂಪು ರಕ್ತ ಕಣಗಳಲ್ಲಿರುವ ಎಚ್ ಪ್ರತಿಜನಕವಿಲ್ಲದೆ ರಕ್ತದ ಅಗತ್ಯವಿರುತ್ತದೆ.
ಬಾಂಬೆ ರಕ್ತಗುಂಪಿನ ತಳಿಶಾಸ್ತ್ರ- ರೋಗಿ ತನ್ನ ರಕ್ತ ಪರೀಕ್ಶೆ ವರದಿಯಲ್ಲಿ ’ಒ’ ತಳಿ ಕಂಡು ಬಂದಲ್ಲಿ ಬಾಂಬೆ ಪ್ರಕಟ ಲಕ್ಶಣವೆಂದು ಕರೆಯಬಹುದು. ಇದನ್ನು ಅವರು ಅನುವಂಶಿಕವಾಗಿ ’ಹೆಚ್’ ಜೀನ್ ಪಡೆದಿರುತ್ತಾರೆ ಈ ರಕ್ತ ಗುಂಪಿನ ವ್ಯಕ್ತಿಯ ರಕ್ತದಲ್ಲಿ ‘ಒ ಹೆಚ್’ ಮತ್ತು ‘ಹೆಚ್ ಹೆಚ್’ ಜೀನೊಟಯ್ಪ್ ಪಡೆದಿರುತ್ತರೆ. ಹಾಗಾಗಿ ಈ ರಕ್ತ ಗುಂಪಿನವರು ‘ಹೆಚ್’ ಕಾರ್ಬೊಹ್ಯ್ಡ್ರೆಟ್ ಉತ್ಪದಿಸುತ್ತಾರೆ ಈ ಅಂಶವು ‘ಎ’ ಹಾಗು ‘ಬಿ’ ಪ್ರತಿಜನಕದ ಪೂರ್ವಗಾಮಿ, ಈ ಕಾರಣದಿಂದ ‘ಎ’ ಅಥವ ‘ಬಿ’ ಎನ್ಜ್ಯ್ಮ್ ರಕ್ತದಲ್ಲಿ ಇರುವುದು ಇಲ್ಲದಿರುವುದು ಯಾವುದೆ ಪರಿಣಾಮ ಬೀರುವುದಿಲ್ಲ ಏಕೆಂದರೆ ಇಂತಹ ವ್ಯಕ್ತಿಯಲ್ಲಿ ‘ಎ’ ಹಾಗು ‘ಬಿ’ ಪ್ರತಿಜನಕ ಇರುವುದಿಲ್ಲ ಮತ್ತು ಪೂರ್ವಗಾಮಿ ಪ್ರತಿಜನಕ ‘ಹೆಚ್’ ಇರುತ್ತದೆ. ‘ಒ’ , ‘ಒ ಹೆಚ್-’ ಬೇರೆ ರಕ್ತದ ಗುಂಪಿನ ಉಪಗುಂಪಿಗೆ ಸೇರುವುದಿಲ್ಲ ಏಕೆಂದರೆ ತಮ್ಮ ಪೋಶಕರಿಂದ ಅವರು ಈ ಗುಂಪಿನ ‘ಅಲೀಲ್’ ಅನುವಂಶಿಕವಾಗಿ ಪಡೆದಿರುತ್ತಾರೆ. ಈ ಗುಂಪಿನ ರಕ್ತ ಪಡೆಯುವ ಮಕ್ಕಳಲ್ಲಿ ತಮ್ಮ ಪೊಶಕರು ತುಂಬ ಹತ್ತಿರದ ಸಂಬಧಿಗಳಾಗಿರುತ್ತರೆ ಇಂತಹ ಸಂದರ್ಭದಲ್ಲಿ ಒಂದೆ ತರಹದ ‘ಅಲೀಲ್’ ಪಡೆಯುವ ಸಾಧ್ಯತೆ ಹೆಚ್ಚು. ಆದರೆ ಪೋಶಕರಲ್ಲಿ ಈ ಗುಂಪಿನ ಲಕ್ಶಣ ಕಂಡುಬರುವುದಿಲ್ಲ ಇದಕ್ಕೆ ಕಾರಣ ಅವರಲ್ಲಿ ಹೆಟಿರೋಜಯ್ಗಸ್ ‘ಹೆಚ್’ ಜೀನ್ ಪಡೆದಿರುತ್ತಾರೆ. ಬಹುತೇಕವಾಗಿ ಈ ರಕ್ತ ಗುಂಪಿನವರು ರಾಜವಂಶಸ್ಥರು ಏಕೆಂದರೆ ಇವರಲ್ಲಿ ಸಂಬಧದಲ್ಲಿ ವಿವಾಹವಾಗುವುದು ಹೆಚ್ಚು ಹಾಗಾಗಿ ತಮ್ಮ ಮಕ್ಕಳಿಗೆ ‘ಹೆಚ್’ ಅಲೀಲ್ ವರ್ಗಾಯಿಸುವ ಸಾಧ್ಯತೆ ಹೆಚ್ಚು ಹಾಗು ಸುಲಭ.