ಸದಸ್ಯ:Srinijakn/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿನ್ನೆಲೆ[ಬದಲಾಯಿಸಿ]

             ದುರ್ಯೋಧನ  ಮಹಾಭಾರತ ಕಥೆಯಲ್ಲಿ  ಒಂದು ಪ್ರಮುಖ ಪಾತ್ರ.ಧೃತರಾಷ್ಟ್ರ ಮತ್ತು ಗಾಂಧಾರಿಗೆ ನೂರು ಜನ ಪುತ್ರರು ,ಒಬ್ಬಳು ಪುತ್ರಿ.  ಇವರೇ ಕೌರವರು ಎಂದು ಪ್ರಸಿದ್ಧರಾದವರು.  ಇವರಲ್ಲಿ ದುರ್ಯೋಧನ ಮತ್ತು ದುಶ್ಶಾಸನ ಮೊದಲಿಬ್ಬರು, ಮಗಳು ದುಶ್ಶಲೆ.ದುರ್ಯೋಧನನು ಹಿರಿಯ ಮಗನಾಗಿದ್ದು ಅವನು ಹಸ್ತಿನಾಪುರದ ಸಿಂಹಾಸನಕ್ಕೆ ಅರ್ಹನಾಗುವುದಿಲ್ಲ,ಏಕೆಂದರೆ ಹಸ್ತಿನಾಪುರದ ಹಿಂದಿನ ಮಹಾರಾಜನಾದ ಪಾಂಡುವಿನ ಐವರು ಮಕ್ಕಳು ಅಂದರೆ ಪಾಂಡವರು ಹಿಂದಿರುಗಿದರು.ಪಂಡುವಿನ ಮರಣದ ನಂತರ ಹಿರಿಯ ಮಗನಾದ ಧರ್ಮರಾಯ ಸಿಂಹಾಸನದ ಅಧಿಕಾರಿ.ದುರ್ಯೋಧನನಿಗೆ ಇದು ಸಹಿಸಲ್ಲಿಲ್ಲ .ಕರ್ಣನು ದುರ್ಯೋಧನನಿಗೆ ಪ್ರಿಯ ಮಿತ್ರ .ದುರ್ಯೋಧನನು ಕರ್ಣನ ಸಹಾಯದಿಂದ ಪಾಂಡವರು ವನವಾಸದಲಿದ್ದಾಗ ದಿಗ್ವಿಜಯ ಯಾತ್ರೆಯನ್ನು ಮಾಡಿ ದೇಶದ ಎಲ್ಲ ರಾಜರನ್ನು ಸೋಲಿಸಿ ಅವರ ರಾಜ್ಯಗಳನ್ನು ತನ್ನ ಕೈವಶ ಮಾಡಿಕೊಳ್ಳುತ್ತಾನೆ.[೧]


ಪಾಂಡವರ ವನವಾಸ[ಬದಲಾಯಿಸಿ]

