ಸದಸ್ಯ:Prakruthi jain mp
ಪರಿಚಯ
[ಬದಲಾಯಿಸಿ]ನನ್ನ ಹೆಸರು "'ಪ್ರಕೃತಿ ಜೈನ್"'. ನಾನು ಜನಿಸಿದ್ದು ಕರ್ನಾಟಕ ರಾಜಧಾನಿಯಾದ ಬೆಂಗಳೂರಿನಲ್ಲಿ. ದಿನಾಂಕ 28 ಸೆಪ್ಟಂಬರ್ 1999. ನನ್ನ ತಂದೆಯ ಹೆಸರು ಪ್ರಭಾಕರ್ ಮತ್ತು ನನ್ನ ತಾಯಿಯ ಹೆಸರು ವಾಣಿಶ್ರೀ. ನಾನು ಮೂಲತಃ ಮಂಡ್ಯದವಳು
ನನ್ನ ತಂದೆ ಅಕ್ಕಿ ವ್ಯಾಪಾರಸ್ಥರು. ನನ್ನ ತಾಯಿ ಗ್ರ್ಯಹಿಣಿ.
ಶಿಕ್ಷಣ
[ಬದಲಾಯಿಸಿ]ನನ್ನ ಶಿಶುವಿಹಾರವನ್ನು “ಗುಡ್ ಷೆಫರ್ಡ್ನ”ನಲ್ಲಿ ಪೂರ್ಣಗೊಳಿಸಿದೆ. ನನ್ನ ಪ್ರಾರ್ಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸೆಂಟ್ ಥಾಮಸ್ ಶಾಲೆಯಲ್ಲಿ ಪೂರ್ಣಗೊಳಿಸಿದೆ. ನನಗೆ ಬಾಲ್ಯದಿಂದಲೇ ನೃತ್ಯದಲ್ಲಿ ಬಹಳ ಆಸಕ್ತಿ. ಪ್ರಾರ್ಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹಲವಾರು ಪ್ರಶಸ್ತಿಗಳು ಕೂಡ ನನಗೆ ದೊರಕಿದೆ.
ಹವ್ಯಾಸಗಳು
[ಬದಲಾಯಿಸಿ]ನಾನು ಹಲವಾರು ಕಥೆಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದಿದ್ದೇನೆ. ಹಾಗೂ ಹಲವಾರು ಗೀತೆಗಳನ್ನು ಸಹ ರಚಿಸಿದ್ದಾನೆ. ಎಲ್ಲ ಕಲೆಗಳಲ್ಲು ಎಲ್ಲರು ರಮಿಸುವ ಕಲೆಯೆಂದರೆ ಸಂಗೀತ. ಎಲ್ಲ ಹಾಡುಗಳ ಮೂಲ ಸಂಗೀತ. ಚರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತ್ತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾಧ್ಯ. ನನಗೂ ಸಹ ಸಂಗೀತ ಎಂದರೆ ಬಹಳ ಇಷ್ಟ. ಗಿಟಾರ್ ಮತ್ತು ಪಿಯಾನೋ ನುಡಿಸುತ್ತೇನೆ. ನನಗೆ "'ಕನ್ನಂಬಾಡಿ"' ಎಂದರೆ ಬಹಳ ಇಷ್ಟ. ಕನ್ನಂಬಾಡಿ ಎನ್ನುವುದು ಕಾವೇರಿನದಿ ತೀರದ ಒಂದು ಗ್ರಾಮ. ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರು ಎಂಬ ಐತಿಹ್ಯವಿದೆ. ಕಣ್ವರಿಂದಾಗಿಯೇ ಈ ಗ್ರಾಮಕ್ಕೆ ಕಣ್ವಪುರಿ, ಕಣ್ಣಂಬಾಡಿ, ಮನ್ನಂಬಾಡಿ ಎಂಬ ಹೆಸರು ಬಂತು ಎನ್ನಲಾಗುತ್ತದೆ. ಈ ಕನ್ನಂಬಾಡಿಯನ್ನು ದೊಡ್ಡಯ್ಯ ಪ್ರಭು ಎಂಬ ಪಾಳೇಗಾರ ಆಳುತ್ತಿದ್ದನು.
ಜೈನ ಧರ್ಮ
[ಬದಲಾಯಿಸಿ]ನನಗೆ ಜೈನ ಧರ್ಮದ ಬಗ್ಗೆ ಬಹಳ ಗೌರವವಿದೆ.
