ಸದಸ್ಯರ ಚರ್ಚೆಪುಟ:Prakruthi jain mp
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೬:೩೮, ೨೨ ಜೂನ್ ೨೦೧೮ (UTC)
ವೀರಶೈವ ಮತ್ತು ಲಿ೦ಗಾಯಿತ ಧರ್ಮ
[ಬದಲಾಯಿಸಿ]ಬಸವಣ್ಣನವರು 12ನೇ ಶತಮಾನದಲ್ಲಿ ಜಾಗತಿಕ ಮಟ್ಟದಲ್ಲಿ ಸಾರ್ವಕಾಲಿಕ ಮತ್ತು ಸಮಾನತೆ ಸಾರುವ ಅತ್ಯಂತ ವೈಜ್ಞಾನಿಕ ಧರ್ಮವನ್ನು ಸ್ಥಾಪಿಸಿದರು. ಶ್ರೇಣೀಕೃತವಲ್ಲದ ಲಿಂಗ ಆಶ್ರಮ ವರ್ಗ, ವರ್ಣ, ಭೇದ ಹೊರೆತು ಪಡೆಸಿ ಜಗತ್ತಿನ ಎಲ್ಲಾ ವಿದ್ವಾ೦ಸರಿಂದ ಮೆಚ್ಚುಗೆಗ ವೀರಶೈವ ಧರ್ಮ ಪಾತ್ರವಾಯಿತು. ವೀರಶೈವ ವ್ರತಕ್ಕೆ ಧರ್ಮ ಗುರುವಿಲ್ಲ, ಧರ್ಮ ಗ್ರಂಥವಿಲ್ಲ, ಧರ್ಮಸೂತ್ರಗಳಿಲ್ಲ. ಸಿದ್ಧಾಂತ ಸಿಖಾಮಣಿ ಇದು ಬಸವೊತ್ತರದ ಕೃತಿಯೆಂದು ಸಿದ್ಧವಾಗಿದೆ. ಆ ಕೃತಿಯ ಮೊದಲೆನೆಯ ಪುಟದಲ್ಲಿ ಓಂ ಶ್ರೀ ಗುರು ಬಸವಲಿಂಗಾಯನಮ: ಎಂದು ದಾಖಲಿಸಲಾಗಿದೆ.
15 -16ನೇ ಶತಮಾನದಲ್ಲಿ ವೀರಶೈವ ಪದ ಬಳಕೆಯಲ್ಲಿ ಬಂತು. 1886ರ ವೇಳೆಗೆ ಲಿಂಗಾಯತ ಮುಖಂಡರನ್ನು ನಂಬಿಸಿ ಕೃತಕ ವೀರಶೈವ ಸಾಹಿತ್ಯ ಹುಟ್ಟು ಹಾಕಿದರು. ಅವರಲ್ಲಿ ಪ್ರಮುಖರು, 1) ಹುಬ್ಬಳ್ಳಿಯ ಚೆನ್ನವೀರಸ್ವಾಮಿಗಳು,
2) ಬಾರ್ಸಿಯ ಪ್ರಭುಲಿಂಗಯ್ಯನವರು,
3) ಸೀತಾರಾಮ ಶಾಸ್ತ್ರಿ ರೆತ್ರೆಕರ (ಬರ್ಸಿ) ಸಂಸ್ಕೃತ ಪಂಡಿತ,
4) ದಡ್ಡಿರಗಪ್ಪರಗಶೆಟ್ಟಿ ಮತ್ತು
5) ಯಜಮಾನ ವೀರಸಂಗಪ್ಪನವರು.
1904ರಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾ ಸಭೆ ಸ್ಥಾಪಿಸಿದರು.
ವೀರಶೈವರಿಗೆ ಅರವತ್ತು ಆಚರಣೆಗಳಿವೆ. ಅವು ಯಾವುವೂ ಬಸವ ತತ್ವಕ್ಕೆ ಸರಿಬಾರವು. ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕನೆಂದು ಸಮಕಾಲೀನ ವಚನಕಾರರು, ನಂತರದ ಕವಿಗಳು ಮತ್ತು ಜನಪದ ಕವಿಗಳು, ಅನೇಕ ಸಾಧಕರು, ಜನ ಗಣತಿಯ ಸೆನ್ಸಸ್ ಹಾಗು ಕೋರ್ಟ್ ಆದೇಶಗಳು ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂದು ಹೇಳುವಲ್ಲಿ ಸಹಾಯಕವಾಗಿವೆ.
