ಸದಸ್ಯ:Sabeenabanua/sandbox
Sabeenabanua/sandbox | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | A. indica
|
Binomial name | |
ಈಶ್ವರ ಬಳ್ಳಿ |
ವರ್ಣನೆ
[ಬದಲಾಯಿಸಿ]ಸಾಮಾನ್ಯವಾಗಿ ಈಶ್ವರಬಳ್ಳಿ ಹಳ್ಳಿಗರಿಗೆ ಚಿರಪರಿಚತವಾಗಿರುವುದು. ಇದು ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಲಿ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ. ಇದರ ಬೇರುಗಳಲ್ಲಿ ಸುಗಂಧ ತೈಲವಿರಿತ್ತದೆ.
ಸರಳ ಚಿಕಿತ್ಸೆಗಳು
[ಬದಲಾಯಿಸಿ]ಜ್ವರ ಮತ್ತು ಕೆಮ್ಮು ನಿವಾರಣೆಗೆ
[ಬದಲಾಯಿಸಿ]ಈಶ್ವರಬಳ್ಳಿಯ ಬೇರನ್ನು ನಯವಾದ ಚೂರ್ಣ ಮಾಡಿ, ೧/೪ ಟೀ ಚಮಚ ಚೂರ್ಣವನ್ನು ನೀರಿನಲ್ಲಿ ನೆನೆ ಹಾಕಿ ಕಷಾಯಮಾಡಿ ಶೋಧಿಸಿ ೩-೪ ಟೀ ಚಮಚದಷ್ಟು ದಿವಸಕ್ಕೆ ಎರಡು ಸೇವಿಸಿದರೆ ಜ್ವರ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.
ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ಚೂರ್ಣಿಸಿ, ಈ ನಯವಾದ ಚೂರ್ಣವನ್ನು ೨ ರಿಂದ ೨.೫ ಗ್ರಾಂ ಸೇವಿಸಿದ ಮೇಲೆ ಬಿಸಿನೀರು ಕುಡಿಯುವುದು.
ವಿಷಮ ಜ್ವರ, ಸನ್ನಿ ಜ್ವರದ ನಿವಾರಣೆಗೆ
[ಬದಲಾಯಿಸಿ]ಶುದ್ಧವಾದ ೧/೨ ಲೀಟರ್ ತಣ್ಣೀರಿನಲ್ಲಿ ೧೫ಗ್ರಾಂ ಈಶ್ವರಿಬೇರು ಜಜ್ಜಿ ಹಾಕಿ ನೆನೆಸಿಡುವುದು. ತಿಳಿಯಾದ ನೀರನ್ನು ಶೋಧಿಸಿ, ಒಂದೆರಡು ಟೀ ಚಮಚ ದಿವಸಕ್ಕೆ ೪-೫ ಬಾರಿ ಸೇವಿಸಿದರೆ ವಿಷಮ ಜ್ವರ ಗುಣಮುಖವಾಗುತ್ತದೆ.
ಹಾವಿನ ವಿಷ, ಸರ್ಪದ ವಿಷದ ನಿವಾರಣೆಗೆ
[ಬದಲಾಯಿಸಿ]ಸರ್ಪದ ವಿಷ ನಿವಾರಣೆಗೆ ಇದರ ಎಲೆಯ ಕಷಾಯ ಮಾಡಿ ಸೇವಿಸುತ್ತಾರೆ. ಹಾವಿನ ವಿಷ ನಿವಾರಣೆಗೆ ೨ಗ್ರಾಂ ಇದರ ಹಸಿ ಎಲೆಗಳು, ೨ಗ್ರಾಂ ಮೆಣಸು ನುಣ್ಣಗೆ ಅರೆದು ಗಾಯದ ಮೇಲೆ ಮಂದವಾಗಿ ಲೇಪಿಸುತ್ತಾರೆ.
ದೃಷ್ಟಿ ದೋಷ ನಿವಾರಣೆಗೆ
[ಬದಲಾಯಿಸಿ]ಇದರ ಬೇರಿನ ನಯವಾದ ಚೂರ್ಣಮಾಡಿ, ಸ್ವಲ್ಪ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮುಟ್ಟಿನ ದೋಷ ನಿವಾರಣೆಗೆ
[ಬದಲಾಯಿಸಿ]ಇದರ ಬೇರಿನ ನಯವಾದ ಚೂರ್ಣಮಾಡಿ, ಕಡಿಮೆ ಪ್ರಮಾಣದಲ್ಲಿ ಬೆಲ್ಲ ಅಥವಾ ನಿಂಬೆರಸದ ಅನುಪಾನದೊಂದಿಗೆ ಸೇವಿಸಿದರೆ ಮುಟ್ಟಿನ ದೋಷ ನಿವಾರಣೆಯಾಗುತ್ತದೆ.[೧]
ಉಲ್ಲೇಖ
[ಬದಲಾಯಿಸಿ]- ↑ ಅಪೂರ್ವ ಗಿಡಮೂಲಿಕೆಗಳು ಮತ್ತು ಸರಳಚಿಕಿತ್ಸೆಗಳು, ವೈದ್ಯ: ಎ. ಆರ್. ಎಂ. ಸಾಹೇಬ್ ವಲಯಾರಣ್ಯಾಧಿಕಾರಿಗಳು, ಪ್ರಕಾಶಕರು ದಿವ್ಯಚಂದ್ರ ಪ್ರಕಾಶನ, ಪುಟ ಸಂಖ್ಯೆ-೫೦