ಜೈನ ಧರ್ಮದಲ್ಲಿ ಸತ್ಯ, ನೀತಿ, ಉತ್ತಮ ನಡವಳಿಕೆಗಳಿಗೆ ಹೆಚ್ಚಿನ ಪ್ರಧಾನ್ಯತೆ ಇದೆ. ಅಹಿಂಸೆ ಮತ್ತು ದಯೆ ಇವುಗಳು ಮೂಲ ಸೂತ್ರಗಳು.ಜೈನ ದರ್ಶನದ ಪ್ರಕಾರ ಜಗತ್ತು ಮತ್ತು ಜೀವ ಅನಾದಿಯಾದುದು. ಜೀವರುಗಳ ಹುಟ್ಟು, ಸಾವು, ಸುಖ, ದು:ಖಗಳಿಗೆ ಕರ್ಮವೇ ಕಾರಣವಾಗಿದ್ದು ಕರ್ಮವೂ ಅನಾದಿಯಾಗಿರುತ್ತದೆ. ಆದರೆ ಸಮ್ಯಕ್ ಜ್ಞಾನ, ಸಮ್ಯಕ್ ದರ್ಶನ, ಸಮ್ಯಕ್ ಚಾರಿತ್ರ್ಯ ಎಂಬ 'ರತ್ನತ್ರಯ'ಗಳ ಸಾಧನೆಯ ಸಹಾಯದಿಂದ ಕರ್ಮದ ಕಟ್ಟುಗಳಿಂದ ಮುಕ್ತರಾಗಬಹುದು. ಇದರೊಂದಿಗೆ ಜೈನರು ಪಾಲಿಸಬೇಕಾದ ಪಂಚಾಣು ವ್ರತಗಳನ್ನು ಹೇಳಲಾಗಿದೆ. ಅವುಗಳು ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ. ಜೈನ ಧರ್ಮ ದೇವರನ್ನು ಜಗತ್ತಿನ ಕರ್ತೃ ಎಂದು ಒಪ್ಪುವುದಿಲ್ಲವಾದರೂ ಕರ್ಮಬಂಧಗಳಿಂದ ಮುಕ್ತರಾದ ಪಂಚ ಪರಮೇಷ್ಠಿಗಳ ಪೂಜೆ,ಆರಾಧನೆ ನಡೆಯುತ್ತದೆ.
ಇಷ್ಟವಾದ ಕಾದಂಬರಿಗಳು
[ಬದಲಾಯಿಸಿ]ನಾನು ಕಾದಂಬರಿಗಳನ್ನು ಓದಲು ಇಷ್ಟಪಡುತ್ತೇನೆ. ಒಂದು ದೃಷ್ಟಿಯಿಂದ ನೋಡಿದರೆ ಕಾದಂಬರಿ ಎನ್ನುವ ಸಾಹಿತ್ಯರೂಪದ ಚರಿತ್ರೆ ದೀರ್ಘವಾದುದೇ. ಆದರೆ ಇಂದು ಸಾಮಾನ್ಯವಾಗಿ ಈ ಪದದಿಂದ ನಿರ್ದೇಶಿಸುವ ಸಾಹಿತ್ಯರೂಪದ ಚರಿತ್ರೆ ಕಳೆದ ಇನ್ನೂರು ವರ್ಷಗಳದ್ದು. ಮಹಾಕಾವ್ಯ, ನಾಟಕ ಇಂಥ ರೂಪಗಳಲ್ಲಿಯು ನನಗೆ ಆಸಕ್ತಿಯಿದೆ.
ಸಿನಿಮ
[ಬದಲಾಯಿಸಿ]ಸಿನಮಾವು ಪ್ರತ್ಯೇಕವಾದ ಚಲನಚಿತ್ರಗಳು, ಒಂದು ಕಲಾ ಪ್ರಕಾರವಾಗಿ ಚಲನಚಿತ್ರದ ಕಾರ್ಯಕ್ಷೇತ್ರ, ಮತ್ತು ಚಿತ್ರೋದ್ಯಮವನ್ನು ಒಳಗೊಳ್ಳುತ್ತದೆ. ವಿಶ್ವದ ಚಿತ್ರಗಳನ್ನು ಕ್ಯಾಮೆರಾದಿಂದ ಮುದ್ರಿಸಿ, ಅಥವಾ ಅನಿಮೇಶನ್ ತಂತ್ರಗಳು ಅಥವಾ ಸ್ಪೆಶಲ್ ಇಫೆಕ್ಟ್‌ಗಳನ್ನು ಬಳಸಿ ಚಿತ್ರಗಳನ್ನು ಸೃಷ್ಟಿಸಿ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತದೆ. ನನಗೆ ಚಲನಚಿತ್ರಗಳನ್ನು ನೋಡಲು ಬಹಳ ಇಷ್ಟ.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ನನಗೆ ಕನ್ನಡ ಎಂದರೆ ಬಹಳ ಗೌರವ.
ಇದೇ ರೀತಿ ನನ್ನ ಅವ್ಯಾಸಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂದು ನನ್ನ ಬಯಕೆ. ಹಾಗೂ ನಮ್ಮ ನಾಡಿನ ಮೇಲೆ ಇರುವ ಗೌರವ ಹೀಗೆ ಇರಲಿ ಎಂದು ಬಯಸುತ್ತೇನೆ.