             ಪಾಂಡವರನ್ನು ಮೋಸದಿಂದ ಜೂಜಿನಲ್ಲಿ ಸೋಲಿಸಿ ಅವರಿಗೆ ೧೨ ವರುಷ ವನವಾಸ ಮತ್ತು ೧ ವರುಷ ಅಜ್ನಾತವಾಸ ಹೋಗಬೇಕೆಂದು ಹೇಳುತ್ತಾರೆ.  ಪಾಂಡವರ ವನವಾಸದ ನಂತರವೂ ಸಹ ದುರ್ಯೋಧನನು, ಭೀಷ್ಮ ,ವಿಧುರ, ದ್ರೋಣಾಚಾರ್ಯ ಇವರೆಲ್ಲರ ಸಮಕ್ಷದಲ್ಲಿ ಧರ್ಮರಾಯನಿಗೆ ರಾಜ್ಯವನ್ನು ಕೊಡಲು ನಿರಾಕರಿಸುತ್ತಾನೆ. ಕೃಷ್ಣನು ಪಾಂಡವರ ಪಕ್ಷದಿಂದ ಹಸ್ತಿನಾಪುರದ ಬದಲಾಗಿ ಐದು ರಾಜಗಳನ್ನು ಕೊಡಬೇಕೆಂದು ಶಾಂತಿ ಪ್ರಸ್ತಾವವನ್ನು ಇಟ್ಟಾಗ ದುರ್ಯೋಧನನು "ಐದು ರಾಜ್ಯಗಳಲ್ಲ ಐದು ಅಂಗುಳದ ಜಾಗವೂ ಕೊಡುವುದಿಲ್ಲವೆಂದು ಹೇಳಿದ್ದಲ್ಲದೆ ಪ್ರಸ್ತಾವವನ್ನು ತಂದ ಕೃಷ್ಣನನ್ನು ಸೆರೆಮನೆಗೆ ಹಾಕಲು ಪ್ರಯತ್ನಿಸುತ್ತಾನೆ. ಕೃಷ್ಣನು ತನ್ನ ವಿಶ್ವರೂಪವನ್ನು ತೋರಿಸುತ್ತಾನೆ. ಆಗ ಸಭೆಯಲ್ಲಿ ಇರುವವರಿಗೆ ಸ್ವಲ್ಪ ಹೊತ್ತುವರೆಗೂ ಕಣ್ಣು ಕಾಣಿಸುವುದಿಲ್ಲ ,ಭೀಷ್ಮ - ದ್ರೋಣ - ವಿಧುರ - ದೃತರಾಷ್ಟ್ರ(ದೈವಿಕ ದೃಷ್ಟಿಯನ್ನು ಪ್ರಸಾದಿಸುತ್ತಾನೆ)ಇವರೆಲ್ಲರಿಗೂ ಅವರೆಲ್ಲಾ ಭಗವಂತನನ್ನು ಎದುರಿಸಲು ಹೋಗುತ್ತಿದ್ದಾರೆಂದು ತಿಳಿಯಿತು.ಅಲ್ಲಿರುವ ಎಲ್ಲರಿಗೂ ಕೃಷ್ಣನು ವಿಷ್ಣುವಿನ ಅವತಾರವೆಂದು ಮತ್ತು ಧರ್ಮವು ಪಾಂಡವರ ಪಕ್ಷದಲ್ಲಿ ಇದೆಯೆಂದು ಖಚಿತವಾಯಿತು.ದುರ್ಯೋಧನನು  ಇದೆಲ್ಲಾ ಮಾಯೆಯೆಂದು ಹಾಗೂ ಅವನ ಬಲಗದ ಮುಂದೆ ಯಾವ ಮಾಯೆಯು ಕೆಲಸ ಮಾಡುವುದಿಲ್ಲವೆಂದು ಯುದ್ದಕ್ಕೆ ಸಿದ್ದನಾಗುತ್ತಾನೆ.    [೨]


ಯುದ್ಧದ ಆರಂಭ[ಬದಲಾಯಿಸಿ]