ವೀರಶೈವರ ಅರವತ್ತು ಆಚರಣೆಗಳಲ್ಲಿ - ತಲೆ ಕೂದಲು ಸುಟ್ಟು ಕೊಳ್ಳುವುದು, ಬೆಂಕಿ ಹಾಯುವುದು, ಮುಳ್ಳಾವುಗೆಯ ಮೇಲೆ ನಿಲ್ಲುವುದು, ಅಸ್ತ್ರಗಳನ್ನು ಮೈಗೆ ಚುಚ್ಚಿ ಕೊಳ್ಳುವುದು, ಹೀಗೆ ಹಿ೦ಸೆಯನ್ನು ಆಚರಿಸುವ ಒಂದು ಉಪಕ್ರಮ ಮಾತ್ರ. ಅವರಲ್ಲಿ ಕೆಲವರು ಪೌರೋಹಿತ್ಯರಿಗೆ ನೆರವಾಗುವ ಕಾಯಕ ಮಾಡುತ್ತಿದ್ದರು. ಬ್ಯಾಡಗಿ ವಿರಕ್ತ ಮಠದ ಶ್ರೀ ಮನಿ ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು[೧] ಅನೇಕ ಗ್ರಂಥಗಳನ್ನು ಅಭ್ಯಾಸ ಮಾಡಿ ವೀರಶೈವ ಪಂಚಾಚಾರ್ಯರ ಚರಿತ್ರೆ [೨] ಎಂಬ ಕೃತಿಯನ್ನು 1958ರಲ್ಲಿ ರಚಿಸಿದ್ದಾರೆ.
ವೀರಶೈವ ಆಚರಣೆಯು ವೇದ ಶಾಸ್ತ್ರ ಆಗಮ ಮಾನ್ಯತೆಯಂತೆ ನಡೆಯುತ್ತವೆ. ಅಲ್ಲಿ ಹೋಮಹವನ ಯಜ್ಞಗಳ ಆಚರಣೆ ಇದೆ. ವೀರಶೈವವು ಪುನರ್ಜನ್ಮ ಕರ್ಮ ಸಿದ್ಧಾಂತವನ್ನು ಒಪ್ಪುತ್ತದೆ. ಬಸವಣ್ಣ ಸ್ಥಾಪಿತ ಲಿಂಗಾಯತ ಧರ್ಮವು ವೇದ ಆಗಮ ಶಾಸ್ತ್ರಗಳನ್ನು ಧಿಕ್ಕರಿಸುತ್ತದೆ. ವೀರಶೈವ ಆಚರಣೆಯಲ್ಲಿ ನಂದಿ ಗಣಪತಿ ವೀರಭದ್ರ ಪರಶಿವ ಪಾರ್ವತಿಯ ಪೂಜೆಗೆ ಅವಕಾಶವಿದೆ. ಲಿಂಗಾಯತ ಧರ್ಮವು ಇದನ್ನು ಉಗ್ರವಾಗಿ ವಿರೋಧಿಸುವದಲ್ಲದೆ, ಗುಡಿ ಗುಂಡಾರ ಸಂಸ್ಕೃತಿಯನ್ನು ತಳ್ಳಿ ಹಾಕುತ್ತದೆ.
ಲಿಂಗಾಯತ ಧರ್ಮದಲ್ಲಿ ಜೀವಾತ್ಮನೇ ಪರಮಾತ್ಮನು. ನರನೊಳಗೆ ಹರನನ್ನು ಕಾಣುವ ಸೂಕ್ಷ್ಮ ಹಾಗು ಮುಕ್ತ ಧರ್ಮವೇ ಲಿಂಗಾಯತ ಧರ್ಮವು. ಲಿಂಗಾಯತ ಧರ್ಮವು ಸನ್ಯಾಸತ್ವವನ್ನು ಒಪ್ಪುವದಿಲ್ಲ. ಸಹಜ ದಾಂಪತ್ಯವನ್ನು ಪುರಸ್ಕರಿಸುತ್ತದೆ. ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಇನ್ನು ಸುಂದರ ಸರಳ ಧರ್ಮದ ಮೂಲ ನೀತಿ ಕಾಯಕ ದಾಸೋಹ ಮತ್ತು ದಯೆ ಪ್ರೀತಿ ಸಮಾನತೆ.
ಇನ್ನು ಲಿಂಗಾಯತರಿಗೆ ಮಠಗಳ ವ್ಯವಸ್ಥೆಯಲ್ಲಿ ಭಕ್ತರ ಮನೆಗಳೇ ಮಹಾ ಮನೆಗಳು (ಮಠಗಳು). ಇತರ ಮಠಗಳು ಭಕ್ತರನ್ನು ದಾಸ್ಯತ್ವಕ್ಕೆ ತಳ್ಳುತ್ತವೆ. ಭಕ್ತ ಪ್ರಧಾನ ಧರ್ಮವೇ ಲಿಂಗಾಯತ ಬಸವ ಧರ್ಮ. ಗುಲಾಮಗಿರಿಯ ಧರ್ಮವಲ್ಲ. ವೀರಶೈವ ಒಂದು ಆಚರಣೆ ಹಾಗೂ ವ್ರತ ಆದರೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಒಂದು ಸ್ವತಂತ್ರ ಪರಿಪೂರ್ಣ ಧರ್ಮ.
- ↑ https://archive.org/stream/TheSrikaraBhashyaBeingTheVirasaivaCommentaryOnTheVedantaSutras/99999990242288+-+The+srikara+bhashya+being+the+Virasaiva+commentary+on+the+Vedanta+Sutras_djvu.txt
- ↑ https://www.facebook.com/HINDUZ/photos/history-of-veerashaiva-panchacharyaruamong-the-various-forms-of-hinduism-the-vee/782975191719876/