ಗರ್ಭಾವಸ್ತೆಯಲ್ಲಿರುವ ಮಹಿಳೆಯಲ್ಲಿ ಉತ್ಪತಿಯಾಗುವ ‘ಹೆಚ್’ ಪ್ರತಿಜನಕ "ಹೆಮೊಲಿಟಿಕ್" ಎಂಬ ಖಾಯಿಲೆಯನ್ನು ಭ್ರೂಣಕ್ಕೆ ತರಬಹುದು. ಈ ಖಾಯಿಲೆಯ ಸಾಧ್ಯತೆ ತಾಯಿಯಿಂದ ಮಗು ಬಾಂಬೆ ಪ್ರಕಟಲಕ್ಶಣ ಪಡೆಯದಿದ್ದಾಗ. ಇದಕ್ಕೆ ಕಾರಣ ಬಾಂಬೆ ಪ್ರಕಟಲಕ್ಶಣದ ವೈವಿದ್ಯತೆ ಹಾಗೂ ‘ಐಜಿಎಂ’ ಎಂಬ ಅಂಶ, ಇದು ದೇಹದ ನಿರೋಧಕ ವ್ಯವಸ್ತೆಯಿಂದ ಉತ್ಪತಿಯಾಗುತ್ತದೆ. ಆದರೆ ಇದು ಭ್ರುಂಅದ ಬಳಿ ತಲುಪಲು ಜರಾಯು ಅದ್ದವಾಗಿ ನಿಲ್ಲುತದೆ.
ಬಾಂಬೆ ರಕ್ತ ಗುಂಪು ಮೊದಲು ಬೆಳಕಿಗೆ ಬಂದಿದ್ದು ೫೦ ವರ್ಶಕ್ಕು ಹಿಂದೆ, ‘ಕೆ.ಇ.ಎಮ್’ ಎಂಬ ಆಸ್ಪತ್ರೆಯಲ್ಲಿ ದಾಖಲೆಯಾದ ಒಬ್ಬ ರೋಗಿಯ ರಕ್ತದ ಮಾದರಿಯನ್ನು ರಕ್ತ ಸಂಗ್ರಹಾಲಯಕ್ಕೆ ಕಳುಹಿಸಲಾಯಿತು ಅವನ ರಕ್ತ ‘ಒ’ ಗುಂಪಿನ ಲಕ್ಶಣ ತೂರಿತು ಹಾಗಗಿ ಅವನಿಗೆ ‘ಒ’ ಗುಂಪಿನ ರಕ್ತವನ್ನು ವರ್ಗಾಯಿಸಲಾಯಿತು ಆದರೆ ಅವನಲ್ಲಿ ತಕ್ಶನವೆ ವ್ಯತ್ಯಾಸ ಕಂಡುಬಂದಿತು ಹಾಗಾಗಿ ವರ್ಗಾವಣೆ ನಿಲ್ಲಿಸಲಾಯಿತು ಈ ಪ್ರತಿಕ್ರಿಯೆಯನ್ನು ‘ಹೆಮೊಲಿಟಿಕ್ ಟ್ರಾನ್ಫ಼್ಯುಶನ್’ ಎಂದು ಕರೆಯಲಾಗುತ್ತದೆ. ಮೊದಲು ‘ಕೆ.ಇ.