ಸದಸ್ಯ:Pranavshivakumar/10

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಜಸ್ಬೀರ್ ಸಿಂಗ್ ಬುಮ್ರಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗಿ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.

ಆರಂಭಿಕ ಜೀವನ[ಬದಲಾಯಿಸಿ]

ಬುಮ್ರಾ ರವರು ಡಿಸೆಂಬರ್ ೦೬,೧೯೯೩ರಂದು ಅಹೆಮ್ದಬಾದ್, ಗುಜರಾತ್ನಲ್ಲಿ ಜನಿಸಿದರು. ಗುಜರಾತ್ ನ ೧೯ರ ವಯ್ಯೋಮಿತಿ ಕ್ರಿಕೆಟ್ ತಂಡಕ್ಕೆ ಆಡಲು ಆರಂಭಿಸಿದರು. ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ಥಾನ ಪಡೆದರು.[೧]

ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಏಪ್ರಿಲ್ ೦೪, ೨೦೧೩ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರಲ್ಲಿರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾದಾರ್ಪಣೆ ಮಾಡಿದರು.ಇಂಡಿಯನ್ ಪ್ರೀಮಿಯರ್ ಲೀಗ್ ನ ತಮ್ಮ ಚೊಚ್ಚಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ೩೨ ರನ್ ನೀಡಿದರು.ಇಲ್ಲಿಯವರೆಗೆ ಐಪಿಎಲ್ ನಲ್ಲಿ ೪೬ ವಿಕೆಟ್ ಗಳನ್ನ ಪಡೆದಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.[೨][೩][೪]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಜನವರಿ ೨೩, ೨೦೧೬ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಐದನೇ ಹಾಗು ಕೊನೆಯ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಈ ಪಂದ್ಯದಲ್ಲಿ ತಮ್ಮ ೧೦ ಓವರ್ ಗಳಲ್ಲಿ ಕೇವಲ ೪೦ರನ್ ನೀಡಿ ಆಸ್ಟ್ರೇಲಿಯಾದ ನಾಯಕ ಸ್ಟೀವನ್ ಸ್ಮಿತ್ ಹಾಗು ಆಲರೌಂಡರ್ ಜೇಮ್ಸ್ ಫಲ್ಕನರ್ ರವರ ವಿಕೆಟ್ ಪಡೆದರು. ಜನವರಿ ೨೬, ೨೦೧೬ರಂದು ಅಡಿಲೇಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಟಿ-೨೦ ಪಂದ್ಯದಲ್ಲಿ ಕೇವಲ ೨೩ ರನ್ ನೀಡಿ ೩ ವಿಕೆಟ್ ಪಡೆದರು.[೫][೬]

ಶ್ರೇಯಾಂಕ[ಬದಲಾಯಿಸಿ]

  • ಪ್ರಸ್ತುತ ಉಮೇಶ್ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ[೭] ಪ್ರಕಟಿಸುವ ಬಾಲಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ,
    • ಟಿ-೨೦ ಕ್ರಿಕೆಟ್ ಶ್ರೇಯಾಂಕದಲ್ಲಿ ೦೧ನೇ ಸ್ಥಾನವನ್ನು ಹೊಂದಿದ್ದಾರೆ.[೮]
    • ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ೦೩ನೇ ಸ್ಥಾನವನ್ನು ಹೊಂದಿದ್ದಾರೆ.[೯]


ಪಂದ್ಯಗಳು[ಬದಲಾಯಿಸಿ]

  • ಏಕದಿನ ಕ್ರಿಕೆಟ್ : ೨೮ ಪಂದ್ಯಗಳು[೧೦][೧೧]
  • ಟಿ-೨೦ ಕ್ರಿಕೆಟ್ : ೩೦ ಪಂದ್ಯಗಳು
  • ಐಪಿಎಲ್ ಕ್ರಿಕೆಟ್ : ೪೭ ಪಂದ್ಯಗಳು


ವಿಕೆಟ್ ಗಳು[ಬದಲಾಯಿಸಿ]

  1. ಏಕದಿನ ಪಂದ್ಯಗಳಲ್ಲಿ : ೫೨
  2. ಟಿ-೨೦ ಪಂದ್ಯಗಳಲ್ಲಿ  : ೪೦
  3. ಐಪಿಎಲ್ ಪಂದ್ಯಗಳಲ್ಲಿ  : ೪೬


ಉಲ್ಲೇಖಗಳು[ಬದಲಾಯಿಸಿ]

  1. https://en.wikipedia.org/wiki/Jasprit_Bumrah
  2. http://www.cricbuzz.com/live-cricket-scorecard/11867/royal-challengers-bangalore-vs-mumbai-indians-2nd-match-indian-premier-league-2013
  3. http://www.mumbaiindians.com/team/jasprit-bumrah/
  4. http://www.iplt20.com/teams/mumbai-indians/squad/1124/Jasprit-Bumrah/
  5. http://www.cricbuzz.com/live-cricket-scorecard/14881/australia-vs-india-5th-odi-india-tour-of-australia-2016
  6. http://www.cricbuzz.com/live-cricket-scorecard/14882/australia-vs-india-1st-t20i-india-tour-of-australia-2016
  7. https://www.icc-cricket.com/
  8. https://www.icc-cricket.com/rankings/mens/player-rankings/t20i/bowling
  9. https://www.icc-cricket.com/rankings/mens/player-rankings/odi/bowling
  10. http://www.espncricinfo.com/india/content/player/625383.html
  11. http://www.cricbuzz.com/profiles/9311/jasprit-bumrah#profile