              ದುರ್ಯೋಧನನು ಎಲ್ಲಾ ಶಕ್ತಿಶಾಲಿಯಾದ ವೀರರನ್ನು ತನ್ನ ಬಳಿ ಸೇರಿಸುತ್ತಾನೆ ಅವರಲ್ಲಿ - ಭೀಷ್ಮ , ದ್ರೋಣ , ಕರ್ಣ , ಕೃಪ , ಅಶ್ವತ್ತಾಮ , ಶುತ್ಯುಧ ಮೊದಲಾದವರನ್ನು ಬಲವಂತವಾಗಿ ಯುದ್ದಕ್ಕೆ ಸೇರಿಸಿದನು.ಕೊನೆಗೆ ಪಾಂಡವರಿಗಿಂತಲೂ ಹೆಚ್ಚಿನ ಸೈನ್ಯವನ್ನು ತಯಾರಿಸುತ್ತಾನೆ. ದುರ್ಯೋಧನ ಮತ್ತು ಅರ್ಜುನ ಇಬ್ಬರೂ ಕೃಷ್ಣನ ಬಳಿಗೆ ಸಹಾಯಕ್ಕೆ ಬಂದಾಗ, ದುರ್ಯೋಧನನು ವೃಶಿನಿ ಸೈನ್ಯವನ್ನು ಮತ್ತು ಅರ್ಜುನನು ಸಾರಥಿಯಾಗಿ ಕೃಷ್ಣನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಷ್ಟೆಅಲ್ಲದೆ ದುರ್ಯೋಧನು ಛಲದಿಂದ ಧರ್ಮರಾಯನಿಗೋಸ್ಕರ ಬಂದ ಶಾಲ್ಯನ ಸೇನೆಯನ್ನು ಪಡೆಯುತ್ತಾನೆ.          
             ಯುದ್ಧದಲ್ಲಿ ದುರ್ಯೋಧನನು ಭೀಷ್ಮ ಮತ್ತು ದ್ರೋಣನನ್ನು ಮುಂದಿನ ಭಾಗದಲ್ಲಿ ಇಡುತ್ತಾನೆ . ಭೀಷ್ಮನನ್ನು ಸೇನಾಧಿಪತಿಯಾಗಿ ಮಾಡುತ್ತಾನೆ. ಕರ್ಣನು ಅವನ ಅತಿ ದೊಡ್ಡ ಬಲವಾಗಿದ್ದ . ಅರ್ಜುನನ ಬಾಣಕ್ಕೆ ಭೀಷ್ಮನು ಬಿದ್ದಾಗ ದ್ರೋಣನನ್ನು ಸೇನಾಧಿಪತಿಯಗಿ ಮಾಡಿ ಧರ್ಮರಾಯನನ್ನು ಜೀವಂತವಾಗಿ ಸೆರೆಹಿಡಿಯಲು ಹೇಳುತ್ತಾನೆ. ಹದಿಮೂರನೆ ದಿವಸದ ಯುದ್ದದಲ್ಲಿ ದುರ್ಯೋಧನನ ಮಗನಾದ ಲಕ್ಷ್ಮಣನು ಅರ್ಜುನನ ಮಗನಾದ ಅಭಿಮನ್ಯುವಿನ ಕೈಯಲ್ಲಿ ಮೃತಪಡುತ್ತಾನೆ. ಆಗ ದುರ್ಯೋಧನನು ಅಭಿಮನ್ಯುವನ್ನು ಅಧರ್ಮ ಮತ್ತು ಛಲದಿಂದ ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಲ್ಲುತ್ತಾನೆ. ಅಭಿಮನ್ಯುವನ್ನು ಸಾಯಿಸಿದ್ದ ಕೋಪದಿಂದ ಅರ್ಜುನನು ದ್ರೋಣ ಮತ್ತು ತನ್ನ ತಂಗಿಯ ಗಂಡನಾದ ಜಯದ್ರಥನನ್ನು ಕೊಂದಾಗ ಅವನ ಕೋಪ ಇನ್ನಷ್ಟು ಹೆಚ್ಚುತ್ತದೆ. ದುರ್ಯೋಧನನು ತನ್ನ ತಮ್ಮಂದಿರ ಮರಣಕ್ಕೆ, ಒಂದು ಹನಿಯೂ ಅವನ ಕಣ್ಣಿನಿಂದ ಬರಲಿಲ್ಲವೆಂದು ಹೇಳಿಕೆಯಿದೆ. ಆದರೆ ಅವನ ಪ್ರಿಯ ಸ್ನೇಹಿತನಾದ ಕರ್ಣನ ಸಾವಿಗೆ ಅವನು ಮುರಿದು ಬಿದ್ದನು .ದುರ್ಯೋಧನನು ಕೊನೆಯದಾಗಿ ಶಾಲ್ಯನನ್ನು ತನ್ನ ಸೇನಾಧಿಪತಿಯಾಗಿ ನೇಮಿಸುತ್ತಾನೆ.  [೩]