ಎಮ್’ ಮುಂಬೈನ ಆಸ್ಪತ್ರೆಯಲ್ಲಿ ಮಾತ್ರ ಬಾಂಬೆ ರಕ್ತ ಗುಂಪನ್ನು ಪರೀಕ್ಶಿಸಲಾಗಿತಿತ್ತು ಮತ್ತು ಇಲ್ಲಿ ಏ ರಕ್ತ ಗುಂಪನ್ನು ಹೊಂದಿರುವವರ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಬಾಂಬೆ ರಕ್ತ ಗುಂಪಿನ ಪರೀಕ್ಶೆಯು ‘ಆರ್ ಹೆಚ್’ ಅಂಶದ ಮೇಲೆ ಅವಲಂಬಿಸುತ್ತದೆ. ವ್ಯಕ್ತಿ ಬಾಂಬೆ ಆರ್ ಹೆಚ್ ಪಾಸಿಟಿವ್ ಅಥವ ನೆಗೆಟಿವ್ ಆಗುವ ಸಾದ್ಯತೆ ಇರುತ್ತದೆ. ಈಗ ಬಹಲಶ್ಟು ರಕ್ತ ಸಂಗ್ರಹಾಲಯಗಲಲ್ಲಿ ಬಾಂಬೆ ರಕ್ತ ಗುಂಪನ್ನು ಪತ್ತೆ ಹಚ್ಚುವ ವಿಧಾನವನ್ನು ಒಳಗೊಂಡಿವೆ. ಈ ರಕ್ತ ಗುಂಪನ್ನು ಮೊದಲಬಾರಿ ಕಂಡುಬಂದಾಗ ಇದನ್ನು ‘ಒ’ ಗುಂಪಿನ ರಕ್ತ ಎಂದು ಭಾವಿಸಿದ್ದರು ಎಕೆಂದರೆ ‘ಎ’ ಮತ್ತು ‘ಬಿ’ ಪ್ರತಿಜನಕ ಇರಲ್ಲಿಲ. ಆದರೆ ಇಂತಹ ವ್ಯಕ್ತಿಯು ‘ಒ’ ಗುಂಪಿನ ರಕ್ತವನ್ನು ಪಡೆಯಳಗುತ್ತಿರಲ್ಲಿಲ, ಆಗ ಪರೀಕ್ಶಿಸಿದಾಗ ಇವರ ರಕ್ತದಲ್ಲಿ ‘ಹೆಚ್’ ಪ್ರತಿಜನಕ ಇಲ್ಲದಿರುವುದು ಕಂಡುಬಂದಿತು, ಆಗ ಇದೊಂದು ಬೇರೆ ಮಾದರಿಯ ರಹ್ತದ ಗುಂಪೆಂದು ದ್ರುದಪಟ್ಟಿತ್ತು.ಬಾಂಬೆ ರಕ್ತ ಗುಂಪನ್ನು ಪತ್ತೆಹಚ್ಚಲು "ಸೆರಮ್ ಗ್ರೋಪಿಂಗ್ ಅಥವ ರಿವರ್ಸ್ ಗ್ರೋಪಿಂಗ್" ಎಂಬ ವಿಧಾನದಿಂದ ಪತ್ತೆಹಚ್ಚುತ್ತಾರೆ ಇದರಲ್ಲಿ ‘ಹೆಚ್ ಲಾಕ್ಟೆನ್’ ಎಂಬ ಕಾರಕವನ್ನು ಬಳಸಿ ‘ಹೆಚ್’ ಪ್ರತಿಕಾಯವನ್ನು ಕಂಡುಹಿಡಿಯುತ್ತಾರೆ. ಈ ರಕ್ತ ಗುಂಪು ಹೊಂದಿರುವ ವ್ಯಕ್ತಿ ಯಾವುದಾದರು ಒಳ್ಳೆಯ ರಕ್ತ ಸಂಗ್ರಹಾಲಯ ಅಥವ ಆಸ್ಪತ್ರೆಯಲ್ಲಿ ತಮ್ಮನ್ನು ನೊಂದಾಯಿಸಿಕ್ಕೊಳಬೇಕು ಎಕೆಂದರೆ ಈ ರಕ್ತ ಗುಂಪು ಹೊಂದಿರುವವರ ಸಂಖ್ಯೆ ಕಮ್ಮಿ ಹಾಗಾಗಿ ನೊಂದಾಯಿಸಿ ಕೊಂಡಾಗ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳಿಂದ ಸಹಾಯ ಒದಗಿಬರು.
ಈ ರಕ್ತ ಗುಂಪನ್ನು ಹೊಂದಿರುವ ಜನರ ಪ್ರತಿಹೊಂದು ರಕ್ತದ ಬ್ಯಾಂಕ್ ಅಥವಾ ಆಸ್ಪತ್ರೆಯಲ್ಲಿ ತಮ್ಮ ಹೆಸರುನ್ನು ನೊಂದಣಿ ಮಾಡಬೇಕು. ಈ ರೀತಿ ಮಾಡುವುದರಿಂದ ತುರ್ತು ಸಮಯದಲ್ಲಿ ಈ ರಕ್ತ ಗುಂಪನ್ನು ಹೊಂದಿರುವ ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಇಂತಹ ರಕ್ತ ಗುಂಪು ತುರ್ತು ಸಮಯದಲ್ಲಿ ಉಪಯೋಗಿಸುವುದಕ್ಕಾಗಿ ಈ ರಕ್ತವನ್ನು ಫ್ರೋಜನ್ ನಲ್ಲಿ ಇಟ್ಟು, ಅದನ್ನು ಸಂಪರ್ಕಿಸಲು ಪ್ರಸ್ತಾಪಿಸಲಾಗಿದೆ. ಇದು ಒಂದು ಅಪರೂಪದ ರಕ್ತ ಗುಂಪು ಆಗಿರುವುದರಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಆಟೋಲೋಗಸ್ ರಕ್ತದಾನವನ್ನು ಮಾಡಬಹುದು.
ಈ ರಕ್ತ ಗುಂಪು ೧೭೦೦೦ ಜನಸಂಖ್ಯೆಗೆ ಒಬ್ಬರಲ್ಲಿ ಈ ಬಾಂಬೆ ರಕ್ತ ಗುಂಪನ್ನು ನೋಡಬಹುದು. ಈ ರಕ್ತ ಗುಂಪನ್ನು ಆಂದ್ರ ಪ್ರದೇಶ, ಕರ್ನಾಟಕ, ಮಹಾರಾಶ್ಟ್ರ, ಗುಜರಾತ್ ರಾಜ್ಯಗಳಲ್ಲಿ ಕಾಣಬಹುದು. ಕೆಲಹು ಸ್ಥಳಗಳಲ್ಲಿ ೪೫೦೦ ಜನಸಂಖ್ಯೆಗೆ ಒಬ್ಬರು ಈ ರಕ್ತ ಗುಂಪು ಹೊಂದಿರುತ್ತಾರೆ. ತುರ್ತು ಸಮಯದಲ್ಲಿ ಈ ರಕ್ತ ಗುಂಪನ್ನು ಜನರಿಗೆ ಸಿಗದಿದ್ದಾಗ "ಸಂಕಲ್ಪ ಇಂಡೀಯಾ ಪೌಂಡೇಶನ್", ಈ ರಕ್ತ ಗುಂಪನ್ನು ಹುಡುಕುವುದರಲ್ಲಿ ಸಹಾಯ ಮಾಡುತ್ತದೆ. ಈ ಪೌಂಡೇಶನ್ ಅಪರೂಪದ ರಕ್ತದ ಗುಂಪುಗಳ ರಕ್ತ ವರ್ಗಾವಣೆಯ ಔಶಧಿ ಮೇಲೆ ಕೆಲಸ ಮಾಡುತ್ತದೆ, ಏಕೆಂದರೆ ಬಾಂಬೆ ರಕ್ತ ಅಪರೂಪದ ರಕ್ತ ಗುಂಪು, ರೋಗಿಗಳಿಗೆ ಈ ರಕ್ತ ಸರಿಯಾದ ಸಮಯದಲ್ಲಿ ಸಿಗುವುದು ತುಂಬಾ ಕಶ್ಟ. ಈ ರಕ್ತ ಗುಂಪನ್ನು ಹೊಂದಿರುವ ವ್ಯಕ್ತಿಯನ್ನು ಕಂಡುಹಿಡಿಯುವ ಸಂಭವನೀಯತೆ ೨೫೦೦೦ರಲ್ಲಿ ಒಬ್ಬ ವ್ಯಕ್ತಿ. ಭಾರತದಲ್ಲಿ ಅತಿಹೆಚ್ಛು ಜನ ಈ ರಕ್ತ ಗುಂಪನ್ನು ಹೊಂದಿದ್ದಾರೆ. ೭೬೦೦ ಜನಸಂಖ್ಯೆಗೆ ಒಬ್ಬ ವ್ಯಕ್ತಿ ಈ ರಕ್ತ ಗುಂಪನ್ನು ಹೊಂದಿರುತ್ತಾನೆ.