  

ಯುದ್ಧದ ಕೊನೆಯ ವಿಭಾಗ[ಬದಲಾಯಿಸಿ]

             ಯುದ್ಧದ ಕೊನೆಯ ದಿನದಂದು ದುರ್ಯೋಧನ ಛೇಕಿತನನನ್ನು ಕೊಂದು ಕೋಪ ಇಳಿಸುತ್ತಾನೆ. ಶಾಲ್ಯನು ಧರ್ಮರಾಯನಿಂದ ಮೃತಪಡುತ್ತಾನೆ . ದುರ್ಯೋಧನನ ಹನ್ನೊಂದು ಅಕ್ಶೌಹಿನಿ ಸೇನೆ ಮುರಿಯುತ್ತದೆ . ತನ್ನ ಅಶ್ವವನ್ನು ಕಳೆದು ದುರ್ಯೋಧನ ಯುದ್ಧ ಭೂಮಿಯನ್ನು ಬಿಡುತ್ತಾನೆ . ದುರ್ಯೋಧನನು ತನ್ನ ಸೇನೆಯನ್ನೆಲ್ಲಾ ಕಳೆದುಕೊಂಡು ಕೊನೆಗೆ ಭೀಮನಿಂದ ತಪ್ಪಿಸಿಕೊಳ್ಳಲು ಒಂದು ಆಳವಾದ ಸರೋವರದಲ್ಲಿ ಅಡಗುತ್ತಾನೆ. ಬೀಮ ಅವನನ್ನು ಹೊರಗೆ ತರಲು ಭಯಂಕರವಾಗಿ ಅರುಚುತ್ತಾನೆ.ಅವನ ಸದ್ದಿಗೆ ಅರಣ್ಯವೆಲ್ಲಾ ನಡುಗುತ್ತದೆ. ಕೊನೆಗೆ ದುರ್ಯೋಧನನು ಹೊರಗೆ ಬರುತ್ತಾನೆ.ನಂತರ ಅವರಿಬ್ಬರ ನಡುವೆ ಯುದ್ಧ ಆರಂಭವಾಗುತ್ತದೆ.    

   


             ಕೊನೆಗೆ ಭೀಮನು ಕೃಷ್ಣನ ಸಹಾದಿಂದ ದುರ್ಯೋಧನ ತೊಡೆಯನ್ನು ಮುರಿದು ಅವನನ್ನು ಕೊಂದು ಯುದ್ಧವನ್ನು ಮುಗಿಸುತ್ತಾನೆ. ಅಶ್ವತ್ಥಾಮ  ದುರ್ಯೋಧನನ ಮರಣದ ಪ್ರತೀಕಾರಕ್ಕೆ ಪಾಂಡವರೆಂದು ತಿಳಿದು ಅವರ ವಸತಿ ಗೃಹದಲ್ಲಿದ ಅವರ ಮಕ್ಕಳನ್ನು ಕೊಲ್ಲುತ್ತಾನೆ.ಇದನ್ನು ತಿಳಿದು ಕೃಷ್ಣನು ಅವನಿಗೆ ಶಾಪವನ್ನು ಕೊಡುತ್ತಾನೆ.

ಉಲ್ಲೇಖಗಳು[ಬದಲಾಯಿಸಿ]

  1. http://www.sirinudi.org/mahabharata/virataparva.html
  2. http://kanaja.in/%E0%B2%8F%E0%B2%95%E0%B2%A6%E0%B2%B6%E0%B2%AE%E0%B2%BE%E0%B2%B6%E0%B3%8D%E0%B2%B5%E0%B2%BE%E0%B2%B8%E0%B2%82/
  3. http://samvada.org/2016/kannada-news/absp-vj/