ಈ ರಕ್ತ ಗುಂಪನ್ನು ಹೊಂದಿರುವ ವ್ಯಕ್ತಿ ಅಪಘಾತಕ್ಕೆ ಸಿಲುಕಿದ್ದಾಗ, ಅವನ ಜೀವನ ತೊಂದರೆಗೆ ಸಿಲುಕುತ್ತದೆ, ಏಕೆಂದರೆ ಈ ವ್ಯಕ್ತಿಗಳಿಗೆ ಸಮಾನ್ಯ ಜನರು ರಕ್ತ ನೀಡಲು ಸಾಧ್ಯವಾಗುವುದಿಲ್ಲ. ಅಪಘಾತಕ್ಕೆ ಸಿಲುಕಿದ ಈ ರಕ್ತ ಗುಂಪಿಗೆ ಸೀರಿದ ವ್ಯಕ್ತಿಗಳ ಜೀವವನ್ನು ಉಳಿಸಭೇಕಾದರೆ ಔಶಧಿಗಳು ಹರ ಸಾಹಸ ಮಾಡಬೇಕು. ಅತಿ ಕಡಿಮೆ ಜನಸಂಖ್ಯೆಯ ಈ ರಕ್ತ ಗುಂಪು ಈ ಎಲ್ಲಾ ತೊಂದರೆಗಳಿಗೆ ಮುಖ್ಯ ಕಾರಣವಾಗಿದೆ. ಈ ರಕ್ತ ಗುಂಪು ನಮ್ಮ ಸಮಾಜಕ್ಕೆ ಒಂದು ಶಾಪ ಮತ್ತು ಈ ರಕ್ತ ಗುಂಪನ್ನು ನಾವು 'ಕಿಲ್ಲರ್ ರಕ್ತ ಗುಂಪು' ಎಂದು ಕರೆಯುತ್ತಾರೆ. ಇದು ಒಂದು ಭಯಾನಕ ರಕ್ತ ಗುಂಪು. ಔಶದಿಗಳನ್ನು ಮತ್ತು ಹೊಸ ಪ್ರಯೋಗಗಳ ಸಹಾಯದಿಂದ ಈ ಎಲ್ಲಾ ತೊಂದರೆಗಳಿಗೆ ಒಂದು ಪರಿಹರ ಹುಡುಕಬೇಕು.ಒಬ್ಬೊಬ ವ್ಯಕ್ತಿಯ ಜೀವನವನ್ನು ಈ ತೊಂದರೆಯಿಂದ ಹೊರತರಬೇಕು.
This user is a member of WikiProject Education in India |
- ↑ ೧.೦ ೧.೧ ೧.೨ Dean L. (2005). "6: The Hh blood group". Blood Groups and Red Cell Antigens. Bethesda, MD: National Center for Biotechnology Information (US) ll. Retrieved 2013-02-12.
- ↑ Colprensa (2017-07-13). "La primera importación de sangre salvó a una niña paisa" [The first import of blood saved a paisa girl]. El Colombiano (in ಸ್ಪ್ಯಾನಿಷ್). Medellín. Retrieved 2017-07-13.
- ↑ "O 'sangue raro' identificado em 3 brasileiros e que exigiu força-tarefa para transfusão". Folha de S.Paulo (in ಬ್ರೆಜಿಲಿಯನ್ ಪೋರ್ಚುಗೀಸ್). 27 March 2023.